ಮಾರ್ಗದರ್ಶಿ ಕೈಪಿಡಿ
ಪ್ರೌಢ ಶಿಕ್ಷಣ, ಪಿಯು ಹಾಗೂ ಪದವಿ ಮುಗಿಸಿದ ವಿದ್ಯಾರ್ಥಿಗಳು ಮುಂದೆ ಯಾವ ವಿಷಯ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲದಲ್ಲಿರುತ್ತಾರೆ. ಅಂಥವರಿಗೆ ಪೋಷಕರೊ ಅಥವಾ ಹಿರಿಯ ವಿದ್ಯಾರ್ಥಿಗಳೊ ಮಾರ್ಗದರ್ಶನ ಮಾಡುತ್ತಾರೆ. ಆದರೂ `ನಾನು ಆಯ್ಕೆ ಮಾಡಿಕೊಂಡ ಕೋರ್ಸ್ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿದೆಯೊ ಇಲ್ಲವೊ?
ಕೈತುಂಬ ಹಣ ಸಿಗುವ ಉದ್ಯೋಗ ಸಿಗುತ್ತದೆಯೋ ಇಲ್ಲವೊ?` ಇತ್ಯಾದಿ ಪ್ರಶ್ನೆಗಳು ಹಲವರ ಮನದಲ್ಲಿ ಮೂಡುತ್ತವೆ. ಇಂಥ ಅನೇಕ ಪ್ರಶ್ನೆಗಳಿಗೆ ಉತ್ತರ ರೂಪವಾಗಿ ಬೇದ್ರೆ ಮಂಜುನಾಥ್ ಅವರು ಬರೆದಿರುವ `ಗೆದ್ದೇ ಗೆಲ್ಲುವೆವು` ಕೃತಿ ಮಾರ್ಗದರ್ಶಿ ಕೈಪಿಡಿಯಾಗಿದೆ.
114 ಅಧ್ಯಾಯಗಳ `ಗೆದ್ದೇ ಗೆಲ್ಲುವೆವು` ಕೃತಿಯು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಂಡ, ವೃತ್ತಿ ಹುಡುಕಾಟದಲ್ಲಿರುವ ವಿದ್ಯಾರ್ಥಿಗಳ ಹಾಗೂ ಹೊಸ ಹೊಸ ಕೋರ್ಸ್‌ಗಳ ಮಾಹಿತಿ ಹೊತ್ತಿಗೆ. ಐಎಎಸ್, ಕೆಎಎಸ್ ಹಾಗೂ ಇನ್ನಿತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕ್ರಮ... ಹೀಗೆ ಹತ್ತು ಹಲವು ಅನುಮಾನಗಳಿಗೆ ಉತ್ತರ ರೂಪವಾಗಿ ಪುಸ್ತಕ ರೂಪುಗೊಂಡಿದೆ.
ಸಂದರ್ಶನ ಎದುರಿಸಲಾಗದೆ ಅದೆಷ್ಟೋ ವಿದ್ಯಾರ್ಥಿಗಳು ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಬುದ್ಧಿವಂತರಾಗಿದ್ದರೂ ಸಂದರ್ಶಕರ ಎದುರು, ಅವರು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ತಡಬಡಾಯಿಸುತ್ತಾರೆ. ಇಂಥ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪದಂತೆ ಅಧ್ಯಾಯ ಒಂದರಲ್ಲಿ ಮಂಜುನಾಥ್ ಸಂಕ್ಷಿಪ್ತವಾಗಿ ತಿಳಿಸಿದ್ದಾರೆ.
ಸರ್ಕಾರ, ಖಾಸಗಿ ಸಂಸ್ಥೆಗಳಲ್ಲಿ ಲಭ್ಯವಿರುವ ಉದ್ಯೋಗಾವಕಾಶಗಳು ಹಾಗೂ ಅಂತರ್ಜಾಲ ತಾಣ, ವೆಬ್‌ಸೈಟ್ ವಿಳಾಸಗಳನ್ನು ಆಯಾ ಅಧ್ಯಾಯಗಳಲ್ಲಿ ನಮೂದಿಸಿದ್ದಾರೆ.
ಹೊಸ ಹೊಸ ವೃತ್ತಿ ಅವಕಾಶಗಳು, ಸ್ಪರ್ಧಾತ್ಮಕ ಪರೀಕ್ಷೆಗಳು, ವೃತ್ತಿ ಮಾರ್ಗದರ್ಶನಕ್ಕೆ ಸಂಬಂಧಿಸಿದಂತೆ ಕನ್ನಡದಲ್ಲಿ ಈ ರೀತಿಯ ಕೃತಿಗಳ ಸೇರ್ಪಡೆ ಪ್ರಸ್ತುತವಿದೆ. ಈ ನಿಟ್ಟಿನಲ್ಲಿ ಮಂಜುನಾಥ ಅವರ ಪ್ರಯತ್ನ ಉಪಯುಕ್ತ ಪುಸ್ತಕ.
Thank You Editors
Gedde Gelluvevu - We Will Win - A Handbook on Career Guidance and Personality Development by Bedre Manjunath in Prajavani 26 March 2012
http://prajavani.net/include/story.php?news=7399§ion=129&menuid=13

No comments:
Post a Comment