Sunday, March 24, 2013

Belagere Krishna Shastri in News today












ಸಮಾಜಕ್ಕಾಗಿ ಬದುಕು ಮುಡಿಪಾಗಿಟ್ಟ ಕ್ಷೀರಸಾಗರ

ಚಳ್ಳಕೆರೆ: ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಮನ್ನಣೆ ಗಳಿಸಿದ ಕೆಲವೇ ಸಾಹಿತಿಗಳಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಯವರು ಒಬ್ಬರಾಗಿದ್ದಾರೆ. ತಾಲೂಕಿನ ಬೆಳಗೆರೆ ಗ್ರಾಮದಲ್ಲಿ ಜನಿಸಿದ ಇವರು ಸಾಹಿತ್ಯವನ್ನೇ ಆಧಾರವಾಗಿಟ್ಟುಕೊಂಡು ತಮ್ಮ ಕೃಷಿ ಬದುಕಿನೊಂದಿಗೆ ಶಿಕ್ಷಣ ಕ್ಷೇತ್ರವನ್ನು ಸಹ ಅಭಿವೃದ್ಧಿ ಪಡಿಸುವಲ್ಲಿ ಶ್ರಮಿಸಿದವರು.ವಿದ್ವಾಂಸರು ಆಶು ಕವಿಗಳಾದ ಚಂದ್ರಶೇಖರಶಾಸ್ತ್ರಿ, ಅನ್ನಪೂರ್ಣಮ್ಮ ದಂಪತಿ ಪುತ್ರರಾದ ಇವರು ಹಿರಿಯೂರಿನ ಮೋಕ್ಷಗೊಂಡಂ ಕುಟುಂಬ ವರ್ಗದ ಪದ್ಮಾವತಿ ಎಂಬುವರನ್ನು ವಿವಾಹವಾಗಿದ್ದರು. ಇವರ ಅಣ್ಣ ಸೀತಾರಾಮಶಾಸ್ತ್ರಿ ಗಣಿತ ಪ್ರಾಧ್ಯಾಪಕ ಹಾಗೂ ನಾಟಕಕಾರರಾಗಿದ್ದರು.ಕ್ಷೀರಸಾಗರ: ಕ್ಷೀರಸಾಗರ ಎಂಬ ಕಾವ್ಯ ನಾಮದಲ್ಲಿ ಇವರ ಅನೇಕ ಸಾಹಿತ್ಯ ಕೃತಿಗಳು ಪ್ರಕಟಗೊಂಡಿವೆ. ಅಕ್ಕ ಜಾನಕಮ್ಮ ಕವಯತ್ರಿಯಾತ್ರಿ, ತಂಗಿ ಪಾರ್ವತಮ್ಮ ಸಹ ಕಥೆಗಾರ್ತಿಯಾಗಿದ್ದರು.  ಬೆಂಗಳೂರಿನಲ್ಲಿ ಬಿ.ಎಡ್. ಮುಗಿಸಿದ ಇವರು ಪೋಷಕರ ಒತ್ತಾಯಕ್ಕೆ ಮಣಿದು ಶಿಕ್ಷಕ ವೃತ್ತಿಯನ್ನು ಆಯ್ದುಕೊಂಡರು. ಇದಕ್ಕೂ ಮುನ್ನ ಬೆಂಗಳೂರಿನ ಎಚ್.ಎ.ಎಲ್.ನಲ್ಲಿ ಸ್ವಲ್ಪ ಕಾಲ ಕಾರ್ಮಿಕರಾಗಿ ಸೇವೆ ಸಲ್ಲಿಸಿದ್ದರು.ಶಿಕ್ಷಕರಾಗಿ ಸೇವೆ: ತಾಲೂಕಿನ ಹೆಗ್ಗೆರೆ, ಮೀರಾಸಾಬಿಹಳ್ಳಿ, ಚಿತ್ರದುರ್ಗ, ದೇವನೂರು ಮತ್ತು ಕಳಸದಲ್ಲಿ ಶಿಕ್ಷಕರಾಗಿ ಅವರು ಸೇವೆ ಸಲ್ಲಿಸಿದ್ದರು. ಹೆಗ್ಗೆರೆಯಲ್ಲಿ ತಮ್ಮ ವೃತ್ತಿಯ ಜೊತೆಗೆ ಗ್ರಾಮೀಣ ಜನರನ್ನು ಜಾಗೃತಗೊಳಿಸಿ ರಂಗ ಮಂದಿರ, ಶಿವಾಲಯ, ಶಾಲಾ ಕಟ್ಟಡ ನಿರ್ಮಾಣ ಹಾಗೂ ಮುಖ್ಯರಸ್ತೆಯಿಂದ ಗ್ರಾಮದವರೆಗೆ ರಸ್ತೆಯನ್ನು ಸಹ ನಿರ್ಮಿಸಿಕೊಡುವಲ್ಲಿ ಶ್ರಮಿಸಿದರು.ಮರು ಮದುವೆಗೆ ನಕಾರ: ಮದುವೆಯಾದ ನಂತರ ಹೆಂಡತಿ ಪದ್ಮಾವತಿ ಗಂಡು ಮಗುವಿಗೆ ಜನ್ಮ ನೀಡಿ ಕೆಲ ಸಮಯದ ನಂತರ ಮೃತಪಟ್ಟರು. ಮಗುವೂ ಸಹ ಮರಣ ಹೊಂದಿದ ಹಿನ್ನೆಲೆಯಲ್ಲಿ ನೊಂದ ಶಾಸ್ತ್ರಿಗಳು ಕೆಲ ಸಮಯ ನೋವಿನಿಂದಲೇ ಕಾಲ ಕಳೆದರು. ಮನೆಯಲ್ಲಿ ಮರು ಮದುವೆಗೆ ಒತ್ತಾಯ ಹೆಚ್ಚಾದಾಗ ತಮ್ಮ ಹಲ್ಲುಗಳನ್ನು ಕೀಳಿಸಿ ನಾನೀಗ ಮುದುಕನಾಗಿದ್ದು, ಯಾರು ಹೆಣ್ಣು ಕೊಡುತ್ತಾರೆಂದು ಗೇಲಿ ಮಾಡಿದ ಶಾಸ್ತ್ರಿಗಳು ಹಿಮಾಲಯಕ್ಕೆ ತೆರಳಿ ಅಲ್ಲಿನ ಮುಕಂದೂರು ಸ್ವಾಮಿಗಳ ಆಶ್ರಮದಲ್ಲಿ ಆಶ್ರಯ ಪಡೆದು ತತ್ವ ಜ್ಞಾನದ ಬಗ್ಗೆ ಅಧ್ಯಯನ ನಡೆಸಿದರು.  ನಂತರದ ದಿನಗಳಲ್ಲಿ ಗ್ರಾಮೀಣ ಭಾಗದ ಪ್ರದೇಶದಲ್ಲಿ ಗ್ರಾಮೀಣ ಮಕ್ಕಳು ಶಿಕ್ಷಣ ಪಡೆಯಲು ಸಾಧ್ಯವಿಲ್ಲದ ವಾತಾವರಣ ಉಂಟಾಗಿ ಉತ್ತಮ ಶಿಕ್ಷಣ ಗ್ರಾಮದಿಂದ ಬಹುದೂರ ಹೋಗುವ ಸ್ಥಿತಿಯನ್ನು ಗಮನಿಸಿ ತಮ್ಮದೇ ಆದ ಜಮೀನಿನಲ್ಲಿ ಶಾಲೆಯನ್ನು ಕಟ್ಟಲು ಪ್ರಾರಂಭಿಸಿದರು.  ಸಂಶೋಧಕರಿಗೆ ನೆರವು: ಪ್ರಾರಂಭದಲ್ಲಿ ಪ್ರಾಥಮಿಕ ಶಾಲೆಯನ್ನು ನಿರ್ಮಿಸಿ ಕಾಲ ಕ್ರಮೇಣ ಮಾಧ್ಯಮಿಕ, ಪ್ರೌಢಶಾಲೆ ಹಾಗೂ ಈಗ ಪದವಿ ಪೂರ್ವ ಕಾಲೇಜನ್ನು ಪ್ರಾರಂಭಿಸಲಾಗಿದೆ. ಶಾಸ್ತ್ರಿಯವರು ಸಂಶೋಧಕರಿಗೆ ನೆರವನ್ನು ನೀಡುವುದರಲ್ಲಿ ವಿಶೇಷ ಆಸಕ್ತಿಯನ್ನು ವಹಿಸಿದ್ದರು. ಜಾನಪದ ಜಂಗಮ ಎಸ್.ಕೆ. ಕರೀಂಖಾನ್, ತಾಲೂಕಿನ ಜಾನಪದ ಸಿರಿಯಾದ ಸಿರಿಯಜ್ಜಿಯವರನ್ನು ಜನತೆಗೆ ಪರಿಚಯಿಸಿದ ಕೀರ್ತಿ ಕೃಷ್ಣಶಾಸ್ತ್ರಿಯವರದು.ಪ್ರೌಢಶಾಲೆ ವಿದ್ಯಾರ್ಥಿಯಾಗಿದ್ದಾಗಲೇ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದವರು. 1926 ರಲ್ಲಿ ಮೈಸೂರು ಸಂಸ್ಥಾನದ ಅತಿಥಿಯಾಗಿ ಆಗಮಿಸಿದ್ದ ಮಹಾತ್ಮಾ ಗಾಂಧೀಜಿವರನ್ನು ಭೇಟಿ ಮಾಡಿ ಅವರೊಂದಿಗೆ ಕಾರ್ಯ ನಿರ್ವಹಿಸಿದವರು. ಆಚಾರ್ಯ ವಿನೋಬಾ ಭಾವೆಯವರ ಭೂದಾನ ಚಳುವಳಿಯಲ್ಲಿ ಭಾಗವಹಿಸಿದ್ದರು.ಕವನ ಸಂಕಲನಗಳು:  ಯೇಗ್ದಾಗೆಲ್ಲಾ ಐತೆ, ಹಳ್ಳಿ ಚಿತ್ರ, ಹಳ್ಳಿ ಮೇಷ್ಟ್ರು, ತುಂಬಿ ಕವನ ಸಂಕಲನ, ಮರೆಯಲಾದೀತೆ, ಸಾಹಿತಿಗಳ ಸ್ಮೃತಿ ಮುಂತಾದ ಲೇಖನಗಳು ಕೃತಿಯ ರೂಪದಲ್ಲಿ ಪ್ರಕಟಗೊಂಡಿರುತ್ತವೆ. ಇನ್ನೂ ಹಲವಾರು ನಾಟಕಗಳು ಪ್ರಕಟಣೆಯನ್ನು ಕಾಣಬೇಕಾಗಿದೆ.- ಕೆ.ಎಸ್. ರಾಘವೇಂದ್ರ
 
Ksheera Sagara is the Pen Name of Sri Belagere Seetharama Shastri. 

No comments: