Showing posts with label prajavani. Show all posts
Showing posts with label prajavani. Show all posts

Wednesday, March 31, 2010

Youth Organisation in Bidar - Creative Foundation - Article in Prajavani - Yuvajana - 31-03-2010



ಪ್ರಜಾವಾಣಿ » ಯುವಜನ



ಬೀದರಿನಲ್ಲಿ ಶಿಕ್ಷಣ, ಅರ್ಥಿಕ, ಪರಿಸರ ಕ್ರಾಂತಿ

ಕ್ರಿಯೇಟಿವ್ ಫೌಂಡೇಶನ್ ಯುವಕರ ಸಾಧನೆ

ಬೇದ್ರೆ ಮಂಜುನಾಥ



ಬೀದರ್ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕ್ರಿಯೇಟಿವ್ ಫೌಂಡೇ ಶನ್ ಜಿಲ್ಲಾಡಳಿತದ ವತಿಯಿಂದ ರಚಿತವಾದ ವಿದ್ಯಾರ್ಥಿ ನಿಧಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ.


ಯುವಜನ ಶಕ್ತಿಯು ಮಂಥನ ಗೊಳ್ಳಲಿ, ನಾಳಿನ ಭಾರತ ಉಜ್ವಲ ವಾಗಲಿ... ಎಂಬ ಕವಿವಾಣಿ ಬೀದರಿನಲ್ಲಿ ಪ್ರತಿಧ್ವನಿಸಿದೆ. ಪ್ರತಿಭೆಯೇ ನಮ್ಮ ಮೂಲ ಆಸ್ತಿ ಎಂಬ ಮಂತ್ರ ಜಪಿಸಿದೆ.

ಸ್ಟುಡೆಂಟ್ ಸಕ್ಸಸ್ ಸರ್ವೀಸ್, ಸ್ಪರ್ಧಾ ತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಎಸ್.ಎಸ್.ಎಲ್.ಸಿ. ಅನು ತ್ತೀ ರ್ಣ ರಾದವರಿಗೆ ಪೂರಕ ಪರೀಕ್ಷೆ ಗಳಿಗೆ ಹಾಜರಾಗಿ ಪಾಸಾಗಲು ತರಬೇತಿ ಶಿಬಿರ, ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಚಿತ ಸಿ.ಇ.ಟಿ. ಕೋಚಿಂಗ್, ಪ್ರತಿ ಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಷ್ಯವೇತನ, ವಸತಿ, ಪುಸ್ತಕಗಳಿಗಾಗಿ ಸುಮಾರು 13 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಒದಗಿಸಿದ ಬೀದರ್‌ನ ಕ್ರಿಯೇಟಿವ್ ಫೌಂಡೇಶನ್ ರಾಜ್ಯದ ಇತರೆ ಯುವಜನ ಸಂಸ್ಥೆಗಳಿಗೆ ಮಾದರಿ ಯಾಗಿದೆ.

ಬೀದರ್ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕ್ರಿಯೇಟಿವ್ ಫೌಂಡೇ ಶನ್ ಜಿಲ್ಲಾಡಳಿತದ ವತಿಯಿಂದ ರಚಿತವಾದ ವಿದ್ಯಾರ್ಥಿ ನಿಧಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ.



ವಿದ್ಯಾರ್ಥಿ ಗಳು, ಚಿಂತಕರು, ಸ್ವಯಂ ಸೇವಕರು, ಶಿಕ್ಷಕರು ಒಟ್ಟುಗೂಡಿ ಜಿಲ್ಲೆಯ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ.

ಈ ಯುವಜನರ ಕಾರ್ಯಗಳಿಗೆ ಜಿಲ್ಲಾಡಳಿತವೂ ಮೆಚ್ಚುಗೆ ವ್ಯಕ್ತಪಡಿ ಸುತ್ತದೆ, ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ, ಸಂತಸ ವ್ಯಕ್ತಪಡಿ ಸಿದ್ದಾರೆ.

ಎಂಜಿನಿಯರಿಂಗ್ ಅಭ್ಯಾಸ ಮಾಡುವ ವೇಳೆಗೆ ಯುವಜನ ಸಂಸ್ಥೆ ಯೊಂದನ್ನು ಕಟ್ಟುವ ಕನಸುಕಂಡ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕನಸಿನ ಭಾರತ 2020 ಪರಿ ಕಲ್ಪನೆಯನ್ನು ಸಾಕಾರ ಗೊಳಿಸಲು ಎಸ್. ಆರ್. ಸಾಗರ್ ಗೆಳೆಯರ ಗುಂಪು ಸೇರಿಸಿದರು.

ಎಂ. ಟಂಕಸಾಲೆ, ಮಂಗಲಾ ಭಾಗವತ್, ಬಾಬು ರೋಂಡೆ, ಆರ್. ಕೆ. ಚಾರಿ, ಹಮೀದ್ ಖಾನ್, ಎನ್. ಶಿವರಾಜ್, ಪ್ರವೀಣ್ ವೈರಾಗಿ ಮೊದಲಾದವರು ತಮ್ಮ ಅಧ್ಯಯನದ ವೇಳೆಯಲ್ಲಿಯೇ ಸುತ್ತ ಲಿನ ವಿದ್ಯಾರ್ಥಿಗಳ ಕ್ಷೇಮಾ ಭಿವೃದ್ಧಿಯ ಬಗ್ಗೆಯೂ ಕಾಳಜಿ ವಹಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು.

ಪ್ರತಿಭೆಯೇ ನಮ್ಮ ಮೂಲ ಆಸ್ತಿ ಎಂಬ ಧ್ಯೇಯದೊಂದಿಗೆ ಪ್ರತಿಭಾ ಶೋಧನ ಯುವ ವೇದಿಕೆ ಕಟ್ಟಿ, ಅದರ ಆಶ್ರಯದಲ್ಲಿ 2006 ರವೇಳೆಗೆ ಕ್ರಿಯೇಟಿವ್ ಫೌಂಡೇಶನ್, ಪರಿಸರ ರಕ್ಷಣಾ ವೇದಿಕೆ, ಹಿರಿಯ ನಾಗರಿಕ ರಕ್ಷಣ ವೇದಿಕೆ, ಧಾರ್ಮಿಕ ವೇದಿಕೆ ಇತ್ಯಾದಿಗಳನ್ನು ಸ್ಥಾಪಿಸಿದರು.

ಪ್ರತಿಭಾ ಶೋಧನೆಯ ನಿಜವಾದ ಅರ್ಥ ದಲ್ಲಿ ಕಳೆದ ಐದು ವರ್ಷಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ತರಬೇತಿ, ನೆರವು ನೀಡಿದ್ದಾರೆ. ಮಾಜಿ ಮುಖ್ಯ ಮಂತ್ರಿ ಧರ್ಮಸಿಂಗ್, ಗುಲ್ಬರ್ಗಾ ವಿಶ್ವವಿದ್ಯಾಲ ಯದ ಕುಲಪತಿಗಳಾದ ಪ್ರೊ. ಬಿ.ಜಿ. ಮೂಲಿಮನಿ, ವಿವಿಧ ಸಂಘಸಂಸ್ಥೆಗಳ ಗಣ್ಯರು ಮತ್ತು ಅಧಿಕಾರಿಗಳು ಹಿಂದುಳಿದ ಜಿಲ್ಲೆ ಬೀದರ್‌ನಲ್ಲಿ ಚಟವಟಿಕೆ ಹಮ್ಮಿಕೊಂಡು ಯಶಸ್ಸುಗಳಿಸಿರುವ ಕ್ರಿಯೇಟಿವ್ ಫೌಂಡೇಶನ್ ಪದಾಧಿ ಕಾರಿಗಳಿಗೆ ಬೆನ್ನುತಟ್ಟಿ ಇನ್ನಷ್ಟು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಪ್ರೋತ್ಸಾಹಿ ಸಿದ್ದಾರೆ.

ಮನಸ್ಸಿದ್ದಲ್ಲಿ ಮಾರ್ಗ ತಾನೇ ವಿದ್ಯಾರ್ಥಿಗಳು ಒಂದೆಡೆ ಸೇರಿದರೆ ಏನೆಲ್ಲಾ ಸಾಧನೆ ಸಾಧ್ಯ ಎನ್ನುವುದನ್ನು ಎಸ್.ಆರ್. ಸಾಗರ್ ನಾಯಕತ್ವದ ಕ್ರಿಯೇಟಿವ್ ಫೌಂಡೇಶನ್‌ನ ಯುವಕರು ತೋರಿಸಿ ಕೊಟ್ಟಿದ್ದಾರೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಬೀದರ್ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಸುಮಾರು 4000 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆಯ ತರಬೇತಿ ನೀಡಿದ್ದಾರೆ.

ನಿಮ್ಮ ಊರು ಗಳಲಿಯ್ಲೂ ಇಂತಹ ವೇದಿಕೆ, ಸಂಸ್ಥೆ ಗಳು ಇರಬಹುದು. ಒಗ್ಗಟ್ಟಿ ನಿಂದ ಕೆಲಸ ಮಾಡಿದರೆ ಸಮಾಜಕ್ಕೆ ಉಪಯೋಗ ವಾಗುವುದರಲ್ಲಿ ಸಂದೇಹವೇ ಇಲ್ಲ.
ಮಾಹಿತಿಗೆ: 9242085544 / 8147116700
creativefoundation2020@gmail.com URL : http://creativefoundationbidar.blogspot.com

Monday, March 1, 2010

International Children's Day of Broadcasting 2010 - Article in Prajavani - Margadarshi Section - March 01, 2010


ಪ್ರಜಾವಾಣಿ » ಶಿಕ್ಷಣ ಪುರವಣಿ



ಮಕ್ಕಳ ಶೈಕ್ಷಣಿಕ ಅಗತ್ಯಗಳಿಗೆ ದನಿ

ಬಾನುಲಿ ಪ್ರಸಾರ ದಿನ

ಬೇದ್ರೆ ಮಂಜುನಾಥ



ಮಾರ್ಚ್ 7 - ಮಕ್ಕಳ ಅಂತರರಾಷ್ಟ್ರೀಯ ಬಾನುಲಿ ಪ್ರಸಾರ ದಿನ. ಮಕ್ಕಳಿಂದ - ಮಕ್ಕಳಿಗಾಗಿ - ಮಕ್ಕಳಿಗೋಸ್ಕರವಾಗಿ ಬಿತ್ತರವಾಗುವ ಈ ಕಾರ್ಯಕ್ರಮಗಳನ್ನು ಕೇಳುವುದಲ್ಲದೆ, ಶಿಕ್ಷಣ ಇಲಾಖೆ, ಸಾರ್ವಜನಿಕರು ಮತ್ತು ಸಂಘ ಸಂಸ್ಥೆಗಳು ಪಾಲ್ಗೊಂಡು ಮಕ್ಕಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ.


ಹಲೋ! ಇದು ಆಕಾಶವಾಣಿ. ಯಾರು ಮಾತಾಡ್ತಾ ಇರೋದು?
ಹಲೋ! ನಾನು ಸ್ಫೂರ್ತಿ.
ಎಷ್ಟನೇ ಕ್ಲಾಸ್ ಓದ್ತಾ ಇದ್ದೀಯ, ಸ್ಫೂರ್ತಿ? ಯಾವ ಸ್ಕೂಲು?
ಆರನೇ ಕ್ಲಾಸ್ ಓದ್ತಾ ಇದ್ದೀನಿ, ಕಾನ್ವೆಂಟ್ ಸ್ಕೂಲ್‌ನಲ್ಲಿ.
ಸ್ಫೂರ್ತಿ, ನಿನ್ನ ಹವ್ಯಾಸಗಳು ಏನು?
ಆಟ ಆಡೋದು, ಟಿ.ವಿ. ನೋಡೋದು, ಕಥೆ ಪುಸ್ತಕ ಓದೋದು, ಚಿತ್ರ ಬರಿಯೋದು, ಸ್ಟ್ಯಾಂಪ್ ಕಲೆಕ್ಟ್ ಮಾಡೋದು, ಸಂಗೀತಕ್ಕೆ ಹೋಗೋದು, ಹೀಗೆ ಎಲ್ಲ ಇಷ್ಟ ನಂಗೆ.
ಮುಂದೆ ಏನಾಗ್ಬೇಕು, ಏನು ಸಾಧಿಸ್ಬೇಕು ಅಂತ ಕನಸು ಇಟ್ಕೊಂಡಿದ್ದೀಯ, ಸ್ಫೂರ್ತಿ?
ಚೆನ್ನಾಗಿ ಓದಿ, ದೊಡ್ಡ ಆಫೀಸರ್ ಆಗ್ಬೇಕು ಅಂತಿದ್ದೀನಿ.
ಆಲ್ ದ ಬೆಸ್ಟ್, ಸ್ಫೂರ್ತಿ. ನಿನ್ನ ಕನಸು ನನಸಾಗಲಿ. ಇನ್ನು ನಮ್ಮ ಮುಂದಿನ ಕಾಲರ್ ಯಾರು ನೋಡೋಣ? ಹಲೋ! ಇದು ಆಕಾಶವಾಣಿ. ಯಾರು ಮಾತಾಡ್ತಾ ಇರೋದು?

ಪುಟಾಣಿಗಳಾದ ಸಮರ್ಥ, ತುಷಾರ್, ಅನುಪಮ ಮತ್ತು ಸುಪ್ರೀತ ಚಿತ್ರದುರ್ಗ ಆಕಾಶವಾಣಿ ಕೇಂದ್ರದಲ್ಲಿ ಕುಳಿತು ಅರ್ಧಗಂಟೆ ಕಾಲ ಸುಮಾರು 40 ಜನ ಮಕ್ಕಳೊಂದಿಗೆ ಕಳೆದ ವರ್ಷ ಅಂತಾರಾಷ್ಟ್ರೀಯ ಮಕ್ಕಳ ಬಾನುಲಿ ಪ್ರಸಾರ ದಿನದ ಸಂದರ್ಭದಲ್ಲಿ ಮಕ್ಕಳೇ ನಡೆಸಿಕೊಟ್ಟ ನೇರ ಫೋನ್-ಇನ್ ಕಾರ್ಯಕ್ರಮದ ತುಣುಕು ಇದು.

ಮಕ್ಕಳಿಂದ-ಮಕ್ಕಳಿಗಾಗಿ- ಮಕ್ಕಳಿಗೋಸ್ಕರ, ಮಕ್ಕಳ ದನಿಯನ್ನು ಸಾರ್ವಜನಿಕರಿಗೆ ಕೇಳಿಸಲೋಸುಗ ವಿಶ್ವಸಂಸ್ಥೆಯ ಮಕ್ಕಳ ನಿಧಿ ಮತ್ತು ಇಂಟರ್‌ನ್ಯಾಷನಲ್ ಅಕಾಡೆಮಿ ಆಫ್ ಟೆಲಿವಿಷನ್ ಆರ್ಟ್ಸ್ ಅಂಡ್ ಸೈನ್ಸಸ್ ಸಹಯೋಗದಲ್ಲಿ ಪ್ರತಿವರ್ಷ ಡಿಸೆಂಬರ್ ಎರಡನೇ ಭಾನುವಾರದಂದು ಮಕ್ಕಳ ಅಂತಾರಾಷ್ಟ್ರೀಯ ಬಾನುಲಿ ಪ್ರಸಾರ ದಿನವನ್ನು ಆಚರಿಸಲಾಗುತ್ತಿತ್ತು. 2008 ರ ನವೆಂಬರ್‌ನಲ್ಲಿ ವಿಶ್ವಸಂಸ್ಥೆಯ ಮಕ್ಕಳ ನಿಧಿ ತೆಗೆದುಕೊಂಡ ತೀರ್ಮಾನದ ಅನ್ವಯ ಇನ್ನು ಮುಂದೆ ಪ್ರತಿ ವರ್ಷ ಮಾರ್ಚ್ ಮೊದಲನೇ ಭಾನುವಾರದಂದು ಈ ದಿನವನ್ನು ಆಚರಿಸಲಾಗುತ್ತದೆ. ಮುಂದಿನ ಬಾನುಲಿ ಪ್ರಸಾರ ದಿನ ಇದೇ ಮಾರ್ಚ್ 7, 2010 ರಂದು ಆಚರಿಸಲು ಸಿದ್ಧತೆ ನಡೆದು ಎಲ್ಲಾ ಹಕ್ಕುಗಳು ಎಲ್ಲಾ ಮಕ್ಕಳು (ಆಲ್ ರೈಟ್ಸ್ ಆಲ್ ಚಿಲ್ಡ್ರನ್) ಎಂಬ ಘೋಷವಾಕ್ಯವನ್ನು ನೀಡಲಾಗಿದೆ. ಕಳೆದ ವರ್ಷದ ಘೋಷವಾಕ್ಯ ’ಮಕ್ಕಳಿಗಾಗಿ ಒಂದಾಗಿ-ಪುಟಾಣಿಗಳ ದನಿ ಕೇಳಿ’ ಆಗಿತ್ತು. ವಿಶ್ವದ ಎಲ್ಲೆಡೆ ಮಕ್ಕಳ ದನಿ ಕೇಳಿಸಲು ಬಾನುಲಿ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.


ಪ್ರತಿ ಮಗುವಿಗೂ ತನ್ನ ಅಭಿಪ್ರಾಯ ಅನಿಸಿಕೆಗಳನ್ನು ವ್ಯಕ್ತಪಡಿಸುವ ಹಕ್ಕು ಇದೆ ಎಂಬ ಮಕ್ಕಳ ಹಕ್ಕುಗಳ 12ನೇ ವಿಧಿಯ ಅನ್ವಯ 1991 ರ ಡಿಸೆಂಬರ್ 08 ರಂದು (ಎರಡನೇ ಭಾನುವಾರ) ಆರಂಭಗೊಂಡ ಈ ಬಾನುಲಿ ಪ್ರಸಾರ ದಿನಾಚರಣೆ ಇದುವರೆಗೆ ಅತ್ಯಂತ ಯಶಸ್ವಿಯಾಗಿ ನಡೆದುಕೊಂಡು ಬಂದಿದ್ದು ವಿಶ್ವದ 185ಕ್ಕೂ ಹೆಚ್ಚು ಸದಸ್ಯರಾಷ್ಟ್ರಗಳ 3000ಕ್ಕೂ ಹೆಚ್ಚು ಬಾನುಲಿ ಹಾಗೂ ಟಿ.ವಿ. ಪ್ರಸಾರ ಕೇಂದ್ರಗಳು ಈ ದಿನದಂದು ಮಕ್ಕಳ ಅಭಿಪ್ರಾಯಗಳನ್ನು ಬಿತ್ತರಿಸುತ್ತಿವೆ. (ಮಾಹಿತಿಗೆ ನೋಡಿ : www.unicef.org/videoaudio/)

ಭಾರತೀಯ ಪ್ರಸಾರ ಸಂಸ್ಥೆ - ಪ್ರಸಾರ ಭಾರತಿ - ತನ್ನ 250ಕ್ಕೂ ಹೆಚ್ಚು ಬಾನುಲಿ ಕೇಂದ್ರಗಳು ಮತ್ತು ದೇಶದಾದ್ಯಂತ ಹರಡಿರುವ ದೂರದರ್ಶನ ಜಾಲದ ಮೂಲಕ ಮಕ್ಕಳಿಗಾಗಿ ಅನೇಕ ಕಾರ್ಯಕ್ರಮಗಳನ್ನು ಬಿತ್ತರಿಸುತ್ತಿದ್ದು ಪ್ರತಿವರ್ಷವೂ ಮಕ್ಕಳ ಅಂತಾರಾಷ್ಟ್ರೀಯ ಬಾನುಲಿ ಪ್ರಸಾರ ದಿನದಂದು ಮಕ್ಕಳಿಂದಲೇ ಹತ್ತಾರು ವಿಶೇಷ ಕಾರ್ಯಕ್ರಮಗಳನ್ನು ಪ್ರಸಾರಮಾಡುತ್ತಿದೆ. ಖಾಸಗಿ ವಾಹಿನಿಗಳೂ ಕೂಡ ಈ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ.



Welcome to the Wonderful World of Languges