Maha Pralaya 2012 ?
Pralaya 2012 - A Book to Create Awareness regarding the Big Hoax Pralaya 2010
by Dr. S. Balachandra Rao
Hon'ble Director, Gandhian Studies Centre, Bharateeya Vidya Bhavan, Bangalore
Published by Bharat Gyan Vigyan Samithi (BGVS), Karnataka, Bangalore - 560 012
Price: Rs.20/-
ಕೃತಿ : ಪ್ರಳಯ 2012
ಲೇಖಕರು : ಪ್ರೊ. ಎಚ್. ಆರ್. ರಾಮಕೃಷ್ಣ ರಾವ್
ಪ್ರಕಾಶಕರು : ಭಾರತ ಜ್ಞಾನ ವಿಜ್ಞಾನ ಸಮಿತಿ, ಕನರ್ಾಟಕ, ಬೆಂಗಳೂರು.
ಪುಟಗಳು : 36 ಬೆಲೆ : ರೂ. 10-00
ಕೃತಿ : ಮಹಾಪ್ರಳಯ 2012
ಲೇಖಕರು : ಡಾ. ಎಸ್. ಬಾಲಚಂದ್ರರಾವ್

ಪುಟಗಳು : 56 ಬೆಲೆ : ರೂ. 20-00
ಕೃತಿ : 2012ರಲ್ಲಿ ಪ್ರಳಯ ಸಂಭವವೇ? ಭೂಮಿ ಸುರಕ್ಷಿತವೇ?
ಲೇಖಕರು : ಶ್ರೀಕಾಂತ್ ವಿ. ಬಲ್ಲಾಳ್
ಪ್ರಕಾಶಕರು : ಸಪ್ತಗಿರಿ ಪ್ರಕಾಶನ, ಮನವತರ್ಿಪೇಟೆ, ಬೆಂಗಳೂರು.
ಪುಟಗಳು : 56 ಬೆಲೆ : ರೂ. 20-00
ಕಳೆದ ಎರಡು ದಶಕಗಳಿಂದ ಕನರ್ಾಟಕದಲ್ಲಿ ಜ್ಞಾನ ವಿಜ್ಞಾನ ಪ್ರಸಾರದಲ್ಲಿ ಸಕ್ರಿಯವಾಗಿರುವ ಭಾರತ ಜ್ಞಾನ ವಿಜ್ಞಾನ ಸಮಿತಿ ಕಾಲಕಾಲಕ್ಕೆ ವಿದ್ಯಾಥರ್ಿಗಳ, ಶಿಕ್ಷಕರ ಮತ್ತು ಜನಸಾಮಾನ್ಯರ ಅಗತ್ಯಕ್ಕೆ ತಕ್ಕ ಮಾರ್ಗದಶರ್ಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಜನಜಾಗೃತಿ ಉಂಟುಮಾಡುವ ಉಪಯುಕ್ತ ಕೃತಿಗಳನ್ನು ಪ್ರಕಟಿಸಿ, ಕನ್ನಡದಲ್ಲಿ ವಿಜ್ಞಾನ ಸಾಹಿತ್ಯದ ಪ್ರಚಾರಕ್ಕೆ ಟೊಂಕಕಟ್ಟಿ ನಿಂತಿದೆ. ಗ್ರಹಣಗಳ ಸಂದರ್ಭದಲ್ಲಿ ಗ್ರಹಣೋತ್ಸವದ ಕನ್ನಡಕ ಮತ್ತು ಪುಸ್ತಕಗಳನ್ನು ಹೊರತಂದು ಮೂಢನಂಬಿಕೆಯ ವಿರುದ್ಧ ಸಮರ ಸಾರುವ ಹಲವು ಕಾರ್ಯಕ್ರಮಗಳನ್ನು ನಡೆಸಿ ಯಶಸ್ವಿಯಾಗಿದೆ. ಇದೀಗ ಮಹಾಮಾರಿಯಂತೆ ಕಾಡುತ್ತಿರುವ ಬೌದ್ಧಿಕ ಪ್ಲೇಗ್ 'ಪ್ರಳಯ 2012' ಕ್ಕೆ ಮದ್ದು ಅರೆಯುವ ಸಲುವಾಗಿ ಖ್ಯಾತ ವಿಜ್ಞಾನಿಗಳಿಂದ ಸುಲಭ ಬೆಲೆಯ ಸರಳ ನಿರೂಪಣೆಯ ಪುಸ್ತಕಗಳನ್ನು ಪ್ರಕಟಿಸಿದೆ.
ಪ್ರಳಯ ಕುರಿತಂತೆ ಹತ್ತಾರು ಪುಸ್ತಕಗಳೂ ಜನರ ಕೈಯಿಂದ ಕೈಗೆ ಬದಲಾಗುತ್ತಲೇ ಇವೆ. ಇದೀಗ ತಾನೇ ಮಾರುಕಟ್ಟೆಗೆ ಪ್ರವೇಶಿಸಿರುವ, ಕನರ್ಾಟಕ ಜ್ಞಾನ ವಿಜ್ಞಾನ ಸಮಿತಿ ಪ್ರಕಟಿಸಿರುವ, ಪ್ರೊ. ಎಚ್. ಆರ್. ರಾಮಕೃಷ್ಣ ರಾವ್ ಅವರ ಪ್ರಳಯ-2012, ಡಾ. ಎಸ್. ಬಾಲಚಂದ್ರರಾವ್ ಅವರ ಮಹಾಪ್ರಳಯ 2012? ಮತ್ತು ಸಪ್ತಗಿರಿ ಪ್ರಕಾಶನ ಪ್ರಕಟಿಸಿರುವ ಶ್ರೀಕಾಂತ್ ವಿ. ಬಲ್ಲಾಳ್ ಅವರ 2012ರಲ್ಲಿ ಪ್ರಳಯ ಸಂಭವವೇ? ಭೂಮಿ ಸುರಕ್ಷಿತವೇ? ಕೃತಿಗಳು ವಸ್ತುನಿಷ್ಠವಾಗಿ ಪ್ರಳಯದ ವಿಶ್ಲೇಷಣೆ ಮಾಡುವಲ್ಲಿ ಯಶಸ್ವಿಯಾಗಿವೆ ಎನ್ನಬಹುದು.
ಪ್ರೊ. ಎಚ್. ಆರ್. ರಾಮಕೃಷ್ಣರಾಯರು ಪ್ರಳಯ-2012 ಕೃತಿಯಲ್ಲಿ ವೈಜ್ಞಾನಿಕವಾದ ಸತ್ಯವನ್ನು ಸಾಕ್ಷ್ಯಾಧಾರಗಳನ್ನು ವಿಶ್ಲೇಷಣೆಗಳೊಂದಿಗೆ ಮಂಡಿಸಿದರೆ, ಡಾ. ಎಸ್. ಬಾಲಚಂದ್ರರಾವ್ ಅವರು ಪುರಾತನ ಭಾರತೀಯ ಖಗೋಳ ವಿಜ್ಞಾನದ ಹಿನ್ನೆಲೆಯನ್ನು, ಗಣಿತಶಾಸ್ತ್ರವನ್ನು ಆಳವಾಗಿ ಅಧ್ಯಯನ ಮಾಡಿ ಅಗತ್ಯವೆನಿಸಿದ ಟಿಪ್ಪಣಿಗಳೊಂದಿಗೆ ಮಹಾಪ್ರಳಯ-2012? ಕೃತಿ ರಚಿಸಿಕೊಟ್ಟಿದ್ದಾರೆ. ಶ್ರೀಕಾಂತ್ ಬಲ್ಲಾಳರ ಕೃತಿ, ಪುರಾಣ, ಇತಿಹಾಸ, ಐತಿಹ್ಯ, ಜ್ಯೋತಿಷ ಹೀಗೆ ಎಲ್ಲಾ ಸರಕನ್ನೂ ತಗಲಿಸಿಕೊಂಡು 'ಕುದುರೆಗಿಂತ ಲದ್ದಿ ಬಿರುಸು' ಎನಿಸುವಂತೆ ಮಾಡಿ, ಸತ್ಯಯುಗವೆಂಬ ಒಳ್ಳೆಯ ಸಮಯ ಬಂದುಬಿಟ್ಟರೆ ಜ್ಯೋತಿಷಿಗಳಿಗೆ, ಭವಿಷ್ಯಕಾರರಿಗೆಲ್ಲಾ ಕೆಲಸವಿರುತ್ತಾ? ಎಂಬ ಪ್ರಶ್ನೆಯನ್ನು ಕೇಳಿ ಮಾಯನ್ ಕ್ಯಾಲೆಂಡರಿನಂತೆ ಸುಮ್ಮನಾಗಿಬಿಡುತ್ತದೆ! ಡಾ. ಬಾಲಚಂದ್ರರಾಯರ ಕೃತಿ ಇತಿಹಾಸ, ಪುರಾಣ, ನಂಬಿಕೆಗಳು ಮತ್ತು ವೈಜ್ಞಾನಿಕ ಕಾರಣಗಳನ್ನು ಆಳವಾಗಿ ವಿಶ್ಲೇಷಿಸಿ, ಅಂತಿಮವಾಗಿ ಪ್ರಳಯ ಅನ್ನುವ ಕಲ್ಪನೆಯೇ ಸುಳ್ಳು ಎಂದು ಸಾಧಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿದೆ. ಮಾಹಿತಿಯ ವಿಶ್ಲೇಷಣೆ ಎಂತಹವರಿಗೂ ಸುಲಭವಾಗಿ ಅರ್ಥವಾಗುವಂತಿದೆ.
ಈ ಮೂರೂ ಕೃತಿಗಳಲ್ಲಿ ನಮ್ಮ ನಂಬುಗೆಯನ್ನು ಪ್ರಶ್ನಿಸುವ, ಗಟ್ಟಿಗೊಳಿಸುವ ಮತ್ತು ಅಹುದಹುದೆನ್ನುವಂತೆ ಮಾಡುವ ಕೆಲವು ಅಂಶಗಳಿವೆ. ವಿವಿಧ ಮೂಲಗಳಿಂದ ಆಯ್ದುಕೊಂಡಿರುವ ಮಾಹಿತಿ ಎಷ್ಟರ ಮಟ್ಟಿಗೆ ವಿಶ್ವಾಸಾರ್ಹ ಎನ್ನುವ ಪ್ರಶ್ನೆಯೂ ಮೂಡುತ್ತದೆ. ಕೇವಲ ವಿಷಯಗಳನ್ನು ಮಂಡಿಸಿ, ತಕರ್ಿಸಿ, ತೀಮರ್ಾನವನ್ನು ತೆಗೆದುಕೊಳ್ಳಲು ನಮಗೇ ಸೂಚಿಸುವ ಕೃತಿಗಳು ಬೇಗನೇ ಕಣ್ಮರೆಯಾಗುತ್ತವೆ. ನಿದರ್ಿಷ್ಟ ಪರಿಹಾರದ ಮಾರ್ಗ ತೋರಿಸಲು ನಿದರ್ಿಷ್ಟತೆಯೇ ಪ್ರಶ್ನಿಸಲ್ಪಡುವ ಸಂದರ್ಭವಿರುವುದರಿಂದ ಅದು ಆಗದ ಮಾತು. ಕಾಲ ಎಂಬುದು ಸಾಪೇಕ್ಷವಾದದ್ದು. ಕಾಲದ ಅಳತೆಯೂ ಸಾಪೇಕ್ಷವೇ. ಮಾನವಕುಲದ ಇತಿಹಾಸವೆಂಬುದು ಕಾಲಚಕ್ರದಲ್ಲಿ ಮೂಡಿಬಂದಿರುವ ಕೆಲವು ಹೆಜ್ಜೆಗುರುತುಗಳಷ್ಟೇ. ಅವರವರ ಭಾವಕ್ಕೆ, ಅವರವರಿಗೆ ಸರಿದೋರಿದಂತೆ, ಈ ಹೆಜ್ಜೆಗುರುತುಗಳ ವಿಶ್ಲೇಷಣೆ ನಡೆದಿದೆ, ಅಷ್ಟೇ!
ಮಾಯನ್ ಕ್ಯಾಲೆಂಡರ್ ಎಂಬ ಅಮೂರ್ತ ಕಲ್ಪನೆಯನ್ನು ಮೂರ್ತರೂಪಕ್ಕೆ ತಂದು ಅರ್ಧ ಶತಮಾನವೂ ಕಳೆದಿಲ್ಲ. ತಿಂಗಳಿಗೆ ಕೇವಲ 20 ದಿನಗಳಿದ್ದ ಈ ಕ್ಯಾಲೆಂಡರ್, ಕ್ರಿಸ್ತ ಶಕೆ ಪ್ರತಿಪಾದಿಸಿರುವ ಗ್ರೆಗರಿಯನ್ ಕ್ಯಾಲೆಂಡರ್ ಮತ್ತು ಶಾಲಿವಾಹನ ಶಕೆ, ವಿಕ್ರಮ ಶಕೆ, ಹಿಜರಿ ಶಕೆ, ಇತ್ಯಾದಿ ಜಗತ್ತಿನಾದ್ಯಂತ ಇರುವ ನೂರಾರು ಕ್ಯಾಲೆಂಡರುಗಳನ್ನು ಒಂದೆಡೆ ಇಟ್ಟುಕೊಂಡು ಪರಸ್ಪರ ತಾಳೆ ನೋಡಿದರೆ ಸಾಪೇಕ್ಷ ಕಾಲದ ಅಳತೆಯನ್ನು ಎಷ್ಟು ಸಮಗ್ರವಾಗಿ ಗ್ರಹಿಸಲು ಸಾಧ್ಯ ಎಂಬುದು ತಿಳಿಯುತ್ತದೆ. ಒಂದೊಂದರದ್ದೂ ಒಂದೊಂದು ದಿಕ್ಕು! ಆಯಾ ಕಾಲಘಟ್ಟಗಳಲ್ಲಿ, ಸ್ಥಳೀಯ ಅನುಕೂಲತೆಗೆ ಅನುಗುಣವಾಗಿ ರಚಿತವಾಗಿರುವ ಈ ಕಾಲಗಣಕಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡರೂ ಅವೆಲ್ಲವೂ 2012, ಡಿಸೆಂಬರ್ 21 ಎಂಬದೇ ಪ್ರಳಯದ ದಿನವೆಂದು ಕರಾರುವಾಕ್ಕಾಗಿ ನಿರ್ಧರಿಸುವಲ್ಲಿ ಖಂಡಿತಾ ಯಶಸ್ವಿಯಾಗಲಾರವು!
2012 ರಲ್ಲಿ ಪ್ರಳಯ - ಯುಗಾಂತಂ - ಎಲ್ಲವೂ ವಿನಾಶ - ಎಂಬ ಅವೈಜ್ಞಾನಿಕ ಪರಿಕಲ್ಪನೆಯನ್ನು ಎಷ್ಟು ಹೆಚ್ಚಿನ ಮಟ್ಟದಲ್ಲಿ ಸಾಧ್ಯವೋ ಅಷ್ಟರ ಮಟ್ಟಿಗೆ ವ್ಯಾವಹಾರಿಕವಾಗಿ ಬಳಸಿಕೊಳ್ಳಲು ಆರಂಭವಾಗಿ ದಶಕಗಳೇ ಕಳೆದಿವೆ. 1999 ರ ಮೇನಲ್ಲಿ ಪ್ರಳಯ ಆಗಿಯೇ ಬಿಡುತ್ತದೆ ಎಂಬ ಹುಸಿ ನುಡಿಗಳನ್ನು ನಂಬಿ ಪ್ರಾಣತ್ಯಾಗ ಮಾಡಿದ ರೇಲಿಯೆನ್ಸ್ ಪಂಗಡದ ಸದಸ್ಯರಿಗಿಂತ ಮೂಖರ್ಾತಿಮೂರ್ಖರು ಈಗ ಹೊಸದಾಗಿ ನಮ್ಮ ನಡುವೆ ಹುಟ್ಟಿಬಿಟ್ಟಿದ್ದಾರೆ! ದಿನಾ ಬೆಳಗ್ಗೆ, ರಾತ್ರಿ ಮೂರ್ಖರ ಪೆಟ್ಟಿಗೆಯಲ್ಲಿ ತೌಡುಕುಟ್ಟುತ್ತಲೇ ಇದ್ದಾರೆ! ಪತ್ರಿಕೆಗಳಿಗಂತೂ ಇದೊಂದು ರುಚಿಕರ ಖಾದ್ಯ! ಹಿಮಪರ್ವತಗಳಲ್ಲಿ ಉತ್ಪಾತ ಉಂಟಾಗುತ್ತದೆ ಎಂಬ ಊಹೆಗೆ ಸೊಪ್ಪು ಹಾಕದ ಅಲ್ಲಿನ ಜನ ನಿರುಮ್ಮಳರಾಗಿ, ನೆಮ್ಮದಿಯ ನಿದ್ದೆ ಮಾಡುತ್ತಿದ್ದರೆ ಕನರ್ಾಟಕದ ಕೆಲವು ಟಿ.ವಿ. ಚಾನೆಲ್ಲುಗಳು ಮಾತ್ರ ಪ್ರತಿ ರಾತ್ರಿ ಪ್ರಳಯದ ತುರಿಕೆ ಬರಿಸಿ, ನಿದ್ದೆಯೋಡಿಸುವ ಸಂಕಲ್ಪ ಮಾಡಿದಂತಿವೆ!
ಪತ್ರಿಕೆಗಳಲ್ಲಿ ಪುಂಖಾನುಪುಂಖವಾಗಿ ಪರ-ವಿರೋಧದ ಹೇಳಿಕೆಗಳು ಪ್ರಕಟವಾಗುತ್ತಲೇ ಇವೆ. ಹೋರಾಶಾಸ್ತ್ರಿಗಳು, ಚೌಕಾಬಾರದ ಸಂಖ್ಯಾಶಾಸ್ತ್ರಿಗಳು, ಪಂಚಾಂಗದ ಪಟಾಲಂ ಲ್ಯಾಪ್ಟಾಪ್ ಇಟ್ಟುಕೊಂಡು ದಿವ್ಯದರ್ಶನದಲ್ಲಿ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರೆ ಅವುಗಳನ್ನು ಖಂಡಿಸುತ್ತಾ, ಇದಮಿತ್ಥಂ ಎಂಬುದನ್ನು ತೋರಿಸಿಕೊಡಲು ವೈಜ್ಞಾನಿಕ ಚಿಂತಕರು, ವಿಜ್ಞಾನಿಗಳು, ಖಗೋಳಜ್ಞರು ವಿವರಣೆ ನೀಡಲು ಪದಗಳಿಗಾಗಿ ಹುಡುಕಾಡುತ್ತಿದ್ದಾರೆ. ಹೋಮ-ಹವನ-ಪುರಸ್ಕಾರಗಳಂತಹ ವೈದಿಕ ಆಚರಣೆಗಳಿಗೂ, ಪ್ರಾರ್ಥನೆ, ಬಲಿ, ಕೋಲಗಳಂತಹ ಪ್ರಾದೇಶಿಕ ವೈವಿಧ್ಯಕ್ಕೂ ಈ ವ್ಯಾಧಿಯ ವಿಸ್ತರಣೆಯಾಗಿದೆ. ಪ್ರಳಯ ತಡೆಯಲು ಸಾಧ್ಯವಿಲ್ಲವಾದ್ದರಿಂದ ಬದುಕಿ ಉಳಿಯಲು ಹೊಸ ಮಾರ್ಗ ಹುಡುಕುವ ಮಾಗರ್ಾನ್ವೇಶಕರ ತಂಡಗಳೇ ವಿತಂಡವಾದದಲ್ಲಿ ಮುಳುಗಿವೆ! ಡಾ. ಬಾಲಚಂದ್ರರಾವ್ ಅವರು ಈ ಚಾನೆಲ್ಲುಗಳ ವಿರುದ್ಧ ಸಮರಸಾರಿದ್ದರೆ, ಪ್ರೊ. ರಾಮಕೃಷ್ಣರಾವ್ ಅವರು ಜನರನ್ನು ವೈಜ್ಞಾನಿಕ ಚಿಂತನೆಯೆಡೆಗೆ ಕರೆದೊಯ್ಯುವ ಸಾಹಸ ಮಾಡಿದ್ದಾರೆ. ಈ ಮೂರೂ ಕೃತಿಗಳು 2012ರಲ್ಲಿ ಅಂತಹ ವಿಶೇಷವಾದದ್ದು ಏನೂ ಆಗದು ಎನ್ನುವದನ್ನು ಘೋಷಿಸಲು ತಮ್ಮ ತಮ್ಮ ಆಧಾರಗ್ರಂಥಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಇದರ ಆಧಾರದಲ್ಲಿ ರಾಜ್ಯ, ರಾಷ್ಟ್ರದಾದ್ಯಂತ ಚಚರ್ೆಗಳು ನಡೆದು ಮೂರ್ಖರ ಪೆಟ್ಟಿಗಳಲ್ಲಿ ಬರುವ ಅರ್ಥಹೀನ ಬ್ರಹ್ಮಾಂಡ ಕಾರ್ಯಕರ್ಮಗಳನ್ನು ಓಡಿಸಬೇಕಾಗಿದೆ.
ಜೀವಿಗಳ ಶರೀರದಲ್ಲಿ ಪ್ರತಿ ಕ್ಷಣವೂ ಕೋಟಿಗಟ್ಟಲೇ ಜೀವಕೋಶಗಳು ಸಾಯುತ್ತವೆ ಮತ್ತು ಅದಕ್ಕೂ ಹೆಚ್ಚು ಸಂಖ್ಯೆಯ ಹೊಸ ಜೀವಕೋಶಗಳು ಹುಟ್ಟುತ್ತವೆ. ಕ್ಷಣ ಕ್ಷಣವೂ ಜೀವಕೋಶಗಳಿಗೆ ಪ್ರಳಯವೇ! ಪ್ರಳಯದಿಂದಲೇ ಹೊಸ ಹುಟ್ಟು, ಬೆಳವಣಿಗೆ! ಹಳೆಯ ಚಿಂತನೆಗಳ ಮೇಲೆ ಹೊಸ ಚಿಂತನೆಗಳ ಲೇಪ. ಹಳೆ ಬೇರು ಹೊಸ ಚಿಗುರು ಕೂಡಿರಲು ಮರಸೊಬಗು. ಹೊಸ ತತ್ವದೊಡನೆ ವಿಜ್ಞಾನ ಕಲೆ ಮೇಳವಿಸಿದರೆ ಜೀವನ ಸಾರ್ಥಕವಾಗುತ್ತದೆ ಎನ್ನುವ ಕಗ್ಗದ ನುಡಿಯೇ ದಾರಿದೀಪ.
ಜಗತ್ತು ಹೊಸ ವಿಜ್ಞಾನದ ಹೊಸ್ತಿಲಲ್ಲಿದೆ. ಪ್ರಗತಿಯ ಹಾದಿಯ ಪಯಣ ಸುದೀರ್ಘವಾದರೂ ಆನಂದದಾಯಕವಾದದ್ದು. ಅನಗತ್ಯವಾದ, ಜೀವ ವಿರೋಧಿ, ವಿನಾಶದ ಚಿಂತೆಗಳಿಂದ ವಿಚಲಿತರಾಗದೆ, ಬರುವ ಕಠಿಣ ಸವಾಲುಗಳನ್ನು ಎದುರಿಸುವ ಸಿದ್ಧತೆಗಳನ್ನು ಮಾಡಿಕೊಂಡು, ವಿಜ್ಞಾನದ ಭದ್ರ ಬುನಾದಿಯ ಮೇಲೆ ಮಾನವತೆಯ ಕಟ್ಟಡ ಕಟ್ಟುವ ಪ್ರಯತ್ನ ಸಾಗಬೇಕಾಗಿದೆ. ಅದಕ್ಕೆಂದೇ ಹಲವು ಪ್ರಾಜ್ಞರು ದುಡಿಯುತ್ತಲೂ ಇದ್ದಾರೆ. ಸುಮ್ಮನಿರಲಾದರೆ ಇರುವೆ ಬಿಟ್ಟುಕೊಂಡವರಂತೆ ಸಮೂಹ ಸನ್ನಿಗೊಳಗಾಗಿ ಹುಯಿಲೆಬ್ಬಿಸುವ ಧೂರ್ತರ ಹುನ್ನಾರಗಳಿಗೆ ಬಲಿಯಾಗದೆ, ಯತಾರ್ಥ ಏನೆಂದು ಗ್ರಹಿಸಿ, ದೃಢಮನಸ್ಸಿನಿಂದ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ, ಪ್ರಗತಿಪರ ಕೆಲಸಗಳಲ್ಲಿ ತೊಡಗಿ, ದೆವ್ವನ ಕಾಖರ್ಾನೆಯಾಗಬಹುದಾದ ಖಾಲಿತಲೆಯನ್ನು ಒಳ್ಳೆಯ ವಿಚಾರಗಳಿಂದ ತುಂಬಿ, ಕ್ರಿಯಾಶೀಲ ಚೇತನವನ್ನಾಗಿಸಿದರೆ ಯಾವ ಪ್ರಳಯವೂ ಬಾಧಿಸದು. ಸುಮ್ಮನೇ ಹುಯಿಲೆಬ್ಬಿಸುವ ಪ್ರಳಯದ ಕಲಿಗೆ ಕಲಿಯುಗ ವಿಪರೀತರಾಗುವ ಸಂದರ್ಭ ಇದು.
ಪ್ರಳಯವೆಂಬ ಯಕಃಶ್ಚಿತ್ ಸಂಶಯ ಕೀಟವನ್ನು ನಿವಾರಿಸಲು ಅಧ್ಯಯನವೆಂಬ ದಿವ್ಯೌಷಧಿಯೇ ಬೇಕು. ವಿಶ್ವ ರಹಸ್ಯದ ಕೀಲಿಕೈ ಹುಡುಕುತ್ತಿರುವ ಈ ಹೊತ್ತಿನಲ್ಲಿ ಇಲ್ಲದ್ದನ್ನು ಕುರಿತು ಚಿಂತಿಸದೆ, ನಾವೇ ಹುಡುಕಿ, ಸೃಷ್ಟಿ ಕ್ರಿಯೆ ಅರ್ಥಕಂಡುಕೊಳ್ಳಲು ನೆರವಾಗುವ ವೈಜ್ಞಾನಿಕ ಸಾಹಿತ್ಯ, ವಿಶ್ಲೇಷಣೆಗಳನ್ನು ಅಧ್ಯಯನ ಮಾಡೋಣ, ಜ್ಞಾನ ವಿಜ್ಞಾನ ಸಮಿತಿಯ ಪ್ರಯತ್ನಕ್ಕೆ ಶುಭಕೋರೋಣ, ಅಲ್ಲವೇ?
ಬೇದ್ರೆ ಮಂಜುನಾಥ
ಬೇದ್ರೆ ಪ್ರತಿಷ್ಠಾನ - ಅನೌಪಚಾರಿಕ ಶಿಕ್ಷಣ, ಸಂಶೋಧನೆ ಮತ್ತು ತರಬೇತಿ ಸಂಸ್ಥೆ, ಟೀಚರ್ಸ್ ಕಾಲನಿ, ಚಿತ್ರದುರ್ಗ
ವಿಳಾಸ: ಕಾರ್ಯಕ್ರಮ ನಿವರ್ಾಹಕರು, ಆಕಾಶವಾಣಿ ಕೇಂದ್ರ, ಚಿತ್ರದುರ್ಗ - ಫೋ: 9448589089

ಪ್ರಳಯ 2012 ಎಂಬ ಬೌದ್ಧಿಕ ಪ್ಲೇಗ್ ವಿಶ್ಲೇಷಿಸುವ ಮೂರು ಕೃತಿಗಳು

No comments:
Post a Comment