Tuesday, December 4, 2012

Ultra Small Branch and CCRT - Article in Udayavani Josh 04 Dec 2012


Ultra Small Branch and CCRT - Article in Udayavani Josh 04 Dec 2012

Udayavani
http://www.udayavani.com/news/full.aspx?story_id=217934&languageid=15&edition=KAN&catid=2787

  • ಅಲ್ಟ್ರಾ ಸ್ಮಾಲ್‌ ಬ್ರಾಂಚ್‌ ನಿಮ್ಮೂರಿಗೂ ಬರಬಹುದು!

  • ಬ್ಯಾಂಕಿಂಗ್‌ ಸೌಲಭ್ಯ ವಂಚಿತ 5000ಕ್ಕೂ ಹೆಚ್ಚು ಜನವಸತಿ ಇರುವ ಹಳ್ಳಿಗಳಲ್ಲಿ ಹೊಸ ಶಾಖೆಯನ್ನು ತೆರೆಯುವುದು, ಯಾವುದೇ ಪೂ

    • Udayavani | Dec 04, 2012
      ಬ್ಯಾಂಕಿಂಗ್‌ ಸೌಲಭ್ಯ ವಂಚಿತ 5000ಕ್ಕೂ ಹೆಚ್ಚು ಜನವಸತಿ ಇರುವ ಹಳ್ಳಿಗಳಲ್ಲಿ ಹೊಸ ಶಾಖೆಯನ್ನು ತೆರೆಯುವುದು, ಯಾವುದೇ ಪೂರ್ವಪಾವತಿ ಇಲ್ಲದೆ ಎಲ್ಲರಿಗೂ ಖಾತೆ ತೆರೆಯಲು ಅವಕಾಶ, ಎಟಿಎಂ, ಡೆಬಿಟ್‌ ಕಾರ್ಡ್‌ಗಳನ್ನು ಹೊಂದುವ ಅವಕಾಶ ಕಲ್ಪಿಸುವ ಸ್ವಾಭಿಮಾನ್‌ ಆಂದೋಲನ 2009-10ರ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದು, 2012-13ರ ಬಜೆಟ್‌ನಲ್ಲಿ ಇದನ್ನು ಆಂದೋಲನದ ರೂಪದಲ್ಲಿ ಹಮ್ಮಿಕೊಳ್ಳುವಂತೆ ಕರೆಕೊಡಲಾಗಿದೆ. 

      ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಆರ್ಥಿಕ ಸೇವೆಗಳ ಇಲಾಖೆಯು ಬ್ಯಾಂಕ್‌ಗಳು, ಕೊ-ಆಪರೇಟಿವ್‌ ಬ್ಯಾಂಕ್‌ಗಳು, ಅಭಿವೃದ್ಧಿ ಬ್ಯಾಂಕ್‌ಗಳು, ಆರ್ಥಿಕ ಸಂಸ್ಥೆಗಳು, ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ, ವಿಮೆ ಮತ್ತು ನಿವೃತ್ತಿ ವೇತನದ ಸುಧಾರಣೆಗಳನ್ನು ಕುರಿತ ವ್ಯವಹಾರಗಳನ್ನು ನೋಡಿಕೊಳ್ಳುತ್ತದೆ. ಇತ್ತೀಚೆಗೆ ಸರ್ಕಾರವು ಪ್ರತಿಯೊಬ್ಬರಿಗೂ ಬ್ಯಾಂಕ್‌ ಖಾತೆ ತೆರೆಯುವ ಅವಕಾಶ ಕಲ್ಪಿಸುತ್ತಿರುವುದು ಮತ್ತು ಅದರ ಮೂಲಕವೇ ಸರ್ಕಾರದ ವಿವಿಧ ಯೋಜನೆಗಳ ಅನುಕೂಲಗಳು ವಿತರಣೆಯಾಗುವಂತೆ ನೋಡಿಕೊಳ್ಳುವುದು, ಸಬ್ಸಿಡಿ ಅಥವಾ ಪ್ರೋತ್ಸಾಹ ಧನವನ್ನು ನೇರವಾಗಿ ಖಾತೆದಾರರಿಗೆ ವರ್ಗಾಯಿಸುವುದು ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದಂತೆ ಅನೇಕ ಆರ್ಥಿಕ ಸುಧಾರಣೆಗಳನ್ನು ಪ್ರಕಟಿಸಿರುವ ಹಿನ್ನೆಲೆಯಲ್ಲಿ ಆರ್ಥಿಕ ಸೇವೆಗಳ ಇಲಾಖೆ ತನ್ನ ಕಾರ್ಯವ್ಯಾಪ್ತಿಯನ್ನು ಈ ಎಲ್ಲಾ ವಿಷಯಗಳತ್ತ ವಿಸ್ತರಿಸಿದೆ. 

      ಆಧುನಿಕ ಆರ್ಥಿಕತೆಯು ಉಳಿತಾಯ ಮತ್ತು ಸಾಲಗಳ ಸಮರ್ಪಕ ಹಂಚಿಕೆ ಮತ್ತು ಯಶಸ್ವೀ ಬಳಕೆಯನ್ನು ಅವಲಂಬಿಸಿದೆ. ಬ್ಯಾಂಕುಗಳು, ವಿಮಾ ಕಂಪೆನಿಗಳು ಮತ್ತು ಆರ್ಥಿಕ ಸಂಸ್ಥೆಗಳು ಈ ನಿಟ್ಟಿನಲ್ಲಿ ನಿರ್ಣಾಯಕ ಪಾತ್ರವಹಿಸಿ ಆರ್ಥಿಕತೆಯ ಪ್ರಗತಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳಲು ಕಾರಣವಾಗುತ್ತವೆ. ಭಾರತದಲ್ಲಿ ಆರ್ಥಿಕ ಪ್ರಗತಿಯು ಮುಗ್ಗಟ್ಟಿನ ಸಂದರ್ಭಗಳಲ್ಲಿ ಮತ್ತು ಆನಂತರದಲ್ಲಿಯೂ ಸ್ಥಿರತೆಯನ್ನು ಕಾಯ್ದುಕೊಂಡು ಶೇಕಡಾ 9ರಷ್ಟು ಬೆಳವಣಿಗೆಯನ್ನು ಮುಟ್ಟಿದೆ. ಈ ಬೆಳವಣಿಗೆಗಳನ್ನು ಇನ್ನಷ್ಟು ಸುಸ್ಥಿರಗೊಳಿಸಲು ಎಲ್ಲ ಸ್ತರಗಳಲ್ಲಿ ಆರ್ಥಿಕ ಒಳಗೊಳ್ಳುವಿಕೆ, ಕೃಷಿ ಸಾಲದ ಪ್ರಮಾಣದಲ್ಲಿನ ಹೆಚ್ಚಳ, ಉನ್ನತ ಶಿಕ್ಷಣ ಪಡೆದುಕೊಳ್ಳಲು ಅಲ್ಪ ಸಂಖ್ಯಾತರಿಗೆ ಸಾಲಸೌಲಭ್ಯ ಒದಗಿಸುವುದು, ಪಾವತಿ ಮತ್ತು ಸ್ವೀಕೃತಿಗಳನ್ನು ವಿದ್ಯುನ್ಮಾನ ಮಾಧ್ಯಮ, ಅಂತರ್ಜಾಲದ ಮೂಲಕ ನಿರ್ವಹಿಸುವುದು, ಸಾಲ ಮರುಪಾವತಿ, ಸಕಾಲದಲ್ಲಿ ವಿಮೆಯ ಸೌಲಭ್ಯಗಳು ಮತ್ತು ಪಾವತಿ ತಲುಪುವಂತೆ ನೋಡಿಕೊಳ್ಳುವುದು, ಗ್ರಾಹಕರ ವ್ಯಾಜ್ಯಗಳ ಪರಿಹಾರ, ನಿವೃತ್ತಿ ವೇತನ ಸುಧಾರಣೆಗಳು ಹೀಗೆ ಹತ್ತು ಹಲವು ಯೋಜನೆಗಳನ್ನು ಸರ್ಕಾರ ಹಮ್ಮಿಕೊಳ್ಳುತ್ತಿದ್ದು ಆರ್ಥಿಕ ಸೇವೆಗಳ ಇಲಾಖೆ ಇವೆಲ್ಲವನ್ನೂ ನಿರ್ವಹಿಸುತ್ತಿದೆ. 

      ಸ್ವಾಭಿಮಾನ್‌ ಆಂದೋಲನ 
      ಭಾರತದ ಯಾವುದೇ ಹಳ್ಳಿಯಲ್ಲಿ ಜನಸಂಖ್ಯೆ 2000ಕ್ಕೆ ಮೇಲ್ಪಟ್ಟು ಇದ್ದಲ್ಲಿ(ವಾಯವ್ಯ ರಾಜ್ಯಗಳಿಗೆ ಸಂಬಂಧಿಸಿದಂತೆ 1000) ಅಂತಹ ಕಡೆಗಳಲ್ಲಿ ಬ್ಯಾಂಕಿಂಗ್‌ ವ್ಯವಹಾರಕ್ಕೆ ಅನುಕೂಲತೆ ಕಲ್ಪಿಸುವುದು ಭಾರತೀಯ ಬ್ಯಾಂಕ್‌ಗಳ ಜವಾಬ್ದಾರಿ ಎಂಬುದು ಸರ್ಕಾರದ ನಿಲುವು. ಬ್ಯಾಂಕಿಂಗ್‌ ಸೌಲಭ್ಯ ವಂಚಿತ 5000ಕ್ಕೂ ಹೆಚ್ಚು ಜನವಸತಿ ಇರುವ ಹಳ್ಳಿಗಳಲ್ಲಿ ಹೊಸ ಶಾಖೆಯನ್ನು ತೆರೆಯುವುದು, ಯಾವುದೇ ಪೂರ್ವಪಾವತಿ ಇಲ್ಲದೆ ಎಲ್ಲರಿಗೂ ಖಾತೆ ತೆರೆಯಲು ಅವಕಾಶ, ಎಟಿಎಂ, ಡೆಬಿಟ್‌ ಕಾರ್ಡ್‌ಗಳನ್ನು ಹೊಂದುವ ಅವಕಾಶ ಕಲ್ಪಿಸುವ ಸ್ವಾಭಿಮಾನ್‌ ಆಂದೋಲನ 2009-10ರ ಬಜೆಟ್‌ನಲ್ಲಿ ಪ್ರಸ್ತಾಪವಾಗಿದ್ದು, 2012-13ರ ಬಜೆಟ್‌ನಲ್ಲಿ ಇದನ್ನು ಆಂದೋಲನದ ರೂಪದಲ್ಲಿ ಹಮ್ಮಿಕೊಳ್ಳುವಂತೆ ಕರೆಕೊಡಲಾಗಿದೆ. ಈಗಾಗಲೇ ಇಂತಹ 45,000 ಪ್ರದೇಶಗಳನ್ನು ಗುರುತಿಸಲಾಗಿದ್ದು, ಇದೇ ವರ್ಷ 1237 ಸ್ಥಳಗಳಲ್ಲಿ ಹೊಸದಾಗಿ ಬ್ಯಾಂಕ್‌ ಶಾಖೆಗಳನ್ನು ತೆರೆಯಲಾಗಿದೆ. 

      ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ, ಸಬ್ಸಿಡಿಗಳು, ಆಧಾರ್‌ ಖಾತೆಗೆ ಲಗತ್ತಾಗಿಸಿದ ವಿವಿಧ ಸೌಲಭ್ಯಗಳ ವಿತರಣೆ, ಉದ್ಯೋಗ ಖಾತ್ರಿ ಯೋಜನೆಯ ಕೂಲಿಯ ಬಟಾವಾಡೆ, ಗ್ಯಾಸ್‌ ಸಬ್ಸಿಡಿ, ಸರ್ಕಾರದ ವಿವಿಧ ಯೋಜನೆಗಳ ಫ‌ಲಾನುಭವಿಗಳಿಗೆ ಅನುದಾನಗಳನ್ನು ನೇರವಾಗಿ ಬ್ಯಾಂಕ್‌ ಖಾತೆಯ ಮೂಲಕ ಪಾವತಿಸುವಂತೆ ಮಾಡುವ ಪ್ರಯತ್ನ ಇದಾಗಿದೆ. ಕಡಿಮೆ ಜನ ಇರುವ ಹಳ್ಳಿಗಳಲ್ಲಿಯೂ ಜನರಿಗೆ ಬ್ಯಾಂಕಿಂಗ್‌ ಸೌಲಭ್ಯ ದೊರೆಯುವಂತಾಗಲು ಅಲ್ಟ್ರಾ ಸ್ಮಾಲ್‌ ಬ್ರಾಂಚ್‌ ತೆರೆಯಲಾಗುತ್ತಿದೆ. ಹಾಗೆಯೇ ಬ್ಯುಸಿನೆಸ್‌ ಕರೆಸ್ಪಾಂಡೆಂಟ್‌ಗಳನ್ನು ಮತ್ತು ಬ್ಯುಸಿನೆಸ್‌ ಕರೆಸ್ಪಾಂಡೆಂಟ್‌ ಏಜೆಂಟ್‌ಗಳನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಜನರ ಮನೆ ಬಾಗಿಲಿಗೇ ಬ್ಯಾಂಕಿಂಗ್‌ ಸೌಲಭ್ಯ ತೆಗೆದುಕೊಂಡುಹೋಗಿ ತಲುಪಿಸುವ ಪ್ರಯತ್ನ ಇದು. 

      ಆರ್ಥಿಕ ಒಳಗೊಳ್ಳುವಿಕೆ 
      ಸಮಾಜದ ವಿವಿಧ ಸ್ತರಗಳ ಜನರನ್ನು ಬ್ಯಾಂಕಿಂಗ್‌, ವಿಮೆ ಮತ್ತು ನಿವೃತ್ತಿ ವೇತನಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳು, ವ್ಯವಹಾರಗಳು ಹಾಗೂ ಸರ್ಕಾರದ ಯೋಜನೆಗಳ ಅನುಕೂಲತೆಗಳು, ಅನುದಾನಗಳನ್ನು ತಲುಪಿಸುವ ನಿಟ್ಟಿನಲ್ಲಿ, ಅತಿಸೂಕ್ಷ¾, ಸೂಕ್ಷ¾, ಮಧ್ಯಮ ಮತ್ತು ಸಣ್ಣಕೈಗಾರಿಕೆಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಆರ್ಥಿಕ ವ್ಯವಹಾರಗಳು ಹಳ್ಳಿಯಿಂದ ದಿಲ್ಲಿಯವರೆಗೆ ಯಾರನ್ನೂ ಬಿಡದಂತೆ, ಸಮಗ್ರವಾಗಿ ಎಲ್ಲವನ್ನೂ ಒಳಗೊಳ್ಳುವಂತೆ ನೋಡಿಕೊಳ್ಳುವ ಹೊಣೆ ಈ ಆರ್ಥಿಕ ವ್ಯವಹಾರಗಳ ಇಲಾಖೆಯದ್ದು. 

      ಬ್ಯಾಂಕಿಂಗ್‌, ವಿಮೆ ಮತ್ತು ನಿವೃತ್ತಿ ವೇತನ 
      ಆರ್ಥಿಕ ಸೇವೆಗಳ ಇಲಾಖೆಯು ಬ್ಯಾಂಕಿಂಗ್‌, ವಿಮೆ ಮತ್ತು ನಿವೃತ್ತಿ ವೇತನಕ್ಕೆ ಸಂಬಂಧಿಸಿದಂತೆ ಪ್ರಸ್ತುತ ಜಾರಿಗೆ ಬಂದಿರುವ ನಿಯಮಗಳು, ನೀತಿ ನಡಾವಳಿಗಳು ಮತ್ತು ಸರ್ಕಾರದ ಯೋಜನೆಗಳ ಅನುಷ್ಠಾನಕ್ಕೆ ಹಮ್ಮಿಕೊಳ್ಳಲಾಗುತ್ತಿರುವ ಕಾರ್ಯಕ್ರಮಗಳನ್ನು ಜನತೆಗೆ ತಿಳಿಸಲು ಇತ್ತೀಚೆಗೆ ತ್ರೆ„ಮಾಸಿಕ ಜರ್ನಲ್‌ ಪ್ರಕಟಿಸಿದೆ. ಇದರ ಮೊದಲ ಸಂಚಿಕೆ ಸೆಪ್ಟೆಂಬರ್‌ 2012ರಂದು ಪ್ರಕಟವಾಗಿದ್ದು, ಆರ್ಥಿಕ ಒಳಗೊಳ್ಳುವಿಕೆಯನ್ನು ಕುರಿತಾಗಿದೆ. ಮುಂದಿನ ಸಂಚಿಕೆ ಜನತೆಗೆ ವಿಮೆ ಮತ್ತು ನಿವೃತ್ತಿ ವೇತನ ವಿಷಯಕ್ಕೆ ಸಂಬಂಧಿಸಿದೆ. 

      ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ 
      1979ರಲ್ಲಿ ಸ್ಥಾಪಿತವಾದ ಭಾರತ ಸರ್ಕಾರದ ಸಂಸ್ಕೃತಿ ಸಚಿವಾಲಯದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಭಾರತೀಯ ಸಂಸ್ಕೃತಿಯನ್ನು ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಶಿಕ್ಷಕರಿಗೆ ಮತ್ತು ಉಪನ್ಯಾಸಕರಿಗೆ ಪರಿಚಯಿಸುವ ಹತ್ತು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತದೆ. ವರ್ಷವಿಡೀ ಒಂದÇÉಾ ಒಂದು ಸೆಮಿನಾರ್‌, ಓರಿಯಂಟೇಷನ್‌ ಕೋರ್ಸ್‌, ರಿಫ್ರೆಷರ್‌ ಕೋರ್ಸ್‌, ಸಂಗೀತ, ನೃತ್ಯ ಕಲೆಗಳಿಗೆ ಸಂಬಂಧಿಸಿದ ತರಬೇತಿ ಕಾರ್ಯಾಗಾರವನ್ನು ನಡೆಸುತ್ತಲೇ ಇರುತ್ತದೆ. 1970ರಿಂದ ದೆಹಲಿ ವಿಶ್ವವಿದ್ಯಾಲಯದ ಸಂಸ್ಕೃತಿ ವಿಭಾಗ ನಡೆಸಿಕೊಂಡು ಬರುತ್ತಿದ್ದ ಈ ರೀತಿಯ ತರಬೇತಿ ಕಾರ್ಯಕ್ರಮಗಳನ್ನು 1979ರಿಂದ ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಮುಂದುವರೆಸಿಕೊಂಡು ಹೋಗುತ್ತಿದೆ. ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ಮತ್ತು ಫೆಲೊಶಿಪ್‌ಗ್ಳನ್ನು ನೀಡುತ್ತಿದೆ. 

      ಕಲಾ ಪ್ರಕಾರಗಳು 
      ಭಾರತೀಯ ಕಲಾ ಪ್ರಕಾರಗಳ ಪರಿಚಯವನ್ನು ಅಭಿನಯ ಕಲೆ, ದೃಶ್ಯಕಲೆ ಮತ್ತು ಸಾಹಿತ್ಯ ಎಂಬುದಾಗಿ ಮೂರು ಭಾಗಗಳಲ್ಲಿ ವಿಸ್ತತವಾಗಿ ಮಾಡಿಕೊಡಲಾಗಿದೆ. ಪ್ರಾಚೀನ ಕಾಲದಿಂದ ಅಂದರೆ ವೇದಗಳ ಕಾಲದಿಂದ ಇಲ್ಲಿಯವರೆಗೆ ರಚಿತವಾಗಿರುವ ಸಾಹಿತ್ಯ ರಾಶಿಯನ್ನು ವಿವಿಧ ವಿಭಾಗಗಳಲ್ಲಿ ಅಚ್ಚುಕಟ್ಟಾಗಿ ಟಿಪ್ಪಣಿ ಸಮೇತ ಪರಿಚಯಿಸಲಾಗಿದೆ. 
      ದೃಶ್ಯಕಲೆಗೆ ಸಂಬಂಧಿಸಿದಂತೆ ಭಾರತೀಯ ವಾಸ್ತುಶಿಲ್ಪ, ಭಾರತೀಯ ಶಿಲ್ಪಕಲೆ, ಭಾರತೀಯ ಚಿತ್ರಕಲೆ(ಸಿಂಧೂ ಬಯಲಿನ ನಾಗರಿಕತೆಯ ಕಾಲ, ಬೌದ್ಧರ ಕಾಲ, ಇಂಡೋ-ಇಸ್ಲಾಮಿಕ್‌ ಮತ್ತು ಆಧುನಿಕ ಕಾಲಕ್ಕೆ ಸಂಬಂಧಿಸಿದಂತೆ) ಎಂಬ ವಿಭಾಗಗಳಲ್ಲಿ ಸಚಿತ್ರವಾಗಿ ವಿವರಣೆ ದೊರೆಯುತ್ತದೆ. 
      ಅಭಿನಯ ಕಲೆಗೆ ಸಂಬಂಧಿಸಿದಂತೆ ಭಾರತದ ನೃತ್ಯ ಪ್ರಕಾರಗಳು, (ಶಾಸ್ತ್ರೀಯ ಪ್ರಕಾರ, ಅರೆ ಶಾಸ್ತ್ರೀಯ ಪ್ರಕಾರಗಳು, ಪ್ರಾದೇಶಿಕ ನೃತ್ಯ ಪ್ರಕಾರಗಳು), ಭಾರತೀಯ ಸಂಗೀತ(ಹಿಂದೂಸ್ತಾನಿ, ಕರ್ನಾಟಕಿ, ಪ್ರಾದೇಶಿಕ ಸಂಗೀತ ಮತ್ತು ಸಂಗೀತ ವಾದ್ಯಗಳು), ಭಾರತೀಯ ರಂಗಭೂಮಿ ಮತ್ತು ಭಾರತೀಯ ಗೊಂಬೆ ಆಟ ಪರಂಪರೆಯ ಪರಿಚಯ ಇಲ್ಲಿದೆ. 
      ಇತ್ತೀಚೆಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾರತೀಯ ಕಲಾ ಪ್ರಕಾರಕ್ಕೆ ಸಂಬಂಧಿಸಿದಂತೆ ಒಂದÇÉಾ ಒಂದು ಪ್ರಶ್ನೆ ಇದ್ದೇ ಇರುತ್ತದೆ ಎನ್ನುವ ಕಾರಣಕ್ಕಾಗಿಯಾದರೂ ಈ ಎÇÉಾ ಪ್ರಕಟಣೆಗಳನ್ನು ಒಮ್ಮೆ ತೆರೆದು ನೋಡಬೇಕಾದ ಅಗತ್ಯವಿದೆ. 

      ಓರಿಯಂಟೇಶನ್‌ ತರಬೇತಿ, ಕಾರ್ಯಾಗಾರಗಳು ಮತ್ತು ರಿಫ್ರೆಷರ್‌ ಕೋರ್ಸ್‌ಗಳು 
      ಶಿಕ್ಷಣದಲ್ಲಿ ಗೊಂಬೆಯಾಟದ ಪಾತ್ರ ನೈಸರ್ಗಿಕ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಸಂರಕ್ಷಿಸುವಲ್ಲಿ ಶಾಲೆಗಳ ಪಾತ್ರ ಮತ್ತು ಸಾಮಾಜಿಕ ಉಪಯುಕ್ತ ಉತ್ಪಾದನಾ ಕಾರ್ಯ, ಕಾರ್ಯಾನುಭವ 
      ಕುರಿತಂತೆ ಹದಿನೈದು ದಿನಗಳ ತರಬೇತಿ ಕಾರ್ಯಾಗಾರಗಳನ್ನು ಸಾಂಸ್ಕೃತಿಕ ಸಂಪನ್ಮೂಲ ಮತ್ತು ತರಬೇತಿ ಕೇಂದ್ರ ಏರ್ಪಡಿಸುತ್ತದೆ. ಈ ಕಾರ್ಯಾಗಾರಗಳಲ್ಲಿ ತರಬೇತಿ ಪಡೆದವರಿಗಾಗಿ ಹತ್ತು ದಿನಗಳ ರಿಫ್ರೆಷರ್‌ ಕೋರ್ಸ್‌ ಕೂಡ ಇರುತ್ತದೆ. 

      ಪ್ರಾಥಮಿಕ, ಮಾಧ್ಯಮಿಕ, ಪ್ರೌಢ ಮತ್ತು ಪದವಿ ಪೂರ್ವ ಹಂತದ ಶಿಕ್ಷಕರಿಗೆ 21 ದಿನಗಳ ಕಾಲ ಮತ್ತು ಶಿಕ್ಷಣ ತರಬೇತಿ ಸಂಸ್ಥೆಯ ಉಪನ್ಯಾಸಕರು ಹಾಗೂ ಅಧ್ಯಾಪಕರಿಗೆ 18 ದಿನಗಳ ಕಾಲ ಓರಿಯಂಟೇಶನ್‌ ತರಬೇತಿಯನ್ನು ದೆಹಲಿ, ಹೈದರಾಬಾದ್‌ ಮತ್ತು ಉದಯಪುರಗಳಲ್ಲಿರುವ ಸಿಸಿಆರ್‌ಟಿ ಕೇಂದ್ರಗಳಲ್ಲಿ ನೀಡಲಾಗುತ್ತಿದೆ. 
      ತರಬೇತಿಯ ಅವಧಿಯಲ್ಲಿ ಬೋಧನೋಪಕರಣಗಳ ತಯಾರಿಕೆ, ಪ್ರಾಜೆಕ್ಟ್ಗಳ ಆಯ್ಕೆ ಮತ್ತು ಸಂಪೂರ್ಣಗೊಳಿಸುವಿಕೆ, ಕ್ವಿಜ‚…, ಶೈಕ್ಷಣಿಕ ಆಟಗಳು, ಸ್ಲೆ„ಡ್‌ ಶೋ, ಕರಕುಶಲ ಕಲೆಯ ಕಲಿಕೆ, ವಿವಿಧ ಭಾಷೆಗಳ ಭಾವೈಕ್ಯತಾ ಗೀತೆಗಳ ಗಾಯನ ಮತ್ತು ಕಲಿಕೆ, ಶೈಕ್ಷಣಿಕ ಪ್ರವಾಸ, ವಿವಿಧ ಶಾಲೆಗಳ ಭೇಟಿ ಮತ್ತು ವಿದ್ಯಾರ್ಥಿಗಳೊಂದಿಗೆ ವಿಚಾರ ವಿನಿಮಯ ಹಾಗೂ ಮೌಲ್ಯಮಾಪನ ಕಾರ್ಯಗಳಿರುತ್ತವೆ. 

      ಸಂಪನ್ಮೂಲಗಳ ದಾಖಲೀಕರಣ 
      ಕೇಂದ್ರದಲ್ಲಿ ತರಬೇತಿಗೆ ಬಳಸಲಾಗುವ ಸಂಪನ್ಮೂಲ ಸಾಮಗ್ರಿಗಳನ್ನು ದಾಖಲಿಸಿ ಇಡುವ ವ್ಯವಸ್ಥೆ ಇದೆ. ಕಲೆ, ಕರಕುಶಲ ಕಲೆ, ದೃಶ್ಯ, ಶ್ರವ್ಯ ಹಾಗೂ ಅಭಿನಯ ಸೇರಿದಂತೆ ವಿವಿಧ ಕಲಾ ಪ್ರಕಾರಗಳ ರೆಕಾರ್ಡಿಂಗ್‌, ಸ್ಲೆ„ಡ್‌ಗಳ ತಯಾರಿಕೆ, ಫೋಟೋಗ್ರಾಫ್ಗಳ ಸಂಗ್ರಹಿಸುವಿಕೆ ಇವೇ ಮೊದಲಾದ ಚಟುವಟಿಕೆಗಳನ್ನು ದಾಖಲಿಸಲಾಗುತ್ತದೆ. 

      ಕಲ್ಚರಲ್‌ ಕಿಟ್‌ 
      ಸಂಸ್ಥೆ ಸಿದ್ದಪಡಿಸಿರುವ ಕಲ್ಚರಲ್‌ ಕಿಟ್‌ನಲ್ಲಿ ಎರಡು ಆಲ್ಬಂಗಳಿದ್ದು ಮೊದಲ ಆಲ್ಬಂನಲ್ಲಿ 520 ಸ್ಲೆ„ಡ್‌ಗಳಿವೆ. ಇವು ಪ್ರಕೃತಿ ಮತ್ತು ಪರಿಸರ, ವಾಸ್ತುಶಿಲ್ಪ, ಚಿತ್ರಕಲೆ ಮತ್ತು ಕರಕುಶಲ ವಸ್ತುಗಳನ್ನು ಕುರಿತಂತೆ ಇರುವ ವರ್ಣ ಹಾಗೂ ಕಪ್ಪು-ಬಿಳುಪಿನ ಸ್ಲೆ„ಡ್‌ಗಳಾಗಿವೆ. ಎರಡನೇ ಆಲ್ಬಂನಲ್ಲಿ 348 ಸ್ಲೆ„ಡ್‌ಗಳಿದ್ದು, ಸಂಗೀತ ವಾದ್ಯಗಳು, ನೃತ್ಯ ಪ್ರಕಾರಗಳು, ಸಾಂಪ್ರದಾಯಿಕ ರಂಗಭೂಮಿ, ಜನಪದ ಮತ್ತು ಬುಡಕಟ್ಟು ಸಂಸ್ಕತಿಗೆ ಸೇರಿದ ಸಂಗೀತ ಕುರಿತಾದ ಸ್ಲೆ„ಡ್‌ಗಳಾಗಿವೆ. ಇದರೊಂದಿಗೆ ಧ್ವನಿಮುದ್ರಿತ ಟೇಪ್‌ ಇದ್ದು ಭಾರತದ ರಾಷ್ಟ್ರೀಯತೆ ಬಿಂಬಿಸುವ ವಿವಿಧ ಭಾಷೆಗಳಲ್ಲಿರುವ ದೇಶಭಕ್ತಿಗೀತೆಗಳಿಂದ ಕೂಡಿದೆ. ಈ ತರಬೇತಿಯಲ್ಲಿ ಭಾಗವಹಿಸುವ ಶಿಕ್ಷಕರು ಕೆಲಸ ಮಾಡುತ್ತಿರುವ ಶಾಲೆಗಳಿಗೆ ಒಂದು ಕ್ಯಾಸೆಟ್‌ ರೆಕಾರ್ಡರ್‌ ಮತ್ತು 35 ಮಿಮೀ ಸ್ಲೆ„ಡ್‌ ಪೊ›ಜೆಕ್ಟರನ್ನು ಈ ಕಿಟ್‌ನ ಜೊತೆಗೆ ಕೇಂದ್ರವೇ ದೊರಕಿಸಿಕೊಡುತ್ತದೆ. 

      ಸಾಂಸ್ಕೃತಿಕ ಪ್ರತಿಭಾ ಶೋಧ ವಿದ್ಯಾರ್ಥಿ ವೇತನ 
      1982ರಿಂದ ಪ್ರತಿ ವರ್ಷವೂ ಸಂಗೀತ, ನೃತ್ಯ, ಕಲೆ, ನಾಟಕ ಇತ್ಯಾದಿ ಪ್ರಕಾರಗಳಲ್ಲಿ ತರಬೇತಿ ಹೊಂದುತ್ತಿರುವ 10 ರಿಂದ 14 ವರ್ಷದೊಳಗಿನ ಮಕ್ಕಳಿಗೆ ಸಾಂಸ್ಕತಿಕ ಪ್ರತಿಭಾ ಶೋಧ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಮೊದಲಿಗೆ 100 ಜನರಿಗೆ ಇದ್ದ ಅವಕಾಶ ಈಗ 500 ಜನರನ್ನು ತಲುಪುತ್ತಿದೆ. ಆರಂಭದಲ್ಲಿ ಎರಡು ವರ್ಷಗಳ ಕಾಲ ಈ ಶಿಷ್ಯವೇತನ ದೊರೆಯುತ್ತಿದ್ದು, ಅತ್ಯುತ್ತಮ ಸಾಧನೆ ಮುಂದುವರೆಸಿರುವ ಮಕ್ಕಳಿಗೆ ಇನ್ನೂ ಎರಡು ವರ್ಷ ಹೆಚ್ಚುವರಿಯಾಗಿ ಮುಂದುವರೆಸುವ ಅವಕಾಶವಿದೆ. ಪುಸ್ತಕಗಳು ಮತ್ತು ಇತರೆ ಸಾಮಗ್ರಿಗಳು 
      ಕೇಂದ್ರವು ಅತ್ಯುತ್ತಮ ಗುಣಮಟ್ಟದ ಕಾಗದದ ಮೇಲೆ ಬಹುವರ್ಣದಲ್ಲಿ ಸಾಂಸ್ಕತಿಕ ಸಂಪತ್ತನ್ನು ಬಿಂಬಿಸುವ ಹತ್ತು ಹಲವು ಕೃತಿಗಳನ್ನು, ಕೈಪಿಡಿಗಳನ್ನು, ಭಿತ್ತಿ ಪತ್ರಗಳನ್ನು ಮತ್ತು ಪ್ಲೆಕಾರ್ಡ್‌ಗಳನ್ನು, ಧ್ವನಿಮುದ್ರಿತ ಕ್ಯಾಸೆಟ್‌ ಮತ್ತು ವೀಡಿಯೋ ಸಿಡಿ, ಡಿವಿಡಿಗಳನ್ನು ತಯಾರಿಸಿ ಶಾಲೆಗಳಿಗೆ ನೀಡಿದೆ. ಕೆಲವು ಮಾರಾಟಕ್ಕೂ ಲಭ್ಯ. ಈ ಸಾಮಗ್ರಿಯಲ್ಲಿರುವ ವಿಷಯಗಳನ್ನು ಆಧರಿಸಿ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರಶ್ನೆಗಳನ್ನು ಕೇಳಲಾಗುತ್ತದೆ.
      *ಬೇದ್ರೆ ಮಂಜುನಾಥ್‌

No comments: