Saturday, May 28, 2016
Monday, May 23, 2016
Income Tax Returns - Article in Vijayavani Vittavani 23 May 2016
Income Tax Returns - Article in Vijayavani Vittavani 23 May 2016
http://vijayavani.net/?p=1782744&number=20160523072157
ಐಟಿ ರಿಟರ್ನ್ಸ್ ಸಲ್ಲಿಕೆಗೆ ಐದೇ ನಿಮಿಷ - ಬೇದ್ರೆ ಮಂಜುನಾಥ
ವಿಜಯವಾಣಿ ನ್ಯೂಸ್ · MAY 23, 2016
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವ ಸಮಯ ಇನ್ನೇನು ಹತ್ತಿರಬಂತು. ಫಾರಂ 16 ಪಡೆದುಕೊಂಡು ಆನ್ಲೈನ್ ಮೂಲಕ ಐಟಿ ರಿಟರ್ನ್ಸ್ ಸಲ್ಲಿಕೆ ಮಾಡಿ ಎಂಬ ಜಾಹೀರಾತು ಪ್ರಚಾರವನ್ನೂ ಆದಾಯ ತೆರಿಗೆ ಇಲಾಖೆ ಇನ್ನೇನು ಆರಂಭಿಸಲಿದೆ. ಇದೇನು ತಲೆನೋವಿನ ಕೆಲಸವಲ್ಲ. ಐದೇ ಐದು ನಿಮಿಷದಲ್ಲಿ ನೀವಿದನ್ನು ಮಾಡಿಬಿಡಬಹುದು.
ಇದೀಗ ಆನ್ಲೈನ್ನಲ್ಲಿ ಆದಾಯ ತೆರಿಗೆಯ ರಿಟರ್ನ್ಸ್ ಸಲ್ಲಿಸಲು ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ ತನ್ನ ಕಿಟಕಿಯನ್ನು ತೆರೆದಿಟ್ಟಿದೆ. ಜುಲೈ ಕೊನೆಯವರೆಗೆ ಈ ಸೌಲಭ್ಯ ಇರುವುದಾದರೂ ಅಲ್ಲಿಯವರೆಗೆ ಕಾಯುವುದೇಕೆ? ಕಳೆದ ವರ್ಷದ ಆದಾಯಕ್ಕೆ ಸಂಬಂಧಿಸಿದ ಫಾರಂ-16 ದಾಖಲೆ ಈಗ ತಾನೇ ನಿಮ್ಮ ಕೈಸೇರಿದೆ ಅಲ್ಲವೇ? ಇವತ್ತೇ ತುಂಬಬಹುದಲ್ಲ! ಆದಾಯ ತೆರಿಗೆಗೆ ಸಂಬಂಧಿಸಿದ ಐ.ಟಿ.ರಿಟರ್ನ್ಸ್ ಸಲ್ಲಿಸುವ ತ್ವರಿತ ಅವಕಾಶ ಇಲ್ಲಿದೆ!
ಆದಾಯ ತೆರಿಗೆ ಇಲಾಖೆ ಕ್ವಿಕ್ ಇ-ಫೈಲ್ ಐ.ಟಿ.ಆರ್. (Quick e-File ITR) ಎಂಬ ಅಂತರ್ಜಾಲ ಸೌಲಭ್ಯ ಬಳಸಿ, ಥಟ್ ಅಂತ ಸಲ್ಲಿಸಬಹುದು. ಆದಾಯ ತೆರಿಗೆ ಇ-ಫೈಲಿಂಗ್ ಜಾಲತಾಣದಲ್ಲಿ (https://incometaxindiaefiling.gov.in/) ನಿಮ್ಮ ಪ್ಯಾನ್ ಸಂಖ್ಯೆ, ನಮೂದಿಸಿ ನೋಂದಾಯಿಸಿಕೊಂಡು ನಿಮ್ಮ ಖಾತೆಗೆ ಲಾಗಿನ್ ಆದರೆ ಸಾಕು.
ನಿಮ್ಮ ಹೆಸರು, ವಿಳಾಸ ಮೊದಲಾದ ವೈಯಕ್ತಿಕ ವಿವರಗಳೆಲ್ಲ ಅಲ್ಲಿ ಸಿಗುತ್ತವೆ. ಅಗತ್ಯವಿದ್ದರೆ ವಿಳಾಸವನ್ನು ಬದಲಾಯಿಸುವ ಅವಕಾಶ ಕೂಡ ಇದೆ. ಜೊತೆಗೆ ಕಳೆದ ವರ್ಷ ಮೂಲ ವೇತನದಲ್ಲಿ ಕಡಿತ ಮಾಡಿದ ತೆರಿಗೆಯ ವಿವರಗಳೂ ಅಲ್ಲಿರುತ್ತವೆ. ವಾರ್ಷಿಕ ಆದಾಯ, ತೆರಿಗೆಗೆ ಒಳಪಡುವ ಆದಾಯ, ತೆರಿಗೆ ಪಾವತಿ ವಿವರ ಇಷ್ಟೇ ವಿವರಗಳನ್ನು ನಿಗದಿತ ಕಿಟಕಿಗಳಲ್ಲಿ ತುಂಬಿದರೆ ಸಾಕು ಎರಡೇ ನಿಮಿಷಗಳಲ್ಲಿ ನಿಮ್ಮ ಸಲ್ಲಿಕೆ ತಲುಪಿ ಸೂಕ್ತ ರಶೀದಿಯೂ ದೊರೆಯುತ್ತದೆ. ಈ ಬಾರಿ ಆಧಾರ್ ಸಂಖ್ಯೆ ಮತ್ತು ಬ್ಯಾಂಕ್ ಅಕೌಂಟ್ ಎಷ್ಟು ಹೊಂದಿದ್ದೀರಿ ಎಂಬ ಎರಡು ಅಂಶಗಳು ಸೇರ್ಪಡೆಯಾಗಿವೆ.
ಮತ್ತೊಂದು ವಿಧಾನ
ಆದಾಯ ತೆರಿಗೆ ಇಲಾಖೆಯ https://incometaxindiaefiling.gov.in/ ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಅದರಲ್ಲಿ ನೀಡಲಾಗಿರುವ ಇ-ಫೈಲಿಂಗ್ ಕೊಂಡಿಯನ್ನು ಕ್ಲಿಕ್ ಮಾಡಿ. ಅಲ್ಲಿ ಮೂಡುವ ತೆರೆಯ ಬಲಬದಿಯಲ್ಲಿ ನೋಂದಣಿಯ ಕೊಂಡಿ ಇದೆ. ಅಲ್ಲಿ ಕ್ಲಿಕ್ ಮಾಡಿ ನಿಮ್ಮ ಪ್ಯಾನ್ ನಂಬರ್ ನಮೂದಿಸಿ, ಗುಪ್ತ ಸಂಕೇತವೊಂದನ್ನು ನೀಡಿ ನೋಂದಾಯಿಸಬೇಕು. ನಂತರ ಬಲಬದಿಯಲ್ಲಿರುವ ಡೌನ್ಲೋಡ್ ವಿಭಾಗದಲ್ಲಿನ 2016-17ನೇ ಸಾಲಿನ ತೆರಿಗೆ ಪಾವತಿ ಸಲ್ಲಿಕೆಯ ಕೊಂಡಿಯನ್ನು ಒತ್ತಿದರೆ ITR ಫೈಲ್ ಡೌನ್ಲೋಡ್ ಆಗುತ್ತದೆ. ಅದನ್ನು ತೆರೆದಾಗ ಆದಾಯ ತೆರಿಗೆ ಪಾವತಿಯ ITR-1 (Sahaj) / ITR4S (Sugam) ಅರ್ಜಿ ಎಕ್ಸೆಲ್ ಇಲ್ಲವೇ ಜಾವಾ ತಂತ್ರಾಂಶದಲ್ಲಿ ಮೂಡಿಬರುತ್ತದೆ. ಅದರಲ್ಲಿನ ಹಸಿರು ಬಣ್ಣದ ಮನೆಗಳಲ್ಲಿ ನಿಮ್ಮ ಬಳಿ ಇರುವ ಫಾರಂ – 16 ಆಧರಿಸಿ ವಿವರಗಳನ್ನು ಭರ್ತಿಮಾಡಬೇಕು. ಪ್ಯಾನ್ ನಂಬರ್ ಕಡ್ಡಾಯ. ಕೆಂಪು ಗುರುತು ಇರುವ ಮನೆಗಳನ್ನು ಕಡ್ಡಾಯವಾಗಿ ತುಂಬಬೇಕು.
ತೆರಿಗೆ ಪಾವತಿ ಮಾಡಿ ಸ್ವೀಕೃತಿ ಪತ್ರ ಪಡೆಯಿರಿ
https://incometaxindiaefiling.gov.in/ ಅಂತರ್ಜಾಲ ತಾಣದ ಪರದೆಯ ಎಡಬದಿಯಲ್ಲಿರುವ Submit Return ಎಂಬ ಗುಂಡಿ ಒತ್ತಿದಾಗ ಮೂಡಿಬರುವ ಕಿಟಕಿಯಲ್ಲಿ ನಿಮ್ಮ ನೋಂದಾವಣೆ (ಪ್ಯಾನ್) ಸಂಖ್ಯೆ ಮತ್ತು ಗುಪ್ತ ಸಂಕೇತ ಬಳಸಿ ಪ್ರವೇಶ ಮಾಡಿದರೆ ಪಾವತಿ ಸಲ್ಲಿಕೆಯ ಕಿಟಕಿ ತೆರೆಯುತ್ತದೆ. ಅಲ್ಲಿ ನಿಮ್ಮXML file ಅನ್ನು ಸೇರ್ಪಡೆಗೊಳಿಸಿ ಅಪ್ಲೋಡ್ ಗುಂಡಿ ಒತ್ತಿದರೆ ಒಂದೆರಡು ನಿಮಿಷಗಳ ಒಳಗಾಗಿ ನಿಮ್ಮ ಪಾವತಿ ಸಲ್ಲಿಸಲ್ಪಟ್ಟು ನಿಮ್ಮ ಇ-ಮೇಲ್ ವಿಳಾಸಕ್ಕೆ ಒಂದು ಪತ್ರ ಬರುತ್ತದೆ. ಅದರಲ್ಲಿ ಸ್ವೀಕೃತಿಯ ITR-V Form ಫಾರಂ ಇದ್ದು ಅದನ್ನು ಅಡೋಬ್ ಆಕ್ರೋಬಾಟ್ ರೀಡರ್ನಲ್ಲಿ ತೆಗೆದು ಓದಲು ನಿಮ್ಮ ಪ್ಯಾನ್ ನಂಬರ್ ಮತ್ತು ಜನ್ಮದಿನಾಂಕವನ್ನು ಸಂಕೇತವಾಗಿ ಸಣ್ಣ ಅಕ್ಷರಗಳಲ್ಲಿ ನಮೂದಿಸಬೇಕು. ನಂತರ ಅದರ ಮುದ್ರಿತ ಪ್ರತಿ ತೆಗೆದು ನಿಮ್ಮ ತೆರಿಗೆ ಪಾವತಿಯ ಕಡತಕ್ಕೆ ಸೇರಿಸಿಕೊಳ್ಳಬಹುದು.
ಹೀಗೆ ತೆಗೆದ ಮುದ್ರಿತ ITR-V Form ಫಾರಂನ ಒಂದು ಪ್ರತಿಯನ್ನು ಇ-ಫೈಲಿಂಗ್ ಮಾಡಿದ ಒಂದು ತಿಂಗಳೊಳಗಾಗಿ Income Tax Department – CPC, Post Bag No-1, Electronic City Post Office, Bangalore – 560 100 ಈ ವಿಳಾಸಕ್ಕೆ ಸಾಧಾರಣ ಅಂಚೆಯ ಮೂಲಕ ಕಳಿಸಿಕೊಡಬೇಕು. ಇಲ್ಲಿಗೆ ನಿಮ್ಮ ಇ-ಫೈಲಿಂಗ್ ಯಶಸ್ವಿಯಾಗುತ್ತದೆ. ಹೆಚ್ಚಿನ ಮಾಹಿತಿಗೆ ಆದಾಯ ತೆರಿಗೆ ಇಲಾಖೆ ಅಂತರ್ಜಾಲ ತಾಣ ಪರಿಶೀಲಿಸಬಹುದು.
Saturday, May 21, 2016
Saturday, May 14, 2016
Play and Learn English Series 03 - Kindari Jogi Supplement of Samyukthakarnataka Daily 14 May 2016
Play and Learn English Series 03 - Kindari Jogi Supplement of Samyukthakarnataka Daily 14 May 2016
http://epaper.samyukthakarnataka.com/808193/Samyuktha-Karnataka-Bangalore/May,14,2016,Bangalore#page/15/1
Monday, May 9, 2016
Sunday, May 1, 2016
Subscribe to:
Posts (Atom)