Saturday, May 30, 2009

Karnataka Enactments - Version December 2008 - Released on 29-05-2005 - A Milestone in the History of Karnataka

Prajavani Daily 30-05-2009















ಕಾನೂನು ವಿದ್ಯಾರ್ಥಿಗಳಿಗೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುಪಯುಕ್ತ

ಕರ್ನಾಟಕದ ಕಾನೂನುಗಳು ಸಿ.ಡಿ.


ದಪ್ಪ ದಪ್ಪ ಕಾನೂನು ಪುಸ್ತಕಗಳನ್ನು, ಹಳೆಯ ಅಧಿಸೂಚನೆಯ ಕಡತಗಳನ್ನು ತೆಗೆದು, ಧೂಳು ಒರೆಸಿ, ಅಪೇಕ್ಷಿತ ದಾಖಲೆ ಹುಡುಕುವ ಕೆಲಸಕ್ಕೆ ಈಗ ವಿರಾಮ. ಕಂಪ್ಯೂಟರ್ ಪರದೆಯ ಮೇಲೆ ಆಕರ್ಷಕವಾಗಿ, ಒಂದೇ ಬಾರಿಗೆ, ಒಂದೇ ಕಡೆ ಎಲ್ಲ ಕಡತಗಳೂ ಸುಲಭವಾಗಿ ಸಿಗುವಂತೆ ಮಾಡುವ ಅಪರೂಪದ ಕೆಲಸವನ್ನು ಕರ್ನಾಟಕ ರಾಜ್ಯ ಸರ್ಕಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಪರವಾಗಿ ಕನ್ನಡ ಗಣಕ ಪರಿಷತ್ತಿನವರು ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ, ಅಕಾರಾದಿ ಕ್ರಮದಲ್ಲಿ, ಮೂವತ್ತು ಸಾವಿರಕ್ಕೂ ಹೆಚ್ಚು ಪುಟಗಳ ದಾಖಲೆಗಳು ಕನರ್ಾಟಕದ ಕಾನೂನುಗಳು ಅಡಕಮುದ್ರಿಕೆ (ಸಿ.ಡಿ.) ರೂಪದಲ್ಲಿ ಒಂದೇ ಮೌಸ್ ಕ್ಲಿಕ್ನಲ್ಲಿ ಲಭ್ಯ!

ಕಾನೂನು ವಿದ್ಯಾರ್ಥಿಗಳಿಗೆ, ವಕೀಲರಿಗೆ, ನ್ಯಾಯಾಧೀಶರಿಗೆ, ಕಕ್ಷಿದಾರರಿಗೆ, ಕಾನೂನು ಪಂಡಿತರಿಗೆ, ಆಡಳಿತ ಯಂತ್ರದ ಹಿರಿ ಕಿರಿಯ ಅಧಿಕಾರಿಗಳಿಗೆ, ಕಛೇರಿ ಅಧೀಕ್ಷಕರಿಗೆ, ವ್ಯವಸ್ಥಾಪಕರಿಗೆ, ಸ್ಪಧರ್ಾತ್ಮಕ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳಿಗೆ ಅತ್ಯುಪಯುಕ್ತವಾದ ಈ ಮಾಹಿತಿ ಸಂಗ್ರಹ ಕೋಶ ತಡವಾಗಿಯಾದರೂ ಸಮಗ್ರವಾಗಿ ಹೊರಬಂದಿದ್ದು ಪ್ರತಿ ಆರು ತಿಂಗಳಿಗೊಂದಾವರ್ತಿ ಪರಿಷ್ಕೃತ ಆವೃತ್ತಿ ಅಥವಾ ಪರಿಷ್ಕೃತ ರೂಪದ, ಕಡತ ಸಹಿತವಾದ ಅಂತರಜಾಲದ ಆವೃತ್ತಿ ಹೊರಬರಲಿದೆಯಂತೆ. 1956 ರ ನವೆಂಬರ್ 01 ರಿಂದ ಡಿಸೆಂಬರ್ 2008 ರವರೆಗೆ ರಚಿತವಾದ ರಾಜ್ಯ ಸಕರ್ಾರದ ಎಲ್ಲ ಕಾನೂನುಗಳನ್ನು ಒಂದೆಡೆ ಕ್ರೋಢೀಕರಿಸುವ ಕಾರ್ಯ ಈ ಹಿಂದೆ 10 ಸಂಪುಟಗಳ ಬೃಹತ್ ಸಂಕಲನವಾಗಿ ಪ್ರಕಟಗೊಂಡಿದ್ದು ಅವುಗಳ ಮುಖಬೆಲೆ ರೂ.8000/- ಆಗಿತ್ತು. ಇದೀಗ ಆ ಎಲ್ಲ 10 ಸಂಪುಟಗಳ ಜೊತೆ ಕೇಂದ್ರ ಸರ್ಕಾರದ ಅಧಿನಿಯಮಗಳು, ಸರ್ವೋಚ್ಛ ನ್ಯಾಯಾಲಯದ ತೀರ್ಪುಗಳು, ಕಾನೂನು ಪದಕೋಶ, ಭಾರತದ ಸಂವಿಧಾನ (ತಿದ್ದುಪಡಿಗಳಿಂದ ಕೂಡಿದ ಪರಿಷ್ಕೃತ ಆವೃತ್ತಿ), ಮಾಹಿತಿ ಹಕ್ಕು ಕಾಯ್ದೆ, ಸೇವಾ ನಿಯಮಾವಳಿಗಳು, ಯುವಸಂಸತ್ ಕುರಿತ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ ವಿವರಿಸಲಾಗಿರುವ, ಸುಮಾರು ಮೂವತ್ತು ಸಾವಿರ ಪುಟಗಳಿಗೂ ಮೀರಿರುವ ಮಾಹಿತಿ ಒಳಗೊಂಡಿರುವ, ಕರ್ನಾಟಕದ ಕಾನೂನುಗಳು ಅಡಕಮುದ್ರಿಕೆ (ಸಿ.ಡಿ.) ಕೇವಲ ಇನ್ನೂರು ರೂಪಾಯಿಗಳಿಗೆ ಲಭ್ಯವಿದ್ದು ಅದನ್ನು ಕಳೆದ ಮೇ 29 ರಂದು ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಶ್ರೀ ಎಸ್. ಸುರೇಶ್ ಕುಮಾರ್ ಅವರು ಬಿಡುಗಡೆ ಮಾಡಿದರು.

1996ರ ಜನವರಿಯಿಂದ 24-06-2008ರವರೆಗೆ ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ಹಾಗೂ ಕಾರ್ಯದಶರ್ಿಗಳ ವಿವರವಾದ ಪರಿಚಯ ಹಾಗೂ ಛಾಯಾಚಿತ್ರಗಳು, ಇಲಾಖಾವಾರು ಹಾಗೂ ಕಾಲಾನುಕ್ರಮದಲ್ಲಿ, ಅಕಾರಾದಿಯಾಗಿ ವಿಂಗಡಿಸಲಾಗಿರುವ 313 ಅಧಿನಿಯಮಗಳು, 2001ರಿಂದ 2008ರವರೆಗೆ ಹೊರಡಿಸಲಾಗಿರುವ 34 ಅಧ್ಯಾದೇಶಗಳು ಮತ್ತು ಅಧಿನಿಯಮಗಳು (ತಿದ್ದುಪಡಿ ಸಹಿತ - ವಷರ್ಾವಾರು ವಿಂಗಡಣೆಯೊಂದಿಗೆ), ಕೇಂದ್ರ ಸಕರ್ಾರದ 103 ಅಧ್ಯಾದೇಶಗಳು ಮತ್ತು ಅಧಿನಿಯಮಗಳು (ತಿದ್ದುಪಡಿ ಸಹಿತ - ಅಕಾರಾದಿ ವಿಂಗಡಣೆಯೊಂದಿಗೆ), ಭಾರತದ ಸಂವಿಧಾನ (ತಿದ್ದುಪಡಿಗಳಿಂದ ಕೂಡಿದ ಪರಿಷ್ಕೃತ ಆವೃತ್ತಿ), ಮಾಹಿತಿ ಹಕ್ಕು ಕಾಯ್ದೆ, ಸೇವಾ ನಿಯಮಾವಳಿಗಳು, ಯುವಸಂಸತ್ ಕುರಿತ ವಿಸ್ತೃತ ಮಾಹಿತಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಗಳಲ್ಲಿ, ಹನ್ನೊಂದು ವಿವಿಧ ಶೀರ್ಷಿಕೆಗಳಲ್ಲಿ ಇಲ್ಲಿ ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟಿದೆ. ಜೊತೆಗೆ ಕಾನೂನು ಇಲಾಖೆಯ ಸಮಗ್ರ ಪದಕೋಶ ಇದ್ದು ಇಂಗ್ಲಿಷ್ ಪದಗಳಿಗೆ ಕನ್ನಡ ಹಾಗೂ ಕನ್ನಡ ಪದಗಳಿಗೆ ಇಂಗ್ಲಿಷ್ ಸಂವಾದಿ ಪದಗಳನ್ನು ಒದಗಿಸುವ ಹುಡುಕು ಕಿಟಕಿ (ಸರ್ಚ್ ಎಂಜಿನ್!) ಜೋಡಿಸಲಾಗಿದೆ.

ವರ್ಷಗಟ್ಟಲೇ ಕಡತಗಳ ಸ್ಟ್ರಾಂಗ್ ರೂಂನಲ್ಲಿ ಕೊಳೆಯುವ ಬದಲು ಕಂಪ್ಯೂಟರ್ ಪರದೆಯ ಮೇಲೆ ಮೂಡಿಸಿ, ಓದಿ, ಬೇಕಿದ್ದಲ್ಲಿ ಮುದ್ರಿತ ಪ್ರತಿಯನ್ನು ಕೂಡ ಪಡೆಯುವ ಸೌಲಭ್ಯ ಇರುವ ಈ ಸಿ.ಡಿ. ಈಗಾಗಲೇ ಭರದಿಂದ ಮಾರಾಟವಾಗುತ್ತಿದೆ. ಸಿ.ಡಿ.ಯನ್ನು ಬಳಸುವಾಗ ಸ್ವಲ್ಪ ಮಟ್ಟದ ತಾಂತ್ರಿಕ ಅಡಚಣೆಗಳು ಅಲ್ಲಲ್ಲಿ ಕಂಡುಬಂದಿದ್ದು ಮುಂದಿನ ಪರಿಷ್ಕೃತ ಆವೃತ್ತಿ ಪ್ರಕಟಿಸುವ ಸಂದರ್ಭದಲ್ಲಿ ಅವುಗಳನ್ನು ತಿದ್ದುವ ಕೆಲಸವನ್ನು ಕನ್ನಡ ಗಣಕ ಪರಿಷತ್ತು ಮಾಡಿದಲ್ಲಿ ಇನ್ನೂ ಹೆಚ್ಚು ಆಕರ್ಷಕವಾಗುತ್ತದೆ. ಅದ್ಭುತ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿದ ರಾಜ್ಯ ಸಕರ್ಾರದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆ ಮತ್ತು ಕನ್ನಡ ಗಣಕ ಪರಿಷತ್ಗೆ ಹೃತ್ಪೂರ್ವಕ ಅಭಿನಂದನೆಗಳು.

ಸಿ.ಡಿ. (ಅಡಕಮುದ್ರಿಕೆ) : ಕರ್ನಾಟಕದ ಕಾನೂನುಗಳು (ಆವೃತ್ತಿ ಡಿಸೆಂಬರ್ 2008)

ಪ್ರಕಾಶಕರು : ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ, ಬೆಂಗಳೂರು

ಆವೃತ್ತಿ : ಡಿಸೆಂಬರ್ 2008

ಬೆಲೆ : ರೂ. 200-00

ದೊರೆಯುವ ಸ್ಥಳ : ಸರ್ಕಾರಿ ಪುಸ್ತಕ ಮಾರಾಟ ಮಳಿಗೆಗಳು, ಬೆಂಗಳೂರು.

No comments: