Friday, April 29, 2011
Tuesday, April 19, 2011
Monday, April 18, 2011
Kanaja - A wonderful Site in Kannada - Article in Prajavani 18 April 2011
ಕಣಜ:ಅಂಧರಿಗೂ ಅಮೂಲ್ಯ ಮಾಹಿತಿ
ಬೆಂಗಳೂರು: ವಿಜ್ಞಾನ, ತಂತ್ರಜ್ಞಾನ ವಿಷಯಗಳ ಕುರಿತು ಕನ್ನಡದಲ್ಲಿ ಮಾಹಿತಿ ಒದಗಿಸುವ ಉದ್ದೇಶದಿಂದ ಕರ್ನಾಟಕ ಜ್ಞಾನ ಆಯೋಗ ಆರಂಭಿಸಿದ್ದ ‘ಕಣಜ’ (http://kanaja.in/) ವೆಬ್ ಪೋರ್ಟಲ್‌ನಿಂದ ಈಗ ಅಂಧರೂ ಮಾಹಿತಿ ಪಡೆದುಕೊಳ್ಳಲು ಸಾಧ್ಯ!
ಕೃಷಿ, ವಿಜ್ಞಾನ, ಇತಿಹಾಸ, ಸಾಹಿತ್ಯ ಮುಂತಾದ ಅನೇಕ ಜ್ಞಾನಶಾಖೆಗಳ ಕುರಿತು ಪ್ರಸ್ತುತ 9 ಲಕ್ಷ ಪದಗಳಿಗೂ ಹೆಚ್ಚಿನ ಮಾಹಿತಿ ಹೊಂದಿರುವ ‘ಕಣಜ’ದ ಎಲ್ಲ ಲೇಖನಗಳನ್ನು ‘ಇ-ಸ್ಪೀಕ್’ ಎಂಬ ವಿಶೇಷ ತಂತ್ರಾಂಶವನ್ನು ಅಳವಡಿಸುವುದರ ಮೂಲಕ ಅಂಧರಿಗೆ ಮಾಹಿತಿ ಪಡೆಯಲು ಅನುಕೂಲವಾಗುವಂತೆ ರೂಪಿಸಲಾಗಿದೆ. ತಮಗೆ ಬೇಕಾದ ಲೇಖನವನ್ನು ತೆರೆದು ಕಂಪ್ಯೂಟರ್ ಪರದೆಯ ಎಡಭಾಗದಲ್ಲಿ ಕಾಣುವ ‘ಕಣಜವನ್ನು ಕೇಳಿರಿ’ ಗುಂಡಿಯನ್ನು ಕ್ಲಿಕ್ ಮಾಡಿದರೆ ಲೇಖನದಲ್ಲಿರುವ ಮಾಹಿತಿಯನ್ನು ಕಂಪ್ಯೂಟರ್ ತಾನಾಗಿಯೇ ಓದಲಾರಂಭಿಸುತ್ತದೆ!
ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಕರ್ನಾಟಕ ಜ್ಞಾನ ಆಯೋಗದ ಸದಸ್ಯ ಕಾರ್ಯದರ್ಶಿ ಪ್ರೊ.ಎಂ.ಕೆ. ಶ್ರೀಧರ್, ‘2009ರ ಡಿಸೆಂಬರ್ ತಿಂಗಳಿನಲ್ಲಿ ನಾವು ಈ ವೆಬ್ ಪೋರ್ಟಲ್‌ಅನ್ನು ಆರಂಭಿಸಿದ್ದಾಗಲೇ ಈ ಆಲೋಚನೆ ಇತ್ತು. ಇತ್ತೀಚೆಗೆ ಈ ಪೋರ್ಟಲ್ ಅನ್ನು ಪುನರ್ ವಿನ್ಯಾಸ ಮಾಡಿದಾಗ ಅಂಧರಿಗೂ ಅನುಕೂಲವಾಗುವಂತೆ ರೂಪಿಸಿದ್ದೇವೆ, ಯುಗಾ ದಿಯ (ಏಪ್ರಿಲ್ 4) ದಿನದಿಂದಲೇ ಈ ಸೌಲಭ್ಯ ದೊರೆಯುತ್ತಿದೆ’ ಎಂದರು.
‘ಕಣಜ’ದಲ್ಲಿರುವ ಮಾಹಿತಿಯನ್ನು ಕೇಳಲು ‘ಇ-ಸ್ಪೀಕ್’ ಹೆಸರಿನ ಉಚಿತ ತಂತ್ರಾಂಶವನ್ನು ಕಂಪ್ಯೂಟರ್‌ಗೆ ಅನುಸ್ಥಾಪಿಸಬೇಕು. ಈ ತಂತ್ರಾಂಶ ‘ಕಣಜ’ದಲ್ಲಿ ಲಭ್ಯವಿದೆ, ವಿಂಡೋಸ್ ಮತ್ತು ಲಿನಕ್ಸ್ ಆಪರೇಟಿಂಗ್ ಸಿಸ್ಟಂಗಳಿಗೆ ಸೂಕ್ತವಾಗುವಂತೆ ಇದನ್ನು ರೂಪಿಸಲಾಗಿದೆ ಎಂದು ಶ್ರೀಧರ್ ಮಾಹಿತಿ ನೀಡಿದರು.
ಶ್ರೀಧರ್ ಕೊಡುಗೆ: ‘ಇಂಗ್ಲಿಷ್‌ನಲ್ಲಿರುವ ಅಕ್ಷರಗಳನ್ನು ಕೇಳಲು ಸಹಾಯ ಮಾಡುವ ಈ ತಂತ್ರಾಂಶವನ್ನು ಕನ್ನಡೀಕರಿಸಿದವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಅಂಧ ಸಾಫ್ಟ್‌ವೇರ್ ತಂತ್ರಜ್ಞ ಶ್ರೀಧರ್ ಎನ್ನುವವರು’ ಎಂದು ‘ಕಣಜ’ದ ಯೋಜನೆಯ ಸಲಹಾ ಸಮನ್ವಯಕಾರ ಬೇಳೂರು ಸುದರ್ಶನ ತಿಳಿಸಿದರು. ‘ಕಣಜ’ ಯೋಜನೆಗೆ ತಾಂತ್ರಿಕ ನೆರವು ನೀಡುತ್ತಿರುವುದು ಬೆಂಗಳೂರಿನ ಇಂಟರ್‌ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಇನ್‌ಫಾರ್ಮೇಷನ್ ಟೆಕ್ನಾಲಜಿ.
ಸಹಭಾಗಿತ್ವ ಮಾದರಿ: ಪ್ರಸ್ತುತ ‘ಕಣಜ’ದಲ್ಲಿ ಸಾವಿರಕ್ಕೂ ಅಧಿಕ ವಿಷಯಗಳ ಮೇಲೆ ಲೇಖನಗಳಿವೆ. ಪ್ರತಿದಿನ ಹೊಸ ಮಾಹಿತಿಯನ್ನು ಸೇರಿಸುತ್ತಿದ್ದೇವೆ. ಸಹಭಾಗಿತ್ವದ ಮಾದರಿಯಲ್ಲಿ (ಓದುಗರಿಂದಲೂ ಲೇಖನಗಳನ್ನು ಪಡೆದು ಅದನ್ನು ತಜ್ಞರಿಂದ ಪರಿಶೀಲಿಸಿ ಪ್ರಕಟಿಸುವುದು) ಈ ಪೋರ್ಟಲ್‌ನ ಹೂರಣವನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶ್ರೀಧರ್ ತಿಳಿಸಿದರು.
ಇಂಗ್ಲಿಷ್ ಭಾಷೆಯಲ್ಲಿ ಲಭ್ಯವಿರುವ ವಿಶ್ವಪ್ರಸಿದ್ಧ ವಿಕಿಪೀಡಿಯಾ ವಿಶ್ವಕೋಶ ಕೂಡ ಸಹಭಾಗಿತ್ವದ ಮಾದರಿಯನ್ನು ಅಳವಡಿಸಿಕೊಂಡಿದೆ. ‘ಸಹಭಾಗಿತ್ವದ ಮಾದರಿಯಲ್ಲಿ ಕಣಜವನ್ನು ಅಭಿವೃದ್ಧಿಪಡಿಸುವ ಹಾದಿಯಲ್ಲಿ ಪ್ರತಿಯೊಂದು ಲೇಖನಗಳನ್ನು ಆಯಾ ಕ್ಷೇತ್ರಗಳ ತಜ್ಞರಿಂದ ಪರಿಶೀಲನೆಗೆ ಒಳಪಡಿಸಲಾಗುವುದು’ ಎಂದರು.
ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ಹಂಪಿ ಕನ್ನಡ ವಿಶ್ವವಿದ್ಯಾಲಯ, ಕಾಂತಾವರ ಕನ್ನಡ ಸಂಘ ಹಾಗೂ ಕನ್ನಡಕ್ಕಾಗಿ ಕೆಲಸ ಮಾಡುತ್ತಿರುವ ಇನ್ನಿತರ ಸಂಘ-ಸಂಸ್ಥೆಗಳು ತಮ್ಮಲ್ಲಿರುವ ಮಾಹಿತಿಯನ್ನು ಜ್ಞಾನ ಆಯೋಗದೊಂದಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡಿವೆ. ಮುಂದಿನ ಒಂದೆರಡು ತಿಂಗಳಿನಲ್ಲಿ ‘ಕಣಜ’ದ ಮಾಹಿತಿಕೋಶದಲ್ಲಿ 18 ಲಕ್ಷ ಪದಗಳಷ್ಟು ಮಾಹಿತಿ ತುಂಬಿಕೊಳ್ಳಲಿದೆ, ವೆಬ್‌ಸೈಟ್‌ನಲ್ಲಿ 1.30 ಲಕ್ಷ ಲೇಖನಗಳನ್ನು ಪ್ರಕಟಿಸಬಹುದು ಎಂದರು.
ಲೇಖಕರ ಪೂರ್ವಾನುಮತಿ ಪಡೆದು ಮುಂದಿನ ದಿನಗಳಲ್ಲಿ ಕೆಲವು ಕನ್ನಡ ಪುಸ್ತಕಗಳನ್ನು ಡಿಜಿಟೈಸ್ ಮಾಡಿ ಅದನ್ನು ‘ಕಣಜ’ದಲ್ಲಿ ಲಭ್ಯವಾಗುವಂತೆ ಮಾಡಲಾಗುವುದು. ರಾಜ್ಯದ ಬೇರೆ ಬೇರೆ ಭಾಷೆಗಳಲ್ಲೂ (ತುಳು, ಕೊಂಕಣಿ ಇತ್ಯಾದಿ) ಮಾಹಿತಿ ದೊರೆಯುವಂತೆ ಮಾಡುವ ಯೋಚನೆಯೂ ಆಯೋಗದ ಮುಂದಿದೆ ಎಂದರು.
ಪ್ರೊ.ಜಿ. ವೆಂಕಟಸುಬ್ಬಯ್ಯವನರ ಇಂಗ್ಲಿಷ್-ಕನ್ನಡ ನಿಘಂಟು ಈಗಾಗಲೇ ಪೋರ್ಟಲ್‌ನಲ್ಲಿ ಲಭ್ಯವಿದೆ. ಇದರ ಜೊತೆಗೆ ಪರಿಸರ, ಜೀವವಿಜ್ಞಾನಕ್ಕೆ ಸಂಬಂಧಿಸಿದ ತಾಂತ್ರಿಕ ಪದಗಳ ಅರ್ಥವನ್ನು ಕನ್ನಡದಲ್ಲಿ ವಿವರಿಸುವ ನಿಘಂಟನ್ನು ‘ಕಣಜ’ಕ್ಕೆ ಸೇರಿಸಲಾಗುವುದು ಎಂದು ತಿಳಿಸಿದರು.
http://kanaja.in/

Tuesday, April 12, 2011
Saturday, April 9, 2011
Viswa Katha Kosha - A Compendium of Stories from All the World Over - Edited by Niranjana

Subscribe to:
Posts (Atom)