Tuesday, December 18, 2012

Decision Making and Maths Day - Article in Udayavani Daily Josh 18 Dec 2012


Decision Making and Maths Day - Article in Udayavani Daily Josh 18 Dec 2012

Udayavani
 • ಟೆನ್ಸನ್ನು ಮಾಡ್ಕೊಬೇಡಿ: ಹೇಳ್ಳೋದು ಗಮನವಿಟ್ಟು ಓದಿ

 • ಹಲವು ಅಡಚಣೆಗಳನ್ನು, ಕೋರ್ಟ್‌ ಮೆಟ್ಟಿಲುಗಳನ್ನು ದಾಟಿ ಇದೀಗ ಕರ್ನಾಟಕ ಲೋಕಸೇವಾ ಆಯೋಗದ ಕೆಎಎಸ್‌ ಮುಖ್ಯಪರೀಕ್ಷೆಗಳು ಇದೇ

  • Udayavani | Dec 17, 2012
   ಹಲವು ಅಡಚಣೆಗಳನ್ನು, ಕೋರ್ಟ್‌ ಮೆಟ್ಟಿಲುಗಳನ್ನು ದಾಟಿ ಇದೀಗ ಕರ್ನಾಟಕ ಲೋಕಸೇವಾ ಆಯೋಗದ ಕೆಎಎಸ್‌ ಮುಖ್ಯಪರೀಕ್ಷೆಗಳು ಇದೇ ಡಿಸೆಂಬರ್‌ 15ರಿಂದ ಬೆಂಗಳೂರು ಮತ್ತು ಧಾರವಾಡಗಳಲ್ಲಿ ಆರಂಭಗೊಂಡಿವೆ. ಇದೇ ಅವಧಿಯಲ್ಲಿ ನಡೆಯುತ್ತಿರುವ ಬೇರೆ ಬೇರೆ ಹು¨ªೆಗಳ ಪರೀಕ್ಷೆಗಳು ಮತ್ತು ಯುಜಿಸಿ ಎನ್‌ಇಟಿ ಪರೀಕ್ಷೆಗಳಿಗೆ ಹಾಜರಾಗಲು ಕೆಲವು ಅಭ್ಯರ್ಥಿಗಳಿಗೆ ಅಡಚಣೆ ಅಗುತ್ತಿರುವುದು ಖಂಡಿತ. ಉತ್ಸುಕತೆಯಿಂದ ಸಿದ್ಧತೆ ನಡೆಸಿ ಪರೀಕ್ಷೆಯನ್ನು ಎದುರಿಸುತ್ತಿರುವವರು ಹಲವರಾದರೆ ಪರೀಕ್ಷೆಗೆ ಹಾಜರಾಗಲು ಹಿಂದೇಟು ಹಾಕಿ ಮನೆಯÇÉೇ ಉಳಿದವರು ಕೆಲವರು. 
   ಅವರಲ್ಲಿ ಮಹಿಳೆಯರ ಸಂಖ್ಯೆ ಜಾಸ್ತಿ! ಸಿದ್ಧತೆಯ ಕೊರತೆ, ಆತ್ಮವಿಶ್ವಾಸದ ಕೊರತೆ, ಗಂಡ ಪ್ರಿಲಿಮ್ಸ್‌ನಲ್ಲಿ ಫೇಲಾಗಿದ್ದು, ಪ್ರಿಲಿಮ್ಸ್‌ ಪಾಸಾಗಿರುವ ಹೆಂಡತಿ ಮುಖ್ಯಪರೀಕ್ಷೆಗೆ ಹೋಗಲು ಹಿಂದೇಟು ಹಾಕಿರುವುದು, ಪಾಸಾದರೂ ಸಂದರ್ಶನದಲ್ಲಿ ನಡೆಯಲಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರ, ಲಂಚಗುಳಿತನ, ಹಣಕ್ಕಾಗಿ ಹು¨ªೆಯ ಮಾರಾಟದ ಸುದ್ದಿಗಳಿಗೆ ಕಿವಿಗೊಟ್ಟಿರುವುದು ಹೀಗೆ ಏನೇನೋ ಕಾರಣಗಳಿಂದ ಮುಖ್ಯ ಪರೀಕ್ಷೆಯಿಂದ ಹೊರಗುಳಿದವರಿ¨ªಾರೆ. ಜೀವನಕ್ಕೆ ಪ್ರಮುಖ ತಿರುವುಕೊಡುವ, ಯಶಸ್ಸು ತಂದುಕೊಡುವ ತೀರ್ಮಾನ ತೆಗೆದುಕೊಳ್ಳುವಲ್ಲಿ ಈ ಯುವಜನರು ಏಕೆ ಹಿಂದೇಟು ಹಾಕುತ್ತಿ¨ªಾರೆ? ಅಂತಹ ಒತ್ತಡ ಇರುವುದಾದರೂ ಏನು? ಯಶಸ್ಸು ಸಿಗದೇ ಇ¨ªಾಗ ಪ್ರಾಣಕಳೆದುಕೊಳ್ಳುತ್ತಿರುವುದು ಏಕೆ? 

   ಸೋಲೇ ಗೆಲುವಿನ ಸೋಪಾನ 
   ಜೀವನದಲ್ಲಿ ಸೋಲುವುದು, ಸೋತುಹೋದೆವೆಂದು ಸಾಯುವುದು ಅಂಥ ದೊಡ್ಡ ಸಾಧನೆಯಲ್ಲ. ಆದರೆ ಆ ಸೋಲಿನ ನೋವನ್ನು ನಸುನಗೆಯೊಂದಿಗೆ ಸಹಿಸುತ್ತಾ ಜೀವಿಸುವುದು ಅತಿ ದೊಡ್ಡ ಸಾಧನೆ. ಗೆದ್ದೇ ಗೆಲ್ಲುವೆವು, ಗೆದ್ದೇ ಗೆಲ್ಲುವೆವು- ಹಂ ಹೋಂಗೇ ಕಾಂಯಾಬ್‌.... ಗೀತೆಯ ಅನುರಣನವೇ ಎÇÉಾ ಕಡೆ ಕೇಳಿಬರುವುದನ್ನು ಎಲ್ಲರೂ ಬಯಸುವುದು ಸಹಜ. ಆದರೆ ಎÇÉಾ ಸಂದರ್ಭಗಳಲ್ಲಿಯೂ ಗೆಲುವು ನಮ್ಮದೇ ಆಗಬೇಕೆಂದೇನಿಲ್ಲ. ತೀವ್ರತರ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಹೋರಾಡಿದರೂ ಗೆಲುವು ಕೂದಲೆಳೆಯಂತರದಲ್ಲಿ ನುಣುಚಿಕೊಳ್ಳಲೂಬಹುದು. ಸೋತವರು ಹತಾಶರಾಗಿ, ಲೈಫ‌ು ಇಷ್ಟೇನೇ ಎಂದು ಹಿಂದಿರುಗಿ ಬರಲಾರದಂತಹ ನಿರ್ಣಯಗಳನ್ನು ತೆಗೆದುಕೊಳ್ಳುವ ಅತಿರೇಕಕ್ಕೂ ಹೋಗಬಹುದು. ಆದರೆ, ಬದುಕಿ, ಹೋರಾಡಿ, ಕಳೆದುಕೊಂಡÇÉೇ ಮತ್ತೆ ಹುಡುಕಿ, ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ. 
   ಎ ಸೌಂಡ್‌ ಮೈಂಡ್‌ ಇನ್‌ ಎ ಸೌಂಡ್‌ ಬಾಡಿ(ಸದೃಢ ದೇಹದಲ್ಲಿ ಸಬಲ ಮನಸ್ಸು) ಎಂಬ ಸತ್ಯ ಯುವಜನರಿಗೆ ತಿಳಿಯಬೇಕಿದೆ. ಸೋಲುವುದನ್ನೂ, ಸೋತದ್ದನ್ನು ಒಪ್ಪಿಕೊಳ್ಳುವುದನ್ನೂ, ತಮ್ಮ ಮಿತಿಗಳನ್ನು ಅರ್ಥಮಾಡಿಕೊಳ್ಳುವುದನ್ನೂ ಕಲಿಯಬೇಕಾಗಿದೆ. ಅತಿ ಹೆಚ್ಚಿನ ಸಾಧನೆ ಮಾಡುವ ಗುರಿಯ ಬೆನ್ನು ಹತ್ತಿದವರಂತೂ ಹತಾಶೆಯನ್ನು ಹತ್ತಿರಕ್ಕೂ ಬಿಟ್ಟುಕೊಳ್ಳಬಾರದು. ನಿಮಗಿಂತ ಹೆಚ್ಚು ಅಂಕಗಳಿಸಿ, ಕೆಎಎಸ್‌ ಮುಗಿಸಿ ಡಿವೈಎಸ್‌ಪಿ ಖಂಡಿತಾ ಆಗ್ತಿàನಿ, ನೋಡ್ತಾ ಇರಿ ಎಂದು ಛಾಲೆಂಜ್‌ ಮಾಡಿ, ಮುಖ್ಯ ಪರೀಕ್ಷೆಯಲ್ಲಿ ಒಂದು ಪತ್ರಿಕೆ ಚೆನ್ನಾಗಿ ಆಗಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಫ‌ಲಿತಾಂಶ ಪ್ರಕಟವಾಗುವ ಮುನ್ನವೇ ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾದ ಯುವಕ ಸಾಧಿಸಿ¨ªಾದರೂ ಏನು? ಫ‌ಲಿತಾಂಶ ಪ್ರಕಟವಾದಾಗ ಆತ ತೇರ್ಗಡೆಯಾಗಿ ಸಂದರ್ಶನಕ್ಕೆ ಅರ್ಹತೆ ಗಿಟ್ಟಿಸಿದ್ದ. ಸ್ವಲ್ಪ$ಕಾದಿದ್ದರೆ ಸಾಕಿತ್ತಲ್ಲವೇ? ಇದಲ್ಲದಿದ್ದರೆ ಇನ್ನೊಂದು. ಏನೋ ಒಮ್ಮೆ ಅನುತ್ತೀರ್ಣರಾಗಬಹುದು, ಮತ್ತೂಂದು ಅವಕಾಶ ಇದ್ದೇ ಇದೆ. ಮರಳಿ ಯತ್ನವ ಮಾಡಬಹುದಿತ್ತಲ್ಲವೇ? ಬಿಸಿ ರಕ್ತದ ಯುವಜನರಿಗೆ ಹೇಳುವವರು ಯಾರು? 
   ಪ್ರತಿವರ್ಷ ಒಂದು ಮಿಲಿಯನ್‌ ಆತ್ಮಹತ್ಯೆಗಳು ದಾಖಲಾಗುತ್ತಿವೆಯಂತೆ! ಈ ಪ್ರವೃತ್ತಿಯನ್ನು ತಡೆಗಟ್ಟಲಿಕ್ಕಾಗಿಯೇ ವಿಶ್ವದ ಎÇÉಾ ರಾಷ್ಟ್ರಗಳೂ ಶ್ರಮಿಸುತ್ತಿವೆ. ಯುವಜನರು ನಮ್ಮ ದೇಶದ ಆಸ್ತಿ. ಅವರ ಬುದ್ಧಿಮತ್ತೆ, ಪರಿಶ್ರಮ, ದೇಶದ ಏಳಿಗೆಗೆ ಅತ್ಯಗತ್ಯ. ಶ್ರಮ ಗೌರವ ಇಟ್ಟುಕೊಂಡು, ಸಣ್ಣದೋ, ದೊಡ್ಡದೋ, ಒಂದು ಕೆಲಸ ಮಾಡುವ ದೃಢ ನಿರ್ಧಾರದ ಅಗತ್ಯ ಇಂದು ಬಹಳವಿದೆ. ಅದಕ್ಕಾಗಿಯೇ ಪ್ರತಿವರ್ಷ ಅಕ್ಟೋಬರ್‌ 10ರಂದು ವಿಶ್ವ ಮಾನಸಿಕ ಆರೋಗ್ಯ ದಿನವನ್ನು ಆಚರಿಸಲಾಗುತ್ತಿದೆ ಕೂಡ. ಈ ಸಂದರ್ಭದಲ್ಲಿ ಭಾರತದ ಬಹುತೇಕ ಎÇÉಾ ಭಾಷೆಯ ದೈನಿಕ ಮತ್ತು ನಿಯತಕಾಲಿಕೆಗಳು ಆತ್ಮಹತ್ಯೆಯ ಪ್ರವೃತ್ತಿ ಮತ್ತು ಅನಾಹುತಗಳನ್ನು ಅಂಕಿ-ಅಂಶಗಳ ಸಮೇತ ಪ್ರಕಟಿಸಿ ಜಾಗೃತಿ ಮೂಡಿಸಲು ಪ್ರಯತ್ನಿಸಿವೆ. ಆತ್ಮಹತ್ಯೆಯೇ ಎಲ್ಲಕ್ಕೂ ಉತ್ತರ ಅಲ್ಲವಲ್ಲ! 

   ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ 
   ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಗೆ ನಿಗದಿಪಡಿಸಲಾಗಿರುವ ಸಿವಿಲ್‌ ಸರ್ವೀಸ್‌ ಆಪ್ಟಿಟ್ಯೂಡ್‌ ಟೆಸ್ಟ್‌ ಪತ್ರಿಕೆಯಲ್ಲಿ ತೀರ್ಮಾನ ಕೈಗೊಳ್ಳುವಿಕೆ, ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಕುರಿತ ಪ್ರಶ್ನೆಗಳನ್ನು ಕಳೆದ ವರ್ಷದಿಂದ ಜಾರಿಗೊಳಿಸಿರುವ ಹೊಸ ಮಾದರಿ ಪ್ರಶ್ನೆಪತ್ರಿಕೆಯಲ್ಲಿ ಕೇಳಲಾಗುತ್ತಿದೆ. ಮಾನಸಿಕ ಸಾಮರ್ಥ್ಯ ಪರೀಕ್ಷೆಯ ಭಾಗವಾಗಿರುವ ಈ ಪ್ರಶ್ನೆಗಳನ್ನು ಬಿಡಿಸಲು, ಯಾವುದೇ ನಿರ್ಧಾರ ತೆಗೆದುಕೊಳ್ಳಲು ಹಲವು ಅಡಚಣೆಗಳು ಮತ್ತು ಸನ್ನಿವೇಶಗಳು ಕಾರಣವಾಗಿದ್ದರೂ ಅಭ್ಯರ್ಥಿಯ ನಿಲುವು ಮತ್ತು ಮನೋಭಾವಗಳು ನಿರ್ಧಾರ ತೆಗೆದುಕೊಳ್ಳುವಲ್ಲಿ ನಿರ್ಣಾಯಕ ಪಾತ್ರವಹಿಸುತ್ತವೆ. ಕೊಟ್ಟಿರುವ ಬಹು ಆಯ್ಕೆಯ ಉತ್ತರಗಳಲ್ಲಿ ಎÇÉಾ ಉತ್ತರಗಳೂ ಸರಿಯಾಗಿರುವಂತೆಯೇ ತೋರುತ್ತವೆ. ಆದರೂ ಮನಃಶಾಸ್ತ್ರದ ಹಿನ್ನೆಲೆಯಲ್ಲಿ ಅಥವಾ ನಿಗದಿತ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಸಿದ್ಧಾಂತಗಳ ಬೆಳಕಿನಲ್ಲಿ ಯಾವುದೋ ಒಂದು ಉತ್ತರ ಅತಿ ಹೆಚ್ಚು ಕರಾರುವಾಕ್‌ ಅನಿಸುತ್ತದೆ. ಅದನ್ನೇ ಆಯ್ದು ಬರೆಯಬೇಕಿರುತ್ತದೆ. 
   ಲೋಕಸೇವಾ ಆಯೋಗಗಳು ನಡೆಸುವ ಪರೀಕ್ಷೆಗಳಲ್ಲಿ ಕೇಳಲಾಗುವ ಈ ರೀತಿಯ ಪ್ರಶ್ನೆಗಳು ಅಭ್ಯರ್ಥಿಯು ಸಾರ್ವಜನಿಕ ಆಡಳಿತಕ್ಕೆ ಕಾಲಿರಿಸುವಾಗ ಆತನಿಗೆ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಳ್ಳುವ ಸಾಮರ್ಥ್ಯ ಎಷ್ಟಿದೆ ಎನ್ನುವ ಹಿನ್ನೆಲೆ ಹೊಂದಿರುತ್ತವೆ. ಹಾಗಾಗಿ ಸಾರ್ವಜನಿಕ ಆಡಳಿತ ವಿಷಯಕ್ಕೆ ಸಂಬಂಧಿಸಿದ ಪುಸ್ತಕಗಳಲ್ಲಿ ನೀಡಿರುವ ನಿರ್ಣಯ ಕೈಗೊಳ್ಳುವಿಕೆಯ ಥಿಯರಿಗಳು ಮತ್ತು ಅವುಗಳ ವ್ಯಾಪ್ತಿಯನ್ನು ತಿಳಿದಿರಬೇಕಾದದ್ದು ಅಗತ್ಯ.

   ಸಾರ್ವಜನಿಕ ಆಡಳಿತದಲ್ಲಿ ನಿರ್ಣಯ ಕೈಗೊಳ್ಳುವಿಕೆ 
   ಲಭ್ಯವಿರುವ ಆಯ್ಕೆಗಳಲ್ಲಿ ಅತ್ಯಂತ ಸೂಕ್ತ ಎನಿಸುವುದನ್ನು ಆಯ್ದುಕೊಳ್ಳುವುದೇ ಪರಿಣಾಮಕಾರಿ ನಿರ್ಧಾರ, ಎನ್ನುತ್ತಾರೆ ಇರಿÌನ್‌ ಡಿ. ಬ್ರಾಸ್‌. ನಿರ್ಣಯ ಕೈಗೊಳ್ಳಲು ಇರುವ ಎರಡು ಅಥವಾ ಅದಕ್ಕಿಂತ ಹೆಚ್ಚು ಆಯ್ಕೆಯ ಮನೋಭಾವಗಳಲ್ಲಿ ಕರಾರುವಾಕ್ಕಾದ ಒಂದನ್ನೇ ಆರಿಸುವುದು ಪರಿಣಾಮಕಾರಿ ನಿರ್ಣಯ ಕೈಗೊಳ್ಳುವಿಕೆ, ಎನ್ನುತ್ತಾರೆ ರಾಬರ್ಟ್‌ ಟಾನೆನ್‌ಬಾಮ್‌. ಒಂದು ಸಂಸ್ಥೆ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದನ್ನು ತಿಳಿಯಲು ಆ ಸಂಸ್ಥೆಯು ಕೈಗೊಳ್ಳುವ ನಿರ್ಣಯಗಳನ್ನು ಗಮನಿಸಬೇಕು, ಎನ್ನುತ್ತಾರೆ ಎಫ್. ಎ. ನೀಗ್ರೋ. ಸರ್ಕಾರಿ ವಲಯದಲ್ಲಿ ಯಾವುದೇ ವಿಷಯ ಕುರಿತು ನಿರ್ಣಯ ತೆಗೆದುಕೊಳ್ಳುವುದು ಒಂದು ಗುಂಪು ಅಥವಾ ಆಡಳಿತ ಯಂತ್ರದ ಒಟ್ಟಾರೆ ಅಭಿಪ್ರಾಯ ಸಂಗ್ರಹಣೆಯಾಗಿರುತ್ತದೆ ಏಕೆಂದರೆ ಈ ತೀರ್ಮಾನ ಇಡೀ ರಾಷ್ಟ್ರದ ಆಡಳಿತ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ, ಎನ್ನುತ್ತಾರೆ ಸೆಕ್ಲೆರ್‌ ಹಡ್ಸನ್‌. 
   ಪೀಟರ್‌ ಎಫ್ ಡ್ರಕರ್‌ ಅವರ ಪ್ರಕಾರ ನಿರ್ಣಯ ತೆಗೆದುಕೊಳ್ಳುವಿಕೆ ಈ ಕೆಳಗಿನ ಐದು ಅಂಶಗಳನ್ನು ಆಧರಿಸಿರುತ್ತದೆ: 
   1. ಸಮಸ್ಯೆಯ ಗುರುತಿಸುವಿಕೆ ಅಥವಾ ವ್ಯಾಖ್ಯೆ 
   2. ಸಮಸ್ಯೆಗೆ ಸಂಬಂಧಿಸಿದ ಮಾಹಿತಿ ಸಂಗ್ರಹಣೆ, ವಿಂಗಡಣೆ ಮತ್ತು ವಿಶ್ಲೇಷಣೆ 
   3. ಸಮಸ್ಯೆಗೆ ಸೂಕ್ತ ಪರಿಹಾರ ಯಾವುವು ಎಂಬ ಆಯ್ಕೆಯ ಯಾದಿ ಸಿದ್ಧಪಡಿಸುವುದು 
   4. ಲಭ್ಯವಿರುವ ಪರಿಹಾರದ ಯಾದಿಯಿಂದ ಸೂಕ್ತವಾದದ್ದನ್ನು ಆಯ್ದುಕೊಳ್ಳುವುದು. 
   5. ಆಯ್ದುಕೊಂಡ ಪರಿಹಾರವನ್ನು ಪರಿಣಾಮಕಾರಿಯಾಗಿ ಅಳವಡಿಸುವುದು 
   ಪರಿಣಾಮಕಾರಿ ಆಯ್ಕೆಯನ್ನು ನಿರ್ಧರಿಸಲು ನೂರಾರು ಅಂಶಗಳು ಸಹಕಾರಿಯಾಗಿರುವಂತೆಯೇ ಹತ್ತಾರು ಅಡೆತಡೆಗಳೂ ಇರುತ್ತವೆ. ಅವೆಲ್ಲವನ್ನು ವಿವರವಾಗಿ ಅಧ್ಯಯನ ಮಾಡಿದ ನಂತರವಷ್ಟೇ ಸೂಕ್ತ ನಿರ್ಣಯ ಕೈಗೊಳ್ಳಲು ಸಾಧ್ಯ. ನಾವು ತೆಗೆದುಕೊಳ್ಳುವ ಯಾವುದೇ ನಿರ್ಣಯ ಸಮಾಜಕ್ಕೆ ಉಪಯುಕ್ತವಾಗಿರಬೇಕೇ ಹೊರತು ಆತ್ಮಹತ್ಯೆಯಂತಹ ತೀವ್ರ ನೇತ್ಯಾತ್ಮಕ ನಿರ್ಣಯಗಳಿಂದ ಸಮಾಜದ ಸ್ವಾಸ್ಥÂ ಕೆಡಿಸುವಂತಹ ನಿರ್ಧಾರವಾಗಬಾರದು. ಆಡಳಿತ ಸೇವೆಗೆ ಸೇರುವ ಅಭ್ಯರ್ಥಿಗಳಲ್ಲಿ ಇಂತಹ ನೇತ್ಯಾತ್ಮಕ ನಿರ್ಣಯದ ಸುಳಿವೂ ಇರಕೂಡದು. ಆತ್ಮಹತ್ಯೆಗೆ ಪ್ರೇರೇಪಿಸುವಂತಹ ವಾತಾವರಣವೂ ದೂರಾಗಬೇಕು. ಸೋತರೂ ಮತ್ತೆ ಮೈ ಕೊಡವಿ ಎದ್ದು ನಿಲ್ಲಬಲ್ಲ ಧೀರರು ನಿಜಕ್ಕೂ ಉತ್ತಮ ನಿರ್ಣಯ ಕೈಗೊಳ್ಳುವಲ್ಲಿ ಸಫ‌ಲರಾಗುತ್ತಾರೆ ಎಂಬುದು ಅನುಭವದಿಂದ ವೇದ್ಯವಾದ ಸತ್ಯ! 

   ಡಾ. ಹರ್ಬರ್ಟ್‌ ಸೈಮನ್‌ರ ಸಿದ್ಧಾಂತಗಳು 
   1978ರಲ್ಲಿ ನೊಬೆಲ್‌ ಅರ್ಥಶಾಸ್ತ್ರ ಪುರಸ್ಕಾರ ಗಳಿಸಿದ ಅಮೆರಿಕದ ಆಡಳಿತಶಾಸ್ತ್ರ ತಜ್ಞ ಡಾ. ಹರ್ಬರ್ಟ್‌ ಸೈಮನ್‌ ತಮ್ಮ ಅಡ್ಮಿನಿಸ್ಟ್ರೇಟಿವ್‌ ಬಿಹೇವಿಯರ್‌ ಕೃತಿಯಲ್ಲಿ ನಿರ್ಧಾರ ಕೈಗೊಳ್ಳುವಿಕೆ ಕುರಿತು ವಿವರವಾಗಿ ಚರ್ಚಿಸಿ¨ªಾರೆ. ಆಡಳಿತದ ಹೃದಯಭಾಗವೇ ಪರಿಣಾಮಕಾರಿ ನಿರ್ಣಯ ಕೈಗೊಳ್ಳುವಿಕೆ. ತಾರ್ಕಿಕ ಆಲೋಚನೆ ಮತ್ತು ಆಯ್ಕೆಯ ಹಿಂದಿರುವ ಮಾನಸಿಕ ಸ್ಥಿತಿಯೇ ಅದರ ಭಾಷೆ. ಸಮಸ್ಯೆಯ ಗುರುತಿಸುವಿಕೆ, ಅದರ ವ್ಯಾಖ್ಯೆ, ವಿಶ್ಲೇಷಣೆ, ಪರಿಹಾರದ ವಿವಿಧ ಸಾಧ್ಯತೆಗಳು ಮತ್ತು ಲಭ್ಯ ಪರಿಹಾರಗಳಲ್ಲಿ ಒಂದನ್ನು ಆಯ್ದುಕೊಳ್ಳುವುದು ಪರಿಣಾಮಕಾರಿ ನಿರ್ಣಯ ಕೈಗೊಳ್ಳುವಿಕೆ ಎನಿಸುತ್ತದೆ. ಇದಕ್ಕಾಗಿ ತೀರ್ಪು ಅಥವಾ ನಿರ್ಣಯ, ಸೃಜನಶೀಲತೆ, ಸಮಸ್ಯಾ ವಿಶ್ಲೇಷಣಾ ತಂತ್ರ ಮತ್ತು ಅನುಭವದ ಅಗತ್ಯವಿದೆ, ಎನ್ನುತ್ತಾರೆ ಸೈಮನ್‌.    ಮನೋರಮಾ ಯಿಯರ್‌ ಬುಕ್‌- 2013 
   ಇದೀಗ ಮಾರುಕಟ್ಟೆಯಲ್ಲಿರುವ ಮನೋರಮಾ ವಾರ್ಷಿಕ ಕೋಶ- 2013ರಲ್ಲಿ ಡಾ.ಎಂ.ಎಸ್‌. ಸ್ವಾಮಿನಾಥನ್‌ ಅವರು ಬರೆದ ರಿಯೋ ಸಮ್ಮೇಳನ ಕುರಿತ ವಿಶೇಷ ಲೇಖನ, ಪೊ›. ಜಯಂತ್‌ ನಾಳೀìಕರ್‌ ಬರೆದ ಗಣಿತ - ವಿಜ್ಞಾನಗಳ ರಾಣಿ ಕುರಿತ ಲೇಖನ, ಡಾ. ಸ್ಯಾಮ್ಯುಯೆಲ್‌ ಪಾಲ್‌ ಅವರ ಉತ್ಕೃಷ್ಟತೆ ಗಳಿಸಿಕೊಳ್ಳುವುದು ಕುರಿತ ಲೇಖನ, ಇಂಗ್ಲಿಷ್‌ ಕಲಿಕೆಗೆ ಪೂರಕವಾಗಿರುವ ಅಗ್ರಲೇಖನಗಳ ಜೊತೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯವಾಗುವ ಹಲವು ವಿಶಿಷ್ಟ ವಿಷಯಗಳ ಕುರಿತು ವಿಜ್ಞಾನಿಗಳು, ಮ್ಯಾನೇಜ್‌ಮೆಂಟ್‌ ಗುರುಗಳು, ಕೆರೀರ್‌ ಎಕ್ಸ್‌ಪರ್ಟ್‌ಗಳು, ಕೃಷಿ-ಆರ್ಥಿಕ ಪರಿಣತರು, ಕ್ರೀಡಾ ವಿಶ್ಲೇಷಕರು ಮತ್ತು ಪರಿಸರ ತಜ್ಞರು ಬರೆದಿರುವ 25 ಲೇಖನಗಳು, ಟಿಪ್ಪಣಿಗಳು, ಅಡಿಟಿಪ್ಪಣಿಗಳು ಮತ್ತು ಅಂಕಿ-ಅಂಶಗಳಿವೆ. ಭಾರತೀಯ ಸಿನೆಮಾದ 100 ವರ್ಷಗಳ ಕಾಲಯಾನ ಮತ್ತು ವಿಶ್ವವಿಖ್ಯಾತ 50 ಪೇಂಟಿಂಗ್‌ಗಳ ಪರಿಚಯವಿದೆ. 60 ವರ್ಷಗಳನ್ನು ಪೂರೈಸಿರುವ ಭಾರತೀಯ ಸಂಸತ್ತಿನ ಪರಿಚಯ, 2012ರ ಲಂಡನ್‌ ಒಲಿಂಪಿಕ್ಸ್‌ ವಿಶೇಷ ವರದಿ, ಭಾರತದಲ್ಲಿ ಭ್ರಷ್ಟಾಚಾರ, ದೇವಕಣ ಹಿಗ್ಸ್‌ ಬೋಸಾನ್‌, ಪರಿಸರದ ಸವಾಲುಗಳು, ಇಂಜಿನಿಯರಿಂಗ್‌ ಶಿಕ್ಷಣದ ಪುನಾರಚನೆ, ಅಂತಜಾìಲ ಭದ್ರತಾ ವ್ಯವಸ್ಥೆ ಹೀಗೆ ಹತ್ತು ಹಲವು ಹೊಸ ವಿಷಯಗಳಿಂದ ತುಂಬಿ ತುಳುಕುತ್ತಿದೆ. 
   ಪ್ರಚಲಿತ ಘಟನಾವಳಿಗಳಲ್ಲಿ 2012ರಲ್ಲಿ ನಡೆದ ಪ್ರಮುಖ ಘಟನೆಗಳು, ಶಿಫಾರಸ್ಸುಗಳು, ಚುನಾವಣಾ ಸುಧಾರಣೆಗಳು, ಹಗರಣಗಳು, ಭಾರತ ಮತ್ತು ವಿಶ್ವದ ಸ್ಮರಣೀಯ ವಿದ್ಯಮಾನಗಳ ಕಿರುಚಿತ್ರಣವಿದೆ. ಐತಿಹಾಸಿಕ ಸ್ಥಳಗಳು, ಮಹಾವ್ಯಕ್ತಿಗಳ ಕಿರುಪರಿಚಯ, ಸುಪ್ರಸಿದ್ಧ ಪುಸ್ತಕಗಳು, ಪದಕೋಶದ ವಿವರಣಾತ್ಮಕ ಟಿಪ್ಪಣಿಗಳು, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿನ ಶರವೇಗದ ಬೆಳವಣಿಗೆ, ಉದ್ಯೋಗ ಕ್ಷೇತ್ರದಲ್ಲಿನ ಅವಕಾಶಗಳು ಮೊದಲಾದ ವಿಷಯಗಳನ್ನು ಪ್ರತ್ಯೇಕ ವಿಭಾಗಗಳಲ್ಲಿ ಹಿಡಿದಿಡಲಾಗಿದೆ. ಇದರೊಂದಿಗೆ ಉಚಿತ ಕೊಡುಗೆಯಾಗಿ ನೀಡಲಾಗಿರುವ ಬ್ರಿಟಾನಿಕ ವಿಶ್ವಕೋಶ 2013 ಸಿಡಿಯಲ್ಲಿ 25,000 ಲೇಖನಗಳು, 2,75,000 ಪದಗಳ ಮೆರಿಯಮ್‌ ವೆಬ್‌ಸ್ಟರ್‌ ಪದಕೋಶ, 2500 ವರ್ಣಚಿತ್ರಗಳು, 196 ಭೂಪಟಗಳು, 1,66,000 ಅಂತರ್ಜಾಲತಾಣಗಳ ಸಂಪರ್ಕ ಕೊಂಡಿಗಳು ಈ ಬಾರಿಯ ವಿಶೇಷ ಆಕರ್ಷಣೆಯಾಗಿವೆ. 
   ಸ್ಥಳೀಯ ಪತ್ರಿಕಾ ವ್ಯಾಪಾರಿಗಳಲ್ಲಿ ಅಥವಾ ಪುಸ್ತಕಾಲಯಗಳಲ್ಲಿ ಸಿಗುತ್ತಿರುವ ಮನೋರಮಾ ವಾರ್ಷಿಕ ಕೋಶ - 2013 ಅನ್ನು ಫ್ಲಿಪ್‌ಕಾರ್ಟ್‌ ಅಂತರ್ಜಾಲದ ಮಳಿಗೆಯಿಂದಲೂ ಖರೀದಿಸಬಹುದು. ಮನೆಬಾಗಿಲಿಗೇ ತಲುಪಿಸುವುದರ ಜೊತೆ 30% ಡಿಸ್ಕೌಂಟ್‌ ಸೌಲಭ್ಯವೂ ಇದೆ. 
   ರಾಷ್ಟ್ರೀಯ ಗಣಿತ ದಿನ- ಡಿಸೆಂಬರ್‌ 22 
   ಶ್ರೀನಿವಾಸ ರಾಮಾನುಜನ್‌ ಅವರ ಜನ್ಮದಿನವಾದ ಡಿಸೆಂಬರ್‌ 22ರ ದಿನವನ್ನು ರಾಷ್ಟ್ರೀಯ ಗಣಿತ ದಿನವೆಂದು ಆಚರಿಸಲಾಗುತ್ತಿದೆ, ರಾಮಾನುಜನ್‌ರ 125ನೇ ಜನ್ಮಜಯಂತಿಯ ವರ್ಷ 2012ನ್ನು ಭಾರತ ರಾಷ್ಟ್ರೀಯ ಗಣಿತ ವರ್ಷವೆಂದೂ ಘೋಷಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಗಣಿತದ ಹಿರಿಮೆಯನ್ನು ನಮ್ಮ ಯುವಜನರಿಗೆ ತಿಳಿಸಿಕೊಡುವ ಕೆಲಸ ವರ್ಷವಿಡೀ ನಡೆದಿತ್ತು. ಅದಕ್ಕೆಂದೇ ಹಲವು ಗಣಿತಜ್ಞರು ಶ್ರಮಿಸಿ¨ªಾರೆ ಮತ್ತು ಡಿಸೆಂಬರ್‌ನಲ್ಲಿ ರಾಜ್ಯದ ವಿವಿಧ ಶಾಲಾ ಕಾಲೇಜುಗಳಲ್ಲಿ ಸಭೆ, ಸಮಾರಂಭ, ವಿಚಾರ ಸಂಕಿರಣಗಳನ್ನು ಏರ್ಪಡಿಸಿ¨ªಾರೆ. ಗಣಿತವನ್ನು ಸರಳಗೊಳಿಸಿ, ಕಲಿಯುವ ಅಭಿರುಚಿ ಹತ್ತಿಸುವ ನೂರಾರು ಗಣಿತ ಕೃತಿಗಳು ಅಂತರ್ಜಾಲದಲ್ಲಿ ಲಭ್ಯವಿವೆ. 
   ವಿಶ್ವವಿಖ್ಯಾತ ಗಣಿತ ಪ್ರತಿಭೆ 
   ಗಣಿತ ವರ್ಷಾಚರಣೆಯ ನಿಮಿತ್ತ ಇದೇ ಡಿಸೆಂಬರ್‌ 11ರಂದು ಬೆಂಗಳೂರಿನ ಭಾರತೀಯ ವಿದ್ಯಾಭವನದ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರದಲ್ಲಿ ಒಂದು ದಿನದ ಗಣಿತ ಕಾರ್ಯಾಗಾರ ಏರ್ಪಾಡಾಗಿತ್ತು. ಇದೇ ಸಂದರ್ಭದಲ್ಲಿ ಖ್ಯಾತ ಗಣಿತಜ್ಞ ಡಾ. ಎಸ್‌. ಬಾಲಚಂದ್ರರಾವ್‌ (ದೂ: 9741411480)ಅವರ ಶ್ರೀನಿವಾಸ ರಾಮಾನುಜನ್‌- ವಿಶ್ವವಿಖ್ಯಾತ ಗಣಿತ ಪ್ರತಿಭೆ, ಕೃತಿಯನ್ನು ಬಿಡುಗಡೆ ಮಾಡಲಾಯಿತು. (ಪ್ರಕಾಶಕರು : ಭಾರತೀಯ ವಿದ್ಯಾಭವನದ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಗಾಂಧೀ ಕೇಂದ್ರ, ಬೆಂಗಳೂರು, ಬೆಲೆ : ರೂ. 60/- ) ಶ್ರೀನಿವಾಸ ರಾಮಾನುಜನ್‌ ಅವರ ಜೀವನ-ಸಾಧನೆಯನ್ನು ಸರಳವಾದ ಭಾಷೆಯಲ್ಲಿ ತಿಳಿಸಿಕೊಡುವ ಈ ಕೃತಿಯನ್ನು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಓದಲೇಬೇಕು.

No comments: