Tuesday, March 26, 2013

KAS Interview 2013 How to Face it - Article in Udayavani Josh 26 March 2013














Udayavani
  • KAS ಐಎಎಸ್‌ ಸ್ಪೆಷಲ್‌ ಆಫ‌ರ್‌: ಕಂಕಣ ಭಾಗ್ಯ ಸ್ಕೀಂ, ಆಶೀರ್ವಾದ ಸ್ಕೀಂ

  • ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌-ಜನವರಿಯಲ್ಲಿ ನಡೆಸಿದ ಗೆಝೆಟೆಡ್‌ ಪೊ›ಬೆಷನರ್‌ಗಳ ಮುಖ್ಯ ಪರೀಕ್ಷೆಯಲ್ಲಿ ಅಭ

    • Udayavani | Mar 25, 2013
      ಕರ್ನಾಟಕ ಲೋಕಸೇವಾ ಆಯೋಗವು ಕಳೆದ ಡಿಸೆಂಬರ್‌-ಜನವರಿಯಲ್ಲಿ ನಡೆಸಿದ ಗೆಝೆಟೆಡ್‌ ಪೊ›ಬೆಷನರ್‌ಗಳ ಮುಖ್ಯ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಗಳಿಸಿದ ಅಂಕಗಳನ್ನು ಕಳೆದವಾರ ಪ್ರಕಟಿಸಿದೆ. ಒಟ್ಟು 362 ಹು¨ªೆಗಳಿಗೆ ನಡೆಸಲಾದ ಮುಖ್ಯ ಪರೀಕ್ಷೆಯಲ್ಲಿ ಯಶಸ್ವಿಯಾದ 5574 ಅಭ್ಯರ್ಥಿಗಳ ಅಂಕಗಳನ್ನು ವಿಷಯವಾರು ಕೋಡ್‌ ಸಹಿತ ಪ್ರಕಟಿಸಲಾಗಿದೆ. ಅತ್ಯಂತ ಹೆಚ್ಚು ಅಂಕ 1109 ಇದ್ದರೆ, ಅತಿ ಕಡಿಮೆ ಅಂಕ 152 ಇದೆ. 1000ಕ್ಕೂ ಹೆಚ್ಚು ಅಂಕಗಳಿಸಿದವರು 108 ಅಭ್ಯರ್ಥಿಗಳಿದ್ದರೆ, 950ಕ್ಕೂ ಹೆಚ್ಚು ಗಳಿಸಿದವರು 293. 900 ಕ್ಕೂ ಹೆಚ್ಚು ಗಳಿಸಿದವರು 600 ಮತ್ತು 850ಕ್ಕೂ ಹೆಚ್ಚು ಅಂಕಗಳಿಸಿದವರು 1103 ಜನ ಇ¨ªಾರೆ. ಕನ್ನಡ ಮತ್ತು ಇಂಗ್ಲಿಷ್‌ ಕಡ್ಡಾಯ ಅರ್ಹತಾ ಪರೀಕ್ಷೆಯಲ್ಲಿ 309 ಜನ ಫೇಲಾಗಿ¨ªಾರೆ! ಕೆಲವರು ಕನ್ನಡದಲ್ಲಿ ಕನಿಷ್ಠ ಅಂಕ ಗಳಿಸಿದ್ದರೆ ಒಂದಿಬ್ಬರು ಸೊನ್ನೆ ಗಳಿಸಿ¨ªಾರೆ! ಕನ್ನಡದಲ್ಲಿ 118ಕ್ಕೂ ಹೆಚ್ಚು ಅಂಕಗಳಿಸಿ ಇಂಗ್ಲಿಷ್‌ನಲ್ಲಿ ಕನಿಷ್ಠ ಅಂಕಗಳಿಸಲಾರದೇ ಹೋಗಿರುವವರ ಜೊತೆ ಇಂಗ್ಲಿಷ್‌ನಲ್ಲಿ ಶೂನ್ಯ ಸಂಪಾದನೆ ಮಾಡಿದವರೂ ಎರಡಂಕಿಯಷ್ಟಿ¨ªಾರೆ! 54 ಅಭ್ಯರ್ಥಿಗಳ ಫ‌ಲಿತಾಂಶವನ್ನು ವಿವಿಧ ಕಾರಣಗಳಿಗಾಗಿ ತಡೆಹಿಡಿಯಲಾಗಿದೆ. ಅಂಕಗಳ ಮರು ಎಣಿಕೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನ ಮಾರ್ಚ್‌ 27. ಸದ್ಯಕ್ಕೆ ರಾಜ್ಯದಲ್ಲಿ ಚುನಾವಣೆ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಂತಿಮ ಫ‌ಲಿತಾಂಶ ಪಟ್ಟಿಯ ಪ್ರಕಟಣೆ ಮತ್ತು ಸಂದರ್ಶನ ನಡೆಸಲು ಚುನಾವಣಾ ನೀತಿ ಸಂಹಿತೆಯ ಅಡಿಯಲ್ಲಿ ಅವಕಾಶವಿದೆಯೇ ಎಂದು ಪರಿಶೀಲಿಸಲಾಗುತ್ತಿದೆ. ಸಧ್ಯ ಜಾರಿಯಲ್ಲಿರುವ ಮೀಸಲಾತಿ ಪ್ರಮಾಣ ಮತ್ತು ಹು¨ªೆಗಳ ಸಂಖ್ಯೆಗೆ ಅನುಗುಣವಾಗಿ 1:3 ಅನುಪಾತದಲ್ಲಿ ಸಂದರ್ಶನಕ್ಕೆ ಕರೆಪತ್ರ ಕಳಿಸಲಾಗುತ್ತದೆ. 

      ಮಾತೃಭಾಷಾ ಪ್ರೇಮಕ್ಕೆ ಹೆಚ್ಚು ಅಂಕ! 
      ಮುಖ್ಯ ಪರೀಕ್ಷೆಯ ಐಚ್ಛಿಕ ವಿಷಯ ಆಯ್ಕೆಯಲ್ಲಿ ಈ ಬಾರಿ ಉರ್ದು ಭಾಷೆಯ ಸಾಹಿತ್ಯ ಆರಿಸಿಕೊಂಡಿದ್ದ ಸುಮಾರು 9 ಅಭ್ಯರ್ಥಿಗಳಲ್ಲಿ ಒಬ್ಬರು ಅತ್ಯಂತ ಹೆಚ್ಚು ಅಂದರೆ 441 ಗಳಿಸಿದ್ದರೆ ಮೂವರು 400ಕ್ಕೂ ಹೆಚ್ಚು ಅಂಕಗಳಿಸಿ¨ªಾರೆ! ಕನ್ನಡ ಸಾಹಿತ್ಯ ತೆಗೆದುಕೊಂಡವರಲ್ಲಿ ಹೆಚ್ಚು ಗಳಿಸಿದವರು 432.5 ತೆಗೆಯಲಷ್ಟೇ ಸಮರ್ಥರಾಗಿ¨ªಾರೆ. ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆಯ ಬಗ್ಗೆ ಸಂಸತ್ತಿನಲ್ಲಿ ಕೋಲಾಹಲ ನಡೆಯುತ್ತಿರುವ ಈ ದಿನಗಳಲ್ಲಿ ಮಾತೃಭಾಷಾ ಪ್ರೇಮಿಗಳು ಯಾವರೀತಿ ಅನುಕೂಲ ಪಡೆಯುತ್ತಾರೆ ಎಂಬುದಕ್ಕೆ ಇದಕ್ಕಿಂತಲೂ ಒಳ್ಳೆಯ ಉದಾಹರಣೆ ಇನ್ನೆಲ್ಲಿ ಸಿಗಬಹುದು ಹೇಳಿ? 
      ಉಳಿದ ವಿಷಯಗಳಲ್ಲಿ ಭೂಗೋಳ 427.5, ಮನಃಶಾಸ್ತ್ರ 413.5, ಸಮಾಜಶಾಸ್ತ್ರ 405 ಅಂಕಗಳೇ ಅತಿ ಹೆಚ್ಚು ಎಂಬುದು ಸದ್ಯಕ್ಕೆ ತಿಳಿದು ಬಂದಿರುವ ಅಂಶ. ಅಂದಹಾಗೆ ಈ ಎÇÉಾ ವಿಷಯಗಳೂ ಎಲ್ಲಿ ಬಹಿರಂಗಗೊಳ್ಳುತ್ತಿವೆ ಎಂಬ ಕುತೂಹಲ ಇದೆ ಅಲ್ಲವೇ? ಕರ್ನಾಟಕ ಲೋಕ ಸೇವಾ ಆಯೋಗದ ಪರೀûಾರ್ಥಿಗಳು ತಮ್ಮದೇ ಒಂದು ಗ್ರೂಪ್‌ ಅನ್ನು ಫೇಸ್‌ಬುಕ್‌ನಲ್ಲಿ ರಚಿಸಿಕೊಂಡಿದ್ದು ಅದರಲ್ಲಿ ಈ ಅಂಶಗಳನ್ನು ಮೊಗೆದು ತೆಗೆದು ಅಂಟಿಸುತ್ತಿ¨ªಾರೆ. ಇಂತಹದೇ ಇನ್ನೊಂದು ಗುಂಪು ಬ್ಲಾಗ್‌ನ ಕೆಎಎಸ್‌ ಪ್ರಶ್ನೆ ಪತ್ರಿಕೆ- ಮಾದರಿ ಉತ್ತರಗಳ ಕೊಂಡಿಯಲ್ಲಿ ಸೇರಿಕೊಂಡಿದ್ದು ಅಲ್ಲಿಯೂ ಪರಸ್ಪರ ಚರ್ಚೆ ನಡೆಯುತ್ತಿದೆ. ಎಲ್ಲಿಂದಲೋ ಹಾರಿ ಬರುವ ಸುದ್ದಿಗಳು ಅನೇಕವೇಳೆ ನೈಜ ಮಾಹಿತಿ ಮತ್ತು ಅಧಿಕೃತ ಅಂಕಿ-ಅಂಶಗಳನ್ನು ತಿಳಿಸುತ್ತಿವೆ. ಹೆಸರನ್ನು ಹಲವು ವೇಳೆ ಗೌಪ್ಯವಾಗಿಡಲಾಗುತ್ತದೆ. ಪರಸ್ಪರ ದೋಷಾರೋಪಗಳೂ, ಜಗಳಗಳೂ ಇರುತ್ತವೆ ಅನ್ನಿ. 

      ಕಂಕಣ ಭಾಗ್ಯ ಸ್ಕೀಂ- ಆಶೀರ್ವಾದ ಸ್ಕೀಂ- ಶಿಫಾರಸ್ಸು ಸ್ಕೀಂ 
      ಕೇಂದ್ರ ಲೋಕಸೇವಾ ಆಯೋಗ ನಡೆಸುವ ಸಂದರ್ಶನದಂತೆಯೇ ಕರ್ನಾಟಕ ಲೋಕಸೇವಾ ಆಯೋಗದ ಸಂದರ್ಶನವೂ ಇರುತ್ತದೆ. ವಸ್ತುನಿಷ್ಠವಾಗಿ ಸಂದರ್ಶನ ನಡೆದಲ್ಲಿ ನಿಜಕ್ಕೂ ಪ್ರತಿಭಾವಂತರಿಗೆ ಮಾತ್ರ ಅವಕಾಶ ಸಿಗುತ್ತದೆ. ಆದರೆ ಈ ಫೇಸ್‌ಬುಕ್‌ ಗ್ರೂಪ್‌ಗ್ಳಲ್ಲಿ ನಡೆಯುತ್ತಿರುವ ಚರ್ಚೆಯ ಜಾಡನ್ನು ಹಿಡಿದು ಹೋದಲ್ಲಿ ಪ್ರತಿಭೆಗಿಂತ ಇರಬೇಕೆಂಬ ಅಂಶ ಗೋಚರಿಸುತ್ತಿದೆ. ಹಾಗೆಯೇ ವಿವಿಧ ಸ್ಕೀಂಗಳ ಪರಿಚಯವೂ ಆಗುತ್ತಿದೆ. ಕಂಕಣ ಭಾಗ್ಯ ಸ್ಕೀಂ ತುಂಬಾ ಜನಪ್ರಿಯವಾಗಿದೆ. ಸಂದರ್ಶನಕ್ಕೆ ಹಾಜರಾಗುತ್ತಿರುವ ಅರ್ಹ ಅವಿವಾಹಿತ ಯುವಕನಿಗೆ ತಮ್ಮ ಮಗಳನ್ನು ಧಾರೆ ಎರೆದು ಕೊಡಲು ಸಿದ್ಧರಾಗುವ ಕನ್ಯಾಪಿತೃಗಳು ಹೇಗಾದರೂ ಮಾಡಿ ಆಯ್ಕೆ ಮಾಡಿಸಿ ಕೆಲಸ ಕೊಡಿಸುವ ಜವಾಬ್ದಾರಿ ಹೊತ್ತು, ನಿಭಾಯಿಸಿ, ಸಂದರ್ಶನ ಸಮಿತಿಯ ಸದಸ್ಯರನ್ನು ನಯವಿನಯಗಳಿಂದ ಒಲಿಸಿ, ಕಾಣಿಕೆ ಸಲ್ಲಿಸಿ ಯಶಸ್ವಿಯಾಗಿ ಕೆಲಸ ಗಿಟ್ಟಿಸಿ ಕನ್ಯೆಯನ್ನು ದಾಟಿಸುವ ಈ ಕಂಕಣಭಾಗ್ಯ ಸ್ಕೀಂಗೆ ಅನೇಕರು ಹೆಸರು ಹಚ್ಚಿ¨ªಾರೆ, ಹಲವರು ಫ‌ಲಾನುಭವಿಗಳೂ ಇ¨ªಾರೆ. ಪ್ರಭಾವಶಾಲಿ ಮಠಮಾನ್ಯಗಳ ಸ್ವಾಮೀಜಿಗಳು, ರಾಜಕೀಯ ನೇತಾರರು, ಉನ್ನತ ಅಧಿಕಾರಿಗಳ ಶಿಫಾರಸ್ಸು ಒಂದಷ್ಟು ಜನರಿಗೆ ಶ್ರೀರಕ್ಷೆ ನೀಡಿದರೆ ಮತ್ತಷ್ಟು ಜನರು ಸೂಟ್‌ಕೇಸ್‌ಗಟ್ಟಲೇ ಕಪ್ಪಕಾಣಿಕೆಗಳನ್ನು ಸಲ್ಲಿಸಿ ಆಶೀರ್ವಾದ ಪಡೆಯಲು ಸಿದ್ಧರಾಗಿರುತ್ತಾರೆ. ಪ್ರೇಮ ಮತ್ತು ಯುದ್ಧದಲ್ಲಿ ಎಲ್ಲವೂ ಸಮ್ಮತ ಎಂಬಂತೆ ಸಂದರ್ಶನಗಳಲ್ಲಿಯೂ ಶತಾಯ-ಗತಾಯ ಲಾಭ ಪಡೆದೇ ತೀರಬೇಕೆಂಬ ಹಠ ಅಭ್ಯರ್ಥಿಗಳನ್ನು ಎಂತಹ ಕನಿಷ್ಠ ಮಟ್ಟಕ್ಕೂ ಇಳಿಸಿಬಿಡುತ್ತದೆ! 
      15 ರಿಂದ 60 ಲಕ್ಷ ರೂಪಾಯಿಗಳವರೆಗೆ ವಹಿವಾಟು ನಡೆಯುತ್ತಿದೆ ಎನ್ನುವುದು ಫೇಸ್‌ಬುಕ್‌ ಗ್ರೂಪ್‌ನಲ್ಲಿ ಮೂಡಿಬರುತ್ತಿರುವ ಕರ್ಣಾಕರ್ಣಿ. ಮೇಲುನೋಟಕ್ಕೆ ಇವೆಲ್ಲ ಸುಳ್ಳು. ಅರ್ಹತೆ ಇರುವವರಿಗೆ, ಪ್ರತಿಭಾವಂತರಿಗೆ ಅವಕಾಶ ಇದ್ದೇ ಇದೆ ಎನ್ನುವುದು ಲೋಕಸೇವಾ ಆಯೋಗದ ಸದಸ್ಯರ ಅನ್ನಿಸಿಕೆಯಾದರೂ ವಿವಿಧ ರಾಜಕೀಯ ಪಕ್ಷಗಳು ಮತ್ತು ಜಾತಿ-ಪಂಗಡಗಳನ್ನು ಪ್ರತಿನಿಧಿಸುತ್ತಿರುವ ಈ ಸದಸ್ಯರು ಅವರವರ ಸ್ಥಾಪಿತ ಹಿತಾಸಕ್ತಿಗಳನ್ನು ಸಾಧಿಸಿಕೊಳ್ಳದೇ ಹೊರಗೆ ಹೋಗುವಂತಿಲ್ಲ. ಅವರು ಪ್ರಾಮಾಣಿಕರಾಗಿದ್ದರೂ ಅವರ ಮೇಲೆ ಪಕ್ಷ, ಪಂಗಡಗಳು ಹೇರುವ ಒತ್ತಡಕ್ಕೆ ಮಣಿಯಲೇಬೇಕಾದ, ಋಣ ತೀರಿಸಬೇಕಾದ, ಅನಿವಾರ್ಯತೆ ಇದ್ದೇ ಇದೆ. ಇದಕ್ಕೆ ಅಪವಾದಗಳೂ ಇಲ್ಲದೇ ಇಲ್ಲ. ಈ ವಿಷಯಗಳೆÇÉಾ ಒಂದು ರೀತಿಯ ಬಹಿರಂಗ ಸತ್ಯ. ಫೇಸ್‌ಬುಕ್‌ನಲ್ಲಿ ಓಡಾಡುತ್ತಲಿದೆ ನಿತ್ಯ! 

      ಹತಾಶೆ ಬೇಡ- ಸಂದರ್ಶನ ಎದುರಿಸಿ 
      ಎಲ್ಲಾ ಸಂದರ್ಶನಗಳೂ ಕೇವಲ ಕಣ್ಣೊರೆಸುವ ತಂತ್ರ, ಕೇವಲ ಬೂಟಾಟಿಕೆ, ಮೊದಲಿಗೇ ತಮಗೆ ಬೇಕಾದವರನ್ನು ನೇಮಿಸಿಕೊಂಡು ಉಳಿದವರಿಗೆ ಸುಮ್ಮನೇ ತೊಂದರೆ ಕೊಡುವ ಪ್ರಕ್ರಿಯೆ. ತಮ್ಮ ಯೋಗ್ಯತೆ ಗಿಂತಲೂ ಕಡಿಮೆ ಅರ್ಹತೆ ಇರುವವರಿಗೆ ಕೆಲಸ ಕೊಡುವ ಇಂತಹ ಸಂದರ್ಶನಗಳಿಗೆ ಹೋಗುವುದೇ ವ್ಯರ್ಥ. ಎಲ್ಲಾ ಕಡೆಯೂ ಹಣವೇ ಹಣ. ಹಣ ಕೊಟ್ಟು ಹು¨ªೆ ಕೊಳ್ಳುತ್ತಿರುವುದರಿಂದ ಸಂದರ್ಶನಕ್ಕೆ ಹೋಗುವುದರಲ್ಲಿ ಅರ್ಥವಿಲ್ಲ. ಎಲ್ಲವೂ ಮೋಸ ಎಂಬ ಮಾತುಗಳು ಆಗಾಗ್ಗೆ ಅಲ್ಲಲ್ಲಿ ಕೇಳಿಬರುತ್ತವೆ. ಈ ಮಾತುಗಳಲ್ಲಿ ಹುರುಳಿದೆಯೋ, ಇಲ್ಲವೋ ಎಂಬುದರ ಬಗ್ಗೆ ಅಭ್ಯರ್ಥಿಗಳು ಚಿಂತಿಸಬೇಕಾದ ಅಗತ್ಯ ಇಲ್ಲ. ಕೆಲವೊಮ್ಮೆ ಇದು ಕೆಲಸ ಸಿಗದ ಹತಾಶ ಅಭ್ಯರ್ಥಿಗಳು ಹಬ್ಬಿಸಿದ ಗಾಳಿ ಸುದ್ದಿಯೂ ಆಗಿರಬಹುದು. ಎಟುಕದ ದ್ರಾಕ್ಷಿ ಹುಳಿ ಎನ್ನುವಂತಹ ಹುಳಿಹುಳಿ ಅನುಭವದ ಸಂತರ್ಪಣೆಯೂ ಆಗಿರಬಹುದು! ನಿಜವಾದ ಅರ್ಹತೆ ಇರುವ ಅಭ್ಯರ್ಥಿಗಳು ನಮ್ಮ ದೇಶದ ಆಸ್ತಿ. ಅರ್ಹರಿಗೆ ಒಂದಿÇÉಾ ಒಂದು ಕಡೆ ಒಳ್ಳೆಯ ಉದ್ಯೋಗ ಸಿಕ್ಕೇ ಸಿಗುತ್ತದೆ. ಕಾಯುವ, ಪ್ರಯತ್ನಿಸುವ ಮತ್ತು ಗೆಲ್ಲುವ ತಾಳ್ಮೆ ಮತ್ತು ಛಲ ಇರಬೇಕು, ಅಷ್ಟೇ! 

      ಮಾದರಿ ಸಂದರ್ಶನ ಹೀಗಿರುತ್ತದೆ 
      ಕರ್ನಾಟಕ ಲೋಕಸೇವಾ ಆಯೋಗ 2005-06ರಲ್ಲಿ ನಡೆಸಿದ ಯಶಸ್ವಿ ಕೆಎಎಸ್‌ ಅಭ್ಯರ್ಥಿಗಳ ಸಂದರ್ಶನದಲ್ಲಿ ಭಾಗವಹಿಸಿ ಸೂಪರಿಂಟೆಂಡೆಂಟ್‌ ಆಫ್ ಪ್ರಿಸನ್ಸ್‌ ಆಗಿ ಆಯ್ಕೆಯಾದ ರಮೇಶ್‌ ಅವರಿಗೆ ಕೌಟುಂಬಿಕ ಹಿನ್ನೆಲೆ, ವಿದ್ಯಾಭ್ಯಾಸ, ಸಬ್‌ ಇನ್ಸ್‌ಪೆಕ್ಟರ್‌ ಆಗಿ ಕಾರ್ಯನಿರ್ವಹಿಸುವಾಗಿನ ಅನುಭವಗಳು ಕುರಿತು ತುಂಬಾ ಸರಳವಾದ ಪ್ರಶ್ನೆಗಳನ್ನು ಮಾತ್ರ ಕೇಳಿದ್ದರಂತೆ! ತುಂಬಾ ಕಷ್ಟವಾದ ಪ್ರಶ್ನೆಗಳನ್ನು ಕೇಳುತ್ತಾರೆ ಎಂದು ಕಷ್ಟಪಟ್ಟು ಓದಿಕೊಂಡು, ಹೆದರುತ್ತಲೇ ಹಾಜರಾದವರು ಹಕ್ಕಿಯಂತೆ ಹಗುರಾಗಿ ಹಾರುತ್ತಾ ಬಂದರಂತೆ!
      ಇದೇ ಸರಣಿಯಲ್ಲಿ ಸಂದರ್ಶನ ಎದುರಿಸಿದ ಡಾ.ನೆಲ್ಲಿಕಟ್ಟೆ ಎಸ್‌. ಸಿದ್ದೇಶ್‌ ಅವರಿಗೆ ಅವರ ವಿದ್ಯಾಭ್ಯಾಸ, ಹಿನ್ನೆಲೆ, ಅನುಭವ ವಿವರಿಸುವಂತೆ ಕೇಳಿದರಂತೆ. ದಲಿತ ಕುಟುಂಬದಿಂದ ಕಡು ಬಡತನದಲ್ಲಿ ಬೆಂದುಬಂದಿದ್ದ ಡಾ. ಸಿದ್ದೇಶ್‌ ಅವರಿಗೆ ಸಂಶೋಧನೆಗಾಗಿ ಆಯ್ದುಕೊಂಡಿದ್ದ ಅಭಿನವ ಕಾಳಿದಾಸ ವಿದ್ವಾನ್‌ ಬಸವಪ್ಪ ಶಾಸಿŒಗಳ ಬಗ್ಗೆ, ಕನ್ನಡ ಸಾಹಿತ್ಯದ ಬಗ್ಗೆ, ಸಾಹಿತ್ಯ ಸಂದರ್ಭದ ಬಗ್ಗೆ, ಮೆಚ್ಚಿನ ಲೇಖಕರ ಬಗ್ಗೆ ಮತ್ತು ತೀರಾ ಮುಖ್ಯವಾಗಿ ಅಂಬೇಡ್ಕರ್‌ ಅವರ ವಿಚಾರಧಾರೆಯ ಬಗ್ಗೆ ಹಾಗೂ ಅದರ ಪ್ರಭಾವ ಜನರ ಮೇಲೆ, ಸಿದ್ದೇಶ್‌ ಅವರ ಬದುಕಿನ ಮೇಲೆ ಆಗಿರುವ ಬಗ್ಗೆ ಸುದೀರ್ಘ‌ವಾಗಿ ಕೇಳಿದರಂತೆ. ಕೇಳಿದ 20 ಪ್ರಶ್ನೆಗಳಲ್ಲಿ 19 ಪ್ರಶ್ನೆಗಳಿಗೆ ಅತ್ಯುತ್ತಮ ರೀತಿಯಲ್ಲಿ ಉತ್ತರಿಸಿದ್ದಕ್ಕಾಗಿ ಶಹಭಾಸ್‌ಗಿರಿ ಸಿಕ್ಕಿದರೂ ಡಾ. ಸಿದ್ದೇಶ್‌ ಅವರು ಆ ಸಂದರ್ಶನದಲ್ಲಿ ಆಯ್ಕೆಯಾಗಲಿಲ್ಲ! 
      ಕಳೆದ ಕೆಲವು ವರ್ಷಗಳ ಹಿಂದೆ ಇದೇ ಕೆಎಎಸ್‌ ಸಂದರ್ಶನದಲ್ಲಿ ಭಾಗವಹಿಸಿದ್ದ ಖಜಾನೆ ಅಧಿಕಾರಿ ಅ.ನಾ. ಪ್ರಾಣೇಶ್‌ ಅವರು ಕಲೆ ಮತ್ತು ಕಾನೂನು ಅಭ್ಯಾಸ ಮಾಡಿದ ಅಭ್ಯರ್ಥಿಯಾಗಿದ್ದರೂ ಅವರಿಗೆ ಥರ್ಮಲ್‌ ಪವರ್‌ ಜನರೇಶನ್‌ ವಿಧಾನ ಕುರಿತು ತಿಳಿಸಿ ಎಂದು ಕೇಳಲಾಗಿತ್ತು! ಕಲಾ ವಿದ್ಯಾರ್ಥಿಗೆ ವಿಜ್ಞಾನದ ವಿಷಯದ ಪ್ರಶ್ನೆ ಎಂದು ಮೂಗಿನಮೇಲೆ ಬೆರಳಿಡಬೇಡಿ. ಆಂಗ್ಲ ಉಪನ್ಯಾಸಕರ ಹು¨ªೆಗೆ ಹಾಜರಾದ ಈ ಲೇಖಕನಿಗೆ ಬಯಾಪ್ಸಿ ಎಂದರೇನು? ಎಂದು ಜೀವವಿಜ್ಞಾನ, ಅದರಲ್ಲೂ ವೈದ್ಯಕೀಯ ವಿಜ್ಞಾನದ, ಪ್ರಶ್ನೆ ಕೇಳಲಾಗಿತ್ತು. ಜೊತೆಗೆ ಬಾಹ್ಯಾಂತರೀಕ್ಷಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು, ವಾಣಿಜ್ಯ ಮತ್ತು ಅಂತಾರಾಷ್ಟ್ರೀಯ ವ್ಯಾಪಾರ ಕುರಿತ ಪ್ರಶ್ನೆಗಳನ್ನೂ ಕೇಳಲಾಗಿತ್ತು! ಇಬ್ಬರೂ ಕ್ವಿಜ್‌ ಸ್ಪರ್ಧೆಗಳಲ್ಲಿ ಛಾಂಪಿಯನ್‌ ಆಗಿದ್ದರಿಂದ ಆ ಪ್ರಶ್ನೆಗಳಿಗೆ ಸೂಕ್ತರೀತಿಯಲ್ಲಿ ಉತ್ತರಿಸಿದರೂ ಆ ಹು¨ªೆಗಳು ಮಾತ್ರ ಸಿಗಲಿಲ್ಲ. 

      ಯಶಸ್ವೀ ಸಂದರ್ಶನ ಹೀಗಿತ್ತು 
      ಕೇಂದ್ರ ಲೋಕಸೇವಾ ಆಯೋಗ ನಡೆಸಿದ 2005ರ ಅಖೀಲ ಭಾರತ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಯಶಸ್ವಿಯಾದವರ ರ್‍ಯಾಂಕ್‌ ಪಟ್ಟಿ 2006ರ ಮೇ 12ರಂದು ಪ್ರಕಟವಾದಾಗ ಕರ್ನಾಟಕದ ಸುಮಾರು 18 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ರಾಷ್ಟ್ರಮಟ್ಟದಲ್ಲಿ 9ನೇ ರ್‍ಯಾಂಕ್‌ಗಳಿಸಿ ರಾಜ್ಯಕ್ಕೆ ಮೊದಲಿಗರಾದ ಚಿತ್ರದುರ್ಗ ಜಿÇÉೆ ಚಳ್ಳಕೆರೆ ತಾಲೂಕಿನ ಪರಶುರಾಂಪುರದ ಡಾ.ಎಸ್‌. ರಘುರಾಂ ಅವರನ್ನು ಸಂದರ್ಶಿಸಿ ನಿಮ್ಮ ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ) ಹೇಗಿತ್ತು? ಎಂದು ಪ್ರಶ್ನಿಸಿದಾಗ, ತುಂಬಾ ಆತ್ಮೀಯವಾಗಿತ್ತು. ಸಂದರ್ಶನ ಸಮಿತಿಯ ಅಧ್ಯಕ್ಷರು ಮತ್ತು ಸದಸ್ಯರು ನಗುಮುಖದಿಂದ ಮಾತಾಡಿಸಿದರು. ನಾನು ಓದಿದ ವಿಷಯಗಳು, ನನ್ನ ಕುಟುಂಬದ ವಿವರಗಳು, ನನ್ನ ಆಯ್ಕೆಯ ವಿಷಯಗಳ ಕುರಿತು ಪ್ರಶ್ನೆಗಳನ್ನು ಕೇಳಿದರು. ನಾನು ಐಎಫ್ಎಸ್‌ ಆಯ್ಕೆ ಮಾಡಿಕೊಳ್ಳುವ ಉತ್ಸುಕತೆಯಲ್ಲಿದ್ದುದರಿಂದ ನಮ್ಮ ನೆರೆಹೊರೆಯ ದೇಶಗಳೊಂದಿಗೆ ನಮ್ಮ ದೇಶದ ಸಂಬಂಧ, ಅಂತಾರಾಷ್ಟ್ರೀಯ ಸಂಬಂಧ ಇವುಗಳ ಬಗ್ಗೆಯೇ ಹೆಚ್ಚು ಒತ್ತು ನೀಡಲಾಗಿತ್ತು. ಇಲ್ಲಿ ನೀವು ಕೇಳಲಾದ ಪ್ರಶ್ನೆಗೆ ಏನು ಉತ್ತರ ಹೇಳುತ್ತೀರಿ ಎನ್ನುವುದಕ್ಕಿಂತ ಎಷ್ಟು ಪ್ರಾಮಾಣಿಕವಾಗಿ ನಿಮಗೆ ಗೊತ್ತಿರುವುದನ್ನು ಹೇಳುತ್ತೀರಿ, ಸ್ಪಷ್ಟವಾಗಿ ನಿಮ್ಮ ನಿಲುವನ್ನು ವ್ಯಕ್ತಗೊಳಿಸುತ್ತೀರಿ ಎನ್ನುವುದು ಮುಖ್ಯವಾಗುತ್ತದೆ. ಹತ್ತು ಪ್ರಶ್ನೆಗಳಿಗೆ ನೀವು ಒಂಬತ್ತಕ್ಕೆ ಸರಿ ಉತ್ತರ ನೀಡುವಲ್ಲಿ ಅಸಫ‌ಲರಾದರೂ ನೀಡುವ ಒಂದೇ ಪ್ರಶ್ನೆಯ ಉತ್ತರ ನಿಮ್ಮ ಧನಾತ್ಮಕ ಆಲೋಚನೆ, ನಿಮ್ಮ ವ್ಯಕ್ತಿತ್ವದ ಅನಾವರಣಗೊಳಿಸುವಂತಿದ್ದರೆ ಖಂಡಿತಾ ನೀವು ಆಯ್ಕೆಯಾಗುತ್ತೀರಿ. ನಿಮಗೆ ಕೇಳುವ ಪ್ರಶ್ನೆಗಳು ನಿಮ್ಮ ಸ್ವ-ವಿವರದೊಂದಿಗೆ ಲಗತ್ತಿಸಿರುವ ವಿವರಗಳನ್ನು ಆಧರಿಸಿಯೇ ಇರುತ್ತವೆ ಆದ್ದರಿಂದ ಅದಕ್ಕೆ ಪೂರಕವಾಗುವಂತೆ ನೀವು ನಿಮ್ಮ ಸಿದ್ಧತೆ ನಡೆಸಿದ್ದರೆ ಸಾಕು. ಕೇವಲ ಕ್ವಿಜ್‌ ರೀತಿಯಲ್ಲಿ ಸಂದರ್ಶನ ಇರುವುದಿಲ್ಲ. ನಿಮ್ಮ ವ್ಯಕ್ತಿಗತ ನಿಲುವುಗಳು, ಆಸಕ್ತಿ, ಅಭಿವ್ಯಕ್ತಿಗಳು, ನಿಮ್ಮ ಪ್ರಾಮಾಣಿಕ ವರ್ತನೆ ಎಲ್ಲವೂ ಇಲ್ಲಿ ಲೆಕ್ಕಕ್ಕೆ ಬರುವುದರಿಂದ ಯಾವುದೇ ಗಡಿಬಿಡಿಗೆ ಒಳಗಾಗದೆ ಸಂದರ್ಶನ ಎದುರಿಸಿ ಯಶಸ್ವಿಯಾಗಬಹುದು ಎಂದರು. 
      ಅದೇ ವರ್ಷ ಐಎಎಸ್‌ನಲ್ಲಿ 32ನೇ ಸ್ಥಾನ ಪಡೆದಿರುವ ಆರ್‌. ಸಂಗೀತಾ ಕಂಪ್ಯೂಟರ್‌ ಸೈನ್ಸ್‌ ಪದವೀಧರೆ. ಜೊತೆಗೆ ಹಣಕಾಸು ವಿಷಯದಲ್ಲಿ ಎಂಬಿಎ ಮತ್ತು ಕಾನೂನು ವ್ಯಾಸಂಗವನ್ನೂ ಮಾಡಿದವರು. ಇವರಿಗೆ ಸಂದರ್ಶನದಲ್ಲಿ ಕೇಳಿದ ಮೊದಲ ಪ್ರಶ್ನೆ ಇಷ್ಟೊಂದು ವಿವಿಧ ಕ್ಷೇತ್ರಗಳ ವ್ಯಾಸಂಗ ಯಾಕೆ ಮಾಡಿದ್ದು? ಅಂತ. ಉಳಿದಂತೆ ಅವರ ಸ್ವ-ವಿವರ, ಹಿನ್ನೆಲೆ, ಊರು, ರಾಜ್ಯದ ಪ್ರಶ್ನೆಗಳಿದ್ದವಂತೆ. ನಾಲ್ಕನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದರಿಂದ ಆ ಎÇÉಾ ಪ್ರಯತ್ನಗಳಲ್ಲಿಯೂ ಒಂದೇ ವಿಷಯಗಳನ್ನು ಆಯ್ದಕೊಂಡಿದ್ದರೆ? ಎಂದು ಕೇಳಿದರಂತೆ. ಕೊನೆಯದಾಗಿ ಈಶಾನ್ಯ ರಾಜ್ಯಗಳ ಜಿÇÉೆಯೊಂದರ ಜಿÇÉಾಧಿಕಾರಿಯಾಗಿ ನೇಮಕವಾದರೆ ಅಲ್ಲಿನ ಜನರಲ್ಲಿ ಪ್ರಚಲಿತವಿರುವ ಪರಿವರ್ತಿತ ಬೇಸಾಯ ಪದ್ಧತಿಯನ್ನು ಬದಲಾಯಿಸಲು ಏನು ಪ್ರಯತ್ನ ಮಾಡುವಿರಿ? ಎಂಬುದಾಗಿತ್ತಂತೆ. 
      2003ರಲ್ಲಿ 6ನೇ ರ್‍ಯಾಂಕ್‌ ಗಳಿಸಿದ ಮಯೂರ್‌ ಮಾಹೇಶ್ವರಿಯವರಿಗೆ ಮಾತ್ರ ಕೇಳಿದ ಪ್ರಶ್ನೆಗಳು ಸಾಮಾನ್ಯ ಜ್ಞಾನದ ಎಲ್ಲ ಕ್ಷೇತ್ರಗಳನ್ನು ಆವರಿಸಿದ್ದವು. ಮೊದಲ ಪ್ರಶ್ನೆ ಭಾರತದ ಜವಳಿ ಉದ್ಯಮ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಈ ಉದ್ಯಮ ಬೀರುತ್ತಿರುವ ಪ್ರಭಾವ, ಅದರ ಸಾಧಕ-ಬಾಧಕ ಗಳನ್ನು ಕುರಿತು ಇತ್ತು. ಸಂವಿಧಾನದ 356 ನೇ ವಿಧಿ ಮತ್ತು ಅದರ ಸದುಪಯೋಗ, ದುರುಪಯೋಗ ಕುರಿತು ಸದಸ್ಯರೊಬ್ಬರು ಪ್ರಶ್ನೆ ಮಾಡಿದರಂತೆ. ಹಿಂದುಳಿದ ರಾಜ್ಯಗಳಲ್ಲಿ ಹೆಣ್ಣು ಶಿಶುಗಳ ಸಂಖ್ಯೆಯಲ್ಲಿ ಇಳಿಮುಖವಾಗುತ್ತಿರುವ ಸಮಸ್ಯೆಯ ಬಗ್ಗೆ ಮಹಿಳಾ ಸದಸ್ಯರೊಬ್ಬರು ಪ್ರಶ್ನೆ ಕೇಳಿದರು. ಆಗ ನಡೆಯುತ್ತಿದ್ದ ಅಮೇರಿಕಾ ಮತ್ತು ಇರಾಕ್‌ ಕೊಲ್ಲಿ ಯುದ್ಧದ ಕುರಿತು ಪ್ರಶ್ನೆ ಇತ್ತು. ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಅಸಮತೋಲನ, ಕೊಳ್ಳುಬಾಕ ಸಂಸ್ಕೃತಿ, ಜಾಗತೀಕರಣದ ಬಗ್ಗೆಯೂ ಪ್ರಶ್ನೆಗಳನ್ನು ಕೇಳಲಾಗಿತ್ತು. ಕೊನೆಯಲ್ಲಿ ಹಿಂದುಳಿದ ರಾಜ್ಯಗಳಾದ ಉತ್ತರ ಪ್ರದೇಶ ಮತ್ತು ಬಿಹಾರ ರಾಜ್ಯಗಳ ನಡುವೆ ಇರುವ ಸಾಮ್ಯತೆ ಮತ್ತು ವ್ಯತ್ಯಾಸ ಕುರಿತು ವಿವರಿಸಲು ಕೇಳಿದರಂತೆ.(ಆಗ ಆ ಎರಡೂ ರಾಜ್ಯಗಳಲ್ಲಿ ಮಹಿಳಾ ಮುಖ್ಯಮಂತ್ರಿಗಳಿದ್ದರು.)
      ಈ ಮಾತುಗಳನ್ನು ಓದುವಾಗ ರಾಷ್ಟ್ರದಲ್ಲಿಯೇ ಉನ್ನತ ಹು¨ªೆಗೆ ನಡೆಸಲಾದ ವ್ಯಕ್ತಿತ್ವ ಪರೀಕ್ಷೆಯ(ಸಂದರ್ಶನದ) ಸ್ಪಷ್ಟ ಚಿತ್ರಣ ದೊರೆತಂತಾಗುತ್ತದೆ, ಅಲ್ಲವೇ? ಬಹುಶಃ ಇದೇ ಮಾದರಿಯಲ್ಲಿಯೇ ನಮ್ಮ ದೇಶದ ಎÇÉಾ ರಾಜ್ಯಗಳ ಲೋಕಸೇವಾ ಆಯೋಗಗಳು ನಡೆಸುವ ಸಂದರ್ಶನಗಳು ಇರುತ್ತವೆ ಎನಿಸುತ್ತದೆ. ಸಂದರ್ಶಕರ ಸಮಿತಿಯು ವಿವಿಧ ಕ್ಷೇತ್ರಗಳ ದಿಗ್ಗಜರನ್ನು ಪ್ರತಿನಿಧಿಸುವುದರಿಂದ, ಆಯ್ಕೆಯ ಮಾನದಂಡಗಳೂ ಪೂರ್ವ ನಿರ್ಧಾರಿತವಾಗಿರುವುದರಿಂದ, ವಸ್ತುನಿಷ್ಟವಾಗಿಯೂ ವ್ಯಕ್ತಿನಿಷ್ಟವಾಗಿಯೂ ನಡೆಯುತ್ತವೆ. ಇಂಗ್ಲೆಂಡಿನ ಸ್ಕಾಟ್ಲೆಂಡ್‌ಯಾರ್ಡ್‌, ಅಮೇರಿಕಾದ ಪೆಂಟಗನ್‌ ಮತ್ತು ರಷ್ಯಾದ ಕೆಜಿಬಿಗಳಿಗೆ ನಡೆಯುವ ನೇಮಕಾತಿ ಸಂದರ್ಶನಗಳ ಸಾಲಿನಲ್ಲಿಯೇ ಭಾರತದ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಸಂದರ್ಶನಗಳು ನಿಲ್ಲುತ್ತಿವೆ, ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಅನುಗುಣವಾಗಿ ನಡೆಯುತ್ತಿದ್ದು ವಿಶ್ವಾಸಾರ್ಹತೆಗಳಿಸಿವೆ. ಯಶಸ್ವಿ ಅಭ್ಯರ್ಥಿಗಳೇ, ಗುಡ್‌ಲಕ್‌! 
      ಹೆಚ್ಚಿನ ಮಾಹಿತಿಗೆ ನೋಡಿ: ಸಂದರ್ಶನ- ವ್ಯಕ್ತಿತ್ವದ ಸಮಗ್ರ ದರ್ಶನ, ನವಕರ್ನಾಟಕ ಪ್ರಕಾಶನ, ಬೆಂಗಳೂರು.

      ಬಾಕ್ಸ್‌ 
      ಭಾಷಾ ಮಾಧ್ಯಮ ಆಯ್ಕೆಗೆ ಇದ್ದ ತಡೆಗಳೆಲ್ಲ ನಿವಾರಣೆ 

      ಕಳೆದ ಗುರುವಾರ ಮಧ್ಯಾಹ್ನ ಲೋಕಸಭೆಯಲ್ಲಿ ಸಿಬ್ಬಂದಿ ಖಾತೆ ಸಚಿವ ವಿ. ನಾರಾಯಣ ಸ್ವಾಮಿಯವರು ಚರ್ಚೆಯೊಂದಕ್ಕೆ ಉತ್ತರಿಸುತ್ತಾ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಗೆಝೆಟೆಡ್‌ ಪೊ›ಬೆಷನರ್‌ಗಳ ನೇಮಕಾತಿ ಮುಖ್ಯ ಪರೀಕ್ಷೆಯ ಪ್ರಶ್ನೆಪತ್ರಿಕೆಗಳ ಮಾದರಿಯಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮ ಮತ್ತು ಭಾಷಾ ಸಾಹಿತ್ಯ ಪತ್ರಿಕೆಯ ಆಯ್ಕೆಯ ವಿಷಯದಲ್ಲಿ ತಂದಿರುವ ಕಟ್ಟುನಿಟ್ಟಿನ ಬದಲಾವಣೆಯನ್ನು ಮರುಪರಿಶೀಲನೆಗೆ ಒಳಪಡಿಸುವಂತೆ ಮಾರ್ಚ್‌ 15ರಂದು ನಡೆದ ಪ್ರತಿಭಟನೆಗಳ ಹಿನ್ನೆಲೆಯಲ್ಲಿ ಸಂಬಂಧಿಸಿದ ಆಯೋಗದೊಂದಿಗೆ ಚರ್ಚಿಸಿ ಈ ಕೆಳಕಂಡ ತೀರ್ಮಾನಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು. 
      - ಅಭ್ಯರ್ಥಿಯು ಸಂವಿಧಾನದ 8ನೇ ಅನುಚ್ಛೇದದಲ್ಲಿರುವ ಯಾವುದೇ ಭಾಷೆಯಲ್ಲಿ ಅಥವಾ ಇಂಗ್ಲಿಷ್‌ನಲ್ಲಿ ಪರೀಕ್ಷೆ ಬರೆಯಬಹುದು. 
      - ಭಾಷಾ ಮಾಧ್ಯಮದ ಮೇಲೆ ವಿಧಿಸಲಾಗಿದ್ದ 25 ಅಭ್ಯರ್ಥಿಗಳ ನಿಗದಿತ ಸಂಖ್ಯೆಯ ಮಿತಿಯನ್ನು ಹಾಗೂ ಪದವಿಯಲ್ಲಿ ಅದೇ ಭಾಷಾ ಮಾಧ್ಯದಲ್ಲಿ ಓದಿರಬೇಕು ಎಂಬ ನಿಬಂಧನೆಯನ್ನು ತೆಗೆದುಹಾಕಲಾಗಿದ್ದು ಹಳೆಯ ಪದ್ಧತಿಯಂತೆಯೇ ಭಾಷಾ ಮಾಧ್ಯಮದ ಆಯ್ಕೆಯನ್ನು ಅಭ್ಯರ್ಥಿಗಳ ಇಚ್ಛೆಗೆ ಬಿಡಲಾಗಿದೆ. 
      - ಹಿಂದಿನಂತೆಯೇ ಅಭ್ಯರ್ಥಿಯು ಪದವಿಯಲ್ಲಿ ಯಾವುದೇ ಐಚ್ಛಿಕ ವಿಷಯ ತೆಗೆದುಕೊಂಡು ಓದಿದ್ದರೂ ಮುಖ್ಯ ಪರೀಕ್ಷೆಯಲ್ಲಿ ಪ್ರಾದೇಶಿಕ ಭಾಷಾ ಸಾಹಿತ್ಯ(22 ಸಂವಿಧಾನ ಅನುಮೋದಿಸಿದ ಭಾಷೆಗಳು ಮತ್ತು ಇಂಗ್ಲಿಷ್‌) ಇವುಗಳಲ್ಲಿ ಯಾವುದೇ ಒಂದನ್ನು ಆಯ್ದುಕೊಳ್ಳಬಹುದು. ಪದವಿಯಲ್ಲಿ ಓದಿದ ಭಾಷಾ ಸಾಹಿತ್ಯ ಓದಿದ್ದರೆ ಅದೇ ವಿಷಯವನ್ನು ಆಯ್ದುಕೊಳ್ಳಬೇಕು ಎಂಬ ನಿಬಂಧನೆ ಇಲ್ಲ. 
      - ಕಡ್ಡಾಯ ಪ್ರಬಂಧ ಪತ್ರಿಕೆಯ ಜೊತೆ 100 ಅಂಕಗಳಿಗೆ ಸೇರಿಸಲಾಗಿದ್ದ ಕಡ್ಡಾಯ ಇಂಗ್ಲಿಷ್‌ ಕಾಂಪ್ರಹೆನÒನ್‌ ಮತ್ತು ಪ್ರಸಿ(ಸಂಕ್ಷೇಪೀಕರಣ) ಭಾಗವನ್ನು ಕೈಬಿಡಲಾಗಿದೆ. ಇನ್ನು ಮುಂದೆ ಪ್ರಬಂಧ 200 ಅಂಕಗಳಿಗೆ ಬದಲಾಗಿ 250 ಅಂಕಗಳಿಗೆ ಇರುತ್ತದೆ. ಹಾಗೆಯೇ ಈ ಮೊದಲು ಇದ್ದ ಅರ್ಹತಾ ಸ್ವರೂಪದ ಕಡ್ಡಾಯ ಕನ್ನಡ ಅಥವಾ ಭಾರತೀಯ ಭಾಷೆ ಮತ್ತು ಇಂಗ್ಲಿಷ್‌ ಪತ್ರಿಕೆಗಳು ಮತ್ತೆ ಹಾಜರಾಗಲಿವೆ. ಇವುಗಳ ಅಂಕಗಳನ್ನು ಅರ್ಹತಾ ಮಟ್ಟಕ್ಕೆ ಮಾತ್ರ ಪರಿಗಣಿಸಲಾಗುತ್ತದೆಯೇ ವಿನಃ ಮುಖ್ಯ ಪರೀಕ್ಷೆಯ ಅಂಕಗಳೊಂದಿಗೆ ಸೇರಿಸುವುದಿಲ್ಲ. 
      ಅಂತೂ ಗುಡ್ಡ ಅಗೆದು ಇಲಿ ಹಿಡಿದರು ಎಂಬಂತೆ ವರ್ಷಗಟ್ಟಲೇ ಉನ್ನತ ಅಧ್ಯಯನ ಸಮಿತಿ ನಡೆಸಿದ ಸಂಶೋಧನೆಯ ಫ‌ಲಶೃತಿಯನ್ನು ಭಾವನಾತ್ಮಕ ಒತ್ತಡಗಳಿಗೆ ಬಲಿಕೊಟ್ಟು ಉನ್ನತ ಶಿಕ್ಷಣದ ಆಶಯವನ್ನೇ ಅಣಕಿಸುವ ಕಾರ್ಯ ನಡೆದಿದೆ. ಎರಡು ಐಚ್ಛಿಕ ವಿಷಯಗಳ ಬದಲಿಗೆ ಒಂದೇ ಐಚ್ಛಿಕ ವಿಷಯ ಮತ್ತು ಎರಡು ಸಾಮಾನ್ಯ ಅಧ್ಯಯನ ಪತ್ರಿಕೆಗಳ ಬದಲಿಗೆ ನಾಲ್ಕು ಪತ್ರಿಕೆಗಳು ಎಂಬುದಷ್ಟೇ ಹೊಸ ಬದಲಾವಣೆಯ ಹೂರಣ! 
      ಅದಕ್ಕಾಗಿ ಕೋಟಿ ಕೋಟಿ ಹಣ ವ್ಯಯಿಸಬೇಕಿತ್ತೇ?

KAS Interview 2013 How to Face it - Article in Udayavani Josh 26 March 2013

1 comment:

Anonymous said...

Could anyone please let me know the interview pattern for KAS 2013.