Friday, January 29, 2010

iPad unveiled - Congratulations Mr. Steve Jobs

Akshathe - Collection of Poems by Akshata Konkodi of Bantwala - Congrats Budding Star

Akshathe

Collection of Poems by Akshata Konkodi of Bantwala

Congratulations Budding Star!

Miss Akshatha Konkodi, a 9th standard student of Government High School of Surya Village in Bantwala Taluk of Dakshina Kannada District has brought out a nice collection of poem. Akshathe is a collection of 21 poems composed on various topics. Akshatha, the poetess, is a versatile genius. She has already chaired a poetry symposium at Bantwala Taluku Children's Meet. We wish the child artist a bright future.
Those who want to congratulate this Budding Artist may write to:
Kum. Akshata Konkodi, D/o K Subraya Bhat and Geetha Konkodi, Aasare, Idkidu Post, Bantwala Taluk, Dakshina Kannada District
Phone : 9480367856, 9448488384
Akshathe - the collection of poems can be purchased at
Kallachhu Prakashana, Sri Lakshmi, Land Links Extension, Konchyadi, Mangalore -8
Phone : 9880692447

Monday, January 25, 2010

SSLC 2010 - New Blue Print for Exams - Article in Prajavani Shikshana Section 25th Jan 2010



ಪ್ರಜಾವಾಣಿ » ಶಿಕ್ಷಣ ಪುರವಣಿ



ಎಸ್ಸೆಸ್ಸೆಲ್ಸಿ ಪರಿಷ್ಕೃತ ಪರೀಕ್ಷಾ ಪದ್ಧತಿ

ಬೇದ್ರೆ ಮಂಜುನಾಥ



ಪರಿಷ್ಕೃತ ಪರೀಕ್ಷಾ ಪದ್ಧತಿಗೆ ಅನುಗುಣವಾಗಿ ಬದಲಾದ ಎಸ್ಸೆಸ್ಸೆಲ್ಸಿ ಪ್ರಶ್ನೆಪತ್ರಿಕೆಯ ವಿನ್ಯಾಸ ಹಾಗೂ ಮಾದರಿ ನೀಲನಕಾಶೆ ಅಂತರ್ಜಾಲದಲ್ಲಿ ಲಭ್ಯವಿದೆ.

ಈ ವರ್ಷ ಎಸ್ಸೆಸ್ಸೆಲ್ಸಿ ಪರೀಕ್ಷಾ ಪದ್ಧತಿಯಲ್ಲಿ ಮಹತ್ವದ ಬದಲಾವಣೆಗಳಾಗಿವೆ. ಪ್ರೊ ಎಸ್. ಶ್ರೀಕಂಠಸ್ವಾಮಿಯವರ



ಅಧ್ಯಕ್ಷತೆಯಲ್ಲಿ ಮಂಡಿಸಲಾದ 10ನೇ ತರಗತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಪರಿಷ್ಕರಣಾ ಉಪಸಮಿತಿ ವರದಿ ಹಾಗೂ ಬೆಂಗಳೂರಿನ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಸಂಸ್ಥೆ ಸಲ್ಲಿಸಿದ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಪರಿಷ್ಕರಣೆ ಕುರಿತಂತೆ ಪರಿಣತರ ಮತ್ತು ಶೈಕ್ಷಣಿಕ ಸಮುದಾಯದ ಕ್ರೋಢೀಕೃತ ವರದಿಗಳನ್ನು ಆಧರಿಸಿ ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಹೊಸ ಎಸ್ಸೆಸ್ಸೆಲ್ಸಿ ಪ್ರಶ್ನೆ ಪತ್ರಿಕೆಯ ವಿನ್ಯಾಸ ಹಾಗೂ ಮಾದರಿ ನೀಲನಕಾಶೆ ಮಾರ್ಚ್-2010 ಹೊರತಂದಿದೆ. ಜೊತೆಗೆ ಎಸ್ಸೆಸ್ಸೆಲ್ಸಿ ಪರೀಕ್ಷಾ ನಿರ್ವಹಣಾ ಕೈಪಿಡಿಯನ್ನೂ ಪ್ರಕಟಿಸಿದೆ.

ಈ ನೀಲನಕಾಶೆಯ ಪ್ರತಿಗಳು ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಲಭ್ಯವಿದ್ದರೂ ವಿದ್ಯಾರ್ಥಿಗಳಿಗೆ ನೇರವಾಗಿ ತಲುಪಿಸುವ ದೃಷ್ಟಿಯಿಂದ ಶಿಕ್ಷಕರು, ಪೋಷಕರು ಮತ್ತು ಆಸಕ್ತರ ಅನುಕೂಲಕ್ಕಾಗಿ ಚಿತ್ರದುರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ವಿವಿಧ ವಿಷಯವಾರು ಶಿಕ್ಷಕರ ಕ್ಲಬ್‌ಗಳ ಬ್ಲಾಗ್ ಗಳಲ್ಲಿ ಆಯಾ ವಿಷಯಕ್ಕೆ ಸಂಬಂಧಿಸಿದ ನೀಲನಕಾಶೆಯ ಪ್ರತಿಗಳನ್ನು ಅಪ್‌ಲೋಡ್ ಮಾಡಲಾಗಿದೆ.

ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ವೆಬ್‌ಸೈಟ್ ()ನಲ್ಲಿ ಪಿ.ಡಿ.ಎಫ್. ರೂಪದಲ್ಲಿ ಬಿಡಿ ಬಿಡಿ ಪುಟಗಳಾಗಿ ದೊರೆಯುವ ಈ ನೀಲನಕಾಶೆಯ ಪುಟಗಳು ಚಿತ್ರದುರ್ಗದ ಸಾರ್ವಜನಿಕ ಶಿಕ್ಷಣ ಇಲಾಖೆ ವಿಳಾಸದಲ್ಲಿ ವಿದ್ಯುನ್ಮಾನ ಪುಸ್ತಕ (ಇ-ಬುಕ್) ರೂಪದಲ್ಲಿ ದೊರೆಯುತ್ತದೆ. ಸದ್ಯದಲ್ಲಿಯೇ ಪ್ರಕಟಿಸಲಾಗುವ ಮಾದರಿ ಪ್ರಶ್ನೆಪತ್ರಿಕೆಗಳನ್ನು ವೆಬ್‌ನಲ್ಲಿಯೂ ಅಳವಡಿಸುವ ಯೋಜನೆ ಇದೆ.



ಆಸಕ್ತರು ನೀಲನಕಾಶೆಯ ಪ್ರತಿಗಳನ್ನು ಈ ಕೆಳಕಂಡ ವಿಳಾಸಗಳಿಂದ
ಪಡೆದುಕೊಳ್ಳ ಬಹುದು:

http://bedrefoundation.blogspot.com
www.kseeb.org
http://chitradurgaddpi.blogspot.com
http://chitradurgassa.blogspot.com
http://chitradurgakannada.blogspot.com
http://chitradurgaenglish.blogspot.com
http://chitradurgahindi.blogspot.com
http://chitradurgamaths.blogspot.com
http://chitradurgascience.blogspot.com
http://chitradurgasocialscience.blogspot.com

Official Website of KSEEB




Home

At a Glance

Message

Activities

Circulars

Grievances

Question Bank

What’s New

Downloads

Valuators

Organization

FAQ

Statistics

Contact us


SSLC-2010 Model Question Papers

Question Papers
First Language-Kannada
Second Language-English
Third language-Hindi
Mathematics
Social Science Kannada Medium
Social Science English Medium
Science Phy&Che Kannada Medium
Science Phy&Che English Medium
Science Biology Kannada Medium
Science Biology English Medium

Friday, January 8, 2010

Eyes on the Skies - Wonder DVD on 400 Years of Telescope

Eyes on the Skies
Wonder DVD on 400 Years of Telescope
Very Nice Subtitles in Kannada
Congrats Jawaharlal Nehru Planetarium, Bangalore
These above DVDs are available at
Jawaharlal Nehru Planetarium, Bangalore
and
Karnataka Rajya Vijnana Parishad (KRVP) in Bangalore

Monday, January 4, 2010

Examination Preparation - Please don't make noise! - Article in Prajavani - Shikshana - 04-01-2010




ಪ್ರಜಾವಾಣಿ » ಶಿಕ್ಷಣ ಪುರವಣಿ



ಶ್! ಗಲಾಟೆ ಮಾಡಬೇಡಿ, ಪರೀಕ್ಷಾ ಸಿದ್ಧತೆಯಲ್ಲಿದ್ದೇವೆ

ಬೇದ್ರೆ ಮಂಜುನಾಥ



ಇದು ಧ್ವನಿಮುದ್ರಿತ ಮತ್ತು ವಿದ್ಯುನ್ಮಾನ ಪುಸ್ತಕಗಳ ಕಾಲ. ಪರೀಕ್ಷಾ ಸಿದ್ಧತೆ ಕುರಿತಂತೆ ಹತ್ತಾರು ಅಡಕಮುದ್ರಿಕೆಗಳು, ವಿದ್ಯುನ್ಮಾನ ಪುಸ್ತಕಗಳು ಅಂತರಜಾಲದಲ್ಲಿ ಲಭ್ಯವಿವೆ.

ಜಗತ್ತಿನಲ್ಲಿ ಪ್ರತಿಭಾವಂತರಲ್ಲದವರು ಯಾರೂ ಇಲ್ಲ. ಸಿದ್ಧತೆ ಮತ್ತು ಅವಕಾಶಗಳ ಹದವಾದ ಮಿಶ್ರಣವೇ ಯಶಸ್ಸು. ಪರೀಕ್ಷೆಗೆ ಮುನ್ನ ಉಳಿದಿರುವ ಕೆಲವೇ ದಿನಗಳಲ್ಲಿ, ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪರೀಕ್ಷಾರ್ಥಿಗಳಿಗೆ ಎಲ್ಲ ರೀತಿಯ ನೆರವನ್ನೂ ನೀಡೋಣ. ಟಿ.ವಿ., ಟೇಪ್ ರೆಕಾರ್ಡರ್, ಸಿ.ಡಿ. ಪ್ಲೇಯರ್, ಧ್ವನಿವರ್ಧಕಗಳ ಧ್ವನಿಯನ್ನು ತಗ್ಗಿಸೋಣ. ಅಬ್ಬರಿಸದೇ, ತಗ್ಗಿದ ಸ್ವರದಲ್ಲಿ ಮಾತಾಡುತ್ತಾ ಪ್ರಶಾಂತವಾದ ಓದುವ ವಾತಾವರಣವನ್ನು ಕಲ್ಪಿಸಿಕೊಡೋಣ,. ಪರೀಕ್ಷಾ ಸಂಭ್ರಮದಲ್ಲಿ ಪಾಲ್ಗೊಳ್ಳೋಣ...

ಇನ್ನು ಒಂದೆರಡು ತಿಂಗಳಲ್ಲಿ ಪಿ.ಯು.ಸಿ., ಹಾಗೂ ಎಸ್.ಎಸ್.ಎಲ್.ಸಿ. ಪರೀಕ್ಷೆ ಎಂಬ ಹಬ್ಬಗಳು ಬರುತ್ತಿವೆ. ಪರೀಕ್ಷೆ ಎಂದರೆ ಅದೊಂದು ಸ್ಪರ್ಧಾ ಕಣ, ರಣರಂಗ, ಬಾಕ್ಸಿಂಗ್ ರಿಂಗ್ ಎಂಬ ಭಾವನೆ ಕ್ರಮೇಣ ಬದಲಾಗುತ್ತಾ ಬಂದು ಈಗ ಅದೊಂದು ಯಶಸ್ಸಿನ ಮೆಟ್ಟಿಲು, ಕಲಿಕೆಯನ್ನು ಒರೆಗೆ ಹಚ್ಚುವ ಕಲೆ, ಹಬ್ಬ ಎಂಬ ಪರಿಕಲ್ಪನೆ ಬಲವಾಗುತ್ತಿದೆ. ಪರೀಕ್ಷೆಗೆ ಹೋಗುವುದೇ ಒಂದು ಸಂಭ್ರಮದ ಸಂಗತಿಯಾಗುತ್ತಿದೆ.

ಪರೀಕ್ಷೆಯನ್ನು ಯಶಸ್ವಿಯಾಗಿ ಎದುರಿಸುವುದು ಹೇಗೆ? ಎನ್ನುವ ಶಿಕ್ಷಣತಜ್ಞ ಅರವಿಂದ ಚೊಕ್ಕಾಡಿಯವರ ಕೃತಿ ಈಗಾಗಲೇ ಏಳು ಮುದ್ರಣಗಳನ್ನು ಕಂಡಿದ್ದು ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಹತ್ತಾರು ಸಲಹೆ ಸೂಚನೆಗಳನ್ನು ನೀಡುತ್ತಿದೆ. ‘ಪರೀಕ್ಷೆ ಒಂದು ಹಬ್ಬ : ಸಂಭ್ರಮಿಸಿ’ ಎಂಬ ಕೃತಿಯ ಮೂಲಕ ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ಪರೀಕ್ಷಾ ಗೆಲುವಿನ ಹೆಜ್ಜೆಗಳನ್ನು ಹೇಳಿಕೊಡುತ್ತಿರುವ ಅಂತರರಾಷ್ಟ್ರೀಯ ವ್ಯಕ್ತಿತ್ವ ವಿಕಸನ ತರಬೇತುದಾರ ಆರ್. ಎ. ಚೇತನ್ ರಾಂ ಹತ್ತಾರು ಸೂತ್ರಗಳನ್ನು ರಚಿಸಿ, ಜಗತ್ತಿನಲ್ಲಿ ಪ್ರತಿಭಾವಂತರಲ್ಲದವರು ಯಾರೂ ಇಲ್ಲ, ಸಿದ್ಧತೆ ಮತ್ತು ಅವಕಾಶಗಳ ಹದವಾದ ಮಿಶ್ರಣವೇ ಯಶಸ್ಸು ಎನ್ನುತ್ತಾರೆ. ಓದಿದರೆ ಖುಷಿಯಾಗುವಂತೆ ಬರೆಯಬೇಕು, ಅನಗತ್ಯವಾದುದನ್ನು ಬರೆಯಬಾರದು, ಅಗತ್ಯವಾದುದನ್ನು ಬರೆಯದೇ ಇರಬಾರದು, ಸೂತ್ರ ತಿಳಿಯದೇ ಯಶಸ್ಸಿಲ್ಲ, ಕಷ್ಟಪಡದೇ ಫಲವಿಲ್ಲ ಎನ್ನುವ ಎಚ್ಚರಿಕೆಯನ್ನೂ ನೀಡುತ್ತಾರೆ. ಮತ್ತೊಬ್ಬ ಶಿಕ್ಷಣ ತಜ್ಞ ಪಿ. ಚಂದ್ರಶೇಖರಯ್ಯ ಅವರ ‘ಪರಿಣಾಮಕಾರಿ ಓದು, ಏನು? ಹೇಗೆ?’ ಕೃತಿ ಪರೀಕ್ಷೆಗಷ್ಟೇ ಅಲ್ಲದೇ ಜೀವನಕ್ಕೆ ಉಪಯುಕ್ತವಾಗುವ ಓದಿನ ಪರಿಯನ್ನು ಹೇಳಿಕೊಡುತ್ತಿದೆ.



ಇದು ಧ್ವನಿಮುದ್ರಿತ ಮತ್ತು ವಿದ್ಯುನ್ಮಾನ ಪುಸ್ತಕಗಳ ಕಾಲ. ಪರೀಕ್ಷಾ ಸಿದ್ಧತೆ ಕುರಿತಂತೆ ಹತ್ತಾರು ಅಡಕಮುದ್ರಿಕೆಗಳು, ವಿದ್ಯುನ್ಮಾನ ಪುಸ್ತಕಗಳು ಅಂತರಜಾಲದಲ್ಲಿ ಲಭ್ಯವಿವೆ. ಕನ್ನಡದಲ್ಲಿಯೂ ಇಂತಹ ಪ್ರಯತ್ನ ನಡೆಸಿ ಯಶಸ್ವಿಯಾದವರಲ್ಲಿ ನಾಗತಿಹಳ್ಳಿ ಜಯಪ್ರಕಾಶರ ‘ಪರೀಕ್ಷೆ’ ಎಂಬ ಸಿ.ಡಿ. ಮತ್ತು ಆರ್. ಎ. ಚೇತನ್ ರಾಂ ಅವರ ‘ಪರೀಕ್ಷೆ ಒಂದು ಹಬ್ಬ; ಬನ್ನಿ ಆಚರಿಸೋಣ’, ‘ಓದು- ಅಧ್ಯಯನ ಸೂತ್ರಗಳು’, ‘ಸಾಧ್ಯವೆಂದರೆ ಸಾಧ್ಯ’ ಎಂಬ ಧ್ವನಿಪುಸ್ತಕಗಳಿವೆ.

ನಿರ್ದಿಷ್ಟ ತರಗತಿಯ, ನಿರ್ದಿಷ್ಟ ವಿಷಯಗಳ ಪರೀಕ್ಷಾ ಸಿದ್ಧತೆಗೆಂದೇ ಮೀಸಲಾದ ಹಲವು ಪುಸ್ತಕಗಳು ಮಾರುಕಟ್ಟೆಗೆ ಬಂದಿವೆ. ಶಾಲಾ ಕಾಲೇಜು ಪಠ್ಯಪುಸ್ತಕ, ನೋಟ್ಸ್‌ಗಳ ಜೊತೆ ಹುಮ್ಮಸ್ಸು ಇಮ್ಮಡಿಗೊಳಿಸುವ ಪರೀಕ್ಷಾ ಸಿದ್ಧತೆಯ ಕೈಪಿಡಿಗಳನ್ನು, ಭಾಷಣಗಳನ್ನು ಓದಿ, ಕೇಳಿ, ಬರೆಯುವ ವಿಧಾನದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿಕೊಂಡಲ್ಲಿ ಯಶಸ್ಸು ನಿಮ್ಮದೇ. ಪರೀಕ್ಷೆಗಳು ನಮ್ಮ ಜ್ಞಾನದ ಮಟ್ಟವನ್ನು ಅಳೆಯುವ ಅಳತೆಗೋಲುಗಳಷ್ಟೇ ಅಲ್ಲ ನಮ್ಮ ಭವಿಷ್ಯತ್ತಿಗೆ ಭದ್ರ ಬುನಾದಿ ಒದಗಿಸುವ ಅಂಕಪಟ್ಟಿ ಎಂಬ ರಹದಾರಿ ಪತ್ರಗಳನ್ನೂ ನೀಡುತ್ತವೆ. ಪೋಷಕರ ಅಗಾಧ ನಿರೀಕ್ಷೆಗಳನ್ನು, ನಿಮ್ಮ ಕನಸುಗಳನ್ನು ನನಸಾಗಿಸಲು ಇರುವ ಪರೀಕ್ಷೆ ಎಂಬ ಸವಾಲನ್ನು ಹಬ್ಬದಂತೆ ಸಂಭ್ರಮದಿಂದ ಆಚರಿಸಲು ಸಿದ್ಧತೆ ನಡೆಸಿದಲ್ಲಿ ಯಾವುದೂ ಕಷ್ಟವಾಗಲಾರದು.

ಪರೀಕ್ಷೆಗೆ ಮುನ್ನ ಉಳಿದಿರುವ ಕೆಲವೇ ದಿನಗಳಲ್ಲಿ, ಪೂರ್ವಸಿದ್ಧತಾ ಪರೀಕ್ಷೆಗಳನ್ನೂ ಸೇರಿಸಿಕೊಂಡು, ಸ್ವತಃ ಒಂದಷ್ಟು ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡು ಉತ್ತರಿಸುವ ಪರಿಪಾಠ ಬೆಳೆಸಿಕೊಳ್ಳುವ ಈ ಅಪರೂಪದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಪರೀಕ್ಷಾರ್ಥಿಗಳಿಗೆ ಎಲ್ಲ ರೀತಿಯ ನೆರವನ್ನೂ ನೀಡೋಣ. ಟಿ.ವಿ., ಟೇಪ್ ರೆಕಾರ್ಡರ್, ಸಿ.ಡಿ. ಪ್ಲೇಯರ್, ಧ್ವನಿವರ್ಧಕಗಳ ಧ್ವನಿಯನ್ನು ತಗ್ಗಿಸೋಣ. ಅಬ್ಬರಿಸದೇ, ತಗ್ಗಿದ ಸ್ವರದಲ್ಲಿ ಮಾತಾಡುತ್ತಾ ಪ್ರಶಾಂತವಾದ ಓದುವ ವಾತಾವರಣವನ್ನು ಕಲ್ಪಿಸಿಕೊಡೋಣ. ಪರೀಕ್ಷಾ ಸಂಭ್ರಮದಲ್ಲಿ ಪಾಲ್ಗೊಳ್ಳೋಣ. ಅಲ್ಲವೇ?