Thursday, December 22, 2011

Right to Information Act - Mystery, Magic and Music of Colours A Scientific Analysis


ವರ್ಣ ಮಾಯಾಜಾಲ
ಲೇಖಕರು: ಲೀಲಾ ಎನ್. ಎಸ್. ಡಾ||
ಪ್ರಕಾಶಕರು: ನವಕರ್ನಾಟಕ ಪ್ರಕಾಶನ
ಈಗಿನ ಮುದ್ರಣದ ಸಂಖ್ಯೆ : 1
ಮುದ್ರಣದ ವರ್ಷ : 2011
ISBN: 9788184672572
NKP No.: 001907
ರಕ್ಷಾ ಪುಟ: ಸಾದಾ
ಪುಟಗಳು : 144
ಪುಸ್ತಕದ ಗಾತ್ರ : 1/4 Demy Size
475/-  (ದೊರೆಯುತ್ತವೆ)
ಬೆಳಕಿನ ಹಲವು ಅಂಶಗಳನ್ನು ವಿವರಿಸುವ ಈ ಪುಸ್ತಕ ವರ್ಣ ಜಗತ್ತಿಗೊಂದು ಕೈಪಿಡಿಯಂತಿದೆ. ಜೀವಿ-ಅಜೀವಿಗಳನ್ನೂ ಅವುಗಳಿಂದಾಗಿ ರೂಪು ತಳೆದಂತಿರುವ ವ್ಯೋಮವೂ ನಮ್ಮ ಮನಸ್ಸಿನಲ್ಲಿ ಜಗತ್ತಿನ ಚಿತ್ರಣವೊಂದನ್ನು ನೇಯುತ್ತವೆ. ನಾವು ನೋಡುವ ಯಾವುದೇ ವಸ್ತು ತನ್ನ ಆಕಾರ, ಗಾತ್ರ ಮತ್ತು ಬಣ್ಣಗಳಿಂದ ನಮಗೆ ಕಾಣಿಸುತ್ತದೆ. ಬಣ್ಣವಿಲ್ಲದ ವಸ್ತುವೊಂದನ್ನು ಕಲ್ಪಿಸುವುದಕ್ಕೂ ಕಷ್ಟ. ಲೇಖಕಿಯವರಾದ ಡಾ|| ಎನ್. ಎಸ್. ಲೀಲಾ ಅವರು ತನ್ನ ಈ ಕೃತಿಯಲ್ಲಿ ಬಣ್ಣದ ಗುಣಗಳನ್ನು ನಮ್ಮ ಜೀವನದ ಎಲ್ಲ ಮಗ್ಗುಲುಗಳಲ್ಲಿ ಅದು ಹರಡಿರುವುದನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಬೆಳಕಿಲ್ಲದೆ ಬಣ್ಣವಿಲ್ಲ. ಜಗತ್ತಿಗೆ ಬೆಳಕು ಕೊಡುವ ಸೂರ್ಯನ ಕುರಿತಾದ ಸುಂದರ ಉಲ್ಲೇಖಗಳಿಂದ ಕೃತಿಯು ಪ್ರಾರಂಭವಾಗುತ್ತದೆ. ದೃಷ್ಟಿ ಪ್ರಕ್ರಿಯೆ, ಅದರಲ್ಲಿ ಕಣ್ಣಿನ ಪಾತ್ರ, ದೃಷ್ಟಿ ಸೂಚನೆಯಲ್ಲಿ ಮಿದುಳಿನ ಕೆಲಸ ಹಾಗೂ ಈ ಎಲ್ಲ ವಿದ್ಯಮಾನಗಳ ಬಗ್ಗೆ ನಡೆದ ಮಹತ್ವದ ಸಂಶೋಧನೆಗಳನ್ನು ಲೇಖಕಿಯವರು ವಿಶ್ಲೇಷಿಸುತ್ತಾರೆ. ಬಣ್ಣದ ಗ್ರಹಿಕೆಯನ್ನು ಪ್ರಭಾವಿಸುವ ಹಲವು ಅಂಶಗಳಿವೆ. ವಸ್ತುವಿನದ್ದೇ ಆದ ಸಂಯೋಜನೆ, ಅದರ ಮೇಲೆ ಬೀಳುವ ಬೆಳಕು, ವಸ್ತುವಿನ ಹಿನ್ನೆಲೆ ಹಾಗೂ ವೀಕ್ಷಕನ ನೆಲೆ-ಸ್ಥಾನಗಳೆಲ್ಲ ಇಂಥ ಗ್ರಹಿಕೆಯನ್ನು ರೂಪಿಸುತ್ತವೆ. ಸಾಗರ, ಆಕಾಶ, ಮರ, ಎಲೆ, ಹೂ, ಧ್ರುವ ಪ್ರಭೆ, ಪಾತರಗಿತ್ತಿ, ರಕ್ತ ಹಾಗೂ ಇನ್ನಿತರ ಅನೇಕ ವಸ್ತುಗಳ ಉದಾಹರಣೆಗಳೊಂದಿಗೆ ಇದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ನಮ್ಮ ದೈನಂದಿನ ಚಟುವಟಿಕೆಗಳಲ್ಲೂ ಬಣ್ಣಗಳು ಪಾತ್ರ ವಹಿಸುತ್ತವೆ. ಅಲಂಕರಣ, ಹಬ್ಬ-ಹರಿದಿನಗಳಲ್ಲಿ ಇದು ಎದ್ದು ಕಾಣಿಸುತ್ತದೆ. ಹವಾಮಾನ ಬದಲಾವಣೆಯಿಂದ ಹವಳದ ದಿಬ್ಬಗಳಂಥ ಪ್ರಾಕೃತಿಕ ವಸ್ತುಗಳು ಅನುಭವಿಸುವ ಬಣ್ಣಗೇಡು ಮತ್ತು ಆರೋಗ್ಯ - ಅನಾರೋಗ್ಯಗಳ ತಪಾಸಣೆಯಲ್ಲಿ ಸೂಚಕವಾಗುವ ಬಣ್ಣ ಬದಲಾವಣೆ - ಇವೆಲ್ಲವನ್ನೂ ಬರಹವು ಒಳಗೊಂಡಿದೆ. ಈ ಕೃತಿಯು ವರ್ಣಚಿತ್ರಗಳೊಂದಿಗೆ ಬಣ್ಣಗಳ ಸಮಗ್ರ ಚಿತ್ರಣವನ್ನು ಮೈಗೂಡಿಸಿಕೊಂಡಂತಿದೆ.

MYSTERY, MAGIC, AND MUSIC OF COLOURS
Author: DR. N. S. LEELA
Publisher: Navakarnataka Publicatons
Edition No : 1
Year of Publication : 2011
ISBN: 9788184672589
NKP No.: 001908
Book Type: Paper Back
No of Pages : 144
Book Size : 1/4 Demy Size
475/-  (Available)
This book that highlights several aspects of colour is literally a work on the world of colours. Our world view is a result of the objects - living and non-living - as well as the space containing them. Any object we see presents itself in its characteristic shape, size and colour. It is difficult to think of an object without colour. In this work, the author Dr. N. S. Leela has taken pains to delineate the qualities of colour, its role in our daily life and its all pervading nature. Colour is invariably connected with light. Starting with beautiful references to our sun, the giver of light to all the earthlings, the author analyses the process of vision the role of the eye as an instrument and brain as a detector of the sensation and the path breaking researches leading to our greater understanding of the phenomenon. The perception of colour is influenced by the intrinsic nature of the object, the light incident unit, the background of the object and the position of the observer. These are explained by illustrating the cases of the ocean, sky, trees, leaves, flowers, auroras, butterflies, blood and several other things. The role of colours in decoration and festivals, the effect of climatic changes on the colours of objects and the colour indications in good health and illness are also touched upon. In short here is a well illustrated work on everything about colour.
 
BUTTERFLIES
Author: NAVAKARNATAKA
Publisher: Navakarnataka Publicatons
Edition No : 1
Year of Publication : 2011
ISBN: 9788184672558
NKP No.: 001905
Book Type: Paper Back
No of Pages : 15
Book Size : 1/12 Demy Size
15/-  (Available)
Fascinating multi-coloured book about butterflies for kids in english.

Right to Information Act - Mystery, Magic and Music of Colours A Scientific Analysis 
Most Useful Books

No comments: