Tuesday, January 29, 2013

LEAD Prayana 2013 - Article in Udayavani Josh 29 Jan 2013


LEAD Prayana 2013 - Article in Udayavani Josh 29 Jan 2013
Udayavani
  • ಮಹಾ ಪ್ರಯಾಣ: 2000 ಕಿಲೋಮೀಟರ್‌ಗಳ ಸುತ್ತಾಟ

  • ದೇಶದ ವಿವಿಧ ರಾಜ್ಯಗಳಿಂದ ಬಂದ 100 ಉತ್ಸಾಹಿ ಯುವಜನರು.

    • Udayavani | Jan 28, 2013
      ದೇಶದ ವಿವಿಧ ರಾಜ್ಯಗಳಿಂದ ಬಂದ 100 ಉತ್ಸಾಹಿ ಯುವಜನರು. 
      14 ದಿನಗಳು. 
      12 ಸಾಧಕರ(ರೋಲ್‌ಮಾಡೆಲ್‌) ಭೇಟಿ. 
      ಆಂಧ್ರ ಕರ್ನಾಟಕ ಸೇರಿ 9 ಆಯ್ದ ಸಾಧನಾ ಕ್ಷೇತ್ರಗಳು. 
      ಒಂದು ಮಹಾ ಪ್ರಯಾಣ! 

      ಇದೇ ಜನವರಿ 17ರಿಂದ ಆರಂಭಗೊಂಡು 30ರಂದು ಮುಕ್ತಾಯಗೊಳ್ಳುತ್ತಿರುವ ಹುಬ್ಬಳ್ಳಿಯ ದೇಶಪಾಂಡೆ ಫೌಂಡೇಶನ್‌ ಆಯೋಜಿಸಿರುವ ಲೀಡ್‌ ಪ್ರಯಾಣ 2013 ಯುವನಾಯಕತ್ವವನ್ನು ಉತ್ತೇಜಿಸಿ ಬೆಳೆಸುವ, ನೋಡಿ-ಕಲಿಯುವ, ಮಾಡಿ-ತಿಳಿಯುವ, ಕನಸನ್ನು ಸಾಕಾರಗೊಳಿಸುವ ಅವಕಾಶವಾಗಿದೆ. 

      ಲೀಡ್‌ ಪ್ರಯಾಣ ಎಲ್ಲಿಗೆ? 
      ಜನವರಿ 17- ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್ನಿನ ಸಹಸ್ಥಾಪಕಿ ಜಯಶ್ರೀ ದೇಶಪಾಂಡೆಯಿಂದ ಲೀಡ್‌ ಪಯಣ 2013ಕ್ಕೆ ಚಾಲನೆ, ಸಾಧಕರ ಭೇಟಿಯ ಪ್ರಯಾಣ ಆರಂಭ 
      ಜನವರಿ 18- ಆಂಧ್ರದ ಕುಪ್ಪಂನಲ್ಲಿ ಅಗಸ್ತÂ ಇಂಟರ್‌ನ್ಯಾಷನಲ್‌ ಫೌಂಡೇಶನ್‌ಗೆ ಭೇಟಿ, ಶ್ರಮದಾನದ ಮೂಲಕ ಕಲಿಕೆ 
      ಜನವರಿ 19- ಕುಪ್ಪಂನಲ್ಲಿ ಪರಿಸರ ಪಯಣ- ಇಕೊ ವಾಕ್‌- ಅಗಸ್ತÂ ಇಂಟರ್‌ನ್ಯಾಷನಲ್‌ ಫೌಂಡೇಶನ್‌ ಸ್ಥಾಪಕ ರಾಮ್‌ಜಿ ರಾಘವನ್‌ ಜೊತೆ ಸಂವಾದ- ಬೆಂಗಳೂರಿಗೆ ಪಯಣ 
      ಜನವರಿ 20- ಬೆಂಗಳೂರಿನಲ್ಲಿ ಉದ್ಯಮಿಗಳಾದ ಮ್ಯಾಗ್ಸೆàಸೆ ಪ್ರಶಸ್ತಿ ಪುರಸ್ಕತ ಸೆಲ್ಕೊ ಸೋಲಾರ್‌ನ ಹರೀಶ್‌ ಹಂದೆ, ಅಘÂìಂ ಸಂಸ್ಥಾಪಕಿ ರೋಹಿಣಿ ನಿಲೇಕಣಿ, ದೇಶಪಾಂಡೆ ಫೌಂಡೇಶನ್ನಿನ ಸಿಇಓ ನವೀನ್‌ ಝಾ, ಸಂಕಲ್ಪ$ಸೆಮಿಕಂಡಕ್ಟರ್ನ ವಿವೇಕ್‌ ಪವಾರ್‌, ರೆಡ್‌ಬಸ್‌ ಸಂಸ್ಥೆಯ ಫ‌ಣೀಂದ್ರ ಸಮಾ ಮತ್ತು ಐಎಎಸ್‌ ಅಧಿಕಾರಿ ಪಿ.ಮಣಿವಣ್ಣನ್‌ ಮೊದಲಾದ ಸಾಧಕರೊಂದಿಗೆ ಸಂವಾದ, ಗುಂಪು ಚರ್ಚೆ 
      ಜನವರಿ 21- ದೊಡ್ಡಬಳ್ಳಾಪುರಕ್ಕೆ ಭೇಟಿ- ಸಾವಯವ ಕೃಷಿಯ ಪ್ರಾತ್ಯಕ್ಷಿಕೆ, ಪರಿಚಯ, ಪ್ರಯೋಗಾನುಭವ, ಕಾರ್ಯಾನುಭವ, ಹಿರಿಯ ಕೃಷಿತಜ್ಞ ಡಾ.ಎಲ್‌. ನಾರಾಯಣ ರೆಡ್ಡಿಯವರೊಂದಿಗೆ ಸಂವಾದ- ಮೈಸೂರಿನೆಡೆಗೆ ಪಯಣ 
      ಜನವರಿ 22- ಮೈಸೂರಿನಲ್ಲಿ ಸುತ್ತೂರು ಮಹಾಸಂಸ್ಥಾನದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರೊಂದಿಗೆ ಸಂವಾದ, ಜೆಎಸ್‌ಎಸ್‌ ಕೃಷಿ ವಿಜ್ಞಾನ ಕೇಂದ್ರ, ಜೆಎಸ್‌ಎಸ್‌ ವೈದ್ಯಕೀಯ ವಿಶ್ವವಿದ್ಯಾಲಯ, ಭೇಟಿ, ಕಲಿಕೆ, ಸಂವಾದ 
      ಜನವರಿ 23- ಮೈಸೂರಿನ ಇನ್‌ಫೋಸಿಸ್‌ ಕ್ಯಾಂಪಸ್‌ ಭೇಟಿ, ಸಾಧಕರ ಭೇಟಿ, ಸಂವಾದ, ಮಣಿಪಾಲದೆಡೆ ಪಯಣ 
      ಜನವರಿ 24- ಮಣಿಪಾಲ ವಿಶ್ವವಿದ್ಯಾಲಯಕ್ಕೆ ಭೇಟಿ, ಪೊ›-ಚಾನ್ಸಲರ್‌ ಡಾ.ಎಚ್‌.ಎಸ್‌. ಬÇÉಾಳ್‌ ಮತ್ತು ವೈಸ್‌ ಪೊ›-ಚಾನ್ಸಲರ್‌ ಡಾ.ಎಚ್‌. ವಿನೋದ್‌ ಭಟ್‌ ಅವರೊಂದಿಗೆ ಸಂವಾದ, ಗುಂಪು ಚರ್ಚೆ, ಮಂಗಳೂರಿಗೆ ಪಯಣ 
      ಜನವರಿ 25- ಮಂಗಳೂರಿನಲ್ಲಿ ಐಓಬಿ ಮುಖ್ಯ ವ್ಯವಸ್ಥಾಪಕ ಎಂ. ನರೇಂದ್ರ ಅವರೊಂದಿಗೆ ಸಂವಾದ, ಕ್ಯಾಂಪಸ್‌ ಭೇಟಿ, ಸಣ್ಣ ಕೈಗಾರಿಕೆಗಳಿಗೆ ಭೇಟಿ, ನ್ಯಾನೋಪಿಕ್ಸ್‌ಗೆ ಭೇಟಿ, ಧರ್ಮಸ್ಥಳಕ್ಕೆ ಪಯಣ 
      ಜನವರಿ 26- ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರೊಂದಿಗೆ ಸಂವಾದ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಪ್ರಾಜೆಕ್ಟ್ಗೆ ಭೇಟಿ, ಗ್ರಾಮೀಣಾಭಿವೃದ್ಧಿ ಚಟುವಟಿಕೆಗಳ ಪರಿಚಯ, ಭಾಗವಹಿಸುವಿಕೆಯ ಮೂಲಕ ಕಲಿಕೆ 
      ಜನವರಿ 27- ಹುಬ್ಬಳ್ಳಿ ಕಡೆಗೆ ಮರುಪ್ರಯಾಣ, ಮಾರ್ಗದಲ್ಲಿನ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ, ಚಟುವಟಿಕೆಗಳು
      ಜನವರಿ 28- ಹುಬ್ಬಳ್ಳಿಯಲ್ಲಿ ಇನ್‌ಫೋಸಿಸ್‌ನ ಸುಧಾಮೂರ್ತಿ ಅವರೊಂದಿಗೆ ಸಂವಾದ, ಕಲಕೇರಿಯ ಸಂಗೀತ ವಿದ್ಯಾಲಯಕ್ಕೆ ಭೇಟಿ, ವರೂರಿನ ವಿಆರ್‌ಎಲ್‌ ಕ್ಯಾಂಪಸ್‌ಗೆ ಭೇಟಿ, ಅಕ್ಷಯಪಾತ್ರ ಖ್ಯಾತಿಯ ಇಸ್ಕಾನ್‌ಗೆ ಭೇಟಿ, ಸಾಧಕರೊಂದಿಗೆ ಸಂವಾದ, ಚರ್ಚೆ, ಧಾರವಾಡಕ್ಕೆ ಪಯಣ 
      ಜನವರಿ 29- ಹುಬ್ಬಳ್ಳಿ-ಧಾರವಾಡದಲ್ಲಿನ ದೇಶಪಾಂಡೆ ಸಾಮಾಜಿಕ ಉದ್ಯಮಶೀಲತಾ ಕೇಂದ್ರಕ್ಕೆ ಮತ್ತು ಮಾರ್ಕೊಪೋಲೊ ಘಟಕಕ್ಕೆ ಭೇಟಿ, ದೇಶಪಾಂಡೆ ಫೌಂಡೇಶನ್ನಿನ ಗುರುರಾಜ ದೇಶಪಾಂಡೆ ಅವರೊಂದಿಗೆ ಸಂವಾದ, ವಿಚಾರ ವಿನಿಮಯ, ಚರ್ಚೆ 
      ಜನವರಿ 30- ಹುಬ್ಬಳ್ಳಿಯಲ್ಲಿ ದೇಶಪಾಂಡೆ ಫೌಂಡೇಶನ್‌ ಆಯೋಜಿಸಿರುವ ಯುವ ಸಮ್ಮೇಳನದಲ್ಲಿ ಭಾಗವಹಿಸಿ ಟಾಟಾ ಸಮೂಹದ ರತನ್‌ ಟಾಟಾ, ಇನ್‌ಫೋಸಿಸ್‌ನ ನಾರಾಯಣ ಮೂರ್ತಿ, ಡಾ. ರಫ‌ುನಾಥ ಮಾಶೆಲ್ಕರ್‌ ಅವರೊಂದಿಗೆ ಸಂವಾದ. ಪಯಣದ ಸಮಾರೋಪ. 

      ಲೀಡ್‌ ಪ್ರಯಾಣ ಏತಕ್ಕೆ? 
      ನೈಜಪರಿಸರದಲ್ಲಿ ಸಾಧಕರ ಅಂಗಳದಲ್ಲಿಯೇ ಸಾಧನೆಯ ಪರಿಚಯ, ಸಾಧನೆಯ ಹಾದಿಯ ಪ್ರತ್ಯಕ್ಷ ಅನುಭವ, ವೈವಿಧ್ಯಮಯ ಪರಿಸರ, ವಿವಿಧ ರಾಜ್ಯಗಳಿಂದ ಬಂದ ಪ್ರತಿಭಾವಂತರೊಂದಿಗೆ ಬೆರೆತು ಕಲಿಯುವುದು, ನಾಯಕತ್ವದ ಪರಿಚಯ ಮಾಡಿಕೊಂಡು ಭವಿಷ್ಯದ ನಾಯಕತ್ವದ ಜವಾಬ್ದಾರಿ ನಿರ್ವಹಿಸಲು ಬೇಕಾದ ತರಬೇತಿ ಪಡೆದುಕೊಳ್ಳುವುದು, ಪ್ರಾತ್ಯಕ್ಷಿಕೆಗಳಿಂದ ಕಲಿಯುವುದಕ್ಕೆ 2011ರಿಂದ ಪ್ರತಿ ವರ್ಷವೂ ಲೀಡ್‌ ಪಯಣ ನಡೆಯುತ್ತಲೇ ಬಂದಿದೆ. 
      ನಾಯಕತ್ವದ ಹೊಣೆಗಾರಿಕೆಯನ್ನು ಪರಿಚಯಿಸುವುದರ ಮೂಲಕ ಪ್ರತಿಯೊಬ್ಬರೂ ನಾಯಕರಾಗಿ ಹೊರಹೊಮ್ಮುವಂತೆ ಮಾಡುವ ದೂರದೃಷ್ಟಿಯಿಂದ ಯುವಜನರಲ್ಲಿ ವಿನೂತನ ಆಲೋಚನೆಗಳನ್ನು ಬೆಳೆಸುವ, ಹುರಿದುಂಬಿಸುವ, ಹೊಸತನ್ನು ಹುಡುಕಿ ತೆಗೆಯುವ ಆಸಕ್ತಿ ಕೆರಳಿಸುವ ಉದ್ದೇಶದೊಂದಿಗೆ ಕಲಿಕೆ, ಮುನ್ನುಗ್ಗುವಿಕೆ, ನಾಯಕತ್ವ ವಹಿಸಿಕೊಳ್ಳುವಿಕೆಯನ್ನು ಸಾಧಿಸಿ ತೋರಿಸುವ ಈ ಲೀಡರ್ ಆಕ್ಸಿಲರೇಟಿಂಗ್‌ ಡೆವಲಪ್‌ಮೆಂಟ್‌ ಪ್ರಯಾಣ ದೇಶದ ವಿವಿಧ ಪ್ರಾಂತ್ಯಗಳ ಜನರನ್ನು ಒಟ್ಟಿಗೆ ಸೇರಿಸಿ ಬಾಂಧವ್ಯ ಬೆಸೆಯುವುದರ ಜೊತೆ ಅರಿವಿನ ಹರಹನ್ನು ವಿಸ್ತರಿಸುವುದಾಗಿದೆ. 

      ಲೀಡ್‌ ಪ್ರಯಾಣದ ತಂಡ 
      ಜಯಶ್ರೀ ಮತ್ತು ಗುರುರಾಜ ದೇಶಪಾಂಡೆ ಅವರ ಮಾರ್ಗದರ್ಶನದಲ್ಲಿ ನವೀನ್‌ ಝಾ, ಅಜಯ್‌ ಸುಮನ್‌ ಶುಕ್ಲಾ ಅವರ ನಾಯಕತ್ವದಲ್ಲಿನ ಲೀಡ್‌ ತಂಡದ ಮ್ಯಾನೇಜರ್‌ಗಳಾಗಿ ದೀಪಶ್ರೀ ರಾಮ್‌ಮೋಹನ್‌, ರಾಧಾಕೃಷ್ಣ ನಾಯಕ್‌, ಪ್ರಶಾಂತ್‌ ದೇಶಪಾಂಡೆ, ಗೀತಾ ಹೆಗಡೆ, ಕವಿತಾ ಕೌಲಗಿ, ಅಮೃತ್‌ ಪಾಟೀಲ್‌, ಅಭಿನಂದನ್‌ ಕೆ, ವಿನೋದ್‌ ಕುಮಾರ್‌ ಮಾರ್ಗದರ್ಶನ ಮಾಡುತ್ತಿದ್ದು, ದೀಪಕ್‌ ಗಿರಿಯಾಪುರ ಅವರು ಮಾಸ್ಟರ್‌ ಲೀಡರ್‌ಶಿಪ್‌ ಅಡಿ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿ¨ªಾರೆ. ದೇಶದ 10 ರಾಜ್ಯಗಳಿಂದ 100 ಯುವಜನರನ್ನು ಮಾತ್ರ ಈ ಪ್ರಯಾಣಕ್ಕೆ ಆಯ್ಕೆಮಾಡಿ ಮೂರು ಬಸ್‌ಗಳಲ್ಲಿ ಸಂಚಾರಕ್ಕೆ ಕಳುಹಿಸಿಕೊಡಲಾಗಿದೆ. 

      ಏನಿದು ಲೀಡ್‌? 
      2008ರ ಆಗಸ್ಟ್‌ 15ರಂದು ಆರಂಭವಾದ ಲೀಡ್‌ ಕಾರ್ಯಕ್ರಮ ಯುವಜನರು, ಅದರಲ್ಲೂ ಮುಖ್ಯವಾಗಿ ತಾಂತ್ರಿಕ ಶಿಕ್ಷಣ ಪಡೆಯುವ ಯುವಜನರು ನಿರ್ಮಿಸುವ, ಸಂಘಟಿಸುವ ಪ್ರಾಜೆಕ್ಟ್ಗಳನ್ನು ಪ್ರೋತ್ಸಾಹಿಸುವ ಕಾರ್ಯಕ್ರಮವಾಗಿದ್ದು, ದೇಶಪಾಂಡೆ ಫೌಂಡೇಶನ್‌ ಈ ವಿಶೇಷ ಪ್ರಾಜೆಕ್ಟ್ಗಳನ್ನು ಬೆಂಬಲಿಸುವ, ನೆರವು ನೀಡುವ, ಉತ್ತಮ ಪಡಿಸುವ ಮತ್ತು ಹೆಚ್ಚಿನ ಅವಕಾಶ ಕಲ್ಪಿಸುವ ಕಾರ್ಯಕ್ರಮವಾಗಿದೆ. ಲೀಡ್‌ನ‌ ಹಣಕಾಸಿನ ನೆರವು ಮತ್ತು ಬೆಂಬಲದಿಂದ ಯುವನಾಯಕತ್ವವನ್ನು ಹುರಿದುಂಬಿಸುವ ಕನಸು ಮತ್ತು ಅದನ್ನು ಸಾಕಾರಗೊಳಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಜವಾಬ್ದಾರಿ ಇದರಲ್ಲಿದೆ. ಉತ್ತರ ಕರ್ನಾಟಕ ಭಾಗದ ಹಲವು ತಾಂತ್ರಿಕ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳು ಈ ಪ್ರಾಜೆಕ್ಟ್‌ನ ಪ್ರಯೋಜನ ಪಡೆದುಕೊಳ್ಳುತ್ತಿ¨ªಾರೆ ಮತ್ತು ಲೀಡ್‌ ಕಾರ್ಯಕ್ರಮಕ್ಕೆ ಹೆಸರು ನೊಂದಾಯಿಸಿ¨ªಾರೆ. 

      ಲೀಡ್‌ನ‌ಲ್ಲಿ ಯಾರು ಭಾಗವಹಿಸಬಹುದು? 
      ಸೇವಾ ಮನೋಭಾವ ಇರುವ, ಕ್ರಿಯೇಟಿವ್‌ ಐಡಿಯಾಗಳ ಸಾಕಾರಕ್ಕಾಗಿ ಕಾತರಿಸುತ್ತಿರುವ, ನಾಯಕತ್ವ ಗುಣಗಳಿರುವ, ತಾನೂ ಬೆಳೆಯುತ್ತಾ ತನ್ನ ತಂಡವನ್ನು ಬೆಳೆಸಲು ಉತ್ಸುಕನಾಗಿರುವ ಯಾವುದೇ ಕಾಲೇಜು ಅಥವಾ ವಿಶ್ವವಿದ್ಯಾಲಯದಲ್ಲಿ ಓದುತ್ತಿರುವ ವಿದ್ಯಾರ್ಥಿ ಈ ಪ್ರಾಜೆಕ್ಟ್ಗಳನ್ನು ಪ್ರಸ್ತುತಪಡಿಸಲು ಮತ್ತು ಲೀಡ್‌ ಸದಸ್ಯತ್ವ ತೆಗೆದುಕೊಳ್ಳಲು ಅರ್ಹನಾಗಿರುತ್ತಾನೆ. ತನ್ನ ಸುತ್ತಲಿನ ಸಮಾಜದ ಉಪಯೋಗಕ್ಕೆ ಬರುವಂತಹ ಯಾವುದಾದರೂ ಒಂದು ಪ್ರಾಜೆಕ್ಟನ್ನು ಹಾಕಿಕೊಂಡು, ತನ್ನೊಂದಿಗೆ ಐದು ಮಂದಿಯ ತಂಡವನ್ನು ಕಟ್ಟಿಕೊಂಡು, ಕನಿಷ್ಟ ವಾರಕ್ಕೆ 4-5 ಗಂಟೆಗಳಷ್ಟು ಸಮಯ ಕಾರ್ಯನಿರ್ವಹಿಸಲು ಸಿದ್ಧವಿರುವವರು ಈ ಲೀಡ್‌ ಕಾರ್ಯಕ್ರಮದ ನೆರವು ಪಡೆಯಬಹುದು. 
      ಈಗಾಗಲೇ ಲೀಡ್‌ ಐಡಿಯಾ ಬ್ಯಾಂಕಿನಲ್ಲಿ 178ಕ್ಕೂ ಹೆಚ್ಚು ಐಡಿಯಾಗಳ ಪಟ್ಟಿಯೇ ಇದ್ದು ದಿನದಿನವೂ ಇದು ಬೆಳೆಯುತ್ತಿದೆ. ಇವುಗಳ ಜೊತೆಗೆ ತಮ್ಮದೇ ಹೊಸ ಐಡಿಯಾಗಳನ್ನು ಸೇರಿಸಲು ವಿದ್ಯಾರ್ಥಿಗಳಿಗೆ ಅವಕಾಶ ಇದ್ದೇ ಇದೆ. 

      ಯುವ ಸಮಾವೇಶ- 2013 
      ಲೀಡ್‌ ಮೇಳ ಎಂದು ಪ್ರಚಲಿತವಿದ್ದ ಈ ಯುವ ಉತ್ಸಾಹಿಗಳ ವಾರ್ಷಿಕ ಸಮಾವೇಶ 2011 ರಿಂದ ಯುವ ಮೇಳವಾಗಿ(ಯೂತ್‌ ಸಮಿಟ್‌) ಆಯೋಜಿತಗೊಳ್ಳುತ್ತಿದ್ದು, 2012ರ ಜನವರಿ 15 ರಂದು 2ನೇ ಯುವಮೇಳ ನಡೆದಿತ್ತು. ಇದೀಗ 2013ರ ಜನವರಿ 30ರಂದು ಹುಬ್ಬಳ್ಳಿಯ ವಿದ್ಯಾನಗರದ ಬಿವಿಬಿ ಇಂಜಿನಿಯರಿಂಗ್‌ ಕಾಲೇಜ್‌ ಕ್ಯಾಂಪಸ್‌ನಲ್ಲಿನ ದೇಶಪಾಂಡೆ ಫೌಂಡೇಶನ್ನಿನ ಲೀಡ್‌ ಕೇಂದ್ರದಲ್ಲಿ 3ನೇ ಯುವಮೇಳ ಆಯೋಜಿತವಾಗಿದ್ದು 2000ಕ್ಕೂ ಹೆಚ್ಚು ಯುವ ಉತ್ಸಾಹಿಗಳು ಭಾಗವಹಿಸುತ್ತಿ¨ªಾರೆ. ಟಾಟಾ ಸಂಸ್ಥೆಗಳ ನಿವೃತ್ತ ಛೇರ¾ನ್‌ ರತನ್‌ ಟಾಟಾ ಅವರು ಪ್ರಧಾನ ಭಾಷಣ ಮಾಡಲಿದ್ದು, ಇನ್‌ಫೊಸಿಸ್‌ನ ಎನ್‌.ಆರ್‌. ನಾರಾಯಣ ಮೂರ್ತಿ, ಸುಧಾ ಮೂರ್ತಿ, ಡಾ. ರಘುನಾಥ್‌ ಮಾಶೆಲ್ಕರ್‌, ಡಾ. ಗುರುರಾಜ ದೇಶ್‌ ದೇಶಪಾಂಡೆ, ಲಕ್ಷಿ¾à ಪ್ರಾಚುರಿ, ರಮೇಶ್‌ ರಾಸ್ಕರ್‌ ಮೊದಲಾದವರು ಈ ಸಮಾವೇಶದಲ್ಲಿ ಯುವ ಉತ್ಸಾಹಿಗಳಿಗೆ ಮಾರ್ಗದರ್ಶನ ಮಾಡಲಿ¨ªಾರೆ, ಸಂವಾದ, ಚರ್ಚೆಗಳಲ್ಲಿ ಭಾಗವಹಿಸಲಿ¨ªಾರೆ. 

      ದೇಶಪಾಂಡೆ ಪ್ರತಿಷ್ಠಾನ 
      ಸುಧಾ ಮೂರ್ತಿಯವರ ಸಹೋದರಿ ಜಯಶ್ರೀ ದೇಶಪಾಂಡೆ ಮತ್ತು ಗುರುರಾಜ ದೇಶಪಾಂಡೆ ಅವರು ದೇಶಪಾಂಡೆ ಪ್ರತಿಷ್ಠಾನವನ್ನು 1996ರಲ್ಲಿ ಸ್ಥಾಪಿಸಿದರು. ವಿದೇಶಗಳಲ್ಲಿ ಮಾತ್ರವಲ್ಲದೇ ಭಾರತದಲ್ಲಿಯೂ ಸಂಶೋಧನೆ, ಕೌಶಲ್ಯ ಮತ್ತು ಸಾಮಾಜಿಕ ಕಳಕಳಿ ಇರುವ ಉದ್ಯಮಶೀಲ ಯುವಜನರನ್ನು ಸಂಘಟಿಸಲು 2007ರಲ್ಲಿ ಹುಬ್ಬಳ್ಳಿ-ಧಾರವಾಡ ವಲಯದ ದೇಶಪಾಂಡೆ ಸಾಮಾಜಿಕ ಉದ್ಯಮಶೀಲತಾ ಕೇಂದ್ರವನ್ನು ಆರಂಭಿಸಿದರು. ಲೀಡ್‌ ಕಾರ್ಯಕ್ರಮವು ಈ ಸಾಮಾಜಿಕ ನಾಯಕತ್ವದ ಭಾಗವಾಗಿ ಉತ್ತರಕರ್ನಾಟಕದ ಜಿÇÉೆಗಳಲ್ಲಿನ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ. ದೇಶಪಾಂಡೆ ಫೌಂಡೇಶನ್ನಿನ ಸಮರ್ಥ ಮಾರ್ಗದರ್ಶನ ಮತ್ತು ಸ್ಟೈಫ‌ಂಡ್‌ನ‌ ನೆರವಿನಿಂದ ಹಲವು ಹೊಸ ಸಂಶೋಧನೆಗಳು, ಪ್ರಾಜೆಕ್ಟ್ಗಳು ನಿರ್ಮಾಣಗೊಳ್ಳುತ್ತಿವೆ. ಲೀಡ್‌ ಕಾರ್ಯಕ್ರಮದ ಸದಸ್ಯತ್ವ ಪಡೆಯುವ ವಿದ್ಯಾರ್ಥಿಗಳಿಗೆ ಅವರಿಗೆ ಜಗತ್ತಿನ ಹಲವು ಸಾಧಕರನ್ನು (ರೋಲ್‌ಮಾಡೆಲ್‌) ಭೇಟಿಯಾಗುವ, ಅವರೊಡನೆ ಸಂವಾದ ನಡೆಸುವ ಅವಕಾಶ ಲಭಿಸುತ್ತಿದೆ. ಅವರಲ್ಲಿರುವ ಐಡಿಯಾಗಳನ್ನು ಕಾರ್ಯರೂಪಕ್ಕೆ ತರಲು, ಪ್ರಾಜೆಕ್ಟ್ಗಳನ್ನು ಹಮ್ಮಿಕೊಳ್ಳಲು, ಸ್ಥಳೀಯ ಸಮುದಾಯಗಳೊಂದಿಗೆ ಸಂವಾದ ನಡೆಸಿ ಅವರ ಅಗತ್ಯಗಳಿಗೆ, ಅನುಕೂಲಗಳಿಗೆ ಸರಿಹೊಂದುವ ಸಾರ್ವಜನಿಕ ಸೌಕರ್ಯಗಳನ್ನು ನಿರ್ಮಿಸಲು, ಸಂವಹನ ಕೌಶಲಗಳನ್ನು ಹೆಚ್ಚಿಸಿಕೊಳ್ಳಲು, ಪ್ರಾತ್ಯಕ್ಷಿಕೆ ಮತ್ತು ಪ್ರತ್ಯಕ್ಷÂ ಕಲಿಕೆ, ಅನುಭವ ಗಳಿಸಿಕೊಳ್ಳಲು, ನಾಯಕತ್ವ ವಹಿಸಲು ಉತ್ತಮ ಅವಕಾಶಗಳು ಸಿಗುತ್ತಿವೆ. 

      ಐಎಎಸ್‌, ಐಪಿಎಸ್‌ ಪೂರ್ವಭಾವಿ ಪರೀಕ್ಷೆ 
      ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್‌ ಪೊ›ಬೆಷನರ್‌ಗಳ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟಿಸಿದ್ದು ಇದೇ ಫೆಬ್ರವರಿ 02ರಂದು ಲೋಕಸೇವಾ ಆಯೋಗದ ವೆಬ್‌ಸೈಟ್‌, ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ಮತ್ತು ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ವಿವರವಾದ ಪ್ರಕಟಣೆ ಹೊರಡಿಸಲಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನ 2013ರ ಮಾರ್ಚ್‌ 4 ಆಗಿದ್ದು, ಪೂರ್ವಭಾವಿ ಪರೀಕ್ಷೆ ನಡೆಯುವ ದಿನ 2012ರ ಮೇ 19 ಆಗಿರುತ್ತದೆ. ಹಾಗೆಯೇ ಮುಖ್ಯ ಪರೀಕ್ಷೆಗಳು 2013ರ ನವೆಂಬರ್‌ 08 ರಿಂದ ಆರಂಭಗೊಂಡು 21 ದಿನಗಳ ಕಾಲ ನಡೆಯುತ್ತವೆ. 
      ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು: ಬೆಂಗಳೂರು ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಬರುವ ವಾರದ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌! ಹೆಚ್ಚಿನ ಮಾಹಿತಿ ಹಾಗು ಮಾದರಿ ಪತ್ರಿಕೆಗಳಿಗಾಗಿ ಈ ಕೆಲವು ಜಾಲತಾಣಗಳನ್ನು ಸಂಪರ್ಕಿಸಬಹುದು: 

      ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪರೀಕ್ಷೆ 2013 
      ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ವಿವಿಧ ಹು¨ªೆಗಳಿಗಾಗಿ ಸ್ಟಾಫ್ ಸೆಲೆಕ್ಷನ್‌ ಕಮಿಷನ್‌ ನಡೆಸುವ ಕಂಬೈನ್‌x ಗ್ರಾಜುಯೆಟ್‌ ಲೆವೆಲ್‌ ಪ್ರಥಮ ಹಂತದ (ಟೈರ್‌-1) ಪರೀಕ್ಷೆಯ 2013ರ ವೇಳಾಪಟ್ಟಿಯನ್ನು ಈಗಾಗಲೇ ಪ್ರಕಟವಾಗಿದೆ. ಇದೇ ಜನವರಿ 19 ರಿಂದ ಆನ್‌ಲೈನ್‌ ಮೂಲಕ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದ್ದು ಫೆಬ್ರವರಿ 15 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಟೈರ್‌-1 ಪರೀಕ್ಷೆಗಳು ಏಪ್ರಿಲ್‌ 14 ಮತ್ತು 21ರಂದು ನಡೆಯಲಿದ್ದು ಇದರಲ್ಲಿ ಆಯ್ಕೆಯಾದವರಿಗಾಗಿ ಟೈರ್‌-2 ಪರೀಕ್ಷೆಗಳು ಜುಲೈ 21 ಮತ್ತು ಸೆಪ್ಟೆಂಬರ್‌ 20 ರಂದು ನಡೆಯಲಿವೆ. ಅಂತಿಮವಾಗಿ ಸ್ಕಿಲ್‌ಟೆಸ್ಟ್‌, ಕಂಪ್ಯೂಟರ್‌ ಪರೀಕ್ಷೆ, ಆಯ್ಕೆ ಸಂದರ್ಶನವೂ ಕೆಲವು ಹು¨ªೆಗಳಿಗೆ ನಿಗದಿಯಾಗಿದೆ. ಕರ್ನಾಟಕದಲ್ಲಿ ಪರೀûಾ ಕೇಂದ್ರಗಳು : ಬೆಂಗಳೂರು, ಮಂಗಳೂರು, ಗುಲ್ಬರ್ಗಾ ಮತ್ತು ಧಾರವಾಡ. ವಿವರವಾದ ಸಿಲಬಸ್‌ ಮತ್ತು ಸೂಚನೆಗಳಿಗಾಗಿ ಎಂಪ್ಲಾಯ್‌ಮೆಂಟ್‌ ನ್ಯೂಸ್‌ ವಾರಪತ್ರಿಕೆ ನೋಡಿ. ಗುಡ್‌ಲಕ್‌!

Tuesday, January 22, 2013

KPSC Mains 2011 GS Paper 2 - Article in Udayavani Josh 22 Jan 2013


KPSC Mains 2011 GS Paper 2 - Article in Udayavani Josh 22 Jan 2013
Udayavani
  • ಈ ವಾರದ ಹೋಂವರ್ಕು

  • ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 2 ಕೂಡ ಅಗಾಧ ವಿಷಯ ವ

    • Udayavani | Jan 21, 2013
      ಕ್ವೆಶ್ಚನ್‌ ಪೇಪರ್‌ ನಮ್ಮಲ್ಲಿ, ಆನ್ಸರ್‌ ಪೇಪರ್‌ ನಿಮ್ಮಲ್ಲಿ 
      ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 2 ಕೂಡ ಅಗಾಧ ವಿಷಯ ವಿಸ್ತಾರವನ್ನು ಒಳಗೊಂಡಿತ್ತು. ದಿನಪತ್ರಿಕೆಗಳ ವಿಸ್ತಾರವಾದ ಓದು, ಪ್ರಸ್ತುತ ಘಟನಾವಳಿಗಳ ಅರಿವು, ಕರ್ನಾಟಕ ಗ್ಯಾಸೆಟಿಯರ್‌ ಇಲಾಖೆ ಪ್ರಕಟಿಸಿರುವ ಗ್ಲಿಂಪ್ಸಸ್‌ ಆಫ್ ಕರ್ನಾಟಕ, ಕರ್ನಾಟಕ ಕೈಪಿಡಿ, ಎ ಹ್ಯಾಂಡ್‌ ಬುಕ್‌ ಆಫ್ ಕರ್ನಾಟಕ ಮತ್ತು ಅವುಗಳ ಜೊತೆಗೆ ನೀಡಲಾಗಿದ್ದ ಡಿವಿಡಿಯಲ್ಲಿ ಅಡಕಗೊಳಿಸಲಾಗಿದ್ದ ಆರ್ಥಿಕ ಸಮೀಕ್ಷೆ, ಎಕನಾಮಿಕ್‌ ಸರ್ವೇ, ಇಂಡಿಯ- 2010, ಜನಗಣತಿಯ ಅಂಕಿ ಅಂಶಗಳು ಮತ್ತು ಸಾಮಾನ್ಯ ಜ್ಞಾನ ಮಾಹಿತಿಯನ್ನು ಆಧರಿಸಿದ್ದ ಹಲವು ಪ್ರಶ್ನೆಗಳು ಬಂದಿದ್ದು ಸರ್ಕಾರದ ಅಧಿಕೃತ ಮಾಹಿತಿಯನ್ನು ಆಧರಿಸಿದ್ದ ಇಲಾಖೆಯ ಪ್ರಕಟಣೆಗಳನ್ನು, ಯೋಜನಾದಂತಹ ನಿಯತಕಾಲಿಕೆಗಳನ್ನು ಓದಿದವರಿಗೆ ಸುಲಭವೆನಿಸುವಂತಿದ್ದವು. 

      ಸಾಮಾನ್ಯ ಅಧ್ಯಯನ ಪತ್ರಿಕೆ- 2- 300 ಅಂಕಗಳು- 3 ಗಂಟೆ 
      1. ಭಾರತದ ರಾಜಕೀಯ/ಆಡಳಿತ ವ್ಯವಸ್ಥೆ- ಕರ್ನಾಟಕ ರಾಜ್ಯದ ರಾಜಕೀಯ/ಆಡಳಿತ ವ್ಯವಸ್ಥೆಗೆ ವಿಶೇಷ ಆದ್ಯತೆ 
      2. ಭಾರತದ ಆರ್ಥಿಕತೆ ಮತ್ತು ಭಾರತದ ಭೂಗೋಳ- ಕರ್ನಾಟಕ ರಾಜ್ಯದ ಆರ್ಥಿಕತೆ ಮತ್ತು ಭೂಗೋಳಕ್ಕೆ ವಿಶೇಷ ಆದ್ಯತೆ 
      3. ಕರ್ನಾಟಕ ಮತ್ತು ಭಾರತದ ಅಭಿವೃದ್ಧಿಯಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರ ಹಾಗೂ ಪ್ರಾಮುಖ್ಯತೆ 

      2011ರ ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ 2- ಅಂಕಗಳು 300 
      ಭಾಗ - ಎ 
      1. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200ರಿಂದ 250 ಪದಗಳಷ್ಟಿರಲಿ: 20 x 1= 20 
      ಎ. ಲೋಕಪಾಲ ಮಸೂದೆಯ ಅಂಗೀಕಾರಕ್ಕೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಅಣ್ಣಾ ತಂಡದ ನಡುವಿನ ವಿರಸ ಕುರಿತು ವಿಮಶಾìತ್ಮಕವಾಗಿ ಬರೆಯಿರಿ. 
      ಬಿ. ಇ-ಆಡಳಿತ ಎಂದರೇನು? ಕರ್ನಾಟಕ ಸರ್ಕಾರು ಆರಂಭಿಸಿರುವ ಇ-ಆಡಳಿತ ಪರಿಯೋಜನೆಗಳನ್ನು ಪರಿಶೀಲಿಸಿ. 

      2. ಈ ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100-125 ಪದಗಳಲ್ಲಿ ಉತ್ತರಿಸಿ. 10x3=30 
      ಎ. ಈಗ ಕಂಡುಬರುತ್ತಿರುವ ರಾಜಕೀಯ ದೃಶ್ಯಾವಳಿಗಳ ಸಂದರ್ಭದಲ್ಲಿ, ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷವೊಂದು ಹುಟ್ಟಿಕೊಳ್ಳುವ ನಿರೀಕ್ಷೆಯ ಕುರಿತು ವ್ಯಾಖ್ಯಾನಿಸಿ. 
      ಬಿ. ಕರ್ನಾಟಕದ ಹಿಂದುಳಿದ ವರ್ಗಗಳ ಚಳುವಳಿ ಕುರಿತು ಒಂದು ಟಿಪ್ಪಣಿ ಬರೆಯಿರಿ. 
      ಸಿ. ರಾಜ್ಯ ವಿಧಾನಸಭೆಯ ರಚನೆ, ಅಧಿಕಾರಗಳು ಹಾಗೂ ಕೆಲಸಗಳನ್ನು ವಿವರಿಸಿ. 
      ಡಿ. ಲಿಂಗಾಧಾರಿತ ಅಸಮಾನತೆಯನ್ನು ನಿವಾರಿಸುವ ಒಂದು ಪರಿಣಾಮಕಾರಿ ಕ್ರಮವಾಗಿ ಭಾರತದ ಸಂಸತ್ತಿನಲ್ಲಿ ಲಿಂಗಾಧಾರಿತ ಪಾಲು ನೀಡಿಕೆ ಕುರಿತು ಚರ್ಚಿಸಿ. 
      ಇ. ಕರ್ನಾಟಕ ರಾಜ್ಯದಲ್ಲಿ ಲೋಕಾಯುಕ್ತದ ವ್ಯವಸ್ಥೆ ಮತ್ತು ಅದರ ಅಧಿಕಾರ ವ್ಯಾಪ್ತಿಯನ್ನು ಕುರಿತು ಪರಿಶೀಲಿಸಿ. 

      3. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 50-55 ಪದಗಳಲ್ಲಿ ಉತ್ತರಿಸಿ: 5x4=20 
      ಎ. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ರಚನೆ ಹಾಗೂ ಕಾರ್ಯವನ್ನು ಕುರಿತು ಸಂಕ್ಷಿಪ್ತವಾಗಿ ಬರೆಯಿರಿ. 
      ಬಿ. ಕೇಂದ್ರ- ರಾಜ್ಯಗಳ ಹಣಕಾಸು ಸಂಬಂಧಗಳನ್ನು ವಿವರಿಸಿ. 
      ಸಿ. ಧಾರ್ಮಿಕ ಸ್ವಾತಂತ್ರÂದ ಹಕ್ಕನ್ನು ಕುರಿತಂತೆ ಸಂವಿಧಾನದಲ್ಲಿರುವ ಉಪಬಂಧಗಳನ್ನು ವಿವರಿಸಿ. 
      ಡಿ. ಭಾರತದಲ್ಲಿ ಅಲ್ಪಸಂಖ್ಯಾತರಿಗೆ ನೀಡಲಾಗಿರುವ ಸಂವಿಧಾನಿಕ ರಕ್ಷಣೆಯನ್ನು ಸಂಕ್ಷಿಪ್ತವಾಗಿ ವಿವರಿಸಿ. 
      ಇ. ಸಕಾಲ ಎಂದರೇನು? ಕರ್ನಾಟಕ ರಾಜ್ಯದಲ್ಲಿ ಇದರ ಮಹತ್ವವನ್ನು ವಿವರಿಸಿ. 
      ಎಫ್. 73ನೇ ಸಂವಿಧಾನ ತಿದ್ದುಪಡಿಯ ಪ್ರಕಾರ ಕರ್ನಾಟಕ ರಾಜ್ಯದಲ್ಲಿ ಅಧಿಕಾರದ ವಿಕೇಂದ್ರೀಕರಣವನ್ನು ಕುರಿತು ಪರಿಶೀಲಿಸಿ. 

      4. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20 
      ಎ. ನ್ಯಾಯಮೂರ್ತಿ ಸೋಮಶೇಖರ್‌ ಆಯೋಗ 
      ಬಿ. ಕಲ್ಲಿದ್ದಲು ಗಣಿಗಾರಿಕೆ ವಿವಾದ 
      ಸಿ. ಟಾಟಾ ಟ್ರಕ್‌ ಪ್ರಕರಣ 
      ಡಿ. ಡಾ.ಡಿ.ಎಮ್‌. ನಂಜುಂಡಪ್ಪ ಸಮಿತಿ 
      ಇ. ಆಡಳಿತದಲ್ಲಿ ಪಾರದರ್ಶಕತೆ 
      ಎಫ್. ನಾಗರಿಕ ಸಮಾಜ 
      ಜಿ. ಡಿ. ದೇವರಾಜ ಅರಸ್‌ 
      ಎಚ್‌. ವ್ಯಕ್ತಿಯ ಪ್ರತ್ಯಕ್ಷ ಹಾಜರಿ ಆದೇಶ(ರಿಟ್‌) 
      ಐ. ವಲಯ ಪರಿಷತ್ತುಗಳು 
      ಜೆ. ಸರೋಜಿನಿ ಮಹಿಷಿ ವರದಿ 

      ಭಾಗ- ಬಿ 
      5. ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ 200 ರಿಂದ 250 ಪದಗಳಿಗೆ ಮೀರದಂತಿರಬೇಕು: 20x1=20 
      ಎ. ಕರ್ನಾಟಕದಲ್ಲಿನ ಮಾನವ ಅಭಿವೃದ್ಧಿಯ ಪ್ರಾದೇಶಿಕ ಅಸಮತೆಗಳನ್ನು ವಿವರಿಸಿ. 
      ಬಿ. ರಾಷ್ಟ್ರೀಯ ಆಹಾರ ಭದ್ರತಾ ಮಸೂದೆಯ ಧ್ಯೇಯಗಳು ಹಾಗೂ ವ್ಯಾಪ್ತಿಯನ್ನು ವಿವರಿಸಿ. ಆಹಾರ ಭದ್ರತೆಯನ್ನು ಖಚಿತಪಡಿಸುವುದಕ್ಕೆ ಇದು ನೆರವಾಗುವುದೇ? 

      6. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 125 ಪದಗಳಲ್ಲಿ ಉತ್ತರಿಸಿ: 10x3=30 
      ಎ. ಸ್ಪರ್ಧಾಕಾನೂನಿನ ವಿಶಿಷ್ಟ ಲಕ್ಷಣಗಳೇನು? 
      ಬಿ. ಕರ್ನಾಟಕದಲ್ಲಿ ವಿದೇಶಿ ಹಣದ ನೇರ ಹೂಡಿಕೆಯ ಹರಿವಿಗೆ ಸಂಬಂಧಿಸಿದಂತೆ ಪ್ರಾದೇಶಿಕ ವ್ಯತ್ಯಾಸಗಳ ಬಗ್ಗೆ ನಿರೂಪಿಸಿ. 
      ಸಿ. ಕರ್ನಾಟಕ ರಾಜ್ಯ ಬಜೆಟ್‌ 2012- 13ರ ವಿಶಿಷ್ಟ ಲಕ್ಷಣಗಳನ್ನು ನಿರೂಪಿಸಿ. 
      ಡಿ. ಕರ್ನಾಟಕದಲ್ಲಿ ಜೀವವೈವಿಧ್ಯ ಸಂರಕ್ಷಣೆಯ ಸ್ಥಿತಿಗತಿ ಹಾಗೂ ನಿರ್ವಹಣೆಯನ್ನು ಕುರಿತು ವ್ಯಾಖ್ಯಾನಿಸಿ. 
      ಇ. ಭಾರತದ ಇಂಧನ ಬಿಕ್ಕಟ್ಟಿನ ಸ್ವರೂಪವನ್ನು ವಿವರಿಸಿ. ಈ ಪರಿಸ್ಥಿತಿಯನ್ನು ಸುಧಾರಿಸಲು ಸೂಕ್ತ ಕ್ರಮಗಳನ್ನು ಸೂಚಿಸಿ. 

      7. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ/ ಟಿಪ್ಪಣಿ ಬರೆಯಿರಿ. ಉತ್ತರಗಳು ತಲಾ 50-55 ಪದಗಳ ಮಿತಿಯಲ್ಲಿರಬೇಕು: 5x4=20 
      ಎ. ಯುಎಸ್‌ ಡಾಲರ್‌ಗೆ ಪ್ರತಿಯಾಗಿ ರೂಪಾಯಿಯ ಮೌಲ್ಯವು ಕ್ಷೀಣಿಸುವುದಕ್ಕೆ ಕಾರಣಗಳನ್ನು ನಿರೂಪಿಸಿ. 
      ಬಿ. ಕರ್ನಾಟಕದ ಸಾರ್ವಜನಿಕ ವಿತರಣೆಯಲ್ಲಿರುವ ಪ್ರಮುಖ ವಿಷಯಗಳನ್ನು ಕುರಿತು ಚರ್ಚಿಸಿ. 
      ಸಿ. ಕರ್ನಾಟಕದ ಸಾರ್ವಜನಿಕ ವಲಯದ ನೋಟವನ್ನು ವಿವರಿಸಿ. 
      ಡಿ. ಕರ್ನಾಟಕದ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ನೀವು ಯಾವ ಕಾರ್ಯನೀತಿಯ ಕ್ರಮಗಳನ್ನು ಸೂಚಿಸುತ್ತೀರಿ? 
      ಇ. ಹವಾಮಾನ ಬದಲಾವಣೆಯ ಸವಾಲುಗಳನ್ನು ಎದುರಿಸಲು ಭಾರತವು ಆರಂಭಿಸಿರುವ ಕ್ರಮಗಳನ್ನು ವಿವರಿಸಿ. 
      ಎಫ್. ಭಾರತದ ಮೇಲೆ ಯೂರೋಪ್‌ ವಲಯದ ಬಿಕ್ಕಟ್ಟಿನ ಪರಿಣಾಮಗಳನ್ನು ವಿವರಿಸಿ. 

      8. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10= 20 
      ಎ. 13ನೇ ಹಣಕಾಸು ಆಯೋಗದ ಶಿಫಾರಸ್ಸುಗಳು 
      ಬಿ. ಉನ್ನತ ಶಿಕ್ಷಣದ ಖಾಸಗೀಕರಣ 
      ಸಿ. ಯುವ ಭಾರತ 
      ಡಿ. ಕರ್ನಾಟಕದಲ್ಲಿ ಸಾಮಾಜಿಕ ಭದ್ರತಾ ಕ್ರಮಗಳು 
      ಇ. ಕರ್ನಾಟಕದಲ್ಲಿ ವಿದ್ಯುತ್ಛಕ್ತಿ ವಿತರಣೆ 
      ಎಫ್. ಕರ್ನಾಟಕದ ಹೊಸ ಕೈಗಾರಿಕಾ ನೀತಿ 
      ಜಿ. ಕರ್ನಾಟಕದಲ್ಲಿ ಉದ್ಯೋಗ ಕಾರ್ಯಕ್ರಮಗಳು 
      ಎಚ್‌. ಆಡಳಿತದಲ್ಲಿ ಐಇಖ 
      ಐ. ಪೆಟ್ರೋಲಿಯಂ ಸಬ್ಸಿಡಿಗಳು 
      ಜೆ. ಸಾಲದ ದರ ನಿರ್ಧಾರಣಾ ಏಜೆನ್ಸಿಗಳು 

      ಭಾಗ- ಸಿ 
      9. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20 
      ಎ. ಕರ್ನಾಟಕದ ನದಿ ವ್ಯವಸ್ಥೆಗಳನ್ನು ಕುರಿತು ವಿಸ್ತಾರವಾದ ಟಿಪ್ಪಣಿ ಬರೆಯಿರಿ. 
      ಬಿ. ಕರ್ನಾಟಕದ ವಿಶೇಷ ಉÇÉೇಖದೊಂದಿಗೆ ಭಾರತದ ಕರಾವಳಿ ಪ್ರದೇಶದ ಸಂಕ್ಷಿಪ್ತ ವಿವರಣೆ ನೀಡಿ. 

      10. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 100 ರಿಂದ 120 ಪದಗಳಷ್ಟಿರಲಿ: 10x1=10 
      ಎ. ಮಲೆನಾಡು ಪ್ರದೆಶದ ಭೌಗೋಳಿಕ ವೈಶಿಷ್ಟÂಗಳನ್ನು ವಿವರಿಸಿ. 
      ಬಿ. ಭಾರತದ ಸುವರ್ಣ ಚತುಭುìಜ/ ಚತುಷ್ಪತ ಕಾರಿಡಾರ್‌ಗಳ ಬಗ್ಗೆ ಬರೆಯಿರಿ. 

      11. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಉತ್ತರ ಸುಮಾರು 50 ಪದಗಳಷ್ಟಿರಲಿ: 5x2= 10 
      ಎ. ಭಾರತದ ವಿವಿಧ ಮಣ್ಣು ಸಂರಕ್ಷಣಾ ಯೋಜನೆಗಳ ಬಗ್ಗೆ ಚರ್ಚಿಸಿ. 
      ಬಿ. ಕರ್ನಾಟಕದ ಖನಿಜ ಸಂಪನ್ಮೂಲಗಳ ಬಗ್ಗೆ ನಿರೂಪಿಸಿ. 
      ಸಿ. ಮಹಾನಗರಗಳ ಬೆಳವಣಿಗೆ ಬಗ್ಗೆ ವಿವರಿಸಿ. 

      ಭಾಗ- ಡಿ 
      12. ಈ ಕೆಳಗಿನ ಯಾವುದಾದರೂ ಒಂದು ಪ್ರಶ್ನೆಗೆ ಉತ್ತರಿಸಿ. ನಿಮ್ಮ ಉತ್ತರ ಸುಮಾರು 200 ರಿಂದ 250 ಪದಗಳಷ್ಟಿರಲಿ: 20x1=20 
      ಎ. ಸಾಂಪ್ರದಾಯಿಕವಲ್ಲದ ಶಕ್ತಿ ಎಂದರೇನು? ಸಾಂಪ್ರದಾಯಿಕವಲ್ಲದ ಕೆಲವು ಮುಖ್ಯವಾದ ಶಕ್ತಿಮೂಲಗಳ ವಿಧಗಳನ್ನು ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ ಮತ್ತು ಅವುಗಳಿಂದ ಸಿಗುವ ಲಾಭಗಳನ್ನು ತಿಳಿಸಿ. 
      ಬಿ. ಕರ್ನಾಟಕ ಸರ್ಕಾರ 2011ರಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ನೀತಿ ಹಾಗೂ ವಿದ್ಯುನ್ಮಾನ ಹಾರ್ಡ್‌ವೇರ್‌ ನೀತಿಯನ್ನು ಬಿಡುಗಡೆ ಮಾಡಿತು. ಈ ನೀತಿಗಳನ್ನು ಬಿಡುಗಡೆ ಮಾಡಿದ್ದರ ಹಿಂದಿರುವ ಪ್ರೇರಣೆ ಏನು ಎಂಬ ಬಗ್ಗೆ ಟಿಪ್ಪಣಿ ಬರೆಯಿರಿ ಮತ್ತು ಈ ಎರಡೂ ನೀತಿಗಳ ವಿವಿಧ ಲಕ್ಷಣಗಳನ್ನು ಕುರಿತು ಚರ್ಚಿಸಿ. 

      13. ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 120 ಪದಗಳಲ್ಲಿ ಉತ್ತರಿಸಿ: 10x4=40 
      ಎ. ತಾರಾ ಶಕ್ತಿ 
      ಬಿ. ಜೀವಾವರಣದ ಪಾದಮುದ್ರೆ 
      ಸಿ. ಪರಮಾಣು ವಿಕಿರಣಗಳ ಜೈವಿಕ ಪರಿಣಾಮಗಳು 
      ಡಿ. ಕರ್ನಾಟಕ ಹಾಗೂ ಭಾರತದ ತಂತ್ರವಿಜ್ಞಾನದ ಪರಿಚಯವನ್ನು ಹೆಚ್ಚಿಸುವಲ್ಲಿ, ಭಾರತ ಸರ್ಕಾರದ ರಕ್ಷಣಾ ಮಂತ್ರಾಲಯವು ಸ್ಥಾಪಿಸಿರುವ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳ(R - ಈ) ಪಾತ್ರ. 
      ಇ. ಸಾಮಾನ್ಯ ಬಳಕೆಯ ಪ್ಲಾರಸೆಂಟ್‌ ದೀಪಗಳು ಹಾಗೂ ಅಡಕ ಫ್ಲಾರಸೆಂಟ್‌ ದೀಪಗಳು. 
      ಎಫ್. ತಳಿವೈಜ್ಞಾನಿಕವಾಗಿ ಮಾರ್ಪಾಟು ಮಾಡಿದ(ಎM) ಬೆಳೆಗಳು ಹಾಗೂ ಆಹಾರ 

      14. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2x10=20 
      ಎ. ಫ‌ುÉರೋಸಿಸ್‌ 
      ಬಿ. ವಾಯುಮಾಲಿನ್ಯ 
      ಸಿ. ಆಮ್ಲಮಳೆ 
      ಡಿ. ಜೆಲ್‌ಗ‌ಳು 
      ಇ. ಭೂಸವಕಳಿ 
      ಎಫ್. ಡಾಲಿ ಎಂಬ ಕುರಿ 
      ಜಿ. ಕರ್ನಾಟಕದ ಜಿÇÉಾಮಟ್ಟದಲ್ಲಿ ಹಾಗೂ ಗ್ರಾಮೀಣ ಭಾಗದಲ್ಲಿ ವಿಜ್ಞಾನ ಮತ್ತು ವಿಜ್ಞಾನ ಶಿಕ್ಷಣ 
      ಎಚ್‌. ಬಯೋಮೆಟ್ರಿಕ್‌ ಸಾಧನಗಳು 
      ಐ. ಹೈನುಗಾರಿಕೆ ಮತ್ತು ಹೈನು ತಂತ್ರಜ್ಞಾನ 
      ಜೆ. ಕೃಷಿ ವಿಜ್ಞಾನ ಕೇಂದ್ರಗಳು 

      ರಾಷ್ಟ್ರೀಯ ಮತದಾರರ ದಿನ- ಜನವರಿ 25 
      2011ರಿಂದ ಪ್ರತಿ ವರ್ಷ ಜನವರಿ 25ನ್ನು ರಾಷ್ಟ್ರೀಯ ಮತದಾರರ ದಿನವನ್ನಾಗಿ ಆಚರಿಸಲು 2011ರ ಜನವರಿ 20ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ. ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನ ಇದಾಗಿದೆ. ಇದೇ ಜನವರಿಗೆ 18 ವರ್ಷ ದಾಟಿದ ಯುವ ಮತದಾರರಿಗೆ ಚುನಾವಣಾ ಆಯೋಗದ ಗುರುತಿನ ಚೀಟಿ ನೀಡುವ ವಿಶೇಷ ಕಾರ್ಯಕ್ರಮ ಯೋಜಿತವಾಗಿದ್ದು ಹೆಮ್ಮೆಯ ಮತದಾರರಾಗಿ- ಮತದಾನಕ್ಕೆ ಸಿದ್ಧರಾಗಿ ಎಂಬ ಘೋಷಣೆ ಹೊರಡಿಸಲಾಗಿದೆ. ಚಲಾಯಿಸಿ ನಿಮ್ಮ ಮತ- ಕಾಪಾಡಿ ದೇಶದ ಹಿತ, ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಎಂಬ ಧ್ಯೇಯದೊಂದಿಗೆ ಯುವಜನತೆಯನ್ನು ಚುನಾವಣಾ ಪ್ರಕ್ರಿಯೆಯಲ್ಲಿ ತೊಡಗಿಸಲು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತಿದೆ. ಇದಕ್ಕಾಗಿ ಚುನಾವಣಾ ಆಯೋಗವು ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಪ್ರತಿ ಜಿÇÉೆಯ ಪ್ರಮುಖ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನದ ಮಹತ್ವ ಕುರಿತು ಮಾಹಿತಿ ಮತ್ತು ನೊಂದಣಿಯ ಅಗತ್ಯ ಕುರಿತು ತಿಳಿಸಿಕೊಡಲಾಗುತ್ತಿದೆ. ಆಕಾಶವಾಣಿಯ ವಿವಿಧ ಕೇಂದ್ರಗಳ ಮೂಲಕವೂ ಮತದಾರರ ದಿನದ ಮಹತ್ವ ಕುರಿತ ಕಾರ್ಯಕ್ರಮಗಳು ಪ್ರಸಾರವಾಗಲಿವೆ. 

      ಮತದಾರರ ಪ್ರತಿಜ್ಞಾ ವಿಧಿ 
      ಪ್ರಜಾಪ್ರಭುತ್ವದಲ್ಲಿ ದೃಢ ವಿಶ್ವಾಸವುಳ್ಳ ಭಾರತದ ಪೌರರಾದ ನಾವು, ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ, ನ್ಯಾಯಸಮ್ಮತ ಮತ್ತು ಶಾಂತಿಯುತ ಚುನಾವಣೆಗಳ ಘನತೆಯನ್ನು ಎತ್ತಿ ಹಿಡಿಯುತ್ತೇವೆಂದು ಮತ್ತು ಪ್ರತಿಯೊಂದು ಚುನಾವಣೆಯಲ್ಲಿ ನಿರ್ಭೀತರಾಗಿ ಮತ್ತು ಧರ್ಮ, ಜನಾಂಗ, ಜಾತಿ, ಮತ, ಭಾಷೆ ಅಥವಾ 
      ಯಾವುದೇ ಪ್ರೇರೇಪಣೆಗಳ ದಾಕ್ಷಿಣ್ಯಗಳಿಂದ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆಂದು ಈ ಮೂಲಕ ಪ್ರತಿಜ್ಞೆ ಸ್ವೀಕರಿಸುತ್ತೇವೆ. 
      21 ವರ್ಷ ದಾಟಿದವರಿಗೆ ಇದ್ದ ಮತದಾನದ ಹಕ್ಕನ್ನು 18 ವರ್ಷಕ್ಕೆ ಇಳಿಸಿ 1989ರ ಮಾರ್ಚ್‌ 28ರಂದು ಸಂವಿಧಾನದ 61 ತಿದ್ದುಪಡಿಯ ಮೂಲಕ 326ನೇ ವಿಧಿಗೆ ಸೇರ್ಪಡೆ ಮಾಡಲಾಗಿತ್ತು.

National Girl Child Day Jan 24 - Article in Vijayavani Lalitha 22 Jan 13


National Girl Child Day Jan 24 - Article in Vijayavani Lalitha 22 Jan 13

Monday, January 21, 2013

Girl Child Day - Article in Prajavani Shikshana 21 Jan 2013


Girl Child Day - Article in Prajavani Shikshana 21 Jan 2013
 ಪ್ರಜಾವಾಣಿ

ಇಂದು ನಮ್ಮದೇ, ಗೆಲುವು ನಮ್ಮದೇ!

`ಈ ನೆಲದ ಮಗಳು ನಾನು ತಾರೆಯಾಗುವೆ ತಾರೆಯಾಗುವೆ, ನಾನು ಜಗವ ಬೆಳಗುವೆ...'
ಮೀನಾ ತಂಡದ ಈ ಹಾಡನ್ನು ಹೊಳೆನರಸೀಪುರ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಪುಟಾಣಿಗಳು ಹೆಮ್ಮೆಯಿಂದ  ಹೇಳುತ್ತಲೇ ಇದ್ದರು. ಮೀನಾ ತಂಡಗಳು ಗ್ರಾಮೀಣ ಪ್ರದೇಶದಲ್ಲಿ ಹೆಣ್ಣು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ವಿಶೇಷ ಪಾತ್ರ ವಹಿಸಿವೆ.
ರಾಜ್ಯ ಸರ್ಕಾರ ಶೈಕ್ಷಣಿಕವಾಗಿ ಹಿಂದುಳಿದ ಬ್ಲಾಕ್‌ಗಳಲ್ಲಿ ಹೆಣ್ಣು ಮಕ್ಕಳ ವಿಶೇಷ ಶಿಕ್ಷಣಕ್ಕಾಗಿ ಆರಿಸಿದ ಕ್ಲಸ್ಟರ್‌ಗಳಲ್ಲಿ ಈ ಮೀನಾ ತಂಡಗಳನ್ನು ರಚಿಸಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿತ್ತು. ಇದೀಗ ಈ ಜನಪ್ರಿಯ ಕಾರ್ಯಕ್ರಮವನ್ನು ರಾಜ್ಯದ ಎಲ್ಲ ಶಾಲೆಗಳಿಗೂ ವಿಸ್ತರಿಸಲಾಗಿದೆ. ಸ
ರ್ವ ಶಿಕ್ಷಣ ಅಭಿಯಾನ ಯೋಜನೆಯ ಅಡಿಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಸಾರ್ವತ್ರೀಕರಣಕ್ಕೆ 2003ರಿಂದಲೇ ಪ್ರಾಥಮಿಕ ಹಂತದಲ್ಲಿ ರಾಷ್ಟ್ರೀಯ ಕಾರ್ಯಕ್ರಮದ (ಎನ್.ಪಿ.ಇ.ಜಿ.ಇ.ಎಲ್.) ಅಡಿ ವಿವಿಧ ಬಗೆಯ ತರಬೇತಿಗಳನ್ನು, ಜಾಗೃತಿ ಶಿಬಿರಗಳನ್ನು, ಆರೋಗ್ಯ ಮಾಹಿತಿ, ಸ್ವ-ಉದ್ಯೋಗದ ಕೌಶಲಗಳನ್ನು ತಿಳಿಸಿಕೊಡಲಾಗುತ್ತಿದೆ. ಇದರ ಕಾರ್ಯಸೂಚಿ ಕೈಪಿಡಿಯ ಮೊದಲ ಪುಟದಲ್ಲಿ ಕಮಲಾ ಭಾಸಿನ್ ಅವರು ಬರೆದ `ನಾನೊಬ್ಬಳು ಹುಡುಗಿಯಾಗಿದ್ದಕ್ಕಾಗಿ, ನಾನು ಓದಲೇ ಬೇಕಿದೆ' ಎಂಬ ಕವನ ಹೆಣ್ಣು ಮಕ್ಕಳ ಶಿಕ್ಷಣದ ಅಗತ್ಯವನ್ನು ಒತ್ತಿ ಹೇಳುತ್ತದೆ.
ಹೆಣ್ಣು ಮಗುವಿನ ದಿನ
ಪ್ರತಿ ವರ್ಷ ಜನವರಿ 24ರಂದು ರಾಷ್ಟ್ರೀಯ ಹೆಣ್ಣು ಮಗುವಿನ ದಿನವನ್ನು ಆಚರಿಸಬೇಕೆಂದು ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಸೂಚಿಸಿದೆ. 1966ರ ಜನವರಿ 24 ರಂದು ಇಂದಿರಾ ಗಾಂಧಿಯವರು ದೇಶದ ಮೊದಲ ಮಹಿಳಾ ಪ್ರಧಾನಿಯಾದ ಶುಭ ಸಂದರ್ಭವನ್ನು ಹೆಣ್ಣು ಮಕ್ಕಳಲ್ಲಿ ಜಾಗೃತಿ ಮೂಡಿಸಿ, ಬಾಲ್ಯ ವಿವಾಹದಂಥ ಅನಿಷ್ಟ ಪದ್ಧತಿಯನ್ನು ತೊಲಗಿಸಿ, ವಿವಿಧ ಕ್ಷೇತ್ರಗಳಲ್ಲಿ ಅವರು ಮುಂದುವರಿಯುವಂತೆ ಮಾಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಲುವಾಗಿ 2009ರಿಂದ ಈ ದಿನವನ್ನು ಆಚರಿಸಲಾಗುತ್ತಿದೆ. 
ಮಹಿಳಾ ಸಾಕ್ಷರತೆಯ ಪ್ರಮಾಣ ಹೆಚ್ಚಿಸಲು, ಲಿಂಗ ತಾರತಮ್ಯ ನಿವಾರಿಸಲು, ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ತಡೆಗಟ್ಟಲು `ಸಬಲಾ'ದಂತಹ ವಿವಿಧ ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ. ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ವರದಕ್ಷಿಣೆ ತಡೆ ಕಾಯ್ದೆ 2006, ಬಾಲ್ಯವಿವಾಹ ತಡೆ ಕಾಯ್ದೆ 2006, ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆ 2009 ಮೊದಲಾದ ಕಾನೂನುಗಳ ಸಹಾಯದಿಂದ ತಡೆಗಟ್ಟಿ, ಅವರಿಗೆ ಸೂಕ್ತ ರಕ್ಷಣೆ ನೀಡುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. 11ನೇ ಪಂಚವಾರ್ಷಿಕ ಯೋಜನೆಯ 2007- 2012ರ ಮಕ್ಕಳ ಸಂರಕ್ಷಣೆ ಕುರಿತ ಕಾರ್ಯಕ್ರಮ ಸೂಚಿಯಲ್ಲೂ ಹೆಣ್ಣು ಮಗುವಿನ ಶಿಕ್ಷಣ ಮತ್ತು ರಕ್ಷಣೆಗೆ ವಿಶೇಷ ಒತ್ತು ನೀಡಲಾಗಿದೆ.
ಮೀನಾ- ರಾಜು- ಮಿಟ್ಟು
ಮೀನಾ ಎಂಬ ಪುಟ್ಟ ಬಾಲೆಯ ಸಾಹಸಗಳನ್ನು ಈಗಾಗಲೇ ನೀವೆಲ್ಲ ದೂರದರ್ಶನದ ಹಲವು ಕಾರ್ಯಕ್ರಮಗಳಲ್ಲಿ ನೋಡಿರಬಹುದು. ಈ ಪರಿಕಲ್ಪನೆಯಲ್ಲಿ, ಮೀನಾಳ ತಮ್ಮ ರಾಜು ಮತ್ತು ಮುದ್ದು ಗಿಳಿ ಮಿಟ್ಟು ಮಕ್ಕಳಷ್ಟೇ ಅಲ್ಲದೆ ಹಳ್ಳಿಗರೆಲ್ಲರ ಮನ ಸೆಳೆಯುವಲ್ಲಿ, ಸಾಮಾಜಿಕ ಬದಲಾವಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ.
ಮೀನಾ ಪರಿಕಲ್ಪನೆ ದಕ್ಷಿಣ ಏಷ್ಯಾದ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಯುನಿಸೆಫ್ ರೂಪಿಸಿದ ವಿಶೇಷ ಕಾರ್ಯಕ್ರಮದ ಅಂಗವಾಗಿ 1990ರ ದಶಕದ ಕೊನೆಯಲ್ಲಿ ಕಾರ್ಯರೂಪಕ್ಕೆ ಬಂದಿತು. 1998ರ ಸೆಪ್ಟೆಂಬರ್ 24ರಂದು ಭಾರತ, ಬಾಂಗ್ಲಾದೇಶ, ನೇಪಾಳ, ಶ್ರೀಲಂಕಾ, ಪಾಕಿಸ್ತಾನಗಳಲ್ಲಿ ಮೀನಾ ಪರಿಕಲ್ಪನೆ ಶಿಕ್ಷಣ ಕ್ಷೇತ್ರವನ್ನು ವಿಧ್ಯುಕ್ತವಾಗಿ ಪ್ರವೇಶಿಸಿದ್ದರಿಂದ, ಪ್ರತಿ ವರ್ಷ ಸೆಪ್ಟೆಂಬರ್ 24ನ್ನು ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿ `ಮೀನಾ ದಿನ'ವನ್ನಾಗಿ ಆಚರಿಸುತ್ತಾ ಬರಲಾಗಿದೆ.
ದಕ್ಷಿಣ ಏಷ್ಯಾದ ರಾಷ್ಟ್ರಗಳಲ್ಲಿರುವ ಬಡತನ, ಅನಕ್ಷರತೆ, ಸಾಮಾಜಿಕ ಪಿಡುಗುಗಳಾದ ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ, ಜೀತಪದ್ಧತಿ, ಭಿಕ್ಷಾಟನೆಗಳನ್ನು ಹೊಡೆದೋಡಿಸಿ, ಮಕ್ಕಳ ಹಕ್ಕುಗಳ ಬಗ್ಗೆ ಅರಿವು ಮೂಡಿಸಿ, ಎಲ್ಲರಿಗೂ ಶಿಕ್ಷಣ ಕೊಡಿಸುವ ನಿಟ್ಟಿನಲ್ಲಿ ಹಳ್ಳಿ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲು `ಮೀನಾ' ಯಶಸ್ವಿಯಾಗಿದ್ದಾಳೆ. ಒಂಬತ್ತು ವರ್ಷದ ಬಾಲೆ ಮೀನಾಳ ಸಾಹಸಗಳನ್ನು ಒಳಗೊಂಡ ಸುಮಾರು 33 ಕಾರ್ಟೂನ್ ಪುಸ್ತಕಗಳು ಮತ್ತು ಪುಟ್ಟ ಚಲನಚಿತ್ರಗಳು ಕಳೆದ 13 ವರ್ಷಗಳಲ್ಲಿ ಜನಮನ ಸೂರೆಗೊಂಡಿವೆ. ದಕ್ಷಿಣ ಏಷ್ಯಾದ ಎಲ್ಲ ಭಾಷೆಗಳಿಗೆ ಮತ್ತು ವಿಶ್ವದ ಪ್ರಮುಖ ಭಾಷೆಗಳಿಗೆ ತರ್ಜುಮೆ ಆಗಿರುವ ಈ ಮಾಹಿತಿಯು ತೃತೀಯ ವಿಶ್ವದ ಜನಪ್ರಿಯ ಕಾರ್ಯಕ್ರಮವಾಗಿದೆ.

Tuesday, January 15, 2013

KAS Mains 2011 GS Paper 1 - Article in Udayavani Josh 15 Jan 2013


KAS Mains 2011 GS Paper 1 - Article in Udayavani Josh 15 Jan 2013

  • ಟ್ರೈ ದಿಸ್‌ ಅಟ್‌ ಹೋಂ: ನಿಮ್ಮ ಮಾರ್ಕ್‌ ಎಷ್ಟು?

  • ಜನರಲ್‌ ಸ್ಟಡೀಸ್‌ ಕ್ವೆಶ್ಚನ್‌ ಪೇಪರ್‌ ಇಲ್ಲಿದೆ. ಸಾಧ್ಯವಾದರೆ ನೀವೂ ಪರೀಕ್ಷೆ ಬರೆಯಿರಿ. ನಿಮಗೆಷ್ಟು ಗೊತ್ತು ಅನ್ನೋದ

    • Udayavani | Jan 14, 2013
      ಜನರಲ್‌ ಸ್ಟಡೀಸ್‌ ಕ್ವೆಶ್ಚನ್‌ ಪೇಪರ್‌ ಇಲ್ಲಿದೆ. ಸಾಧ್ಯವಾದರೆ ನೀವೂ ಪರೀಕ್ಷೆ ಬರೆಯಿರಿ. ನಿಮಗೆಷ್ಟು ಗೊತ್ತು ಅನ್ನೋದನ್ನು ತಿಳಿದುಕೊಳ್ಳಿ. 

      ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌ 16ರಂದು ನಡೆಸಿದ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ- 01 ಮತ್ತು 02 ಅಗಾಧ ವಿಷಯ ವಿಸ್ತಾರವನ್ನು ಒಳಗೊಂಡಂತಿದ್ದು, ಸಂತೆಗೆ ಮೂರು ಮೊಳ ನೇಯುವ ಅಭ್ಯರ್ಥಿಗಳಿಗೆ ನಿಜಕ್ಕೂ ಕಬ್ಬಿಣದ ಕಡಲೆಯೇ ಆಗಿದ್ದವು. ಆದರೆ ಮೊದಲಿನಿಂದಲೂ ವ್ಯಾಪಕ ಓದನ್ನು ರೂಢಿಸಿಕೊಂಡ, ಈಗಾಗಲೇ ಐಎಎಸ್‌ ಮುಖ್ಯ ಪರೀಕ್ಷೆ ಬರೆದ ಅಭ್ಯರ್ಥಿಗಳಿಗೆ ಮಾತ್ರ ಅತ್ಯಂತ ಸುಲಭವಾಗಿತ್ತು, ಕಾರಣ ಅಲ್ಲಿ ಬಂದಿದ್ದ ಹಲವು ಪ್ರಶ್ನೆಗಳು ಬೇರೆ ರೂಪದಲ್ಲಿ ಇಲ್ಲಿಯೂ ಬಂದಿದ್ದವು. ಅಲ್ಲಿ 5- 10 ಅಂಕಗಳಿಗೆ ಇದ್ದ ಕೆಲವು ಪ್ರಶ್ನೆಗಳು ಇಲ್ಲಿ 2 ಅಂಕಗಳಿಗೆ ಬಂದಿದ್ದು, ಬರೆಯುವವರಿಗೆ ಸಮಯ ಮತ್ತು ವಿಸ್ತರಣೆಗೆ ಅವಕಾಶ ಸಾಲದೆ ಒ¨ªಾಡಿದ್ದು ಸಾಮಾನ್ಯ ದೃಶ್ಯವಾಗಿತ್ತು. ಎಷ್ಟೇ ವೇಗವಾಗಿ ಬರೆದರೂ ವಿಷಯಗಳ ವ್ಯಾಪ್ತಿಯ ಅಗಾಧತೆಯಿಂದ ಬರೆಯುತ್ತಲೇ ಸಾಗಿ ಕೊನೆಗೆ ಒಂದಷ್ಟು ಪ್ರಶ್ನೆಗಳನ್ನು ಹಾಗೇ ಬಿಟ್ಟುಬಂದವರೂ ಉಂಟು! 

      ಸಾಮಾನ್ಯ ಅಧ್ಯಯನ ಪತ್ರಿಕೆ 1- ಸಿಲಬಸ್‌- 300 ಅಂಕಗಳು- 3 ಗಂಟೆ 
      1. ಆಧುನಿಕ ಭಾರತದ ಇತಿಹಾಸ ಮತ್ತು ಸಂಸ್ಕೃತಿ- ಕರ್ನಾಟಕ ಇತಿಹಾಸ ಮತ್ತು ಸಂಸ್ಕೃತಿಗೆ ವಿಶೇಷ ಆದ್ಯತೆ 
      2. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿನ ಪ್ರಚಲಿತ ಘಟನಾವಳಿಗಳು 
      3. ಅಂಕಿ-ಅಂಶಗಳ ವಿಶ್ಲೇಷಣೆ, ಗ್ರಾಫ್ ಮತ್ತು ಚಿತ್ರಗಳು, ನಕಾಶೆಗಳು 

      ಈ ಬಾರಿಯ ಪ್ರಶ್ನೆ ಪತ್ರಿಕೆ ಹೀಗಿತ್ತು: 
      2011ರ ಕೆಎಎಸ್‌ ಮುಖ್ಯ ಪರೀಕ್ಷೆಯ ಕಡ್ಡಾಯ ಸಾಮಾನ್ಯ ಅಧ್ಯಯನ ಪತ್ರಿಕೆ 1 - ಅಂಕಗಳು 300 

      ಭಾಗ - ಎ 
      1. ಈ ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 200 ರಿಂದ 250 ಪದಗಳಲ್ಲಿ ಉತ್ತರಿಸಿ: 20 x 2 = 40 
      ಎ. 1937ರ ಚುನಾವಣೆಗಳಲ್ಲಿ ಭಾಗವಹಿಸುವುದಕ್ಕೆ ಕಾಂಗ್ರೆಸ್‌ ಏಕೆ ಸಮ್ಮತಿಸಿತು? 1937-39ರ ಅವಧಿಯಲ್ಲಿ ಕಾಂಗ್ರೆಸ್‌ ಮಂತ್ರಿಮಂಡಲಗಳು ಪ್ರಾಂತ್ಯಗಳು ಕೈಗೊಂಡ ವಿವಿಧ ಕ್ರಮಗಳು ಯಾವುವು? 
      ಬಿ. ಪೂರ್ಣ ಸ್ವರಾಜ್ಯದ ಕರೆಗೆ ಕರ್ನಾಟಕದ ಜನರು ಹೇಗೆ ಪ್ರತಿಕ್ರಿಯಿಸಿದರು? 
      ಸಿ. ಸಾಮಾಜಿಕ ಹಾಗೂ ಧಾರ್ಮಿಕ ಸುಧಾರಣೆಗೆ ಬ್ರಹ್ಮ ಸಮಾಜವು ನೀಡಿದ ಮುಖ್ಯ ಕೊಡುಗೆಗಳನ್ನು ವಿವರಿಸಿ. 
      ಡಿ. ಭಾಷೆಗಳ ಆಧಾರದ ಮೇಲೆ ರಾಜ್ಯಗಳ ಪುನಾರಚನೆಯು ಕರ್ನಾಟಕದ ನಿರ್ಮಾಣದ ಮೇಲೆ ಬೀರಿದ ಪರಿಣಾಮವನ್ನು ಕುರಿತು ಚರ್ಚಿಸಿ. 

      2. ಈ ಕೆಳಗಿನ ಯಾವುದಾದರೂ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100-120 ಪದಗಳಲ್ಲಿ ಉತ್ತರಿಸಿ: 10 x 4= 40 
      ಎ. ಕರ್ನಾಟಕದಲ್ಲಿ ಕ್ವಿಟ್‌ ಇಂಡಿಯಾ ಚಳುವಳಿಯು ಯಾವ ಯಾವ ರೂಪಗಳನ್ನು ಪಡೆದುಕೊಂಡಿತ್ತು? 
      ಬಿ. 19ನೇ ಶತಮಾನದಲ್ಲಿ ಮಹಿಳಾ ಶಿಕ್ಷಣ ಕುರಿತಂತೆ ಸುಧಾರಣಾಕಾರರು ಮೈಸೂರು ರಾಜ್ಯದಲ್ಲಿ ಮಾಡಿದ ಆರಂಭಿಕ ಪ್ರಯತ್ನಗಳನ್ನು ಕುರಿತು ಚರ್ಚಿಸಿ. 
      ಸಿ. 1932ರ ನಂತರ ಗಾಂಧೀಜಿಯವರ ನೇತೃತ್ವದಲ್ಲಿ ನಡೆದ ಹರಿಜನ ಚಳುವಳಿಯನ್ನು ಕುರಿತು ಟಿಪ್ಪಣಿ ಬರೆಯಿರಿ. 
      ಡಿ. ಸ್ವದೇಶಿ ಮತ್ತು ಬಹಿಷ್ಕಾರ ಚಳುವಳಿ ಎಂದರೇನು? 
      ಇ. ಭಾರತದ ಸ್ವಾತಂತ್ರÂ ಸಂಗ್ರಾಮದಲ್ಲಿ ಕ್ರಾಂತಿಕಾರಿ ಉಗ್ರಗಾಮಿಗಳು ಅಳವಡಿಸಿಕೊಂಡಂಥ ವಿಧಾನಗಳಿಗೆ ಕಾರಣಗಳೇನು? ಈ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ. 
      ಎಫ್. ಮೈಸೂರಿನ ರಾಜಸಂಸ್ಥಾನದ ಮೇಲೆ ರಾಷ್ಟ್ರೀಯ ಚಳುವಳಿಯು ಯಾವ ರೀತಿಯ ಪರಿಣಾಮ ಉಂಟುಮಾಡಿತು? 

      3. ಕೆಳಗಿನ ಯಾವುದಾದರೂ ಎರಡು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 50-60 ಪದಗಳಲ್ಲಿ ಉತ್ತರಿಸಿ: 5 x 2= 10 
      ಎ. ಗಾಂಧಿಯವರು ತಮ್ಮ ಹಿಂದ್‌ ಸ್ವರಾಜ್‌ ಎಂಬ ಕೃತಿಯ ಮೂಲಕ ತಲುಪಿಸಿದ ಸಂದೇಶದ ಮುಖ್ಯಾಂಶಗಳನ್ನು ತಿಳಿಸಿ. 
      ಬಿ. ಸ್ವಾತಂತ್ರÂಕ್ಕಾಗಿ ಭಾರತವು ನಡೆಸಿದ ಹೋರಾಟದಲ್ಲಿ ಭಾರತದ ರಾಷ್ಟ್ರೀಯ ಸೇನೆ (ಐNಅ)ಯ ಪಾತ್ರವನ್ನು ಕುರಿತು ಚರ್ಚಿಸಿ. 
      ಸಿ. ಪ್ರತ್ಯೇಕ ಮತದಾರರ ಸಮುದಾಯದ ಪರವಾಗಿ ಅಂಬೇಡ್ಕರ್‌ ನಿಲುವು ತಳೆಯಲು ಕಾರಣಗಳೇನು? 

      4. ಈ ಕೆಳಗಿನ ಎಲ್ಲವುಗಳಿಗೆ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20-25 ಪದಗಳ ಮಿತಿಯಲ್ಲಿರಬೇಕು: 2 x 5= 10 
      ಎ. ಮೀರತ್‌ ಒಳಸಂಚು ಪ್ರಕರಣ 
      ಬಿ. ಅಖೀಲ ಕರ್ನಾಟಕ ರಾಜ್ಯ ನಿರ್ಮಾಣ ಪರಿಷತ್ತು 
      ಸಿ. ಮೈಸೂರು ರಾಜ್ಯದಲ್ಲಿ ಮಿಲ್ಲರ್‌ ಸಮಿತಿ ವರದಿಯ ಮಹತ್ವ 
      ಡಿ. ಕಿತ್ತೂರು ರಾಣಿ ಚೆನ್ನಮ್ಮ 
      ಇ. ಸಂತಾಲರ ದಂಗೆ 

      ಭಾಗ- ಬಿ 
      5. ಕೆಳಗಿನ ಯಾವುದಾದರೂ ಮೂರು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 200 ರಿಂದ 250 ಪದಗಳಲ್ಲಿ ಉತ್ತರಿಸಿ: 20 x 3= 60 
      ಎ. ಕೂಡಂಕುಲಂ ಪರಿಯೋಜನೆ ಕುರಿತಾದ ಆಂದೋಲನದ ಸಮಸ್ಯೆಯನ್ನು ಬಗೆಹರಿಸಲು ಸರ್ಕಾರವು ಕೈಗೊಂಡಿರುವ ಕ್ರಮಗಳೇನು? 
      ಬಿ. ಭ್ರಷ್ಟಾಚಾರವು ಭಾರತದ ಪ್ರಗತಿಯನ್ನು ಕಾಡುತ್ತಿದೆಯೇ? ನಿಮ್ಮ ಟೀಕೆಗಳನ್ನು ಬರೆಯಿರಿ. 
      ಸಿ. ಬಹುದೊಡ್ಡ ಪರಿಸರದ ಸಮಸ್ಯೆಗಳನ್ನು(ಜಾಗತಿಕ ತಾಪಮಾನ ಏರಿಕೆ, ಅಂತರ್ಜಲ ಬರಿದಾಗುವಿಕೆ ಮುಂತಾದ ರೀತಿಯ) ಸರ್ಕಾರದ ಮಟ್ಟದಲ್ಲಿ ಮಾತ್ರ ನಿಭಾಯಿಸಲು ಸಾಧ್ಯ ಎಂದು ಅನೇಕರು ಭಾವಿಸುತ್ತಾರೆ. ಆದರೆ ಇನ್ನೂ ಕೆಲವರು, ಸಾಂಸ್ಥಿಕ ಪರಿಹಾರಗಳಿಗಿಂತ ವೈಯಕ್ತಿಕ ಮಟ್ಟದಲ್ಲಿ ನಡೆಯುವ ಪ್ರಯತ್ನಗಳು ಹೆಚ್ಚು ನಿರ್ಣಾಯಕ ಹಾಗೂ ಮೌಲ್ಯಯುತವಾಗಿರುತ್ತವೆ ಎಂದು ಭಾವಿಸುತ್ತಾರೆ. ಈ ಎರಡೂ ದೃಷ್ಟಿಕೋನಗಳ ಬಗ್ಗೆ ಚರ್ಚಿಸಿ ಮತ್ತು ನಿಮ್ಮ ಅಭಿಪ್ರಾಯಗಳನ್ನು ತಿಳಿಸಿ. 
      ಡಿ. ಭಾರತದಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣವನ್ನು ರಾಷ್ಟ್ರೀಕರಣಗೊಳಿಸುವುದರ ಸಮಾಜೋ- ಸಾಂಸ್ಕೃತಿಕ ಹಾಗೂ ಆರ್ಥಿಕ ಮಹತ್ವವನ್ನು ಕುರಿತು ಪರಿಶೀಲಿಸಿ. 
      ಇ. ಐಪಿಎಲ್‌ ಬ್ರಾÂಂಡ್‌ ಇರುವುದು ಕ್ರಿಕೆಟ್‌ಗಾಗಿಯೇ ಹೊರತು ಹಗರಣಗಳಿಗಲ್ಲ. ಇಡೀ ದೇಶಾದ್ಯಂತ ಚರ್ಚೆಯನ್ನು ಎಬ್ಬಿಸಿದ ವಿವಾದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ. 
      ಎಫ್. ಭಾರತದ ಹುಲಿ ಬಿಕ್ಕಟ್ಟನ್ನು ಸರಿಸ್ಕಾ ಅನುಭವವು ಹೇಗೆ ತೋರಿಸಿಕೊಟ್ಟಿದೆ? 

      6. ಕೆಳಗಿನ ಯಾವುದಾದರೂ ಐದು ಪ್ರಶ್ನೆಗಳಿಗೆ ಉತ್ತರಿಸಿ. ಪ್ರತಿಯೊಂದು ಪ್ರಶ್ನೆಗೂ ಸುಮಾರು 100 ರಿಂದ 120 ಪದಗಳಲ್ಲಿ ಉತ್ತರಿಸಿ: 10 x 5= 50 
      ಎ. ಕಿಂಗ್‌ಫಿಶರ್‌ ಏರ್‌ಲೈನ್ಸ್‌ ಪತನಕ್ಕೆ ಕಾರಣಗಳೇನು? 
      ಬಿ. ಭಾರತ -ಮಲೇಶಿಯ ಮುಕ್ತ ವ್ಯಾಪಾರ ಒಪ್ಪಂದ (ಊಖಅ)ದ ಪರಿಣಾಮಗಳನ್ನು ಸಂಕ್ಷಿಪ್ತವಾಗಿ ವಿವರಿಸಿ. 
      ಸಿ. ನಗರಗಳಲ್ಲಿ ಸಾರ್ವಜನಿಕ ಸಾರಿಗಯ ಪ್ರಾಮುಖ್ಯತೆಯನ್ನು ಕುರಿತು ಚರ್ಚಿಸಿ. 
      ಡಿ. ಬದಲಾಗುತ್ತಿರುವ ಬ್ರಹ್ಮಗಿರಿ ವನ್ಯಜೀವಿಧಾಮದ ದೃಶ್ಯವಿವರ ಕುರಿತು ನಿರೂಪಿಸಿ. 
      ಇ. ಯುಎಸ್‌ ಹೊಣೆಗಾರಿಕೆ ಮಸೂದೆಯ ವಿಶಿಷ್ಟ ಅಂಶಗಳನ್ನು ತಿಳಿಸಿ. 
      ಎಫ್. ಸುಸ್ಥಿರ ಅಭಿವೃದ್ಧಿ ಎಂದರೇನು? 
      ಜಿ. ಭಾರತದಲ್ಲಿ ಆರೋಗ್ಯಕರವಾದ ಸಂಶೋಧನಾ ಸಂಸ್ಕೃತಿ ಇಲ್ಲದ ಕೊರತೆಯಿಂದಾಗುತ್ತಿರುವ ಪರಿಣಾಮಗಳನ್ನು ವಿವರಿಸಿ. 

      7. ಕೆಳಗಿನ ಯಾವುದಾದರೂ ಆರು ಪ್ರಶ್ನೆಗಳಿಗೆ ಉತ್ತರಿಸಿ, ಟಿಪ್ಪಣಿ ಬರೆಯಿರಿ. ಉತ್ತರಗಳು ತಲಾ 50- 60 ಪದಗಳ ಮಿತಿಯಲ್ಲಿರಬೇಕು: 5 x 6= 30 
      ಎ. ಅಂತರರಾಷ್ಟ್ರೀಯ ವಿಮಾನ ಸಾಗಾಣಿಕೆ ಸಂಘ(ಐnಠಿಛಿrnಚಠಿಜಿಟnಚl ಅಜಿr ಖrಚnsಟಟ್ಟಠಿ ಅssಟcಜಿಚಠಿಜಿಟn) ಕುರಿತು ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. 
      ಬಿ. ಆರ್‌ಬಿಐ ನೀತಿ 2012- 2013ರ ಮುಖ್ಯಾಂಶಗಳನ್ನು ತಿಳಿಸಿ. 
      ಸಿ. ಚೆನ್ನೈ- ದಾವೈ ಕಾರಿಡಾರ್‌ ಪರಿಯೋಜನೆ ಎಂದರೇನು? 
      ಡಿ. ಮಳೆನೀರಿನ ಕೊಯ್ಲು ಮಾಡುವುದರ ಅಗತ್ಯತೆ ಕುರಿತು ಟಿಪ್ಪಣಿ ಬರೆಯಿರಿ. 
      ಇ. ಕನ್ನಡ ಲೇಖಕರಾದ ಕುವೆಂಪು ಪ್ರತಿಪಾದಿಸಿರುವ ವಿಶ್ವಮಾನವ ಪರಿಕಲ್ಪನೆಯ ಮಹತ್ವವನ್ನು ನಿರೂಪಿಸಿ. 
      ಎಫ್. ಅರ್ಹತಾ ಪ್ರಭುತ್ವ ಎಂದರೇನು? 
      ಜಿ. ಯಾವುದನ್ನು ಸಾಮಾನ್ಯುವಾಗಿ ಸೈಬರ್‌ ಬೆನ್ನಟ್ಟುವಿಕೆ ಎಂದು ಕರೆಯುತ್ತಾರೆ? 
      ಎಚ್‌. ಮರ್ಯಾದಾ ಹತ್ಯೆ ಎಂದರೇನು? ಸಂಕ್ಷಿಪ್ತವಾಗಿ ವಿವರಿಸಿ. 

      8. ಈ ಕೆಳಗಿನ ಎಲ್ಲವುಗಳಿಗೂ ಸಂಕ್ಷಿಪ್ತ ಟಿಪ್ಪಣಿ ಬರೆಯಿರಿ. ಪ್ರತಿಯೊಂದು ಉತ್ತರ 20- 25 ಪದಗಳ ಮಿತಿಯಲ್ಲಿರಬೇಕು: 2 x 10 = 20 
      ಎ. ಹಣ ನೀಡಿಕೆಯ ಸುದ್ದಿಸೇವೆ 
      ಬಿ. ಖRಐMs 
      ಸಿ. ಸಹಸ್ರಮಾನದ ಅಭಿವೃದ್ಧಿ ಗುರಿಗಳು 
      ಡಿ. Mಟsಠಿ ಊಚvಟurಛಿಛ Nಚಠಿಜಿಟn 
      ಇ. ರಾಷ್ಟ್ರೀಯ ಉಪಚಾರ (Nಚಠಿಜಿಟnಚl ಖrಛಿಚಠಿಞಛಿnಠಿ) 
      ಎಫ್. ಕರ್ನಾಟಕ ಸರ್ಕಾರವು ಸ್ಥಾಪಿಸಿರುವ ಪಂಪ ಪ್ರಶಸ್ತಿ 
      ಜಿ. ಖಜಛಿ 'ಖಜಿsಠಿಛಿಞಚ ಕullಟuಠಿ' 
      ಎಚ್‌. ಏರ್‌ ಇಂಡಿಯಾ ಮತ್ತು ಇಂಡಿಯನ್‌ ಏರ್‌ಲೈನ್ಸ್‌ ವಿಲೀನವು ಒಂದು ಕಾರ್ಯಸಾಧ್ಯ ಪರಿಹಾರವೇ? 
      ಐ. ಮೊಹಮದ್‌ ಅಜ್ಮಲ್‌ ಅಮೀರ್‌ ಕಸಬ್‌ 
      ಜೆ. ಕರ್ನಾಟಕ ಜಾನಪದ ವಿಶ್ವವಿದ್ಯಾಲಯ 

      ಭಾಗ- ಸಿ 
      9. ಎ.'lಛಿss ಠಿಜಚn' ಮತ್ತು 'ಞಟ್ಟಛಿ ಠಿಜಚn' ಆಗಿವ್‌ಗಳ ರಚನೆಯನ್ನು ವಿವರಿಸಿ. ಈ ಗ್ರಾಫ್ಗಳ ಉಪಯೋಗವನ್ನು ತಿಳಿಸಿ. -4 
      ಬಿ. ಒಂದು ಹೆಸರಾಂತ ವೃತ್ತಪತ್ರಿಕೆಯು ತನ್ನ ಸಾಪ್ತಾಹಿಕ ವಿಭಾಗದಲ್ಲಿ, ಒಂದು ರಾಜ್ಯದೊಳಗಿನ ವಿವಿಧ ವೃತ್ತಿಗಳಲ್ಲಿ ಮಹಿಳೆಯರು ಭಾಗವಹಿಸುವುದನ್ನು ಕುರಿತು ಕೆಳಕಂಡ ಶೇಕಡಾವಾರು ದತ್ತಾಂಶವನ್ನು ಪ್ರಕಟಿಸಿದೆ:
      ವೃತ್ತಿ ಶೇಕಡಾವಾರು- 2007 ಶೇಕಡಾವಾರು 2011 
      ಸಾಫ್ಟ್ವೇರ್‌ ಇಂಜಿನಿಯರುಗಳು 25 37 
      ರಕ್ಷಣಾ ಸೇವೆಗಳು 05 10 
      ವಿದೇಶಾಂಗ ಸೇವೆಗಳು 12 13 
      ಪತ್ರಕರ್ತರು 16 28 
      ನ್ಯಾಯವಾದಿಗಳು 28 32 
      ವಾಸ್ತು ಶಿಲ್ಪಿಗಳು 04 13 
      ಸನದು ಪಡೆದ ಲೆಕ್ಕಪರಿಶೋಧಕರು 13 20 
      ಮನೋರೋಗ ಚಿಕಿತ್ಸಕರು 43 58 
      ಅ. ಇಲ್ಲಿ ಕೊಟ್ಟಿರುವ ದತ್ತಾಂಶಕ್ಕೆ ಸೂಕ್ತ ರೇಖಾಚಿತ್ರವನ್ನು ರಚಿಸಿ. 
      ಆ. ಮಹಿಳಾ ಭಾಗವಹಿಸುವಿಕೆಯಲ್ಲಿ ಸ್ವಲ್ಪವೇ ಏರಿಕೆಯಾಗಿರುವ ಹಾಗೂ ಅತಿಶಯವಾದ ಏರಿಕೆಯಾಗಿರುವ ಎರಡು ವೃತ್ತಿಗಳನ್ನು ಹೆಸರಿಸಿ. 
      ಇ. ಪುರುಷ ಭಾಗವಹಿಸುವಿಕೆಯು ಒಂದೇ ರೀತಿಯಾಗಿ ಇಳಿಮುಖವಾಗಿರುವಂಥ ಎರಡು ವೃತ್ತಿಗಳು ಯಾವುವು?
      ಈ. ಒಬ್ಬ ಮಹಿಳಾ ಹೋರಾಟಗಾರ್ತಿ ಹೀಗೆ ಬರೆಯುತ್ತಾರೆ, ಇತರ ವೃತ್ತಿಗಳಿಗೆ ಹೋಲಿಸಿದರೆ ಮಹಿಳೆಯರು ಅಲ್ಪ$ಸಂಖ್ಯಾತರಾಗಿರುವಂಥ ಸಂದರ್ಭದಲ್ಲಿ ಯಾವುದೇ ಒಂದು ಗೊತ್ತಾದ ಕಾಲದಲ್ಲಿ ಮಹಿಳೆಯರು ಗರಿಷ್ಠ ಅನುಕೂಲಗಳನ್ನು ಅನುಭವಿಸುತ್ತಾರೆ. ಇಲ್ಲಿ ಲಭ್ಯವಿರುವ ದತ್ತಾಂಶವನ್ನು ಆಧರಿಸಿ ಈ ಮಾಹಿತಿಯನ್ನು ವಿಮರ್ಶಿಸಿ. -10 

      ಸಿ. ಅ. ಕೃಷ್ಣಮೂರ್ತಿ ಎಂಬುವವರು 2011ರಲ್ಲಿ ಸರಾಸರಿ ಪ್ರತಿ ತಿಂಗಳೂ ರೂ.465 ಸಂದಾಯ ಮಾಡಿ¨ªಾರೆ. ಸೆಪ್ಟೆಂಬರ್‌ನಿಂದ ಡಿಸೆಂಬರ್‌ ತಿಂಗಳವರೆಗೆ ಸೋಲಾರ್‌ ಹೀಟಿಂಗ್‌ ವ್ಯವಸ್ಥೆಗೆ ಸಂಬಂಧಿಸಿದಂತೆ ಪ್ರತಿ ತಿಂಗಳೂ ರೂ.50 ರಿಯಾಯಿತಿ ಮೊತ್ತವನ್ನು ಕಂಪ್ಯೂಟರ್‌ ಕಡಿತ ಮಾಡಿಲ್ಲ ಎಂಬುದು ಅವರಿಗೆ ಈಗ ಗೊತ್ತಾಗಿದೆ. ಇದನ್ನು ಸರಿಪಡಿಸಿದರೆ ಮಾಸಿಕ ಸರಾಸರಿ ಎಷ್ಟಾಗುತ್ತದೆ? 
      ಆ. ಮಂಡಳಿಯ ಪರೀಕ್ಷೆಯನ್ನು ತೆಗೆದುಕೊಳ್ಳುತ್ತಿರುವ 10ನೇ ತರಗತಿಯ ಹುಡುಗರು ಹಾಗೂ ಹುಡುಗಿಯರ ಲಿಂಗಾನುಪಾತವು 4:5 ಆಗಿದೆ. 90 ವಿದ್ಯಾರ್ಥಿಗಳಿರುವ ವರ್ಗದ ಸರಾಸರಿ ಅಂಕಗಳು 64. ಹುಡುಗರ ಸರಾಸರಿ ಅಂಕ ಗಳೀಕೆ 60 ಆಗಿದ್ದರೆ ಹುಡುಗಿಯರು ಗಳಿಸಿದ ಒಟ್ಟು ಅಂಕಗಳು ಎಷ್ಟು? 4 + 2= 6 

      10. ಎ. ಒಂದು ಕುಟುಂಬದ ಮಾಸಿಕ ಖರ್ಚುಗಳ ದತ್ತಾಂಶವನ್ನು ಈ ಕೆಳಗೆ ನೀಡಲಾಗಿದೆ: 
      ಬಾಬ್ತು ಒಟ್ಟು ಖರ್ಚಿನ ಶೇಕಡಾವಾರು 
      ಆಹಾರ 65 
      ಬಟ್ಟೆ 10 
      ಮನೆ 12 
      ಇಂಧನ ಮತ್ತು ದೀಪದ ವ್ಯವಸ್ಥೆ 05 
      ಇತರೆ 08 

      ಅ. ಮೇಲ್ಕಂಡ ದತ್ತಾಂಶಕ್ಕೆ ಪೈ ರೇಖಾಚಿತ್ರವನ್ನು ಬರೆಯಿರಿ. 
      ಆ. ಕುಟುಂಬದ ಒಟ್ಟು ಮಾಸಿಕ ಖರ್ಚು ರೂ.25,000 ಆಗಿದ್ದರೆ ಪ್ರತ್ಯೇಕ ಬಾಬ್ತುಗಳಿಗೆ ಎಷ್ಟೆಷ್ಟು ಖರ್ಚು ಎಂಬುದನ್ನು ಕಂಡುಹಿಡಿಯಿರಿ. 
      ಇ. ಇಂಧನ ಹಾಗೂ ದೀಪದ ವ್ಯವಸ್ಥೆಗೆ ಖರ್ಚುಮಾಡಿದ್ದಕ್ಕಿಂತ ಶೇಕಡಾವಾರು ಎಷ್ಟು ಹಣವನ್ನು ಮನೆಗೆ ಅಧಿಕವಾಗಿ ಖರ್ಚು ಮಾಡಲಾಗಿದೆ ಎಂಬುದನ್ನು ಲೆಕ್ಕ ಮಾಡಿ. 4 + 2 + 2 = 8 

      ಬಿ. ಕೆಳಕಂಡ ಬೈವೇರಿಯೇಟ್‌ ದತ್ತಾಂಶವನ್ನು ಬಳಸಿಕೊಂಡು ಪಿರ್‌ಸನ್ನನ ಸಹ ಸಂಬಂಧ ಗುಣಾಂಕ ಹಾಗೂ ನಿರ್ಧಾರಣಾ ಗುಣಾಂಕವನ್ನು ಲೆಕ್ಕಹಾಕಿ: 
      x 5 9 13 17 21 
      y 12 20 25 33 35 
      ಮತ್ತು ಈ ಎರಡೂ ಗುಣಾಂಕಗಳ ಮೌಲ್ಯಗಳನ್ನು ಸಾಂಖೀÂಕವಾಗಿ ವ್ಯಾಖ್ಯಾನಿಸಿ. -6 

      ಸಿ. ಈ ಕೆಳಗಿನವುಗಳನ್ನು ಎಷ್ಟು ವಿವಿಧ ರೀತಿಗಳಲ್ಲಿ ಮಾಡಬಹುದು? 2 x 3= 6 
      ಅ. ಆರು ಪುಸ್ತಕಗಳನ್ನು ಒಂದು ಕಪಾಟಿನಲ್ಲಿ ಜೋಡಿಸುವ ವಿಧಗಳು. 
      ಆ. ಅತ್ಯಂತ ಹಿರಿಯ ಆಟಗಾರನು ಮೊದಲು ಎಸೆಯುವುದು ಸಾಧ್ಯವಾಗದಂತೆ, ಆರು ಮಂದಿ ಆಟಗಾರರನ್ನು ಕ್ರಿಕೆಟ್‌ ಚೆಂಡು ಎಸೆಯಲು ವ್ಯವಸ್ಥೆ ಮಾಡುವುದು. 
      ಇ. ಆರು ಮಂದಿ ಪುರುಷರು ಮತ್ತು ಮೂವರು ಮಹಿಳೆಯರು ಒಂದು ಮೇಜಿನ ಸುತ್ತಲೂ ಕೂರಬೇಕು, ಹೇಗೆಂದರೆ ಪ್ರತಿಯೊಬ್ಬ ಪುರುಷನ ಪಕ್ಕದಲ್ಲಿ ಒಬ್ಬ ಮಹಿಳೆ ಕೂತಿರಬೇಕು. ಇದು ಪ್ರಶ್ನೆಪತ್ರಿಕೆ. ಇದನ್ನು ಈಗ ನೀವೂ ಬಿಡಿಸಲು ಪ್ರಯತ್ನಿಸಬಹುದಲ್ಲವೇ? ಸ್ಕೋರ್‌ ಎಷ್ಟು?

Thursday, January 10, 2013

Live English for 10th Standard prepared by Head Masters Association Hassan District

http://issuu.com/educationhassan/docs/live_english_for_10th_prepared_by_head_ma?mode=window




Home

JUNE 2012

QUESTION PAPERS OF  JUNE 2012 SSLC EXAMINATIONS

I Language - Kannada | English | Hindi | Sanskrit | Telugu | Tamil | Marathi | Urdu

II Language - Kannada | English

III Language - Kannada | English | Hindi | Sanskrit | Arabic | Persian | Urdu | Konkani

MATHS - English Version | Kannada Version | Hindi Version | Telugu Version | Tamil Version | Marathi Version | Urdu Version

SCIENCE- English Version | Kannada Version | Hindi Version | Telugu Version | Tamil Version | Marathi Version | Urdu Version

SOCIAL SCIENCE - English Version | Kannada Version | Hindi Version | Telugu Version | Tamil Version | Marathi Version | Urdu Version

JUNIOR TECHNICAL SCHOOL (JTS) - Elements of Engineering | Engineering Drawing | Elements of Electronics | Elements of Computer Science

http://kseeb.kar.nic.in/sslcpuport/qpjune2012

APRIL 2012

Hejje Gurutu - Child Tracking System of Department of Education, Karnataka

Hejje Gurutu - Child Tracking System of Department of Education, Karnataka

Tuesday, January 8, 2013

Swamy Vivekananda and Youth Policy - Article in Udayavani Josh 08 Jan 2013


Swamy Vivekananda and Youth Policy - Article in Udayavani Josh 08 Jan 2013
Udayavani

  • ಹೇಳಿದ್ದು ಸತ್ಯ, ತಿಳಿಯುವುದು ಕಡ್ಡಾಯ

  • ಬೀ ಎ ಹೀರೋ. ಆಲ್ವೇಸ್‌ ಸೇ, ಐ ಹ್ಯಾವ್‌ ನೋ ಫಿಯರ್‌

    • Udayavani | Jan 07, 2013
      ಬೀ ಎ ಹೀರೋ. ಆಲ್ವೇಸ್‌ ಸೇ, ಐ ಹ್ಯಾವ್‌ ನೋ ಫಿಯರ್‌ 
      ಏಳಿ, ಎದ್ದೇಳಿ! ಗುರಿ ಮುಟ್ಟುವ ತನಕ ನಿಲ್ಲದಿರಿ, ಎದ್ದು ನಿಲ್ಲಿ, ದಿಟ್ಟವಾಗಿರಿ, ದೃಢವಾಗಿರಿ, ಸಮಸ್ತ ಜವಾಬ್ದಾರಿಯನ್ನು ನಿಮ್ಮ ಹೆಗಲಿನ ಮೇಲೆ ಹೊತ್ತುಕೊಳ್ಳಿ, ನಿಮ್ಮ ಹಣೆಬರಹದ ಸೃಷ್ಟಿಕರ್ತರು ನೀವೇ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ, ಎÇÉಾ ಸಾಮರ್ಥ್ಯ ಮತ್ತು ಸಹಾಯ ನಿಮ್ಮÇÉೇ ಅಡಗಿದೆ. ಆದ್ದರಿಂದ ನಿಮ್ಮ ಭವಿಷ್ಯವನ್ನು ನೀವೆ ರೂಪಿಸಿಕೊಳ್ಳಿ. 
      - ಸ್ವಾಮಿ ವಿವೇಕಾನಂದ 



      ಇದೇ ಜನವರಿ 12, ರಾಷ್ಟ್ರೀಯ ಯುವದಿನ. ಸ್ವಾಮಿ ವಿವೇಕಾನಂದರ 150ನೇ ಜನ್ಮದಿನ. ವಿಶ್ವವಿಜೇತ ವಿವೇಕಾನಂದರ ಧ್ಯೇಯ ಆದರ್ಶಗಳನ್ನು ನೆನೆಯುವ ದಿನ. ಗೆದ್ದೇ ಗೆಲ್ಲುವೆವು ಎಂಬ ಆತ್ಮವಿಶ್ವಾಸ, ಅಪರಿಮಿತ ಇಚ್ಛಾಶಕ್ತಿಯುಳ್ಳ ಯುವಜನರಿಗಾಗಿ ಏಳಿ, ಎದ್ದೇಳಿ, ಗುರಿಮುಟ್ಟುವವರೆಗೂ ನಿಲ್ಲದಿರಿ ಎಂಬ ಕರೆ ಕರೆಕೊಟ್ಟ ವೀರಸನ್ಯಾಸಿ ಸ್ವಾಮಿ ವಿವೇಕಾನಂದರ ಜನ್ಮದಿನ. ವಹಿಸಿಕೊಟ್ಟ ಕೆಲಸವನ್ನು ಮಾಡೇ ತೀರುವ ಛಲ, ಸಾಧಿಸುವ ಹಂಬಲವನ್ನು ಪ್ರಕಟಿಸುವ ಈ ಇಚ್ಛಾಶಕ್ತಿ ಸೂಚ್ಯಂಕವನ್ನು ಗುರುತಿಸಿದ ಮೊದಲಿಗರಲ್ಲಿ ಸ್ವಾಮಿ ವಿವೇಕಾನಂದರೂ ಒಬ್ಬರು. 
      ಇಂದು ನಮಗೆ ಬೇಕಾಗಿರುವುದು ಕಬ್ಬಿಣದಂತಹ ಮಾಂಸಖಂಡ, ಉಕ್ಕಿನ ನರ, ಎದುರಿಸುವುದಕ್ಕೆ ಅಸದಳವಾದ ವಿಶ್ವರಹಸ್ಯದ ಅಂತರಾಳವನ್ನು ಭೇದಿಸಿ, ಸಮಯ ಬಂದರೆ ಕಡಲಿನ ಆಳಕ್ಕೂ ನುಗ್ಗಿ, ಮೃತ್ಯುವನ್ನು ಎದುರಿಸಿ, ತಮ್ಮ ಇಚ್ಛೆಯನ್ನು ಈಡೇರಿಸಬಲ್ಲಂತಹ ಪ್ರಚಂಡ ಇಚ್ಛಾಶಕ್ತಿ. ಇಂತಹ ಇಚ್ಛಾಶಕ್ತಿ ಹೊಂದಿರುವ ಯುವಜನರಿಗಾಗಿ ನನ್ನ ಜೀವನವನ್ನೇ ತ್ಯಾಗಮಾಡಲು ಸಿದ್ಧ ಎಂದಿದ್ದರು ಈ ವಿಶ್ವವಿಜೇತ, ವಿಶ್ವಮಾನವ ವಿವೇಕಾನಂದರು. 
      ಮನುಷ್ಯನಲ್ಲಿ ಈಗಾಗಲೇ ಅಂತರ್ಗತವಾಗಿರುವ ಪರಿಪೂರ್ಣತೆಯನ್ನು ವ್ಯಕ್ತಗೊಳಿಸುವುದೇ ಶಿಕ್ಷಣ. ಜ್ಞಾನ ಮಾನವನಲ್ಲಿ ಸಹಜವಾಗಿ ನೆಲೆಸಿದೆ. ಜ್ಞಾನ ಹೊರಗಿನಿಂದ ಬರುವುದಿಲ್ಲ, ಅದೆಲ್ಲವೂ ಈಗಾಗಲೇ ನಮ್ಮೊಳಗಿದೆ ಎನ್ನುತ್ತಿದ್ದರು ಸ್ವಾಮೀಜಿ. 
      1863ರ ಜನವರಿ 12ರಂದು ವಿಶ್ವನಾಥದತ್ತ ಮತ್ತು ಭುವನೇಶ್ವರಿ ದೇವಿಯವರ ಪುತ್ರನಾಗಿ ಧರೆಗಿಳಿದ ಸಪ್ತರ್ಷಿಭುವನದ ಈ ಗುರುದೇವನ ಕಂದ ನರೇಂದ್ರನಾಗಿ ಬೆಳೆದು, ವಿವೇಕಾನಂದನಾಗಿ ಜಗದ್ವಿಖ್ಯಾತರಾದದ್ದು ಎಲ್ಲರಿಗೂ ತಿಳಿದವಿಷಯವೇ. ಈ ಧೀರಸನ್ಯಾಸಿಯ ಆದರ್ಶಗಳ ನೆನಪಿಗಾಗಿ ಭಾರತ ಸರ್ಕಾರ ಜನವರಿ 12ನ್ನು ರಾಷ್ಟ್ರೀಯ ಯುವದಿನ ಎಂದು ಘೋಷಿಸಿದೆ. ನೆಹರು ಯುವಕೇಂದ್ರವು ಈ ಸಂದರ್ಭದಲ್ಲಿ ಯುವ ಸಪ್ತಾಹವನ್ನು ಹಮ್ಮಿಕೊಳ್ಳುತ್ತದೆ. ಈ ವರ್ಷ ವಿಶೇಷವಾಗಿ ರಾಜ್ಯ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮಜಯಂತಿಯ ಪ್ರಯುಕ್ತ ಜನವರಿ 7 ರಿಂದ 12ರವರೆಗೆ ವಿವೇಕ ಸಪ್ತಾಹವನ್ನಾಗಿ ಆಚರಿಸಿ ವಿಶೇಷ ಕಾರ್ಯಕ್ರಮಗಳನ್ನು, ಚರ್ಚಾ ಸ್ಪರ್ಧೆಗಳನ್ನು ಏರ್ಪಡಿಸಿ ಯಶಸ್ವಿಯಾಗಿ ಅವರ ಸಂದೇಶ ಪ್ರಸಾರ ಮಾಡಬೇಕೆಂದು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕಾಲೇಜು ಶಿಕ್ಷಣ ಇಲಾಖೆಗಳಿಂದ ಆದೇಶ ಹೊರಟಿವೆ. 

      ಸ್ವಾಮಿ ವಿವೇಕಾನಂದರ ಧ್ವನಿ! 
      1893ರ ಸೆಪ್ಟೆಂಬರ್‌ 11ರಂದು ಚಿಕಾಗೋದ ಸರ್ವಧರ್ಮ ಸಮ್ಮೇಳನದಲ್ಲಿ, ಅಮೆರಿಕಾದ ಸೋದರ, ಸೋದರಿಯರೇ.... ಎಂದು ಮಾತಿಗಾರಂಭಿಸಿದ ಸಕಲಧರ್ಮಗಳ ಮಾತೆಯ ಅಪರಿಚಿತ ಸಂತ ವಿವೇಕಾನಂದ ಕ್ಷಣಮಾತ್ರದಲ್ಲಿ ಬಿರುಗಾಳಿ ಸನ್ಯಾಸಿಯಾಗಿ, ಜನರ ಮನಮುಟ್ಟುವಂತೆ ಹಿಂದುಧರ್ಮದ ಸಾರವನ್ನು ಪರಿಚಯಿಸಿದ್ದು ಈಗ ಇತಿಹಾಸ. ಸ್ವಾಮಿ ವಿವೇಕಾನಂದರ ಧ್ವನಿಯನ್ನು ಮೂಲದಲ್ಲಿ ಸೆರೆಹಿಡಿದಿದ್ದೇವೆ ಎಂದು ಹೇಳಿಕೊಂಡ ಕೆಲವರು ಕೆಲವು ವರ್ಷಗಳ ಕೆಳಗೆ ಈ ಅಮೆರಿಕೆಯ ಉಪನ್ಯಾಸದ ತುಣುಕುಗಳನ್ನು ಅಂತರ್ಜಾಲದಲ್ಲಿ ಹರಿಯಬಿಟ್ಟಿದ್ದರು. ಆರಂಭದಲ್ಲಿ ಈ ಧ್ವನಿಯ ಮೋಡಿ ಅದ್ಭುತ ಸಂಚಲನೆ ಉಂಟುಮಾಡಿತ್ತು. ಆರಾಧನೆಯ ಉದ್ವೇಗ ಕಡಿಮೆಯಾಗಿ ಚಿಂತನೆ ಹೆಚ್ಚಾದಂತೆÇÉಾ, 1893ರಲ್ಲಿ ಧ್ವನಿಮುದ್ರಣ ಯಂತ್ರಗಳು ಆವಿಷ್ಕಾರವಾಗಿದ್ದವೇ ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಸ್ವಾಮಿ ವಿವೇಕಾನಂದರ ಕೃತಿಶ್ರೇಣಿಯಲ್ಲಿ ಪ್ರಕಟವಾಗಿರುವ ಮಾಹಿತಿಯ ಅನುಸಾರ ಸ್ವಾಮೀಜಿಯವರ ಭಾಷಣಗಳನ್ನು ಬರೆದುಕೊಳ್ಳಲು ಶೀಘ್ರಲಿಪಿಕಾರರ ಸೇವೆಯನ್ನು ಬಳಸಿಕೊಳ್ಳಲಾಗಿತ್ತು. ಧ್ವನಿಮುದ್ರಣ ಯಂತ್ರ ಆವಿಷ್ಕಾರವಾದದ್ದು ಆನಂತರದಲ್ಲಿ. (ಸ್ವಾಮೀಜಿಯವರ ಒಂದು ಕರಡು ಧ್ವನಿಮುದ್ರಿತ ಸುರುಳಿಯಾಕಾರದ ದಾಖಲೆ ಮೈಸೂರು ಮಹಾರಾಜರ ಬಳಿ ಇತ್ತು ಎಂಬ ಮಾತು ಪ್ರಚಲಿತವಾಗಿತ್ತು. ಅದು ಸದ್ಯಕ್ಕೆ ಲಭ್ಯವಿಲ್ಲ!) 
      ಹಾಗಾದರೆ ಸ್ವಾಮಿ ವಿವೇಕಾನಂದರ ಧ್ವನಿ ಎಂದು ಅಂತರ್ಜಾಲದಲ್ಲಿ ಪ್ರಚಾರದಲ್ಲಿರುವ ವೀಡಿಯೊ ಕ್ಲಿಪ್‌ನಲ್ಲಿರುವ ಧ್ವನಿ ಯಾರದ್ದು? ಮೂಲವನ್ನು ಹುಡುಕುತ್ತಾ ಹೋದಂತೆ ಸ್ವಾಮಿ ವಿವೇಕಾನಂದರ ಶಿಷ್ಯವರ್ಗದವರ ಮತ್ತು ಶ್ರೀ ರಾಮಕೃಷ್ಣ ಮಠದವರ ಪರಿಶ್ರಮದಿಂದ ಸ್ವಾಮೀಜಿಯವರ ಧ್ವನಿಗೆ ಹತ್ತಿರವಿರುವಂತೆ, ಅವರೇ ಮಾತನಾಡಿ¨ªಾರೆಂದು ಅನ್ನಿಸುವಂತೆ, ಒಂದು ಧ್ವನಿಯನ್ನು ಬಳಸಿಕೊಂಡು ಸ್ವಾಮೀಜಿಯವರ ಭಾಷಣಗಳ ಧ್ವನಿಮುದ್ರಿತ ಸುರುಳಿಗಳನ್ನು ಸಿದ್ಧಪಡಿಸಲಾಯಿತು. ಬಂಗಾಲಿ ನಟ ಸುಭೀರ್‌ ಘೋಷ್‌ ಅವರ ಧ್ವನಿಯಲ್ಲಿ ಮೂಡಿ ಬಂದಿರುವ ಈ ಭಾಷಣಗಳು ಜನರನ್ನು ಹುರಿದುಂಬಿಸಿದವು. ಇವುಗಳಿಗೆ ಬೇಡಿಕೆ ಬಂದಂತೆÇÉಾ ಸ್ವಾಮೀಜಿಯವರ ಸಮಗ್ರ ಕೃತಿಗಳಲ್ಲಿರುವ ಕೆಲವು ಅಧ್ಯಾಯಗಳನ್ನು ಯಥಾವತ್ತಾಗಿ ಆಡಿಯೋ ಬುಕ್‌ ರೂಪಕ್ಕೆ ತರಲಾಯಿತು. ಅವುಗಳಿಗೆ ಹಿನ್ನೆಲೆಯಾಗಿ ಸ್ವಾಮೀಜಿಯವರ ಜೀವನ, ಸಾಧನೆಗಳನ್ನು ಬಿಂಬಿಸುವ ಫೋಟೋಗಳನ್ನು, ಚಿತ್ರಪಟಗಳನ್ನು ಬಳಸಿಕೊಳ್ಳಲಾಯಿತು. ಒಟ್ಟಿನಲ್ಲಿ ಸ್ವಾಮೀಜಿಯವರ ಸಂದೇಶವನ್ನು ಮನೆಮನಕ್ಕೆ ಮುಟ್ಟಿಸುವ ಕಾರ್ಯ ನಡೆಯಿತು. ಹೆಚ್‌.ಎಂ.ವಿ. ಸಂಸ್ಥೆಯವರು ಸ್ವಾಮೀಜಿಯವರ ಭಾಷಣಗಳ ಆಡಿಯೊ ಕ್ಯಾಸೆಟ್‌ ಹೊರತಂದಾಗ ಅದರ ರûಾಕವಚದಲ್ಲಿ ಇದು ಸ್ವಾಮೀಜಿಯವರ ಸಂದೇಶವಾದರೂ ಇಲ್ಲಿರುವ ಧ್ವನಿ ಸುಭೀರ್‌ ಘೋಷ್‌ ಅವರದ್ದು ಎಂದು ಮುದ್ರಿತವಾಗಿತ್ತು. ಕ್ಯಾಸೆಟ್‌ನೊಂದಿಗೆ ಭಾಷಣಗಳ ಕಿರು ಹೊತ್ತಗೆಯನ್ನೂ ನೀಡಲಾಗಿತ್ತು. 

      ಕರ್ನಾಟಕ ರಾಜ್ಯ ಯುವನೀತಿ 
      ಕರ್ನಾಟಕ ರಾಜ್ಯ ಯುವನೀತಿಯನ್ನು ಯುವಜನರ ಪ್ರೇರಕ ಶಕ್ತಿ ಹಾಗೂ ಆದರ್ಶವಾಗಿರುವ ಸ್ವಾಮಿ ವಿವೇಕಾನಂದರ ದೂರದರ್ಶಿತ್ವ ಮತ್ತು ಧ್ಯೇಯೋದ್ದೇಶಕ್ಕೆ ಅವರ 150ನೇ ಜಯಂತ್ಯೋತ್ಸವ ಆಚರಣೆಯ ಶುಭ ಸಂದರ್ಭದಲ್ಲಿ ಅರ್ಪಿಸಲಾಗುತ್ತಿದೆ. ರಾಷ್ಟ್ರಕವಿ ಕುವೆಂಪುರವರು ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ನಮ್ಮ ನಾಡಿನ ಜನರಿಗೆ ಕರೆ ನೀಡಿ¨ªಾರೆ. ಹಾಗೆಯೇ ನವ್ಯ ಕವಿ ಶ್ರೀ ಗೋಪಾಲಕೃಷ್ಣ ಅಡಿಗರು 'ಕಟ್ಟುವೆವು ನಾವು ಹೊಸ ನಾಡೊಂದನು, ರಸದ ಬೀಡೊಂದನು ನಮ್ಮೆದೆಯ ಕನಸುಗಳೆ ಕಾಮಧೇನು ಆದಾವು, ಕರೆದಾವು ವಾಂಛಿತವನು; ಕರೆವ ಕೈಗಿಹುದಿದೊ ಕನಸುಗಳ ಹರಕೆ ಗುರಿತಪ್ಪದೊಮ್ಮುಖದ ಬಯಕೆ ಬೆಂಬಲಕೆ' ಎನ್ನುತ್ತಾ ಹೊಸ ಭರವಸೆಯ ನಾಡೊಂದನ್ನು ಕಟ್ಟುವ ತಮ್ಮ ಆಶಯವನ್ನು ವ್ಯಕ್ತಪಡಿಸಿ¨ªಾರೆ. 
      ದಾರ್ಶನಿಕರ ನುಡಿಗಳಿಂದ ಪ್ರೇರೇಪಣೆಗೊಂಡು ಹೊಸ ಜವಾಬ್ದಾರಿಯುತ ನಾಡನ್ನು ಕಟ್ಟುವಲ್ಲಿ ಯುವ ಜನತೆಯ ಮಹತ್ವದ ಪಾತ್ರವನ್ನು ಗುರುತಿಸುವ ಹಾಗೂ ಅವರು ಸಮಾಜದೊಂದಿಗೆ ಭಾವೈಕ್ಯತೆಯಿಂದ ಬೆರೆಯುವುದಕ್ಕೆ ಬೇಕಾದ ಒತ್ತಾಸೆ ನೀಡುವತ್ತ ಗಮನಹರಿಸುವ ಮುಖ್ಯ ಉದ್ದೇಶ ಈ ಯುವನೀತಿಗಿದೆ. ಅಂದರೆ ಯುವಜನರನ್ನು ತಲುಪಿ, ಅವರು ನಾಡಿನ ಅಭಿವೃದ್ಧಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಪ್ರೇರೇಪಿಸಿ, ನಂತರ ನಾಡಿನ ಅಭಿವೃದ್ಧಿಗೆ ಕೊಡುಗೆಗಳನ್ನು ನೀಡುವಂತೆ ಅವರನ್ನು ಸಬಲೀಕರಣಗೊಳಿಸುವುದು ಯುವನೀತಿಯ ಪ್ರಧಾನ ಗುರಿ. 

      ಕರ್ನಾಟಕ ರಾಜ್ಯ ಯುವ ನೀತಿ- 2012 
      ಒಂದು ರಾಜ್ಯದ ಆರ್ಥಿಕ ಬೆಳವಣಿಗೆಯು ಅದು ಹೇಗೆ ತನ್ನ ಬೌದ್ಧಿಕ ಮೂಲಧನವನ್ನು ಪ್ರಸ್ತಾವಿಸುತ್ತದೆ ಎನ್ನುವುದರ ಮೇಲೆಯೇ ಅಧಿಕವಾಗಿ ಅವಲಂಬಿತವಾಗಿದೆ. ಟೀಂ ಲೀಸ್‌ ಇಂಡಿಯ ಲೇಬರ್‌ ರಿಪೋರ್ಟ್‌ 2009ರ ಪ್ರಕಾರ 2025ರೊಳಗೆ ವಿಶ್ವ ಕಾರ್ಮಿಕ ಪಡೆಯಲ್ಲಿ ಶೇ. 25ರಷ್ಟು ಭಾರತೀಯರೇ ಇರುತ್ತಾರೆ. ಯುವಜನರಿಗೆ ತರಬೇತಿ ಒದಗಿಸಲು ಹಾಗೂ ಸಶಕ್ತಗೊಳಿಸಲು ಕ್ರಮಗಳನ್ನು ತೆಗೆದುಕೊಳ್ಳದಹೊರತು ಈ ನಿರ್ದಿಷ್ಟ ವಿಭಾಗದ ಜನತೆಯು ಗರಿಷ್ಠ ಭಾಗದ ಔದ್ಯೋಗಿಕ ಜನರು ಅವಕಾಶವಂಚಿತರಾಗುತ್ತಾರೆ. 
      2011ರ ಜನಗಣತಿಯ ಪ್ರಕಾರ, ಕರ್ನಾಟಕದ ಜನಸಂಖ್ಯೆಯಲ್ಲಿ ಶೇ. 36.4ರಷ್ಟಿರುವ ಯವಜನರು ಸಮಗ್ರ ಉದ್ಯೋಗಸ್ಥರ ಜನಸಂಖ್ಯೆಯಲ್ಲಿ ಶೇ. 65ರಷ್ಟು ಭಾಗವನ್ನು ಹೊಂದಿ¨ªಾರೆ. ಈ ಪರಿಸ್ಥಿತಿಯಲ್ಲಿ ಬೇಡಿಕೆಗಳನ್ನು ಹಾಗೂ ಅಭಿಲಾಷೆಗಳನ್ನು ಅರ್ಥಮಾಡಿಕೊಳ್ಳುವುದು ಮಾತ್ರವಲ್ಲದೆ ಅವುಗಳನ್ನು ಪೂರೈಸಲು ಅವಕಾಶಗಳನ್ನು ಸೃಷ್ಟಿಸುವುದು ಕೂಡ ರಾಜ್ಯ ತೆಗೆದುಕೊಳ್ಳಬೇಕಾದ ಪ್ರಮುಖ ನಿರ್ಧಾರಗಳಾಗಿವೆ. ಯುವಜನರೊಡನೆ ಕೆಲಸ ಮಾಡಲು ಮತ್ತು ವ್ಯವಸ್ಥಿತವಾಗಿ ಅವರ ಅಭಿವೃದ್ಧಿಯನ್ನು ಖಚಿತಪಡಿಸಲು ಒಂದು ಯುವನೀತಿಯನ್ನು ನಿರ್ಮಿಸುವುದು ಬಹು ಮುಖ್ಯ. 
      ಕರ್ನಾಟಕ ರಾಜ್ಯ ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಜ್ಞಾನ ಆಯೋಗ ರೂಪಿಸಿರುವ ಯುವನೀತಿಯು ರಾಜ್ಯದ ಯುವಜನರ ಯುವ ಜಗತ್ತು, ಯುವ ದೃಷ್ಟಿಕೋನ ಮತ್ತು ಯುವ ಧ್ವನಿ ಯ ಅಭಿವ್ಯಕ್ತಿಗೆ ವೇದಿಕೆ ಒದಗಿಸುತ್ತದೆ. ರಾಜ್ಯದಲ್ಲಿ ಬಹು-ವಿಧ ಯುವಜನರಿ¨ªಾರೆ ಎಂಬುದನ್ನು ಯುವನೀತಿಯು ಮನಗಂಡಿದೆ. ಈ ಬಹುವಿಧತೆ ವಿವಿಧ ಆಕಾಂಕ್ಷೆ, ನಿರೀಕ್ಷೆಗಳನ್ನು ಒಳಗೊಂಡಿರುವ ವಿವಿಧ ವಯೋಮಾನದ ಗುಂಪುಗಳು; ವಿವಿಧ ಹಂತಗಳಲ್ಲಿ ತಮ್ಮ ಕೊಡುಗೆಗಳನ್ನು ನೀಡಬಲ್ಲವರು; ವೈವಿಧ್ಯಮಯ ಸಾಮಾಜಿಕ, ಆರ್ಥಿಕ ಸ್ಥಿತಿಗಳಲ್ಲಿರುವವರು; ಬಹುವಿಧದ ಶಕ್ತಿ, ಸಾಮರ್ಥ್ಯ, ಪ್ರತಿಭೆಗಳನ್ನು ಹೊಂದಿರುವವರು; ಪಾಲ್ಗೊಳ್ಳುವಿಕೆಯಲ್ಲಿ ವಿವಿಧ ಅವಕಾಶಗಳನ್ನು ಮತ್ತು ವಿವಿಧ ಬಗೆಯ, ಹಂತದ, ಗುಣಮಟ್ಟದ ಶಿಕ್ಷಣ ಹಾಗೂ ಕಲಿಕೆಯ ಮಾರ್ಗಗಳನ್ನು ಹೊಂದಿದವರು; ಹಲವು ಹಂತಗಳಲ್ಲಿ ಮತ್ತು ಹಲವು ರೀತಿಯಲ್ಲಿ ರಾಜ್ಯದ ಮೇಲೆ ಅವಲಂಬಿತರಾಗಿರುವವರು- ಹೀಗೆ ಯುವ ವೈವಿಧ್ಯವು ಬಹುಮುಖೀ ಅರ್ಥದಲ್ಲಿ ಅಸ್ತಿತ್ವದಲ್ಲಿದೆ ಎಂಬುದು ಯುವನೀತಿಯ ಗಮನದಲ್ಲಿದೆ. ಈ ಯುವ®àತಿಯಲ್ಲಿ 16ರಿಂದ 30 ವಯೋಮಾನದವರನ್ನು ಯುವಜನರೆಂದು ಪರಿಗಣಿಸಲಾಗಿದೆ. ಯುವಜನರನ್ನು ಅವರ ಗುಣ ಲಕ್ಷಣಗಳು ಹಾಗೂ ಅಗತ್ಯತೆಗಳ ದೃಷ್ಟಿಯಿಂದ 16ರಿಂದ 20, 21 ರಿಂದ 25 ಮತ್ತು 26 ರಿಂದ 30 ವರ್ಷಗಳು ಎಂದು ಮೂರು ಉಪ ಗುಂಪುಗಳಾಗಿ ವಿಂಗಡಿಸಲಾಗಿದೆ. ರಾಷ್ಟ್ರೀಯ ಯುವನೀತಿಯ ಕರಡಿನಲ್ಲಿಯೂ ಇದೇ ಅಂಶಗಳನ್ನು ಪ್ರಸ್ತಾಪಿಸಲಾಗಿದೆ. 

      ಯುವನೀತಿಯ ನವರತ್ನಗಳು 
      ಯುವನೀತಿಯು ಸರ್ಕಾರಕ್ಕೆ ವಿಭಿನ್ನ ನವರತ್ನಗಳ ಅಡಿಯಲ್ಲಿ ಮಾಡಿರುವ ಶಿಫಾರಸ್ಸುಗಳ ಸಾರಾಂಶ ಈ ಕೆಳಕಂಡಂತಿವೆ. ಇವುಗಳನ್ನು ಅಲ್ಪಾವಧಿ, ಮಧ್ಯಮಾವಧಿ ಮತ್ತು ದೀರ್ಘಾವಧಿ ಕಾಲಮಿತಿಯಲ್ಲಿ ಅನುಷ್ಠಾನ ಮಾಡಬೇಕಿದೆ: 
      ರತ್ನ 1: ಭರವಸೆಯ ನಾಳೆಗೆ ಇಂದಿನ ಕಾರ್ಯಸಿದ್ಧತೆ 
      ರತ್ನ 2: ಕುಟುಂಬ ಪ್ರಥಮ ಕುಟುಂಬ ಸದಾ 
      ರತ್ನ 3: ಯುವ ಸಾಮರ್ಥ್ಯ, ಪ್ರತಿಭೆ, ಮೇಧಾಶಕ್ತಿಯ ಅಭಿವೃದ್ಧಿಗಾಗಿ ಶಿಕ್ಷಣ ಹಾಗೂ ತರಬೇತಿ 
      ರತ್ನ 4: ಕಾಯಕಕ್ಕೆ ಪ್ರೋತ್ಸಾಹ, ಉದ್ದಿಮೆಗೆ ಅವಕಾಶ 
      ರತ್ನ 5: ಸಮಗ್ರ ಯುವ ಆರೋಗ್ಯ ಭಾಗ್ಯ. 
      ರತ್ನ 6: ದೈಹಿಕ ಸ್ವಾಸ್ಥ್ಯಕ್ಕೆ ಕ್ರೀಡೆ, ಮಾನಸಿಕ ಆರೋಗ್ಯಕ್ಕೆ ಮನರಂಜನೆ 
      ರತ್ನ 7: ಸಾಮಾಜಿಕ ನ್ಯಾಯದ ಉತ್ತೇಜನ 
      ರತ್ನ 8: ಸರ್ಕಾರ ಹಾಗೂ ಸರ್ಕಾರದಾಚೆ: ಪಾಲ್ಗೊಳ್ಳುವಿಕೆ ಹಾಗೂ ಪ್ರಗತಿಗಾಗಿ ಸಹಭಾಗಿತ್ವ 
      ರತ್ನ 9: ಸಮಗ್ರ, ಸಮತೋಲಿತ ಬೆಳವಣಿಗೆ ಹಾಗೂ ಅಭಿವೃದ್ಧಿಗಾಗಿ ಸಾಂ ಕ ಪ್ರಯತ್ನ 

      ಯುವನೀತಿ ಒಳಗೊಳ್ಳುವ ಮುಖ್ಯ ತತ್ವಗಳು 
      1. ಸಮಗ್ರ ಅಭಿವೃದ್ಧಿ ಮತ್ತು ಬಹುವಲಯ ಸಂಯೋಜನೆ 
      2. ಅಪಾಯಕರ ಪರಿಸ್ಥಿತಿಯಲ್ಲಿರುವ ಯುವಜನರ ರಕ್ಷಣೆ 
      3. ಲಿಂಗ ಸಮಾನತೆ ಮತ್ತು ಸಾಮಾಜಿಕ ನ್ಯಾಯ 
      4. ಭಾರತೀಯ ಸಂಸ್ಕೃತಿ, ದೇಶ ಮತ್ತು ನಂಬಿಕೆಗಳ ಬಗ್ಗೆ ಗೌರವ ಹಾಗೂ ಹೆಮ್ಮೆ 
      5. ಕೌಟುಂಬಿಕ ಹಾಗೂ ಸಾಮಾಜಿಕ ಬಾಂಧವ್ಯವನ್ನು ಬಲಗೊಳಿಸುವುದು 
      6. ಸಮುದಾಯದ ಸಹಕಾರ 
      7. ತಂತ್ರಜ್ಞಾನ ಹಾಗೂ ಆವಿಷ್ಕಾರಗಳು 
      8. ಯುವ ಪರ ದೃಷ್ಟಿಕೋನ ಮತ್ತು ಯುವಜನರ ಸಹಭಾಗಿತ್ವವನ್ನು ಸಾಧಿಸುವುದು 
      9. ಸಂಶೋಧನಾಧಾರಿತ ಮಾರ್ಗೋಪಾಯ 

      ಏನೆಲ್ಲವ‌ನ್ನು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ? 
      ರಾಷ್ಟ್ರೀಯ ಯುವನೀತಿ ಪ್ರಕಟಿತ ಕರಡು 2012, ಮಹಾರಾಷ್ಟ್ರ, ಜಾರ್ಖಂಡ್‌, ಕೇರಳ, ಮೇಘಾಲಯ, ಹರಿಯಾಣ, ಪಂಜಾಬ್‌, ಮೇಘಾಲಯ ರಾಜ್ಯಗಳ ಕ್ರೀಡಾ ನೀತಿಗಳನ್ನು ಅವಲೋಕಿಸಿದ್ದೇ ಅಲ್ಲದೆ ದಕ್ಷಿಣ ಆಫ್ರಿಕಾ ರಾಷ್ಟ್ರೀಯ ಯುವನೀತಿ 2008-13, ಪಂಜಾಬ್‌(ಪಾಕಿಸ್ತಾನ್‌), ಬಾಂಗ್ಲಾದೇಶ್‌, ಆಸ್ಟ್ರೇಲಿಯಾದ ಯುವ ಕಾರ್ಯಕ್ರಮಗಳು, ಯೂರೋಪಿಯನ್‌ ಕೌನ್ಸಿಲ್‌ ಯುವ ಕ್ರಿಯಾ ಕಾರ್ಯಕ್ರಮ, ಯುರೋಪಿಯನ್‌ ಯೂನಿಯನ್‌ ಯುವನೀತಿ ಕಾರ್ಯ ಸೂಚಿ 2010-18, ಅಂತರಾಷ್ಟ್ರೀಯ ಯುವ ಮಂಡಳಿ, ಯುವ ಕಾರ್ಯಕ್ರಮಗಳು, ನೈರೋಬಿ ಕ್ರಿಯಾ ಯೋಜನೆ (ಕಾಮನ್‌ವೆಲ್ತ್‌ ಯುವ ಕಾರ್ಯಕ್ರಮ), ಅಮೇರಿಕನ್‌ ಯುವನೀತಿ ಫೋರಂ, ಕರ್ನಾಟಕ ವಿಷನ್‌-2020, ಮಿಲೇನಿಯಂ ಡೆವಲಪ್‌ಮೆಂಟ್‌ ಗೋಲ್ಸ್‌, ಜನಗಣತಿ 2001 ಮತ್ತು 2011, 2009ರ ರಾಷ್ಟ್ರೀಯ ಅಪರಾಧಿ ದಾಖಲೆ ಬ್ಯೂರೋ ವರದಿ ಇತ್ಯಾದಿಗಳನ್ನು ಅವಲೋಕಿಸಿ ಈ ಕರ್ನಾಟಕ ರಾಜ್ಯ ಯುವನೀತಿ 2012ನ್ನು ಅಂತಿಮಗೊಳಿಸಲಾಗಿದೆ. 
      2012ರ ಜನವರಿ 12 - ಮಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಯುವಜನೋತ್ಸವದಲ್ಲಿ ಮುಖ್ಯಮಂತ್ರಿಗಳಿಂದ ಯುವ ಬಜೆಟ್‌ ಬಗೆಗೆ ಘೋಷಣೆಯ ನಂತರದಲ್ಲಿ ವರ್ಷವಿಡೀ ವಿವಿಧ ಸಂಘಟನೆಗಳು, ಆಯೋಗಗಳು ಮತ್ತು ಯುವ ಮುಂದಾಳುಗಳೊಡನೆ ನಡೆಸಿದ ಸಮಾಲೋಚನಾ ಸಭೆಗಳ ನಂತರ ಜೂನ್‌ 2ರಂದು ಸರ್ಕಾರದಿಂದ ಯುವನೀತಿ ಚಾಲನಾ ಸಮಿತಿ ಹಾಗೂ ಕರಡು ರಚನಾ ಸಮಿತಿ ರಚನೆಯ ಬಗೆಗೆ ಸರ್ಕಾರಿ ಆದೇಶ ಹೊರಬಿದ್ದು, ಜೂನ್‌ 25 ರಂದು ಕರ್ನಾಟಕ ಯುವನೀತಿಯ ವೆಬ್‌ಸೈಟ್‌ ಚಾಲನೆ ದೊರೆತು, ಬೆಂಗಳೂರಿನ ಜೈನ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಸಂದೀಪ ಶಾಸ್ತ್ರೀ ಅವರ ಅಧ್ಯಕ್ಷತೆಯಲ್ಲಿ ರಚಿತವಾದ ಕರಡು ರಚನಾ ಸಮಿತಿಯು ಸಿದ್ಧಗೊಳಿಸಿದ ಕರಡು ಯುವನೀತಿಯನ್ನು ಆಗಸ್ಟ್‌ 9ರಂದು ಸರ್ಕಾರಕ್ಕೆ ಸಮರ್ಪಣೆ ಮಾಡಲಾಯಿತು. ಹಲವು ಸಮಾಲೋಚನಾ ಸಭೆಗಳ ನಂತರ ಪರಿಷ್ಕಾರಗೊಳಿಸಲ್ಪಟ್ಟ ಈ ಯುವನೀತಿಯನ್ನು ಚಾಲನಾ ಸಮಿತಿಯು ಅಧ್ಯಕ್ಷರಾದ ಗಿರೀಶ್‌ ಪಟೇಲ್‌ರವರ ನೇತೃತ್ವದಲ್ಲಿ ಕರ್ನಾಟಕ ಸರ್ಕಾರದ ಗೌರವಾನ್ವಿತ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್‌ರವರಿಗೆ ಮಾನ್ಯ ಯುವಜನ ಸೇವಾ ಮತ್ತು ಕ್ರೀಡಾ ಸಚಿವರಾದ ಎಂ.ಪಿ. ಅಪ್ಪಚ್ಚು(ರಂಜನ್‌)ರವರ ಉಪಸ್ಥಿತಿಯಲ್ಲಿ ನವೆಂಬರ್‌ 29, 2012ರಂದು ಸಲ್ಲಿಸಿತು. 


      ಆಗಸ್ಟ್‌ 12: ಅಂತಾರಾಷ್ಟ್ರೀಯ ಯುವದಿನ 
      ವಿಶ್ವಸಂಸ್ಥೆಯ ಕಳಕಳಿಯಿಂದ ಪ್ರತಿವರ್ಷ ಆಗಸ್ಟ್‌ 12ನ್ನು ಅಂತಾರಾಷ್ಟ್ರೀಯ ಯುವದಿನವನ್ನಾಗಿ ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳು ಆಚರಿಸುತ್ತಾ ಬಂದಿವೆ. 2000ನೇ ಇಸವಿಯಿಂದ ಆರಂಭವಾಗಿರುವ ಈ ಆಚರಣೆಯ ದಶಮಾನೋತ್ಸವದ ಸಂದರ್ಭದಲ್ಲಿ 2010ನೇ ಇಸವಿಯನ್ನು ಅಂತಾರಾಷ್ಟ್ರೀಯ ಯುವ ವರ್ಷವನ್ನಾಗಿ ಆಚರಿಸಲು ವಿಶ್ವಸಂಸ್ಥೆ ಕರೆನೀಡಿತ್ತು. ಯುವಜನರಿಂದ, ಯುವಜನರಿಗಾಗಿ, ಯುವಜನರಿಗೋಸ್ಕರವಾಗಿ ನಡೆಸಲಾಗುವ ಕಾರ್ಯಕ್ರಮಗಳತ್ತ ವಿಶ್ವದ ಗಮನಸೆಳೆಯುವುದು, ಯುವಜನರನ್ನು ಜವಾಬ್ದಾರಿಯುತ ಪ್ರಜೆಗಳಾಗಿ ರೂಪಿಸುವುದು, ಯುವಜನರ ಏಳಿಗೆಗಾಗಿ ಹತ್ತಾರು ಯೋಜನೆಗಳನ್ನು ಹಮ್ಮಿಕೊಳ್ಳುವುದು ಈ ಆಚರಣೆಯ ಉದ್ದೇಶವಾಗಿದೆ. 
      ಹದಿನೈದರಿಂದ ಇಪ್ಪತ್ನಾಲ್ಕು ವರ್ಷದವರನ್ನು ಯುವಜನರು ಎಂದು ವಿಶ್ವಸಂಸ್ಥೆ ಪರಿಗಣಿಸಿದ್ದು ವಿಶ್ವದ ಜನಸಂಖ್ಯೆಯಲ್ಲಿ ಶೇಕಡಾ 18 ಅಂದರೆ 1.2 ಬಿಲಿಯನ್‌ ಯುವಜನರಿದ್ದು ಅವರಲ್ಲಿ ಶೇಕಡಾ 87 ರಷ್ಟು ಮಂದಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ¨ªಾರೆ ಮತ್ತು ಶಿಕ್ಷಣ, ಆರೋಗ್ಯ, ಉದ್ಯೋಗ, ಆರ್ಥಿಕ ಸೌಲತ್ತುಗಳಿಂದ ವಂಚಿತರಾಗಿ¨ªಾರೆ. ಆದರೂ ಸಾಮಾಜಿಕ ಬದಲಾವಣೆಯ, ಧನಾತ್ಮಕ ದೃಷ್ಟಿಕೋನದ, ಉತ್ಸಾಹೀ ಯುವಜನರು ದೇಶದ ಉತ್ಕೃಷ್ಟ ಮಾನವ ಸಂಪನ್ಮೂಲವಾಗಿ¨ªಾರೆ. ಅವರ ಚಿಂತನೆ, ದೂರದೃಷ್ಟಿ, ಶಕ್ತಿ, ಉತ್ಸಾಹಗಳು ದೇಶದ ಅಭಿವೃದ್ಧಿಗೆ ಪೂರಕ ಮತ್ತು ಅತ್ಯಗತ್ಯ ಕೂಡ. 
      ಯುವಜನರ ಅಭಿವೃದ್ಧಿಗೆಂದೇ ಗುರುತಿಸಲಾಗಿರುವ ವಿಶ್ವದ ಕಾರ್ಯಸೂಚಿಯ ಹದಿನೈದು ಆದ್ಯತಾವಲಯಗಳು ಹೀಗಿವೆ: 
      ಶಿಕ್ಷಣ, ಉದ್ಯೋಗ, ಹಸಿವು ಮತ್ತು ಬಡತನ, ಆರೋಗ್ಯ, ಪರಿಸರ, ಔಷಧಗಳ ದುರ್ಬಳಕೆ, ಬಾಲಾಪರಾಧ, ಬಿಡುವಿನ ವೇಳೆಯ ಚಟುವಟಿಕೆಗಳು, ಬಾಲಕಿಯರು ಮತ್ತು ಯುವತಿಯರು, ಭಾಗವಹಿಸುವಿಕೆ, ಜಾಗತೀಕರಣ, ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ, ಹೆಚ್‌ಐವಿ/ಏಡ್ಸ್‌, ಯುವಜನರು ಮತ್ತು ಸಂಘರ್ಷ, ಭಾವೈಕ್ಯತೆ. 
      'ಯುವಜನರು ಶಿಕ್ಷಣ, ಆರೋಗ್ಯ, ಉದ್ಯೋಗಾವಕಾಶಗಳು, ಆರ್ಥಿಕ ಸೌಲಭ್ಯಗಳು ಮತ್ತು ಸಾರ್ವಜನಿಕ ಜೀವನದಲ್ಲಿ ಪಾಲ್ಗೊಳ್ಳುವ ಸಂಪೂರ್ಣ ಬದ್ಧತೆಗೆ ಅರ್ಹರು. ಸ್ಥಳೀಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಹತ್ವದ ವಿಷಯಗಳಿಗೆ ಸಂಬಂಧಿಸಿದ ಜವಾಬ್ದಾರಿಯುತ ನಿರ್ಣಯ ತೆಗೆದುಕೊಳ್ಳುವ ಅವಕಾಶವನ್ನು ಯುವಜನರಿಗೆ ಕಲ್ಪಿಸಿಕೊಡಬೇಕು' ಎನ್ನುತ್ತಾರೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಬಾನ್‌-ಕಿ-ಮೂನ್‌ ಅವರು. 
      1985ರ ಮೊದಲ ಅಂತಾರಾಷ್ಟ್ರೀಯ ಯುವವರ್ಷ ಆಚರಣೆಯ ಸಂದರ್ಭದಲ್ಲಿ ವಿಶ್ವದ ಯುವಜನರ ಸ್ಥಿತಿಗತಿಗಳ ಬಗ್ಗೆ ಕಾಳಜಿವಹಿಸಲು ವಿಶ್ವಸಂಸ್ಥೆಯ ಸದಸ್ಯರಾಷ್ಟ್ರಗಳಲ್ಲಿ ಹತ್ತಾರು ಕಾರ್ಯಕ್ರಮಗಳು ಜರುಗಿದ್ದವು. 1991ರ ಮೇ 27 ರಿಂದ 29ರವರೆಗೆ ವಿಯೆನ್ನಾದಲ್ಲಿ ನಡೆದ ವಿಶ್ವಸಂಸ್ಥೆ ವ್ಯವಸ್ಥೆಯ ವಿಶ್ವ ಯುವ ವೇದಿಕೆಯ ಮೊದಲ ಮಹಾ ಅಧಿವೇಶನ ಏರ್ಪಾಟಾಗಿ ವಿಶ್ವಸಂಸ್ಥೆಯ ಯುವಜನ ನಿಧಿ(ಖೀnಜಿಠಿಛಿಛ Nಚಠಿಜಿಟns Yಟuಠಿಜ ಊunಛ)ಯ ಸ್ಥಾಪನೆ ಮತ್ತು ಅಂತಾರಾಷ್ಟ್ರೀಯ ಯುವದಿನ ಆಚರಣೆಯ ಪ್ರಸ್ತಾಪವಾಯಿತು. 1998ರ ಆಗಸ್ಟ್‌ 8ರಿಂದ 12ರವರೆಗೆ ಪೋರ್ಚುಗಲ್‌ನಲ್ಲಿ ನಡೆದ ಸದಸ್ಯ ರಾಷ್ಟ್ರಗಳ ಯುವಜನಸೇವೆ ಮತ್ತು ಯುವಜನಖಾತೆಯ ಸಚಿವರುಗಳ ಮೊದಲ ವಿಶ್ವ ಸಮ್ಮೇಳನದಲ್ಲಿ ಆಗಸ್ಟ್‌ 12ನ್ನು ಅಂತಾರಾಷ್ಟ್ರೀಯ ಯುವದಿನ ಎಂದು ಆಚರಿಸುವ ಶಿಫಾರಸ್ಸು ಹೊರಬಿದ್ದು, 1999ರ ವಿಶ್ವಸಂಸ್ಥೆಯ ಮಹಾಧಿವೇಶನದಲ್ಲಿ ಅಂಗೀಕೃತವಾಗಿ, 2000ನೇ ಇಸವಿಯಿಂದ ಅಂತಾರಾಷ್ಟ್ರೀಯ ಯುವದಿನವನ್ನು ಆಚರಿಸಲಾಗುತ್ತಿದೆ. 
      ಇದೇ ಅಧಿವೇಶನದಲ್ಲಿ ಅಂಗೀಕರಿಸಲಾದ ಯುವಜನರಿಗಾಗಿ ಹಮ್ಮಿಕೊಳ್ಳಲಾಗುವ ಚಟುವಟಿಕೆಗಳ ಕಾರ್ಯಸೂಚಿಯ ಮುನ್ನುಡಿಯಲ್ಲಿ ಹೀಗೆ ಹೇಳಲಾಗಿದೆ: ಯುವಜನರು ಮಹತ್ತರ ಸಾಮಾಜಿಕ ಬದಲಾವಣೆಯ ಹರಿಕಾರರೂ, ಫ‌ಲಾನುಭವಿಗಳೂ ಮತ್ತು ಆ ಬದಲಾವಣೆಗಳ ಸಂತ್ರಸ್ತರೂ ಆಗಿರುವವರು ಮತ್ತು ಈಗಾಗಲೇ ಪ್ರಚಲಿತವಿರುವ ಸಾಮಾಜಿಕ ಪದ್ಧತಿಗಳೊಂದಿಗೆ ಹೊಂದುಕೊಂಡು ಹೋಗುವ ಇಲ್ಲವೇ ಅಂತಹ ರೀತಿ ನೀತಿಗಳನ್ನು ಬದಲಾಯಿಸಿ ಹೊಸ ಪದ್ಧತಿಗಳ ಆರಂಭಕ್ಕೆ ಕಾರಣರಾಗುವ ಚೈತನ್ಯ ಹೊಂದಿ ಸಂಕ್ರಮಣ ಸ್ಥಿತಿಯಲ್ಲಿರುವವರೂ ಆಗಿ¨ªಾರೆ. ಅಭಿವೃದ್ಧಿಶೀಲ, ಅಭಿವೃದ್ಧಿ ಹೊಂದಿದ ಮತ್ತು ಯಾವುದೇ ರೀತಿಯ ಆರ್ಥಿಕ ವ್ಯವಸ್ಥೆ ಹೊಂದಿರುವ ವಿಶ್ವದ ಎಲ್ಲ ರಾಷ್ಟ್ರಗಳಲ್ಲಿನ ಯುವಜನರು ತಮ್ಮ ಸಾಮಾಜಿಕ ಜೀವನದಲ್ಲಿ ಸಂಪೂರ್ಣವಾಗಿ ತೊಡಗಿಕೊಳ್ಳುವ ಆಶಯ ಉಳ್ಳವರು. 
      ಶಿಕ್ಷಣ, ಉದ್ಯೋಗ, ಹಸಿವು ಮತ್ತು ಬಡತನ, ಆರೋಗ್ಯ, ಪರಿಸರ, ಔಷಧಗಳ ದುರ್ಬಳಕೆ/ ಮಾದಕ ಪದಾರ್ಥಗಳ ಬಳಕೆ, ಬಾಲಾಪರಾಧ, ವಿಡುವಿನ ವೇಳೆಯ ಚಟುವಟಿಕೆಗಳು, ಬಾಲಕಿಯರು ಮತ್ತು ಯುವತಿಯರು ಹಾಗೂ ಸಾಮಾಜಿಕ ಜೀವನದಲ್ಲಿ ಮತ್ತು ನಿರ್ಣಾಯಕ ಕಾರ್ಯಕ್ರಗಳಲ್ಲಿ ಯುವಜನರ ಸಮಗ್ರ, ಪರಿಣಾಮಕಾರಿ ಭಾಗವಹಿಸುವಿಕೆ, ಜಾಗತೀಕರಣ, ಸಮಾಚಾರ ಮತ್ತು ಸಮೂಹ ಸಂವಹನ ತಂತ್ರಜ್ಞಾನ, ಹೆಚ್‌ಐವಿ/ಏಡ್ಸ್‌, ಯುವಜನರು ಮತ್ತು ಹೊಯ್ದಾಟ, ಬಾಂಧವ್ಯಗಳು ಮತ್ತು ಐಕ್ಯತೆ ಎಂಬ ಹದಿನೈದು ಆದ್ಯತಾ ವಲಯಗಳನ್ನು ಈ ಯುವಜನ ಕಾರ್ಯಸೂಚಿಯಲ್ಲಿ ಗುರುತಿಸಲಾಗಿದ್ದು, ಅವುಗಳನ್ನು ಸಮರ್ಥವಾಗಿ ಆಯೋಜಿಸಲು ಸಲಹೆ, ಶಿಫಾರಸ್ಸುಗಳಿವೆ. 
      ಯುವಜನರನ್ನು ದೇಶದ ಮುಖ್ಯವಾಹಿನಿಯಲ್ಲಿ, ನಿರ್ಣಾಯಕ ಪಾತ್ರಗಳಲ್ಲಿ ತೊಡಗುವಂತೆ ಮಾಡುವ ಕಾರ್ಯ ಆಗಬೇಕಾಗಿದೆ. ಅನಂತ ಅವಕಾಶಗಳನ್ನು ಬಾಚಿಕೊಳ್ಳಲು ಯುವಜನರನ್ನು ಹುರಿದುಂಬಿಸಬೇಕಿದೆ.

      • ಕೃಷಿ ವಿಜ್ಞಾನ ಪ್ರವೇಶ ಪರೀಕ್ಷೆ

        • Udayavani | Jan 07, 2013
          ಇಂಡಿಯನ್‌ ಕೌನ್ಸಿಲ್‌ ಆಫ್ ಆಗ್ರಿಕಲ್ಚರಲ್‌ ರಿಸರ್ಚ್‌(ಐಸಿಎಆರ್‌) ನಡೆಸುವ 2013-14ನೇ ಸಾಲಿನ ಕೃಷಿಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವ್ಯಾಸಂಗಕ್ಕಾಗಿ 18ನೇ ರಾಷ್ಟ್ರಮಟ್ಟದ ಪ್ರವೇಶ ಪರೀಕ್ಷೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಡಿಸೆಂಬರ್‌ 26ರಿಂದಲೇ ಅರ್ಜಿಗಳನ್ನು ವಿತರಿಸಲಾಗುತ್ತಿದ್ದು, ಅಂಚೆಯಲ್ಲಿ ತರಿಸಿಕೊಳ್ಳಲು ಫೆಬ್ರವರಿ 10 ಕೊನೆಯ ದಿನ, ಬೆಂಗಳೂರು, ಧಾರವಾಡ ಮತ್ತು ರಾಯಚೂರು ಕೃಷಿ ವಿಶ್ವವಿದ್ಯಾಲಯಗಳಿಂದ, ಬಾಗಲಕೋಟೆಯ ತೋಟಗಾರಿಕಾ ವಿಶ್ವವಿದ್ಯಾಲಯದಿಂದ ಮತ್ತು ಬೀದರಿನ ಬೀದರ್‌ನ ಕರ್ನಾಟಕ ವೆಟರ್ನರಿ, ಅನಿಮಲ್‌ ಆ್ಯಂಡ್‌ ಫಿಷರೀಸ್‌ ಸೈನ್ಸಸ್‌ ಯೂನಿವರ್ಸಿಟಿಯಿಂದ ಖು¨ªಾಗಿ ಪಡೆಯಲು ಮತ್ತು ಸಲ್ಲಿಸಲು 15 ಫೆಬ್ರವರಿ ಕೊನೆಯ ದಿನ. ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಲು ಅವಕಾಶವಿದೆ. ಏಪ್ರಿಲ್‌ 20, 2013ರ ಶನಿವಾರ ಬೆಳಗ್ಗೆ 10 ರಿಂದ 12.30ರವರೆಗೆ ಪದವಿ ತರಗತಿಗಳಿಗೆ, ಏಪ್ರಿಲ್‌ 21ರಂದು ಭಾನುವಾರ ಬೆಳಗ್ಗೆ 10 ರಿಂದ 12.30ರವರೆಗೆ ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ. ಮೇ ಮೂರನೇ ವಾರದಲ್ಲಿ ಫ‌ಲಿತಾಂಶ ಪ್ರಕಟವಾಗಲಿದ್ದು ಜೂನ್‌ 14 ರಿಂದ 24ರವರೆಗೆ ಕೌನ್ಸೆಲಿಂಗ್‌ ನಡೆಯಲಿದೆ. ಅರ್ಜಿ ಶುಲ್ಕ ರೂ. 500 + ಅಂಚೆ ವೆಚ್ಚ. 
          ಐಸಿಎಆರ್‌ಗೆ ಸೇರಿದ ವಿಶ್ವವಿದ್ಯಾಲಯಗಳಲ್ಲಿ ಶೇ. 100ರಷ್ಟು, ವಿವಿಧ ರಾಜ್ಯಗಳ ಕೃಷಿ ವಿಶ್ವವಿದ್ಯಾಲಯಗಳಲ್ಲಿ ಶೇ. 15ರಷ್ಟು ಪದವಿ ಹಾಗೂ ಶೇ. 25ರಷ್ಟು ಸ್ನಾತಕೋತ್ತರ ತರಗತಿಗಳ ಸೀಟುಗಳ ಆಯ್ಕೆಗಾಗಿ ನಡೆಯುವ ಲಿಖೀತ ಪರೀಕ್ಷೆ, ಸಂದರ್ಶನ ಮತ್ತು ಕೌನ್ಸೆಲಿಂಗ್‌ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. 2013ರ ಮಾರ್ಚ್‌ನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಗೆ ಕುಳಿತುಕೊಳ್ಳುವ ವಿದ್ಯಾರ್ಥಿಗಳೂ ಕೂಡ ಇದನ್ನು ತೆಗೆದುಕೊಳ್ಳಬಹುದು. 
          ಕೃಷಿ, ತೋಟಗಾರಿಕೆ, ಕೃಷಿ ಇಂಜಿನಿಯರಿಂಗ್‌, ಡೈರಿ ಟೆಕ್ನಾಲಜಿ, ಬಯೋಟೆಕ್ನಾಲಜಿ, ಅರಣ್ಯಶಾಸ್ತ್ರ, ಆಹಾರ ವಿಜ್ಞಾನ, ಮೀನು ಮತ್ತು ನೀರಿನ ಜೀವಿಗಳ ವಿಜ್ಞಾನ, ಗೃಹ ವಿಜ್ಞಾನ, ರೇಷ್ಮೆ ಕೃಷಿ, ಕೃಷಿ ಉತ್ಪನ್ನ ಮಾರಾಟ, ಬ್ಯಾಂಕಿಂಗ್‌ ಮತ್ತು ಸಹಕಾರ, ವಾಣಿಜ್ಯ ಕೃಷಿ ಮತ್ತು ವ್ಯವಹಾರ ನಿರ್ವಹಣೆ ಇತ್ಯಾದಿ ವಿಷಯಗಳಲ್ಲಿ ಬಿಎಸ್ಸಿ, ಬಿಟೆಕ್‌, ಬಿಇಎಸ್ಸಿ ಪದವಿ ಮತ್ತು ಸ್ನಾತಕೋತ್ತರ ಪದವಿಗಳ ಸೀಟುಗಳಿಗಾಗಿ ರಾಷ್ಟ್ರಮಟ್ಟದ ಈ ಪರೀಕ್ಷೆಯಲ್ಲಿ ಆಯ್ಕೆ ಪರೀಕ್ಷೆ ನಡೆಯುತ್ತಿದೆ. ಕರ್ನಾಟಕದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯದಲ್ಲಿ 64 ಕೃಷಿ + 8 ಅರಣ್ಯಶಾಸ್ತ್ರ + 8 ರೇಷ್ಮೆ ಕೃಷಿ, ಧಾರವಾಡದಲ್ಲಿ 62 ಕೃಷಿ + 6 ಅರಣ್ಯಶಾಸ್ತ್ರ + 15 ಗೃಹವಿಜ್ಞಾನ, ರಾಯಚೂರಿನಲ್ಲಿ 30 ಮತ್ತು ಬಿಜಾಪುರದ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ 68, ಬೀದರ್‌ನ ಕರ್ನಾಟಕ ವೆಟರ್ನರಿ, ಅನಿಮಲ್‌ ಆ್ಯಂಡ್‌ ಫಿಷರೀಸ್‌ ಸೈನ್ಸಸ್‌ ಯೂನಿವರ್ಸಿಟಿಯಲ್ಲಿನ 6 ಫಿಶರೀಸ್‌+ 5 ಡೈರಿ ಟೆಕ್ನಾಲಜಿ ಪದವಿ ವ್ಯಾಸಂಗದ ಸೀಟುಗಳ ಆಯ್ಕೆಗಾಗಿ ಈ ಪರೀಕ್ಷೆ ನಡೆಯುತ್ತಿದೆ. ಸ್ನಾತಕೋತ್ತರ ಪದವಿ ಮತ್ತು ಸಂಶೋಧನೆಗೆ ಪ್ರತ್ಯೇಕ ಸೀಟುಗಳಿವೆ.