ಮನಸೆಳೆಯುವ ಚಿಕನ್ ವೈಯರ್ ಕಲಾಕೃತಿಗಳು
ಕಲೆಯನ್ನು ಬಿಂಬಿಸುವ ನೂತನ ಮಾಧ್ಯಮಕ್ಕಾಗಿ, ವಿನೂತನ ಪ್ರಕಾರಕ್ಕಾಗಿ ಕಲಾವಿದರೆಲ್ಲರೂ ಸತತ ಹುಡುಕಾಡ ನಡೆಸುತ್ತಿರುತ್ತಾರೆ, ಪ್ರಯೋಗಶೀಲರಾಗಿರುತ್ತಾರೆ. ಕಟ್ಟಡ ಕಟ್ಟುವಾಗ, ಬೃಹತ್ ಪ್ರಮಾಣದ ಪ್ಲಾಸ್ಟರ್ ಶಿಲ್ಪಗಳನ್ನು ತಯಾರಿಸುವಾಗ ಟೊಳ್ಳು ಮಾದರಿ ರಚಿಸಿಕೊಳ್ಳಲು ಬಳಸಲಾಗುತ್ತಿದ್ದ ಚಿಕನ್ ಮೆಷ್ ಅಥವಾ ಚಿಕನ್ ವೈಯರ್ ನನಗೆ ಆಸಕ್ತಿ ಕೆರಳಿಸಿತು. ಅದನ್ನೇ ಬಳಸಿ ಪ್ರಾಣಿ, ಪಕ್ಷಿ, ವನ್ಯಜೀವಿಗಳನ್ನು ರಚಿಸಿದೆ. ವಿಶ್ವವಿಖ್ಯಾತ ಕಲಾವಿದರು, ಸಾಹಸಿಗಳು, ಜಗತ್ಪ್ರಸಿದ್ಧ ವ್ಯಕ್ತಿಗಳ ವಯರ್ ಕಲಾಕೃತಿಗಳನ್ನು ನಿಮರ್ಿಸಿದೆ. ಇದು ಹೆಚ್ಚು ಸಮಯವನ್ನು ತೆಗೆದುಕೊಳ್ಳುವುದಾದರೂ ಮನಸ್ಸಿಗೆ ತೃಪ್ತಿ ತರುವ ಕೆಲಸವಾಗಿದೆ, ಎನ್ನುತ್ತಾನೆ ವಿಶ್ವವಿಖ್ಯಾತ ಮೆಷ್ ವೈಯರ್ ಕಲಾವಿದ ಇವಾನ್ ಲೊವಾಟ್ (ತಚಿಟಿ ಐಠತಚಿಣಣ).
ಕೀನ್ಯಾದ ನೈರೋಬಿಯಲ್ಲಿ ಜನಿಸಿದ ಇವಾನ್ ಲೊವಾಟ್ ಆಫ್ರಿಕಾ, ಜರ್ಮನಿ, ವೇಲ್ಸ್ ಮತ್ತು ಇಂಗ್ಲೆಂಡ್ಗಳಲ್ಲಿ ಕೆಲಸಮಾಡಿ 1994 ರಿಂದ ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ಹಿಂಟರ್ಲೆಂಡ್ನಲ್ಲಿ ಪತ್ನಿ (ಏಪ್ರಿಲ್) ಮತ್ತು ಪುತ್ರ (ಜೇಮ್ಸ್) ಜೊತೆ ವಾಸಿಸುತ್ತಿದ್ದಾರೆ. 1994 ರಲ್ಲಿ ಮೊದಲ ಬಾರಿಗೆ ಗ್ರಂಥಮ್ ಗಿಲ್ಡ್ ಹಾಲ್ನಲ್ಲಿ ಚಿತ್ರಗಳು ಹಾಗೂ ಮೆಷ್ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದ ಲೊವಾಟ್ ಪ್ರಪಂಚದ ಹಲವು ಸ್ಪಧರ್ೆಗಳಲ್ಲಿ ಭಾಗವಹಿಸಿ ಬಹುಮಾನ ಗಿಟ್ಟಿಸಿದ್ದಾರೆ. 2004 ರಿಂದ ಈಚೆಗೆ ಭಾಗವಹಿಸಿರುವ ಬಹುತೇಕ ಎಲ್ಲ ಅಂತಾರಾಷ್ಟ್ರೀಯ ಕಲಾಕೃತಿಗಳ ಪ್ರದರ್ಶನಗಳಲ್ಲಿ ಪ್ರಥಮ ಬಹುಮಾನ ಗಳಿಸಿರುವ ಲೊವಾಟ್ಗೆ ವನ್ಯಜೀವಿಗಳ ಮೆಷ್ ಶಿಲ್ಪಗಳನ್ನು ರಚಿಸುವುದೆಂದರೆ ತುಂಬಾ ಇಷ್ಟ. ಸರ್ ಎಡ್ಮಂಡ್ ಹಿಲರಿ, ಮೈಕೆಲ್ ಜಾಕ್ಸನ್, ಬೀಟ್ಲ್ ಹಾಡುಗಾರರು, ಸಾಲ್ವಡಾರ್ ಡಾಲಿ ಮೊದಲಾದ ಜನಪ್ರಿಯ ವ್ಯಕ್ತಿಗಳ ಮೆಷ್ ಶಿಲ್ಪಗಳು ಜನಪ್ರಿಯವಾಗಿವೆ. ಇವರ ಹಲವಾರು ಕಲಾಕೃತಿಗಳು ವಿಶ್ವದಾದ್ಯಂತ ಖಾಸಗಿ ಸಂಗ್ರಹಾಲಯಗಳಲ್ಲಿ ಸೇರ್ಪಡೆಗೊಂಡಿವೆ.
ಹೆಚ್ಚಿನ ಮಾಹಿತಿ ಮತ್ತು ಚಿಕನ್ ಮೆಷ್ ಕಲಾಕೃತಿಗಳಿಗಾಗಿ ಈ ವೆಬ್ಸೈಟ್ಗಳನ್ನು ಭೇಟಿಮಾಡಬಹುದು:
www.ivanlovattsculpture.com
No comments:
Post a Comment