Tuesday, June 5, 2012

Opportunites in the field of Banking - Article in Vijaya Karnataka 04 June 2012


vijaya karnatakaಶಿಕ್ಷಣ-ಕ್ಯಾಂಪಸ್

ಕೈ ಬೀಸಿ ಕರೆಯುತ್ತಿದೆ ಬ್ಯಾಂಕ್‌ಲೋಕ

http://vijaykarnataka.indiatimes.com/articleshow/13783968.cms




ಕೈ ಬೀಸಿ ಕರೆಯುತ್ತಿದೆ ಬ್ಯಾಂಕ್‌ಲೋಕ
ಮೊದಲೆಲ್ಲಾ ಒಂದೊಂದು ಬ್ಯಾಂಕಿಗೆ ಪ್ರತ್ಯೇಕ ಅರ್ಜಿ ಆಹ್ವಾನಿಸಿ ನೇಮಕ ಮಾಡಿಕೊಳ್ಳಲಾಗುತ್ತಿತ್ತು. ಬ್ಯಾಂಕಿಂಗ್ ಸರ್ವೀಸ್ ರೆಕ್ರೂಟ್‌ಮೆಂಟ್ ಬೋರ್ಡ್ (ಬಿಎಸ್‌ಆರ್‌ಬಿ) ಅನೇಕ ವರ್ಷಗಳ ಕಾಲ ಈ ಕಾರ್ಯ ನಿರ್ವಹಿಸುತ್ತಿತ್ತು. ಸ್ಟೇಟ್‌ಬ್ಯಾಂಕ್ ಆಫ್ ಇಂಡಿಯಾ ಸಮೂಹದ ಬ್ಯಾಂಕ್‌ಗಳು ಮತ್ತು ರಿಸರ್ವ್ ಬ್ಯಾಂಕ್‌ಗಳು ಮಾತ್ರ ತಮ್ಮದೇ ಪ್ರತ್ಯೇಕ ಸಿಬ್ಬಂದಿ ನೇಮಕಾತಿ ಪ್ರಕ್ರಿಯೆ ನಡೆಸಿಕೊಂಡು ಬಂದಿವೆ. ಈಗ ಇಂಡಿಯನ್ ಬ್ಯಾಂಕಿಂಗ್ ಪರ‌್ಸೊನೆಲ್ ಸೆಲೆಕ್ಷನ್ (ಐಬಿಪಿಎಸ್) ಸಂಸ್ಥೆ ಈ ನೇಮಕಾತಿ ಪ್ರಕ್ರಿಯೆಯನ್ನು ನಡೆಸುತ್ತಿದೆ.


ನೇಮಕಾತಿ ಹೇಗೆ?


ಸಾರ್ವಜನಿಕ ವಲಯದ ಬ್ಯಾಂಕ್‌ಗಳಲ್ಲಿ ಖಾಲಿ ಇರುವ ಅಧಿಕಾರಿ ಹುದ್ದೆಗಳಿಗೆ ಪದವಿ ಅಥವಾ ಅದಕ್ಕೂ ಹೆಚ್ಚಿನ ವಿದ್ಯಾರ್ಹತೆ ಮತ್ತು ಕ್ಲರಿಕಲ್ ಕೇಡರ್ ಹುದ್ದೆಗಳಿಗೆ 10ನೇ ತರಗತಿಯಲ್ಲಿ ಶೇ 60 ರಷ್ಟು ಅಂಕಗಳು, ದ್ವಿತೀಯ ಪಿ.ಯು.ಸಿ.ಯಲ್ಲಿ ಶೇ 50ರಷ್ಟು ಅಂಕಗಳು ಮತ್ತು ಪದವಿ ಪಾಸು ಮಾಡಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಇವುಗಳಿಗೆ ನಡೆಸಲಾಗುವ ಸ್ಪರ್ಧಾತ್ಮಕ ಸಾಮಾನ್ಯ ಲಿಖಿತ ಪರೀಕ್ಷೆಯ ವಿವರಗಳು ಡಿಡಿಡಿ.ಜಿಚಿ.ಜ್ಞಿ ವೆಬ್‌ಸೈಟ್‌ನಲ್ಲಿ ಲಭ್ಯ. ವಯೋಮಿತಿ 18 ರಿಂದ 28 ವರ್ಷಗಳು. ಪರಿಶಿಷ್ಟ ಜಾತಿ/ವರ್ಗ, ಅಂಗವಿಕಲರು, ಮಾಜಿ ಸೈನಿಕರು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಕಾನೂನುರೀತ್ಯಾ ಗರಿಷ್ಠ ವಯೋಮಿತಿಯಲ್ಲಿ ರಿಯಾಯಿತಿ ಇದೆ.


ಪರಿಶಿಷ್ಟ ಜಾತಿ/ವರ್ಗದ ಅಭ್ಯರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತಾ ತರಬೇತಿಯನ್ನು ದೇಶದ 62ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಆಯೋಜಿಸಲಾಗುತ್ತಿದ್ದು ಕರ್ನಾಟಕದಲ್ಲಿ ಬೆಂಗಳೂರು, ಗುಲ್ಬರ್ಗಾ, ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರಿನಲ್ಲಿ ತರಬೇತಿ ನೀಡಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು, ಬೆಳಗಾವಿ, ಗುಲ್ಬರ್ಗಾ, ಹುಬ್ಬಳ್ಳಿ, ಮಂಗಳೂರು ಮತ್ತು ಮೈಸೂರು ನಗರಗಳಲ್ಲಿ ಪರೀಕ್ಷಾ ಕೇಂದ್ರಗಳು ಇರುತ್ತವೆ.


ಪ್ರವೇಶ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಮಾದರಿ


ನೂರೈವತ್ತು ನಿಮಿಷಗಳ ಅವಧಿಯಲ್ಲಿ ಐದು ವಿಭಾಗಗಳಲ್ಲಿರುವ 250 ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಪ್ರತಿಯೊಂದು ಸರಿ ಉತ್ತರಕ್ಕೆ ಒಂದು ಅಂಕ. ಪ್ರತೀ ತಪ್ಪು ಉತ್ತರಕ್ಕೆ ಕಾಲು ಅಂಕ (0.25) ಕಳೆಯಲಾಗುತ್ತದೆ. ಪ್ರಶ್ನೆಪತ್ರಿಕೆಯಲ್ಲಿ ಟೆಸ್ಟ್ ಆಫ್ ರೀಸನಿಂಗ್ (ಛಿಠಿ ಟ್ಛ ್ಕಛಿಟ್ಞಜ್ಞಿಜ) ಟೆಸ್ಟ್ ಆಫ್ ಇಂಗ್ಲಿಷ್ ಲಾಂಗ್ವೇಜ್ (ಛಿಠಿ ಟ್ಛ ಉ್ಞಜ್ಝಜಿ ಔಚ್ಞಜ್ಠಜಛಿ), ಟೆಸ್ಟ್ ಆಫ್ ನ್ಯುಮೆರಿಕಲ್ ಎಬಿಲಿಟಿ (ಛಿಠಿ ಟ್ಛ ಘ್ಠೆಞಛ್ಟಿಜ್ಚಿಚ್ಝ ಅಚಿಜ್ಝಿಜಿಠಿ), ಟೆಸ್ಟ್ ಆಫ್ ಜನರಲ್ ಅವೇರ್‌ನೆಸ್ - ಬ್ಯಾಂಕಿಂಗ್ ಉದ್ಯಮಕ್ಕೆ ಸಂಬಂಧಿಸಿದಂತೆ ಮತ್ತು ಟೆಸ್ಟ್ ಆಫ್ ಕಂಪ್ಯೂಟರ್ ನಾಲೆಜ್ (ಛಿಠಿ ಟ್ಛ ಎಛ್ಞಿಛ್ಟಿಚ್ಝ ಅಡಿಚ್ಟಛ್ಞಿಛಿ ಡಿಜಿಠಿ ಛ್ಚಿಜಿಚ್ಝ ್ಟಛ್ಛಿಛ್ಟಿಛ್ಞ್ಚಿಛಿ ಠಿಟ ಆಚ್ಞಜ್ಞಿಜ ಐ್ಞಛ್ಠಠ್ಟಿ), ಎಂಬ ಐದು ಭಾಗಗಳಿದ್ದು ಪ್ರತಿ ಭಾಗದಲ್ಲಿಯೂ 50 ಪ್ರಶ್ನೆಗಳನ್ನು ಕೇಳಲಾಗಿರುತ್ತದೆ. ಪ್ರತಿ ವಿಭಾಗಕ್ಕೆ ಸರಿಸುಮಾರು 30 ನಿಮಿಷಗಳ ಕಾಲ ನಿಗದಿಯಾಗಿದೆ. ಇಂಗ್ಲಿಷ್ ಭಾಷಾ ವಿಭಾಗವನ್ನು ಹೊರತುಪಡಿಸಿ ಉಳಿದ ನಾಲ್ಕು ಭಾಗಗಳ ಪ್ರಶ್ನೆಗಳು ಇಂಗ್ಲಿಷ್ ಮತ್ತು ಹಿಂದಿ ಭಾಷೆಯಲ್ಲಿರುತ್ತವೆ.


ಸ್ಕೋರ್ ಕಾರ್ಡ್


ಈ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಗಳಿಸಿ ಯಶಸ್ವಿಯಾದ ಅಭ್ಯರ್ಥಿಗಳಿಗೆ ಐ.ಬಿ.ಪಿ.ಎಸ್. ಸಂಸ್ಥೆಯು ಸ್ಕೋರ್ ಕಾರ್ಡ್ ನೀಡಲಿದ್ದು ಅಭ್ಯರ್ಥಿಯು ಪಡೆದ ಅಂಕಗಳ ಆಧಾರದ ಮೇಲೆ ಬ್ಯಾಂಕ್ ಸಂದರ್ಶನಕ್ಕೆ ಆಹ್ವಾನ ಪತ್ರ ಕಳಿಸಬಹುದು. ಇದೊಂದು ರೀತಿಯಲ್ಲಿ ಯು.ಜಿ.ಸಿ.ಯು ನಡೆಸುವ ಉಪನ್ಯಾಸಕರ ಪರೀಕ್ಷೆಯಂತಿದ್ದು ಅರ್ಹ ಅಭ್ಯರ್ಥಿಗಳು ತಮ್ಮ ಸ್ಕೋರ್ ಕಾರ್ಡ್ ಆಧಾರದ ಮೇಲೆ ತಮ್ಮ ಇಷ್ಟದ ಬ್ಯಾಂಕಿಗೆ ಅರ್ಜಿ ಸಲ್ಲಿಸಲು ಅರ್ಹತೆ ದೊರಕಿಸಿಕೊಡುತ್ತದೆ. ಬ್ಯಾಂಕ್‌ಗಳು ಇಂಥ ಯಶಸ್ವಿ ಅಭ್ಯರ್ಥಿಗಳಿಗೆ ಮತ್ತೆ ಪರೀಕ್ಷೆ ನಡೆಸದೇ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳುತ್ತವೆ.


ಸಧ್ಯಕ್ಕೆ ಈ ಸ್ಕೋರ್‌ಕಾರ್ಡ್ ಒಂದು ವರ್ಷ ಅವಧಿಗೆ ಮಾತ್ರ ಚಾಲ್ತಿಯಲ್ಲಿರುತ್ತದೆ. ಅಷ್ಟರಲ್ಲಿ ಬ್ಯಾಂಕುಗಳು ನೀಡುವ ನೇಮಕಾತಿ ಜಾಹೀರಾತುಗಳ ಅನ್ವಯ ಅರ್ಜಿ ಸಲ್ಲಿಸಬಹುದು. ವರ್ಷ ಕಳೆದ ನಂತರ ಅಭ್ಯರ್ಥಿಯು ಮತ್ತೊಮ್ಮೆ ಪರೀಕ್ಷೆ ತೆಗೆದುಕೊಳ್ಳಬೇಕಾಗುತ್ತದೆ. ಉತ್ತಮ ಅಂಕಗಳಿರುವ ಅಭ್ಯರ್ಥಿಗಳು ವರ್ಷದೊಳಗಾಗಿಯೇ ನೇಮಕ ಹೊಂದುತ್ತಾರೆ. ಕಡಿಮೆ ಸ್ಕೋರ್ ಎನಿಸಿದಲ್ಲಿ ಅಭ್ಯರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆದು ಅಂಕಗಳನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನ ಮಾಡಬಹುದು.


ಐಬಿಪಿಎಸ್


ಬ್ಯಾಂಕಿಂಗ್ ವಲಯದ ನೇಮಕಾತಿ, ಸಿಬ್ಬಂದಿ ತರಬೇತಿ, ಸಂಶೋಧನೆ ಮತ್ತು ಅಭಿವೃದ್ಧಿ, ಹೊಸ ತಂತ್ರಜ್ಞಾನದ ಅಳವಡಿಕೆ ಮೊದಲಾದ ಕೆಲಸಗಳನ್ನು ಐ.ಬಿ.ಪಿ.ಎಸ್. ನಿರ್ವಹಿಸುತ್ತದೆ. ಇಂಡಿಯನ್ ಬ್ಯಾಂಕ್ಸ್ ಅಸೋಸಿಯೇಷನ್ ಜತೆಗಿನ ಒಡಂಬಡಿಕೆ ಅನ್ವಯ 2010ರಿಂದ ಸಾರ್ವಜನಿಕ ವಲಯದ ಬ್ಯಾಂಕ್‌ಗಳ ಕ್ಲರಿಕಲ್ ಮತ್ತು ಆಫೀಸರ್‌ಗಳ ನೇಮಕಾತಿ ಪರೀಕ್ಷೆ ಕೈಗೆತ್ತಿಕೊಂಡಿದೆ. ಆಸಕ್ತ ಪರಿಶಿಷ್ಟ ಜಾತಿ/ವರ್ಗ, ಹಿಂದುಳಿದ ಹಾಗೂ ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ಆಯ್ದ ನಗರಗಳಲ್ಲಿ ಪರೀಕ್ಷಾ ಪೂರ್ವಸಿದ್ಧತೆಯ ತರಬೇತಿ ತರಗತಿಗಳನ್ನೂ ನಡೆಸುತ್ತಿದೆ.


ಗ್ರಾಮೀಣ ಬ್ಯಾಂಕ್‌ಗಳು, ಖಾಸಗಿ ಮತ್ತು ವಿದೇಶಿ ಬ್ಯಾಂಕ್‌ಗಳು, ಜೀವವಿಮೆ, ಶಿಕ್ಷಣ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ಮತ್ತು ಖಾಸಗಿ ಕ್ಷೇತ್ರದ ಉದ್ದಿಮೆಗಳ ಸಿಬ್ಬಂದಿ ನೇಮಕಾತಿ ಪರೀಕ್ಷೆಗಳನ್ನು ನಡೆಸುವ ಜವಾಬ್ದಾರಿಯನ್ನೂ ಈ ಸಂಸ್ಥೆ ನಿರ್ವಹಿಸುತ್ತಿದೆ. ವಾರ್ಷಿಕವಾಗಿ 400 ವಿವಿಧ ರೀತಿಯ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಡೆಸುತ್ತಿದ್ದು ಸರಿಸುಮಾರು 13 ಮಿಲಿಯನ್ ಅಭ್ಯರ್ಥಿಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. 2010-11ರಲ್ಲಿ 35 ಲಕ್ಷ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಿ, ದೇಶದ 200 ನಗರಗಳಲ್ಲಿ 2000ಕ್ಕೂ ಹೆಚ್ಚು ಪರೀಕ್ಷಾ ಕೇಂದ್ರಗಳಲ್ಲಿ ಏಕಕಾಲಕ್ಕೆ ಹತ್ತು ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪರೀಕ್ಷೆ ನಡೆಸಿ, 79,236 ಅಭ್ಯರ್ಥಿಗಳಿಗೆ ಕೆಲಸ ಕೊಡಿಸಿದ್ದು ಈ ಸಂಸ್ಥೆಯ ಸಾಧನೆಯ ಸ್ಯಾಂಪಲ್ ಅಷ್ಟೇ!


ಉದ್ಯೋಗಿಗಳ ಕೊರತೆ!


ಉದ್ಯಮ ವಲಯಗಳಲ್ಲಿ ಪ್ರತಿಭಾವಂತ ಅಭ್ಯರ್ಥಿಗಳ ಕೊರತೆಯುಂಟಾಗಿದೆ. ಖಾಲಿ ಇರುವ ಲಕ್ಷಾಂತರ ಹುದ್ದೆಗಳಿಗೆ ಅರ್ಹ ಕುಶಲ ಕೆಲಸಗಾರರೇ ಸಿಗುತ್ತಿಲ್ಲ ಎಂಬ ಕೂಗು ಬಹುತೇಕ ಎಲ್ಲ ರಂಗಗಳಲ್ಲಿ ಕೇಳಿಸುತ್ತಿದೆ. ಬ್ಯಾಂಕಿಂಗ್ ಕ್ಷೇತ್ರವೂ ಈಗ ಕೌಶಲ್ಯ ಹೊಂದಿದ ನೌಕರರ ಕೊರತೆ ಎದುರಿಸುತ್ತಿದೆ. ಮುಂದಿನ ಐದು ವರ್ಷಗಳಲ್ಲಿ 7.5 ಲಕ್ಷ ನೌಕರರನ್ನು ಬ್ಯಾಂಕಿಂಗ್ ವಲಯದಲ್ಲಿ ನೇಮಕ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಉಂಟಾಗಿದೆ. ಬ್ಯಾಂಕುಗಳ ಈಗಿನ ನೇಮಕಾತಿ ನಿಯಮಗಳ ಪ್ರಕಾರ ಈ ಕೂಡಲೇ ನೇಮಕಾತಿ ಪ್ರಕ್ರಿಯೆ ಆರಂಭಿಸಿದರೂ ವರ್ಷಕ್ಕೆ 50,000 ಕ್ಕಿಂತ ಹೆಚ್ಚು ಜನರನ್ನು ನೇಮಿಸಿಕೊಳ್ಳುವುದು ಕಷ್ಟ! ಹಾಗಾಗಿ ಈ ನೇಮಕಾತಿ ಹೊಣೆಗಾರಿಕೆಯನ್ನು ಸ್ಪರ್ಧಾತ್ಮಕ ಪರೀಕ್ಷೆಗಳ ಮೂಲಕ ನಡೆಸುವ ಜವಾಬ್ದಾರಿಯನ್ನು ಭಾರತೀಯ ಬ್ಯಾಂಕುಗಳ ಒಕ್ಕೂಟ ಇಂಡಿಯನ್ ಬ್ಯಾಂಕಿಂಗ್ ಪರ‌್ಸೊನೆಲ್ ಸೆಲೆಕ್ಷನ್ ಸಂಸ್ಥೆಗೆ ವಹಿಸಿದೆ' ಎನ್ನುತ್ತಾರೆ ಐ.ಬಿ.ಪಿ.ಎಸ್. ನಿರ್ದೇಶಕ ಎಂ. ಬಾಲಚಂದ್ರನ್. 
- ಯಾಜ್ಞವಲ್ಕ್ಯ 
Opportunites in the field of Banking - Article in Vijaya Karnataka 04 June 2012

No comments: