Question Bank for SSLC Students - Article in Prajavani Daily Shikshana 08 Oct 2012
http://prajavani.net/include/story.php?news=10880§ion=129&menuid=13

ಮಕ್ಕಳೇ! ಇಲ್ಲಿದೆ ನೋಡಿ ಪ್ರಶ್ನೋತ್ತರ ಬ್ಯಾಂಕ್
ಪಠ್ಯಪುಸ್ತಕಗಳನ್ನು ಗಮನವಿಟ್ಟು ಓದಿದರೆ ಸಾಕು; ಅತಿ ಹೆಚ್ಚು ಅಂಕಗಳನ್ನು ಗಳಿಸಬಹುದು ಎಂಬ ಮಾತನ್ನು ಎಲ್ಲ ತರಗತಿಗಳ ವಿದ್ಯಾರ್ಥಿಗಳಿಗೆ ಅನ್ವಯಿಸಿ ಹೇಳಲಾಗುತ್ತದೆ. ಪಾಠದ ಕೊನೆಯಲ್ಲಿ ನೀಡಿರುವ ಮಾದರಿ ಪ್ರಶ್ನೆಗಳಿಗೆ ಉತ್ತರ ಬರೆಯುವುದರಿಂದ ಬರವಣಿಗೆಯ ಕೌಶಲ ಸಿದ್ಧಿಸುತ್ತದೆ ಎಂಬುದೂ ಸತ್ಯ.
ಆದರೆ ಅದೇ ಪಾಠಕ್ಕೆ ಸಂಬಂಧಿಸಿದ ವಿವಿಧ ಮಾದರಿಯ ಹೆಚ್ಚುವರಿ ಪ್ರಶ್ನೆಗಳಿದ್ದರೆ, ಅವುಗಳಿಗೆ ಉತ್ತರಿಸಲು ಅವಕಾಶ ಇರುವ ವರ್ಕ್‌ಬುಕ್ ಮಾದರಿಯಿದ್ದರೆ ಎಷ್ಟು ಚೆನ್ನ! ಎಸ್‌ಎಸ್‌ಎಲ್‌ಸಿಯ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ, ಇಂಗ್ಲಿಷ್ ಮತ್ತು ಕನ್ನಡ ವಿಷಯಗಳಿಗೆ ಸಂಬಂಧಿಸಿದ, ವಿವಿಧ ಹಂತದ ಕಠಿಣತೆಗೆ ಅನುಗುಣವಾಗಿ ರೂಪಿತವಾಗಿರುವ 10 ಸಾವಿರಕ್ಕೂ ಹೆಚ್ಚು ಪ್ರಶ್ನೆಗಳಿರುವ ಯಶಸ್ವೀ ಮಾದರಿ ಪ್ರಶ್ನೆಕೋಠಿ ಇದೀಗ ಇಂಟರ್ನೆಟ್‌ನಲ್ಲಿ ಉಚಿತವಾಗಿ ಲಭ್ಯವಿದೆ. ಅಲ್ಲದೆ ಅದರ ಸಿ.ಡಿ ರೂಪವೂ ಅತ್ಯಂತ ಕಡಿಮೆ ಬೆಲೆಗೆ ಸಿಗುತ್ತಿದೆ. ಅದೇ ಇಶಾಲೆ. ಆರ್ಗ್/ಕಿ-ಕೋಶ (www.eshale.org/qkosha).
`ವಿದ್ಯಾರ್ಥಿ` ಮತ್ತು `ಶಾಲಾ` ಎಂಬ ಎರಡು ಆವೃತ್ತಿಗಳಿರುವ ಈ ಕಿ ಕೋಶದಲ್ಲಿ ಎಸ್‌ಎಸ್‌ಎಲ್‌ಸಿಯ ಪ್ರಶ್ನೆ ಹಾಗೂ ಉತ್ತರಗಳನ್ನು ವಿವಿಧ ಮೂಲಗಳಿಂದ ಹಾಗೂ ನುರಿತ ಅಧ್ಯಾಪಕರಿಂದ ಸಂಗ್ರಹಿಸಿ ಕರ್ನಾಟಕ ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ನೀಲಿನಕ್ಷೆಗೆ ಅನುಗುಣವಾಗಿ ಜೋಡಿಸಲಾಗಿದೆ. ಅಲ್ಲದೇ ವಿದ್ಯಾರ್ಥಿಗಳೇ ಸ್ವಯಂ ಮೌಲ್ಯಮಾಪನ ಮಾಡಿಕೊಳ್ಳುವಂತೆ ರೂಪಿಸಲಾಗಿದೆ.
ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದ ಪ್ರಶ್ನೆ - ಉತ್ತರಗಳನ್ನು ಮುದ್ರಿಸಿಕೊಳ್ಳಬಹುದು. ಶಿಕ್ಷಕರು ತಮಗೆ ಅನುಕೂಲವಾಗುವಂತೆ ಪ್ರಶ್ನೆಗಳನ್ನು ವಿವಿಧ ಕಾಂಬಿನೇಷನ್‌ಗಳಲ್ಲಿ ಸಿದ್ಧಮಾಡಿಕೊಳ್ಳಲು ಅನುಕೂಲತೆ ಇದ್ದು ಮಾಸಿಕ, ಅರ್ಧವಾರ್ಷಿಕ, ವಾರ್ಷಿಕ ಪರೀಕ್ಷೆಗಳನ್ನು ನಡೆಸಲು ಇದು ಸಹಕಾರಿ. ಇದರ ಹೊರತಾಗಿ 1 ರಿಂದ 12ನೇ ತರಗತಿ ವರೆಗಿನ ವಿವಿಧ ವಿಷಯಗಳ ಪ್ರಶ್ನೋತ್ತರ, ಪಠ್ಯಕ್ರಮ ಮಾಹಿತಿಯನ್ನೂ ಇದು ಒಳಗೊಂಡಿದೆ.
ಶಿಕ್ಷಣಮಿತ್ರ ಇಶಾಲೆ. ಆರ್ಗ್
ಮೂರು ವರ್ಷದ ರಾಜ್ಯ ಹಾಗೂ ಕೇಂದ್ರೀಯ ಶಾಲೆಗಳ ಗಣಿತ ಪಠ್ಯಕ್ರಮದ ಅನುಸಾರ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಕನ್ನಡ ಮತ್ತು ಇಂಗ್ಲಿಷ್ ಎರಡೂ ಮಾಧ್ಯಮಗಳಲ್ಲಿ ವಿಸ್ತೃತ ಮಾಹಿತಿ ಮತ್ತು ಅಭ್ಯಾಸ ಒಳಗೊಂಡ, ಗಣಿತಕ್ಕಾಗಿಯೇ ಮೀಸಲಾದ ಉಚಿತ ಗಣಿತ www.freeganita.comಜಾಲತಾಣವನ್ನು ಕೆ.ವಿ. ರಾಜಶೇಖರ ಸೋಮಯಾಜಿ ಅವರು ಕೆಲವು ವರ್ಷಗಳ ಹಿಂದೆ ರೂಪಿಸಿದ್ದರು. ಕನ್ನಡದಲ್ಲಿ ಆ ಎಲ್ಲಾ ಪಾಠಗಳನ್ನು 8, 9, 10ನೇ ತರಗತಿಗಳ ಚಿತ್ರೀಕೃತ ಗಣಿತ ಪಾಠಶಾಲೆ ಎಂಬ ಮೂರು ಡಿವಿಡಿಗಳಲ್ಲಿ ಹಿಡಿದಿಟ್ಟು, ಅತಿ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.
ಈ ಡಿವಿಡಿಗಳಲ್ಲಿ ತರಗತಿವಾರು ಹಾಗೂ ವಿಷಯವಾರು ಗಣಿತ ಪಾಠಗಳ ಜೊತೆಗೆ ಪಠ್ಯೇತರ ವಿಷಯವಾಗಿ ಗಣಿತಕ್ಕೆ ಭಾರತೀಯರ ಕೊಡುಗೆ, ಅನ್ವೇಷಣೆ, ಮಹತ್ವ, ಇತ್ತೀಚಿನ ಸಂಶೋಧನೆ, ಗಣಿತೇತರ ಆಕರ ಗ್ರಂಥಗಳ ಕುರಿತು ಸುದೀರ್ಘವಾದ ಪ್ರಸ್ತಾವನೆಯ ವಿಡಿಯೋ, ಸಂದೇಶಗಳು, ಅನಿಸಿಕೆಗಳು ಇದ್ದವು. ಗಣಿತ ಅಧ್ಯಯನ ಹೇಗಿರಬೇಕು? ಗ್ರಾಹಕ ಹಕ್ಕು ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ವಿದ್ಯುತ್ ಮಿತಬಳಕೆ, ನೀರಿನ ಮಿತಬಳಕೆ ಮತ್ತು ನೀರು ಇಂಗಿಸುವಿಕೆ, ಪರಿಸರ ಮತ್ತು ನಾವು, ಮುಕ್ತ ಮತ್ತು ಉಚಿತ ತಂತ್ರಾಂಶಗಳ ಕುರಿತು ಯಥೇಚ್ಚ ಮಾಹಿತಿ, ಸಾಹಿತ್ಯದ ಎಲೆಕ್ಟ್ರಾನಿಕ್ ಪ್ರತಿಗಳಿದ್ದವು.
ಹಾಗೆಯೇ ಪ್ರಾಚೀನ ಭಾರತೀಯ ಗಣಿತಶಾಸ್ತ್ರಜ್ಞ ಭಾಸ್ಕರಾಚಾರ್ಯನ `ಲೀಲಾವತಿ` ಗ್ರಂಥದಿಂದ ಆಯ್ದ ಆಸಕ್ತಿದಾಯಕ ಸಮಸ್ಯೆಗಳು, ನಿಜಜೀವನದಲ್ಲಿನ ಉದಾಹರಣೆಗಳು ಮತ್ತು ಸಮಸ್ಯೆಗಳು, ಬ್ಯಾಂಕಿಂಗ್ ಕುರಿತ ಮಾಹಿತಿ ಹಾಗೂ ಸಾಕ್ಷ್ಯಚಿತ್ರಗಳಿದ್ದವು.
ಚಿತ್ರಮಯ ಗಣಿತ
ಗಣಿತ ಪಠ್ಯಪುಸ್ತಕಗಳಲ್ಲಿರುವ ಅಂಕಗಣಿತ, ಬೀಜಗಣಿತ, ರೇಖಾಗಣಿತ ಪಾಠಗಳನ್ನು ವಿಶೇಷ ವಿವರಣೆಯೊಂದಿಗೆ ಮೂಡಿಸುವ ಪ್ರಯತ್ನವನ್ನು ಚಿತ್ರಮಯ ಗಣಿತ ಸಿಡಿಯಲ್ಲಿ ಮಾಡಲಾಗಿದೆ. 8ನೇ ತರಗತಿಯ ಏಳು ವಿಭಾಗಗಳಲ್ಲಿನ 29 ಉಪನ್ಯಾಸಗಳು, 9ನೇ ತರಗತಿಯ ಏಳು ವಿಭಾಗಗಳಲ್ಲಿನ 23 ಉಪನ್ಯಾಸಗಳು ಮತ್ತು 10ನೇ ತರಗತಿಯ ಏಳು ವಿಭಾಗಗಳಲ್ಲಿನ 16 ಉಪನ್ಯಾಸಗಳು ಸುದೀರ್ಘ ವಿವರಣೆ ಮತ್ತು ಸಚಿತ್ರ ನಿರೂಪಣೆಯೊಂದಿಗೆ ನೈಜ ತರಗತಿಯನ್ನೇ ಕಂಪ್ಯೂಟರ್ ಪರದೆಯ ಮೇಲೆ ಮೂಡಿಸಿಬಿಡುತ್ತವೆ. ಇದಕ್ಕಾಗಿ ನೀವು ತೆರೆಯಬೇಕಾದ ಇಂಟರ್ನೆಟ್ ತಾಣwww.FREEganita.com.
ಶಾಲಾತಂತ್ರ
ಶಾಲೆಗಳಲ್ಲಿ ಪಾಠಬೋಧನೆಯ ಜೊತೆಗೆ ವಿವಿಧ ಆಡಳಿತ ಸಂಬಂಧಿ ಲೆಕ್ಕಪತ್ರಗಳು, ಬಿಸಿ ಊಟದ ಲೆಕ್ಕ, ದಾಖಲೆಗಳನ್ನು ನಿರ್ವಹಿಸುವುದನ್ನು ಸರಳೀಕರಣಗೊಳಿಸಿ, ಶಾಲೆಯ ದಾಖಲೀಕರಣಕ್ಕೆ ಫ್ರೀಗಣಿತ.ಕಾಂ ನವರು ಶಾಲಾತಂತ್ರ - ಶಾಲಾ ಆಡಳಿತ ತಂತ್ರಾಂಶವನ್ನು ರೂಪಿಸಿದ್ದಾರೆ.
ಶಾಲಾತಂತ್ರ ಸಾಫ್ಟ್‌ವೇರನ್ನು ಯಾವುದೇ ಕಂಪ್ಯೂಟರ್‌ನಲ್ಲಿ ಸುಲಭವಾಗಿ ಸ್ಥಾಪಿಸಬಹುದು. ಉಚಿತ ನಿರ್ವಹಣಾ ತಂತ್ರಾಂಶಗಳ ಸಹಾಯದಿಂದ ರೂಪಿತವಾಗಿರುವ ಶಾಲಾತಂತ್ರವನ್ನು ಉಪಯೋಗಿಸುವ ಮೊದಲು ಅದರ ಜೊತೆಗೆ ನೀಡಿರುವ ಪೂರಕ ತಂತ್ರಾಂಶಗಳನ್ನು ಸ್ಥಾಪಿಸಬೇಕು. ಶಾಲಾತಂತ್ರ ಸ್ಥಾಪಿತವಾದ ನಂತರ ಅದನ್ನು ಆರಂಭಿಸಲು ನಿಗದಿಗೊಳಿಸಿರುವ ಚಿಹ್ನೆ (ಐಕಾನ್) ಒತ್ತಿದರೆ ಪರದೆಯ ಮೇಲೆ ಮೂಡಿ ಈ ತಂತ್ರಾಂಶ ಬಳಕೆಗೆ ಸಿದ್ಧವಾಗುತ್ತದೆ.
ಮೊದಲ ಪುಟ (ಹೋಂ ಪೇಜ್)ದಲ್ಲಿ ಪ್ರವೇಶ - ಸಹಾಯ - ಸಂಪರ್ಕಿಸಿ ಎಂಬ ಸಂಪರ್ಕ ಕೊಂಡಿಗಳು ಮತ್ತು ಸ್ಥಿರ ಮಾಹಿತಿ - ಸಂಸ್ಕರಣೆ - ವರದಿಗಳು - ನಿರ್ವಹಣೆ ಎಂಬ ನಾಲ್ಕು ಶೀರ್ಷಿಕೆಗಳು ಮೂಡುತ್ತವೆ. ಪ್ರತಿಯೊಂದು ಶೀರ್ಷಿಕೆಯೂ ಅಂತರ್‌ಸಂಪರ್ಕ ಕೊಂಡಿಗಳಿಂದ ಕೂಡಿದ್ದು ಸರಳವಾಗಿ ದಾಖಲೆಗಳನ್ನು ನಿರ್ವಹಿಸಲು ಸಹಕಾರಿಯಾಗಿದೆ.
ಗಣಕ 1, 2, 3
ಕಂಪ್ಯೂಟರ್ ಬಳಸುವುದನ್ನು ಕೇವಲ ಮೂರೇ ಗಂಟೆಗಳಲ್ಲಿ ಕಲಿಸುವ ಸ್ವಯಂ ಕಲಿಕೆಯ ಕಂಪ್ಯೂಟರ್ ಡಿವಿಡಿ - ಗಣಕ 1, 2, 3 ಫ್ರೀಗಣಿತ.ಕಾಂನ ಮತ್ತೊಂದು ಕೊಡುಗೆ. ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಬಳಸುವ ಜ್ಞಾನ ಬೇಕೇಬೇಕು. ಮನೆಯಲ್ಲಿ ಕುಳಿತೇ ಕಂಪ್ಯೂಟರ್, ಇಂಟರ್ನೆಟ್, ಇಮೈಲ್ ಇತ್ಯಾದಿ ವಿಷಯಗಳನ್ನು ಪರಿಚಯಿಸಿಕೊಳ್ಳುವ ಅವಕಾಶ ಇಲ್ಲಿದೆ. ಮಾದರಿಗಾಗಿwww.eshale.org/ganaka123 ನೋಡಬಹುದು.
ಶಿಕ್ಷಕರ, ಮಕ್ಕಳ ಜ್ಞಾನ ಭಂಡಾರ
ಶಿಕ್ಷಕರಿಂದ ಶಿಕ್ಷಕರಿಗಾಗಿ ಮತ್ತು ಮಕ್ಕಳಿಗಾಗಿ ರೂಪಿತವಾಗಿರುವ ಇಶಾಲೆ.ಆರ್ಗ್‌ನಲ್ಲಿ 1ನೇ ತರಗತಿಯಿಂದ 10ನೇ ತರಗತಿವರೆಗಿನ ಎಲ್ಲಾ ವಿಷಯಗಳನ್ನು ವಿಶ್ವಕೋಶದ ಮಾದರಿಯಲ್ಲಿ ಹಿಡಿದಿಡಲಾಗಿದೆ. ಪಠ್ಯ ಮತ್ತು ಪಠ್ಯೇತರ ಮಾಹಿತಿ, ಪೂರಕ ಸಾಹಿತ್ಯ, ವಿಡಿಯೊ, ಆಡಿಯೊ, ನಕಾಶೆಗಳು, ಚಿತ್ರಗಳು ಹೀಗೆ ಏನೆಲ್ಲಾ ಇಲ್ಲಿವೆ. ಹೆಚ್ಚಿನ ಮಾಹಿತಿ www.eShale.org ವೆಬ್‌ಸೈಟ್‌ನಲ್ಲಿದೆ.
ಸರ್ಕಾರದ ನೆರವಿಲ್ಲದೇ ಕೇವಲ ಆಸಕ್ತರ ಸಹಕಾರದಿಂದ ಉಚಿತವಾಗಿ ಈ ಎಲ್ಲಾ ಮಾಹಿತಿಯನ್ನು ಹಂಚಿಕೊಳ್ಳುತ್ತಿರುವ ಕೆ.ವಿ. ರಾಜಶೇಖರ ಸೋಮಯಾಜಿಯವರನ್ನು 98808 31316, 080 2592 8985 ಮೂಲಕ ಸಂಪರ್ಕಿಸಬಹುದು.

No comments:
Post a Comment