Tuesday, January 1, 2013

Triskaidekaphobia - Article in Udayavani Daily Josh 01 Jan 2013


Triskaidekaphobia - Article in Udayavani Daily Josh 01 Jan 2013
Udayavani
  • ಟ್ರಿಸ್ಕಾಯ್‌ಡೆಕಾಫೋಬಿಯಾ : 2013ರ ವಿಶೇಷತೆಯೇನು ಗೊತ್ತಾ?

  • ಟ್ರಿಸ್ಕಾಯ್‌ಡೆಕಾಫೋಬಿಯಾ- ಹದಿಮೂರರ ಹೆದರಿಕೆ - ಪಾಶ್ಚಾತ್ಯರಲ್ಲಿರುವ ಮೂಢನಂಬಿಕೆಗೆ ಒಂದು ಸಾಕ್ಷಿ. ಅದರಲ್ಲೂ ಆ 13ನೇ ದ

    • Udayavani | Dec 31, 2012
      ಟ್ರಿಸ್ಕಾಯ್‌ಡೆಕಾಫೋಬಿಯಾ- ಹದಿಮೂರರ ಹೆದರಿಕೆ - ಪಾಶ್ಚಾತ್ಯರಲ್ಲಿರುವ ಮೂಢನಂಬಿಕೆಗೆ ಒಂದು ಸಾಕ್ಷಿ. ಅದರಲ್ಲೂ ಆ 13ನೇ ದಿನವೇನಾದರೂ ಶುಕ್ರವಾರ ಬಂತೆಂದರೆ ಮುಗಿದೇ ಹೋಯಿತು. ಗಾಬರಿ ಬಿದ್ದುಬಿಡುತ್ತಾರೆ. ಅದಕ್ಕೆ ಫ್ರಿಗ್ಗಾಟ್ರಿಸ್ಕಾಯ್‌ಡೆಕಾಫೋಬಿಯಾ ಅಥವಾ ಪ್ಯಾರಾಸ್ಕೆವೈಡೆಕಾಟ್ರಿಯಾಫೋಬಿಯಾ ಅಂತಲೇ ಪ್ರತ್ಯೇಕ ಹೆಸರಿದೆ. ಒಟ್ಟಿನಲ್ಲಿ ಹೆದರುವವರ ಮೈಮೇಲೆ ಹಲ್ಲಿ ಬಿದ್ದಂತೆ ಇದೀಗ 13ನೇ ಇಸವಿ ಬಂದುಬಿಟ್ಟಿದೆ! 2013ರ ಡೈಮಿಲೇನಿಯಾಟ್ರಿಸ್ಕಾಯ್‌ಡೆಕಾ ವರ್ಷಕ್ಕೆ ಇದೋ ಸುಸ್ವಾಗತ! 

      ಟ್ರಿಸ್ಕಾಯ್‌ಡೆಕಾಫೋಬಿಯಾ ಹಿನ್ನೆಲೆ 

      ಕ್ರಿ.ಪೂ. 1780ರ ವೇಳೆಗೆ ರಚಿತವಾದ¨ªೆಂದು ನಂಬಲಾಗಿರುವ ಬ್ಯಾಬಿಲೋನಿಯಾದ ರಾಜ ಹಮ್ಮುರಬಿ ಹೊರಡಿಸಿದ ನ್ಯಾಯಸೂತ್ರ ಅಥವಾ ಶಾಸನದಲ್ಲಿ ಟ್ರಿಸ್ಕಾಯ್‌ಡೆಕಾಫೋಬಿಯಾ ಕುರಿತ ಪ್ರಸ್ತಾಪವಿದೆ. ಹಮ್ಮುರಬಿಯ ನ್ಯಾಯಸೂತ್ರದ ಹದಿಮೂರನೇ ಕಲಂ ಪ್ರಕಾರ ಮಾರಾಟಗಾರನು ಮರಣಹೊಂದಿದರೆ ಅವನಿಂದ ಬರಬೇಕಾದ ನಷ್ಟಬಾಕಿಯ ಐದು ಪಟ್ಟಿನಷ್ಟನ್ನು ಗಿರಾಕಿಯು ಮಾರಾಟಗಾರನ ಆಸ್ತಿಯಿಂದ ಪಡೆದುಕೊಳ್ಳಲು ಅರ್ಹನಾಗಿದ್ದನು. ಮೂಲ ಶಾಸನದಲ್ಲಿ ಸಂಖ್ಯೆಗಳೇನೂ ಇರಲಿಲ್ಲ, ಅದನ್ನು ಅನುವಾದಿಸಿದ ರಾಬರ್ಟ್‌ ಫ್ರಾನ್ಸಿಸ್‌ ಹಾರ್ಪರ್‌ ಅವುಗಳಿಗೆ ಸಂಖ್ಯೆಗಳನ್ನು ನೀಡಿದ್ದಂತೆ! 

      ಕ್ರೆ„ಸ್ತರ ನಂಬಿಕೆಗಳಲ್ಲಿ ಒಂದಾದ ಕ್ರಿಸ್ತನ ಅಂತಿಮ ಭೋಜನದ(ದ ಲಾಸ್ಟ್‌ ಸಪ್ಪರ್‌) ಮೇಜಿನ 13ನೇ ಸ್ಥಾನದಲ್ಲಿ ಕುಳಿತವನು ದ್ರೋಹಿ ಜುದಾಸ. ಆದರೆ ಬೈಬಲ್ಲಿನಲ್ಲಿ ಈ ಕುರಿತಂತೆ ಯಾವುದೇ ದೃಢೀಕರಣ ಇಲ್ಲ! ಜೂಡಿಯೋ ಕ್ರಿಶ್ಚಿಯನ್‌ ಪರಂಪರೆಯಲ್ಲಿ ಬರುವ ತೋಹ್ರಾದಲ್ಲಿ 13ನೇ ಸಂಖ್ಯೆ ದೇವರ ಅಸ್ತಿತ್ವವನ್ನು ಸಾರುವುದಾಗಿದೆ. ದೇವರ 13ನೇ ಅಂಶದ ಬಗ್ಗೆ ಕೆಲವು ಚರ್ಚುಗಳಲ್ಲಿನ ಪ್ರವಚನಗಳಲ್ಲಿ ಉÇÉೇಖೀಸಲಾಗುತ್ತದೆ. 

      ವೈಕಿಂಗ್‌ ನಂಬಿಕೆಗಳ ಪ್ರಕಾರ ನಾರ್ಸ್‌ ದೇವಾಲಯದಲ್ಲಿನ 13ನೇ ದೈವ ಲೋಕಿ. ತುಂಟತನ, ಕುಟಿಲತನಗಳಿಗೆ ಹೆಸರಾದ ಲೋಕಿಯೇ ಬಾಲ್ಡರ್‌ನನ್ನು ಕೊಂದು ಅವನ ಸಂಸ್ಕಾರಕ್ಕೆ ಬಂದ 13ನೇ ಅತಿಥಿಯಾಗಿದ್ದನಂತೆ. ಇದೇ ಕಾರಣಕ್ಕಾಗಿ ಎಲ್ಲಿಯಾದರೂ 13 ಜನ ಸೇರಿ¨ªಾರೆಂದರೆ ಅವರುಗಳಲ್ಲಿ ಒಬ್ಬರು ಒಂದು ವರ್ಷದ ಒಳಗಾಗಿ ತೀರಿಕೊಳ್ಳುತ್ತಾರೆ ಎಂಬ ನಂಬಿಕೆ ಬೆಳೆದುಬಂದಿದ್ದು ಟ್ರಿಸ್ಕಾಯ್‌ಡೆಕಾಫೋಬಿಯಾ ಅಥವಾ ಹದಿಮೂರರ ಹೆದರಿಕೆಯಾಗಿ ಪರಿವರ್ತನೆಯಾಗಿದೆ. ಫ್ರೆಂಚರಲ್ಲೂ ಇದೇ ಮೂಢನಂಬಿಕೆ ಬೆಳೆದಿದ್ದು 13 ಜನ ಊಟಕ್ಕೆ ಕುಳಿತುಕೊಳ್ಳುವ ಸಂದರ್ಭ ಬಂದಾಗಲೆÇÉಾ ಯಾರಾದರೊಬ್ಬನನ್ನು ದುಡ್ಡುಕೊಟ್ಟಾದರೂ ಸರಿ ಎಳೆದುಕೊಂಡು ಬಂದು ಕೂರಿಸಿಕೊಳ್ಳುತ್ತಾರಂತೆ! 

      ಅಶುಭವನ್ನು ನಿವಾರಿಸಲು ಪ್ರಾಚೀನ ಪರ್ಶಿಯನ್ನರು ಹದಿಮೂರನೇ ದಿನದಂದು ತಮ್ಮ ಮನೆ ಮಠಗಳನ್ನು ಬಿಟ್ಟು ಹೊರಹೋಗಿಬಿಡುತ್ತಿದ್ದರಂತೆ, ಕಾರಣ ರಾಶಿಚಕ್ರದಲ್ಲಿರುವ ಹನ್ನೆರಡು ರಾಶಿಗಳು ಪ್ರತಿಯೊಂದು ದಿನವನ್ನೂ ಆಳುತ್ತಿದ್ದು ಹದಿಮೂರನೇ ದಿನಕ್ಕೆ ಯಾವ ರಾಶಿಯೂ ಇರಲಿಲ್ಲ! ಇದನ್ನು ಸಿಜದಾ ಬೆದರ್‌ ಎನ್ನುತ್ತಾರೆ. ಫೆಬ್ರವರಿ 13, 1307ರಲ್ಲಿ ಫ್ರಾನ್ಸಿನ ದೊರೆ ಐದನೇ ಫಿಲಿಪ್‌ ಟೆಂಪ್ಲಾರ್‌ನ ಸರದಾರರುಗಳನ್ನು ಬಂಧಿಸಲು ಆಜ್ಞೆ ಹೊರಡಿಸಿದ್ದನಂತೆ. ಈ ರೀತಿಯ ಹಲವು ಮೂಢನಂಬಿಕೆಗಳನ್ನು ಹೊಡೆದೋಡಿಸಲೆಂದೇ 1881ರಲ್ಲಿ ನ್ಯೂಯಾರ್ಕಿನಲ್ಲಿ ಕ್ಯಾಪ್ಟನ್‌ ವಿಲಿಯಂ ಫೌಲರ್‌ ಎಂಬ ಅಮೆರಿಕೆಯ ಆಂತರಿಕ ಯುದ್ಧದ ವೀರಾಗ್ರಣಿ ಥರ್ಟೀನ್‌¤ ಕ್ಲಬ್‌ ಎಂಬ ಸಂಘವನ್ನು ಆರಂಭಿಸಿದನು. 1881ರ ಜನವರಿ 13 ರಂದು ರಾತ್ರಿ 8.13ಕ್ಕೆ 13ನೇ ರೂಮಿನಲ್ಲಿ 13 ಜನರು ಒಟ್ಟಾಗಿ ಔತಣ ಕೂಟದಲ್ಲಿ ಭಾಗವಹಿಸಿದ್ದರು. ಮೂಢನಂಬಿಕೆಯನ್ನು ಹೊಡೆದೋಡಿಸುವ ಇಂತಹ ಪ್ರಯತ್ನದಿಂದಾಗ ಮುಂದಿನ ನಲವತ್ತು ವರ್ಷಗಳಲ್ಲಿ ಉತ್ತರ ಅಮೆರಿಕದಾದ್ಯಂತ ಈ ರೀತಿಯ ಥರ್ಟೀನ್‌¤ ಕ್ಲಬ್‌ಗಳು ಆರಂಭಗೊಂಡವು. ನಾಡಿನ ಪ್ರಮುಖ ದೈನಿಕಗಳಲ್ಲಿ ಇವುಗಳ ಚಟುವಟಿಕೆಗಳು ಬಿತ್ತರಗೊಂಡು ಜನರಲ್ಲಿ ಮೂಢನಂಬಿಕೆಯನ್ನು ಕಡಿಮೆ ಮಾಡಲು ಶ್ರಮಿಸಿದ್ದೇ ಅಲ್ಲದೆ ಅಮೆರಿಕೆಯ ಚುನಾವಣೆಗಳ ಮೇಲೂ ಪ್ರಭಾವ ಬೀರಿದವು. ಈ ಕ್ಲಬ್‌ಗಳಿಗೆ ಸೇರಿದ ಐದು ಜನರು ಮುಂದೆ ಅಮೆರಿಕೆಯ ಅಧ್ಯಕ್ಷರಾಗಿ ಆಯ್ಕೆಯಾಗಿ¨ªೊಂದು ವಿಶೇಷ. ಚೆಸ್ಟರ್‌ ಎ. ಆರ್ಥರ್‌ನಿಂದ ಹಿಡಿದು ಥಿಯೋಡರ್‌ ರೂಸ್‌ವೆಲ್ಟ್ವರೆಗೆ ಆಯ್ಕೆಯಾದ ಅಧ್ಯಕ್ಷರುಗಳು ಈ ಥರ್ಟೀನ್‌¤ ಕ್ಲಬ್‌ನ ಸದಸ್ಯರೇ! 
      - ಬೇದ್ರೆ ಮಂಜುನಾಥ್‌
      • 2013 ಯಾವ ಅಂತಾರಾಷ್ಟ್ರೀಯ ವರ್ಷ?

      • 2013 ನೇ ವರ್ಷವನ್ನು ಈ ಕೆಳಕಂಡ ಅಂತಾರಾಷ್ಟ್ರೀಯ ವರ್ಷಗಳೆಂದು ಘೋಷಿಸಲಾಗಿದೆ:

        • Udayavani | Dec 31, 2012
          2013 ನೇ ವರ್ಷವನ್ನು ಈ ಕೆಳಕಂಡ ಅಂತಾರಾಷ್ಟ್ರೀಯ ವರ್ಷಗಳೆಂದು ಘೋಷಿಸಲಾಗಿದೆ: 
          2013- ವಿದ್ಯಾರ್ಥಿ ಪ್ರಾಜೆಕ್ಟ್ಗಳ ವರ್ಷ 
          2013- ಅಂತಾರಾಷ್ಟ್ರೀಯ ನೀರಿನ ಸಹಕಾರಿ ವರ್ಷ 
          2013- ಅಂತಾರಾಷ್ಟ್ರೀಯ ಅಂಕಿಅಂಶಗಳ ವರ್ಷ 
          2013- ಅಂತಾರಾಷ್ಟ್ರೀಯ ಕ್ವಿನೋವಾ ವರ್ಷ 
          2013- ಅಂತಾರಾಷ್ಟ್ರೀಯ ಅಭಿವೃದ್ಧಿ ಹೊಂದುತ್ತಿರುವ ಸಣ್ಣ ದ್ವೀಪರಾಷ್ಟ್ರಗಳ ವರ್ಷ 
          2013- ಭೂಗ್ರಹದ ವಿಶೇಷ ಗಣಿತ ವರ್ಷ

No comments: