Monday, February 28, 2011

IAS, IPS Prelims 2011 - No fee for lady candidates - Article in Prajavani - Shikshana 28 Feb 2011




ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ರಿಯಾಯಿತಿ!

ಮೈತ್ರೇಯಿ


ಕೇಂ ದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್ ಪ್ರೊಬೇಷನರ್‌ಗಳ ನೇಮಕಾತಿ ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯ  2011ರ ವೇಳಾಪಟ್ಟಿ ಇದೀಗ ಪ್ರಕಟವಾಗಿದೆ. 2011ರ ಫೆಬ್ರವರಿ 19ರ ಪ್ರಕಟಣೆಯು ಲೋಕಸೇವಾ ಆಯೋಗದ ವೆಬ್‌ಸೈಟ್ ಮತ್ತು ಎಂಪ್ಲಾಯ್‌ಮೆಂಟ್ ನ್ಯೂಸ್ ವಾರಪತ್ರಿಕೆಗಳಲ್ಲಿ ಮತ್ತು ಪ್ರಮುಖ ಸುದ್ದಿ ಪತ್ರಿಕೆಗಳಲ್ಲಿ ಲಭ್ಯ. ಅರ್ಜಿ ಸಲ್ಲಿಸಲು ಕೊನೆಯ ದಿನ 2011 ರ ಮಾರ್ಚ್ 21 ಆಗಿದ್ದು ಪೂರ್ವಭಾವಿ ಪರೀಕ್ಷೆ ನಡೆಯುವ ದಿನ 2011 ರ ಜೂನ್ 12 ಆಗಿರುತ್ತದೆ.

ಹಾಗೆಯೇ ಮುಖ್ಯ ಪರೀಕ್ಷೆಗಳು 2011 ರ ಅಕ್ಟೋಬರ್ 29 ರಿಂದ ಆರಂಭಗೊಳ್ಳುತ್ತವೆ. 880 ಹುದ್ದೆಗಳಿಗೆ ಪ್ರಕಟಣೆ ಹೊರಡಿಸಲಾಗಿದ್ದು ಈ ಸಂಖ್ಯೆ ಹೆಚ್ಚಾಗಬಹುದು.  ಪರಿಶಿಷ್ಟಜಾತಿ, ಪರಿಶಿಷ್ಟ ವರ್ಗ ಮತ್ತು ಅಂಗವಿಕಲರಿಗೆ ಮಾತ್ರ ಇದ್ದ ಶುಲ್ಕ ರಿಯಾಯಿತಿ ಈ ಬಾರಿ ಎಲ್ಲಾ ಮಹಿಳಾ ಅಭ್ಯರ್ಥಿಗಳಿಗೂ ವಿಸ್ತರಿಸಲಾಗಿದೆ. ಉನ್ನತ ಹುದ್ದೆಗಳಿಗೆ ಮಹಿಳೆಯರನ್ನು ಆಕರ್ಷಿಸಲು ಈ ಬಾರಿಯಿಂದ ಪರೀಕ್ಷಾ ಶುಲ್ಕ ರಿಯಾಯಿತಿಯ ಸೌಲಭ್ಯ ಒದಗಿಸಲಾಗಿದೆ!

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು  ಪ್ರೋತ್ಸಾಹಿಸುವ ಸಲುವಾಗಿ ಪರೀಕ್ಷಾ ಶುಲ್ಕ ಕೇವಲ ರೂ 50 ನಿಗದಿಗೊಳಿಸಲಾಗಿದ್ದರೆ ಪೋಸ್ಟ್ ಆಫೀಸ್‌ನಲ್ಲಿ  ರೂ 30 ಸಲ್ಲಿಸಿ, ಅರ್ಜಿ ಖರೀದಿಸಿ, ಸಿ.ಆರ್.ಎಫ್. ಸ್ಟ್ಯಾಂಪ್ ಮೂಲಕ ಸಲ್ಲಿಸಲು ರೂ.100 ತೆರಬೇಕಾಗುತ್ತದೆ. 
ಪೂರ್ವಭಾವಿ ಪರೀಕ್ಷೆಯ ಎರಡು ಪತ್ರಿಕೆಗಳ ವಿವರ ಹೀಗಿದೆ:
ಪತ್ರಿಕೆ 1: ಸಾಮಾನ್ಯ ಅಧ್ಯಯನ ಪರೀಕ್ಷೆ - 200 ಅಂಕಗಳು
 - ಅವಧಿ ಎರಡು ಗಂಟೆ (ಪರೀಕ್ಷೆ  12-06-2011)
*ಪ್ರಸ್ತುತ ವಿದ್ಯಮಾನ - ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಹತ್ವದ ಸಂಗತಿಗಳನ್ನು ಒಳಗೊಂಡಂತೆ.
*ಭಾರತದ ಇತಿಹಾಸ ಮತ್ತು ಭಾರತೀಯ ಸ್ವಾತಂತ್ರ್ಯ ಸಂಗ್ರಾಮ.
*ಭಾರತ ಮತ್ತು ಪ್ರಪಂಚದ ಭೂಗೋಳ - ಭೌಗೋಳಿಕ, ಸಾಮಾಜಿಕ, ಆರ್ಥಿಕ ಅಂಶಗಳನ್ನೊಳಗೊಂಡಂತೆ
*ಭಾರತದ ರಾಜಕೀಯ ವ್ಯವಸ್ಥೆ ಮತ್ತು ಆಡಳಿತ ವ್ಯವಸ್ಥೆ - ಸಂವಿಧಾನ, ರಾಜಕೀಯ ಪದ್ಧತಿ, ಪಂಚಾಯತ್ ರಾಜ್, ಸಾರ್ವಜನಿಕ ಯೋಜನೆಗಳು, ಹಕ್ಕುಗಳು, ಪ್ರಚಲಿತ ಸಂಗತಿಗಳು ಇತ್ಯಾದಿ.
*ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿ - ಸುಸ್ಥಿರ ಅಭಿವೃದ್ಧಿ, ಬಡತನ ನಿರ್ಮೂಲನೆ, ಜನಸಂಖ್ಯೆ, ಸಾಮಾಜಿಕ  ಕ್ಷೇತ್ರದ ವಿವಿಧ ಯೋಜನೆಗಳು ಮತ್ತು ಅವುಗಳು ಸಮಾಜದ ಎಲ್ಲ ವರ್ಗಗಳನ್ನು ತಲುಪುವ ವಿಧಾನ ಇತ್ಯಾದಿ.
*ಪರಿಸರ ಅಧ್ಯಯನ, ಜೀವಿ ಪರಿಸರ, ಜೈವಿಕ ವೈವಿಧ್ಯ, ಹವಾಮಾನ ವೈಪರೀತ್ಯ ಇತ್ಯಾದಿಗಳಿಗೆ ಸಂಬಂಧಿಸಿದ ಸಂಗತಿಗಳು, ಸಮಸ್ಯೆಗಳು ಇತ್ಯಾದಿ. (ಈ ವಿಷಯಗಳಲ್ಲಿ ಆಳವಾದ ತಜ್ಞತೆಯ ಅಗತ್ಯವೇನಿಲ್ಲ.)
*ಸಾಮಾನ್ಯ ವಿಜ್ಞಾನ.
ಪತ್ರಿಕೆ 2: ಸಿವಿಲ್ ಸರ್ವೀಸ್ ಆಪ್ಟಿಟ್ಯೂಡ್ ಟೆಸ್ಟ್ - 200 ಅಂಕಗಳು  - ಅವಧಿ ಎರಡು ಗಂಟೆ (ಪರೀಕ್ಷೆ - 2-06-2011)
*ಕಾಂಪ್ರಹೆನ್ಷನ್ (ಮಾಹಿತಿಯನ್ನು ಅರ್ಥೈಸಿ ಕೊಂಡು ಉತ್ತರಿಸುವುದು)
(ಆರ್ಥಿಕತೆ, ಮನಃಶಾಸ್ತ್ರ, ರಾಜಕೀಯ, ಸಾರ್ವಜನಿಕ ಆಡಳಿತ, ನಿರ್ವಹಣೆ, ತತ್ವಶಾಸ್ತ್ರ, ಇತಿಹಾಸ, ವಿಜ್ಞಾನ, ಸಮಾಜಶಾಸ್ತ್ರ, ಪರಿಸರ, ಜೈವಿಕ ಪರಿಸರ, ಕಲೆ ಮತ್ತು ಲಲಿತ ಕಲೆ, ಸಂಸ್ಕೃತಿ, ಕಾನೂನು, ಜೀವನ ಚರಿತ್ರೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ನಿಗದಿತ ಅಳತೆಯ ಲೇಖನ, ಕಿರು ಪ್ರಬಂಧ ಅಥವಾ ಪ್ಯಾರಾಗ್ರಾಫ್ ನೀಡಿ ಅದನ್ನು ಅರ್ಥೈಸಿಕೊಂಡು ಉತ್ತರಿಸುವ ಪ್ರಶ್ನೆಗಳಿರುತ್ತವೆ.)
*ಸಂವಹನ ಕೌಶಲಗಳು ಮತ್ತು ಇಂಟರ್‌ಪರ್ಸನಲ್ ಸ್ಕಿಲ್ಸ್ (ವೈಯಕ್ತಿಕ ಕೌಶಲಗಳು)
*ತಾರ್ಕಿಕ ಆಲೋಚನೆ ಮತ್ತು ತುಲನಾತ್ಮಕ ಸಾಮರ್ಥ್ಯ
*ತೀರ್ಮಾನ ಕೈಗೊಳ್ಳುವಿಕೆ / ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ
*ಸಾಮಾನ್ಯ ಬೌದ್ಧಿಕ ಸಾಮರ್ಥ್ಯ
*ಸಂಖ್ಯಾ ಮೂಲಾಂಶಗಳು (ಸಂಖ್ಯೆಗಳು ಮತ್ತು ಅವುಗಳಿಗಿರುವ ಸಂಬಂಧ, ಏರಿಕೆ ಮತ್ತು ಇಳಿಕೆ ಕ್ರಮ, ಇತ್ಯಾದಿ), ದತ್ತಾಂಶ ವಿಶ್ಲೇಷಣೆ (ಚಾರ್ಟ್, ಗ್ರಾಫ್, ಟೇಬಲ್, ದತ್ತಾಂಶ ಇತ್ಯಾದಿ - ಹತ್ತನೇ ತರಗತಿಯ ಮಟ್ಟದ ಕಠಿಣತೆ.)
*ಇಂಗ್ಲಿಷ್ ಭಾಷೆಯಲ್ಲಿರುವ ನೀಡಲಾಗಿರುವ ಮಾಹಿತಿ ಪ್ಯಾರಾಗ್ರಾಫನ್ನು ಅರ್ಥೈಸಿಕೊಂಡು ಉತ್ತರಿಸುವ ಕೌಶಲ.
*ಇಂಗ್ಲಿಷ್ ಕಾಂಪ್ರೆಹೆನ್ಷನ್
ಇಂದಿನಿಂದ 112 ದಿನಗಳ ಕಾಲಾವಧಿ ನಿಮಗೆ ದೊರೆಯುತ್ತಿದೆ.  ನೀವು ಬೇಗ ಬೇಗ ಸಿದ್ಧರಾಗಿರಿ. ಗುಡ್‌ಲಕ್!
ಹೆಚ್ಚಿನ ಮಾಹಿತಿ ಹಾಗು ಮಾದರಿ ಪತ್ರಿಕೆಗಳಿಗಾಗಿ ಈ ಕೆಲವು ಜಾಲತಾಣಗಳನ್ನು ಸಂಪರ್ಕಿಸಬಹುದು:
www.upsc.gov.in   www.employmentnews.gov.in
www.yojana.gov.in   www.upscportal.com

No comments: