Tuesday, April 9, 2013

We Shall Overcome - Start Your Study Club - Article in Udayavani Josh 09 April 2013






















































We Shall Overcome - Start Your Study Club - Article in Udayavani Josh 09 April 2013
Udayavani
  • ಗೆದ್ದೇ ಗೆಲ್ತಿàವಿ: ಬೀ ಪಾಸಿಟಿವ್‌ ಬೀ ಕಾನ್ಫಿಡೆಂಟ್‌

  • ಬದ್ಧತೆಯುಳ್ಳ, ಆಲೋಚನಾಪರ ನಾಗರಿಕರ ಚಿಕ್ಕ ಗುಂಪೊಂದು ಜಗತ್ತನ್ನೇ ಬದಲಿಸಬಲ್ಲದು ಎಂಬ ಬಗ್ಗೆ ಯಾವುದೇ ಸಂಶಯ ಬೇಡ. ಇದುವರೆ

    • Udayavani | Apr 08, 2013
      ಬದ್ಧತೆಯುಳ್ಳ, ಆಲೋಚನಾಪರ ನಾಗರಿಕರ ಚಿಕ್ಕ ಗುಂಪೊಂದು ಜಗತ್ತನ್ನೇ ಬದಲಿಸಬಲ್ಲದು ಎಂಬ ಬಗ್ಗೆ ಯಾವುದೇ ಸಂಶಯ ಬೇಡ. ಇದುವರೆಗೆ ಆಗಿರುವ ಬದಲಾವಣೆಗಳೆಲ್ಲವೂ ಇಂತಹ ಚಿಕ್ಕ ಗುಂಪುಗಳಿಂದಲೇ. 
      - ಮಾರ್ಗರೇಟ್‌ ಮೀಡ್‌ 

      ನೀವು ಯಾವ ಬದಲಾವಣೆ ಆಗಬೇಕೆಂದು ಬಯಸುತ್ತೀರೋ ಅದು ನಿಮ್ಮಿಂದಲೇ ಆಗಲಿ. 
      - ಮಹಾತ್ಮ ಗಾಂಧಿ 

      ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಕಟಣೆ ಹೊರಬಿದ್ದ ಕೂಡಲೇ ಅರ್ಹ ಅಭ್ಯರ್ಥಿಗಳು ಆ ಪರೀಕ್ಷೆಗೆ ಸಂಬಂಧಿಸಿದ ಸ್ಟಡಿ ಮೆಟೀರಿಯಲ್‌ ಸಂಗ್ರಹಿಸುವುದು, ವೆಬ್‌ಸೈಟ್‌ಗಳಲ್ಲಿ ಏನಾದರೂ ಸಿಗುತ್ತದೆಯೋ ಎಂದು ನೋಡುವುದು, ತಕ್ಕ ಮಟ್ಟಿನ ಹಣಕಾಸಿನ ಅನುಕೂಲತೆ ಇದ್ದಲ್ಲಿ ಯಾವುದಾದರೂ ಒಂದು ಕೋಚಿಂಗ್‌ ಸೆಂಟರ್‌ ಸೇರಿ ತರಬೇತಿ ಪಡೆಯುವುದು, ಸ್ನೇಹಿತರ ಬಳಿ ಈ ಕುರಿತ ನೋಟ್ಸ್‌, ಹಳೆಯ ಪ್ರಶ್ನೆಪತ್ರಿಕೆಗಳು ಏನಾದರೂ ಇವೆಯೇ ಎಂದು ಹುಡುಕುವುದು ವೈಯಕ್ತಿಕ ಮಟ್ಟದಲ್ಲಿ ಸಾಮಾನ್ಯ. ಇದನ್ನೇ ಸ್ವಲ್ಪ ಸಾಂ ಕವಾಗಿ ಒಟ್ಟುಗೂಡಿಸಿದರೆ ಫ‌ಲಿತಾಂಶ ಹತ್ತುಪಟ್ಟು ಹೆಚ್ಚುವುದರಲ್ಲಿ ಸಂಶಯವೇ ಇಲ್ಲ! ಇದನ್ನೇ ಸ್ಟಡಿಗ್ರೂಪ್‌, ಡಿಸ್ಕಷನ್‌ ಗ್ರೂಪ್‌, ಗ್ರೂಪ್‌ ಸ್ಟಡಿ, ಸ್ಟಡಿ ಕ್ಲಬ್‌, ಹಾಬಿ ಕ್ಲಬ್‌ ಅಂತ ಕರೆಯುವುದು. ಇಂತಹ ಸ್ಟಡಿ ಕ್ಲಬ್‌ಗಳಿಗೆ ಸುದೀರ್ಘ‌ ಇತಿಹಾಸವಿದೆ ಮತ್ತು ಇವುಗಳ ಯಶಸ್ಸಿನ ಕಥೆಯೂ ರೋಚಕವಾಗಿದೆ. ಭೂಗೋಳ ವಿಷಯದಲ್ಲಿ ತೀವ್ರ ಆಸಕ್ತಿ ಹೊಂದಿದ್ದ ಬೆರಳೆಣಿಕೆಯಷ್ಟು ಸಾಹಸಿಗಳು 1880ರ ದಶಕದಲ್ಲಿ ಕಟ್ಟಿಕೊಂಡ ಸ್ಟಡಿ ಗ್ರೂಪ್‌, ಸಾಹಸಿ ಗ್ರೂಪ್‌ ಆಗಿ ಬೆಳೆದು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಹಸ ಮತ್ತು ಪರಿಸರ ಅಧ್ಯಯನಕ್ಕೆ ಇರುವ ಅತ್ಯುನ್ನತ ಮಾದರಿ ಸಂಸ್ಥೆಯಾಗಿದ್ದು, ತನ್ನದೇ ಮ್ಯಾಗಝಿನ್‌ ಮತ್ತು ಟಿವಿ ಚಾನೆಲ್‌ ಹೊಂದಿರುವ ನ್ಯಾಷನಲ್‌ ಜಿಯಾಗ್ರಫಿಕ್‌ ಸಂಸ್ಥೆಯಂತಹ ನೂರಾರು ಉದಾಹರಣೆಗಳು ನಮ್ಮ ಕಣ್ಣಮುಂದೆ ಹಾದುಹೋಗುತ್ತವೆ. 

      ಚಿತ್ರದುರ್ಗ ಸ್ಟಡಿ ಕ್ಲಬ್‌! 
      ಚಿತ್ರದುರ್ಗದ ಬಂಡೆ-ಬೆಟ್ಟ-ಕಣಿವೆಗಳ ನಡುವೆ ಶಿಲಾರೋಹಣ, ಚಾರಣ, ಪರಿಸರ ಅಧ್ಯಯನ, ಸಾಹಸ ಶಿಬಿರಗಳ ಆಯೋಜನೆ, ಇಂಗ್ಲಿಷ್‌ ಭಾಷಾ ಕಲಿಕೆ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ, ಸಂದರ್ಶನಗಳಿಗೆ ಸಿದ್ಧತೆ, ಸ್ಥಳೀಯ ಹಂತದಿಂದ ರಾಷ್ಟ್ರಮಟ್ಟದವರೆಗಿನ ಕ್ವಿಜ್‌, ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗೆಲ್ಲುವ ತಾಲೀಮು ನಡೆಸುತ್ತಿರುವ ಚಿತ್ರದುರ್ಗ ಹವ್ಯಾಸ ಮತ್ತು ಸಾಹಸ ಯುನೆಸ್ಕೊ ಕ್ಲಬ್‌ ಕಳೆದ 22 ವರ್ಷಗಳಲ್ಲಿ ಹಲವು ಯಶಸ್ಸಿನ ಗರಿಗಳನ್ನು ಮುಡಿಗೇರಿಸಿಕೊಂಡಿದೆ. ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಗಳಿಸಿ ಅಧಿಕಾರಿಗಳಾಗಿರುವ ಈ ಸಂಸ್ಥೆಯ ಸದಸ್ಯರು ಭಾನುವಾರಗಳಂದು ನಡೆಯುವ ಉಚಿತ ತರಬೇತಿ ತರಗತಿಗಳಿಗೆ ಈಗಲೂ ಹಾಜರಾಗಿ ಮಾರ್ಗದರ್ಶನ ಮಾಡುತ್ತಿ¨ªಾರೆ. ಹೆಚ್ಚೇಕೆ, ಈ ಸಂಸ್ಥೆಯ ಸದಸ್ಯರು ಹಾಜರಾಗುವ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಯ ಪ್ರಶ್ನೆಪತ್ರಿಕೆಗಳನ್ನು ಕೂಡಲೇ ಇತರರೊಂದಿಗೆ ಹಂಚಿಕೊಂಡು, ಚರ್ಚಿಸಿ, ಮುಂದಿನ ಪರೀಕ್ಷೆಗಳಲ್ಲಿ ತಮ್ಮ ಸಾಧನೆಯನ್ನು ಹೇಗೆ ಉತ್ತಮಪಡಿಸಿಕೊಳ್ಳಬಹುದು ಎಂಬುದನ್ನು ಕುರಿತು ಯೋಜನೆ ಹಾಕುತ್ತಾರೆ. ಬಹುತೇಕ ಎಲ್ಲರೂ ತಮ್ಮ ತಮ್ಮ ಬ್ಲಾಗ್‌ಗಳಲ್ಲಿ ಮತ್ತು ಫೇಸ್‌ಬುಕ್‌ ಅಕೌಂಟ್‌ಗಳಲ್ಲಿ ಮಾಹಿತಿ ವಿನಿಮಯ ಮಾಡಿಕೊಳ್ಳುತ್ತಾರೆ. 
      ಕಳೆದ ಎರಡು ವರ್ಷಗಳಲ್ಲಿ ಈ ನಾವ್‌ ರೆಡಿ ಅಂಕಣದಲ್ಲಿ ಮೂಡಿಬಂದ ಬಹುತೇಕ ಸ್ಪರ್ಧಾತ್ಮಕ ಪರೀಕ್ಷೆಗಳ ವಿವರಗಳು, ಪ್ರಶ್ನೆಪತ್ರಿಕೆಗಳು ಅದರಲ್ಲೂ ಐಎಎಸ್‌ ಮತ್ತು ಕೆಎಎಸ್‌ ಪತ್ರಿಕೆಗಳ ವಿವರಗಳನ್ನು ಒದಗಿಸಿದವರು ಈ ಕ್ಲಬ್‌ನ ಪ್ರಸ್ತುತ ಸಂಚಾಲಕರಾಗಿರುವ ಪ್ರಶಾಂತ್‌ ಎಸ್‌. ಚಿನ್ನಪ್ಪನವರ್‌ (ಜಠಿಠಿಟ://ಟಚssಜಿಟnಜಿಚs.ಚಿlಟಜsಟಟಠಿ.ಜಿn) ಮತ್ತು ಎಂ. ಸುಷ್ಮಾರಾಣಿ. 
      ಇವರಿಬ್ಬರೂ ತಾವು ಬರೆದುಬಂದ ಪತ್ರಿಕೆಯನ್ನು ಪರೀಕ್ಷೆ ಮುಗಿದ ಅರ್ಧಗಂಟೆಯೊಳಗಾಗಿ ಸ್ಕಾÂನ್‌ಮಾಡಿ ಅಥವಾ ಮೊಬೈಲ್‌ ಫೋನ್‌ನಲ್ಲಿಯೇ ಫೋಟೋ ತೆಗೆದು ಈ ಲೇಖಕರಿಗೆ ಕಳಿಸಿಕೊಟ್ಟು ಸಹಕರಿಸಿದ್ದರಿಂದ ಬಿಸಿ ಬಿಸಿ ಸುದ್ದಿಯನ್ನು ಇತರೆ ಪತ್ರಿಕೆಗಳಲ್ಲಿ ಪ್ರಕಟವಾಗುವ ಮೊದಲು ಈ ಅಂಕಣದಲ್ಲಿ ತಮ್ಮೊಂದಿಗೆ ಹಂಚಿಕೊಳ್ಳಲು ಸಾಧ್ಯವಾಗಿತ್ತು! 

      ಒಗ್ಗಟ್ಟಿನಲ್ಲಿ ಬಲವಿದೆ- ಸಹಕಾರ ತತ್ವಕ್ಕೆ ಯಶಸ್ಸಿದೆ! 
      ಯಾವುದೇ ಖರ್ಚಿಲ್ಲದೆ, ಪ್ರತಿ ಭಾನುವಾರ ಬೆಳಗ್ಗೆ 10 ರಿಂದ 2 ಗಂಟೆಯವರೆಗೆ ಕೋಟೆ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ನಡೆಯುತ್ತಿರುವ ತರಬೇತಿ ತರಗತಿಗೆ ಹಾಜರಾಗುವವರೆಲ್ಲರೂ ಸದಸ್ಯರೇ, ತರಬೇತುದಾರರೇ, ಸಂಚಾಲಕರೇ! ಯಾವುದೇ ಹಣಕಾಸಿನ ಅಪೇಕ್ಷೆ ಇಲ್ಲದೆ ಕೇವಲ ಜ್ಞಾನದ ಕೊಡು-ಕೊಳ್ಳುವಿಕೆಯ ಸಹಕಾರಿ ತತ್ವದ ಆಧಾರದ ಮೇಲೆ ನಡೆಯುತ್ತಿರುವ ಈ ಕ್ಲಬ್‌ಗ ನೂರಾರು ಹಿರಿಯರು, ಅನುಭವಿಗಳು ಬಂದು, ಮಾರ್ಗದರ್ಶನ ಮಾಡಿ ಹರಸಿ¨ªಾರೆ. 
      ಯೋಜನಾ, ಸಿವಿಲ್‌ ಸರ್ವೀಸಸ್‌ ಕ್ರಾನಿಕಲ್‌, ಸಿಎಸ್‌ಆರ್‌, ಪ್ರತಿಯೋಗ್ಯತಾ ದರ್ಪಣ್‌, ಕುರುಕ್ಷೇತ್ರ, ಡೌನ್‌-ಟು-ಅರ್ತ್‌, ವರ್ಲ್ಡ್ ಫೋಕಸ್‌, ಸಿವಿಲ್‌ ಸರ್ವೀಸಸ್‌ ಟೈಮ್ಸ್‌, ಎಂಪ್ಲಾಯ್‌ಮೆಂಟ್‌ ನ್ಯೂಸ್‌ ಸೇರಿದಂತೆ ಒಂದÇÉಾ ಒಂದು ಸ್ಪರ್ಧಾತ್ಮಕ ನಿಯತಕಾಲಿಕೆಯನ್ನು ಒಬ್ಬರÇÉಾ ಒಬ್ಬರು ತಂದೇ ತರುತ್ತಾರೆ, ಹಂಚಿಕೊಳ್ಳುತ್ತಾರೆ, ನೋಟ್ಸ್‌ ಮಾಡಿಕೊಳ್ಳುತ್ತಾರೆ. ಐದನೇ ತರಗತಿಯ ಪುಟಾಣಿ ನವೋದಯ ವಿದ್ಯಾಲಯದ ಸ್ಪರ್ಧಾತ್ಮಕ ಪರೀಕ್ಷೆಗೆ ಕೂರುವುದು ಹೇಗೆ ಎಂಬುದನ್ನು ತಿಳಿಯಲು ಇಲ್ಲಿಗೆ ಬಂದರೆ, ಎಂಟನೇ ತರಗತಿಯ ವಿದ್ಯಾರ್ಥಿ ಎನ್‌ಎಂಎಂಎಸ್‌ ಪರೀಕ್ಷೆ ಮತ್ತು ಹತ್ತನೇ ತರಗತಿಯ ವಿದ್ಯಾರ್ಥಿ ಎನ್‌ಟಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವುದು ಹೇಗೆ, ಪ್ರಶ್ನೆ ಪತ್ರಿಕೆ ಬಿಡಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳಲು ಬರುತ್ತಾನೆ/ಳೆ. 
      ಐಎಎಸ್‌, ಕೆಎಎಸ್‌, ಬ್ಯಾಂಕಿಂಗ್‌ ಸೇರಿದಂತೆ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳ ಪತ್ರಿಕೆಗಳ ಮಾಹಿತಿ ತಿಳಿಯಲು, ಪತ್ರಿಕೆ ಬಿಡಿಸುವುದನ್ನು ಕಲಿಯಲು ಬರುವವರ ಸಂಖ್ಯೆ ಏರುತ್ತಲೇ ಇದೆ. ಯಶಸ್ಸಿನ ಕಥೆಯೂ ಸಾಕಷ್ಟು ದೊಡ್ಡದೇ ಇದೆ! 
      ವ್ಯಕ್ತಿತ್ವ ವಿಕಸನದ ಅಂತಾರಾಷ್ಟ್ರೀಯ ತರಬೇತುದಾರ ರಾಬಿನ್‌ಶರ್ಮ ಪ್ರತಿಪಾದಿಸುವ ಲೀಡರ್‌ ವಿಥೌಟ್‌ ಎ ಟೈಟಲ್‌ ಪರಿಕಲ್ಪನೆಯನ್ನು ಅವರಿಗಿಂತಲೂ ಮೊದಲೇ ಎರಡು ದಶಕಗಳಿಗೂ ಹೆಚ್ಚುಕಾಲ ಯಶಸ್ವಿಯಾಗಿ ಅನುಷ್ಠಾನಗೊಳಿಸಿಕೊಂಡು ಬರುತ್ತಿರುವ ಈ ಕ್ಲಬ್‌ನಲ್ಲಿ ಯಾರೋ ಒಬ್ಬ ನಾಯಕ ಇಲ್ಲ, ಅಭಿದಾನವೂ ಇಲ್ಲ, ಬದಲಿಗೆ ಎಲ್ಲರೂ ನಾಯಕತ್ವ ವಹಿಸುತ್ತಾರೆ, ಯಶಸ್ಸಿನ ರೂವಾರಿಗಳಾಗುತ್ತಾರೆ. ಯಾವುದೇ ಪದವಿ, ಜವಾಬ್ದಾರಿ ಹೇರಲ್ಪಡುವುದಿಲ್ಲ, ಎಲ್ಲರೂ ತಮ್ಮ ದೃಷ್ಟಿಯಲ್ಲಿ ಸರಿ ತೋರಿದ್ದನ್ನು, ಎಲ್ಲರ ಒಳಿತಿಗಾಗಿ ಹಂಚಿಕೊಳ್ಳುತ್ತಾರೆ. 
      1985ರಲ್ಲಿ ಶಿವಮೊಗ್ಗದಲ್ಲಿ ಮತ್ತು 1989ರಲ್ಲಿ ಭದ್ರಾವತಿಯಲ್ಲಿ ಆರಂಭಗೊಂಡು ಜನರಲ್‌ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಗೆ ಸಂಯೋಜನೆಗೊಂಡಿದ್ದ ಕ್ವಿಜ‚… ಮತ್ತು ಅಡ್ವೆಂಚರ್‌ ಕ್ಲಬ್‌ಗಳು ಕ್ರಮೇಣ ಇನ್ನಿತರೆ ಸ್ಥಳಗಳಿಗೂ ವ್ಯಾಪಿಸಿದವು. ಇವುಗಳ ಸದಸ್ಯರು ನೌಕರಿಗೆ ಸೇರಿಕೊಂಡು ದೂರದ ಊರುಗಳಿಗೆ ಹೋದ ನಂತರದಲ್ಲಿ ಇವು ಕ್ರಮೇಣ ತೆರೆಗೆ ಸರಿದರೂ ಕಾರ್ಯಕ್ರಮಗಳನ್ನು ಸಣ್ಣದಾಗಿ ನಡೆಸಿಕೊಂಡು ಹೋಗುತ್ತಲೇ ಇವೆ. ಚಿತ್ರದುರ್ಗದ ಕ್ಲಬ್‌ ಹೆಚ್ಚಿನ ಯಶಸ್ಸು ಗಳಿಸಿದ್ದು, ಇನ್ನೂ ತರಬೇತಿಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಯುವಜನರ ಆಸಕ್ತಿಗೆ ಹಿಡಿದ ಕನ್ನಡಿಯಾಗಿದೆ. ಇಂತಹ ತರಬೇತಿ ಕ್ಲಬ್‌, ಸ್ಟಡಿ ಕ್ಲಬ್‌ಗಳು ಎಲ್ಲಾ ಊರುಗಳಲ್ಲಿ ಹರಡಿ, ಜ್ಞಾನದ ಸಿಹಿಯನ್ನು ಹಂಚುವ ಕೆಲಸ ಆಗಬೇಕಾಗಿದೆ. 
      ಕೆಲವು ಕಾಲೇಜುಗಳಲ್ಲಿ ಉದ್ಯೋಗ ಮಾರ್ಗದರ್ಶನ ಘಟಕಗಳಿದ್ದರೂ ಕೇವಲ ಶಾಸ್ತ್ರಕ್ಕೆಂದು ಒಂದೆರಡು ತರಗತಿಗಳನ್ನು ನಡೆಸಿ ಸುಮ್ಮನಾಗುತ್ತವೆ. ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನ ವೃತ್ತಿ ಮಾರ್ಗದರ್ಶಿ ಘಟಕದ ಪ್ರೋ. ನಾರಾಯಣ ಪ್ರಸಾದ್‌ ಮತ್ತು ಚಿತ್ರದುರ್ಗದ ಸರ್ಕಾರಿ ಕಲಾ ಕಾಲೇಜಿನ ವೃತ್ತಿ ಮಾರ್ಗದರ್ಶನ ಕೇಂದ್ರದ ಪೊ›. ಕರ್ಣಂ ರಾಮರಾವ್‌ ಅವರಂತಹ ಅಪರೂಪದ ಸಂಘಟಕರು ತಮ್ಮ ಸುತ್ತಲಿನ ಜಿÇÉೆಗಳ ಕಾಲೇಜುಗಳಲ್ಲಿಯೂ ಘಟಕಗಳನ್ನು ತೆರೆದು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯ ಉದ್ಯೋಗದಾತರನ್ನು ಆಹ್ವಾನಿಸಿ ಕ್ಯಾಂಪಸ್‌ ಸೆಲೆಕ್ಷನ್‌ ನಿರಂತರವಾಗಿ ನಡೆಯುವಂತೆ ನೋಡಿಕೊಳ್ಳುತ್ತಿ¨ªಾರೆ. ಇಂತಹ ನೂರಾರು ಘಟಕಗಳು ರಾಜ್ಯಾದ್ಯಂತ ಆರಂಭವಾಗಬೇಕಾದ ಅನಿವಾರ್ಯತೆ ಇದೆ. 

      ಬಿಸಿ ಬಿಸಿ ಸುದ್ದಿ 
      ನೆಲದೊಡಲ ಚಿಗುರು- ನಾರಾಯಣ ರೆಡ್ಡಿ ಯಶಸ್ಸಿನ ಕಥೆ 
      ಮಣ್ಣಿನೊಡನೆ ಒಡನಾಡುತ್ತಾ ಹೊನ್ನಿನಂತಹ ಬೆಳೆ ತೆಗೆಯುತ್ತಿರುವ ನಾಡೋಜ ಡಾ.ಎಲ್‌. ನಾರಾಯಣ ರೆಡ್ಡಿಯವರ ಬದುಕು-ಚಿಂತನೆಗಳ ಸಂಗ್ರಹ ರೂಪ ನೆಲದೊಡಲ ಚಿಗುರು ಕಳೆದ ವಾರ ಬಿಡುಗಡೆಯಾಗಿ ಕೃಷಿಕರಿಗೆ ಹೊಸ ವಿಧಾನಗಳನ್ನು ತೆರೆದು ತೋರಿಸಿದೆ, ಹೊಸ ಚಿಂತನೆಗೆ ಹಚ್ಚಿದೆ.(ಪ್ರಕಾಶಕರು: ನವಕರ್ನಾಟಕ ಪ್ರಕಾಶನ, ಬೆಂಗಳೂರು. ಫೋನ್‌: 080-22203580) ಮಣ್ಣಿನ ನರುಗಂಪನ್ನು ಉಳಿಸುವ ಸಾವಯವ ಪದ್ಧತಿಯ ಪ್ರತಿಪಾದಕ ನಾರಾಯಣ ರೆಡ್ಡಿಯವರ ಜೀವನ-ಸಾಧನೆಯನ್ನು ಅವರೊಡನೆ ಕೆಲಸಮಾಡಿರುವ ಎನ್‌.ಎಲ್‌. ಆನಂದ್‌ ಮತ್ತು ಗುಂಡಪ್ಪ ದೇವಿಕೇರಿಯವರು ಆಸಕ್ತಿ ಮೂಡಿಸುವಂತೆ ನಿರೂಪಿಸಿ¨ªಾರೆ. 
      ಇಂದಿನ ಯುವಕರು ಈ ಮನುಷ್ಯ ಜನ್ಮದ ಉದ್ದೇಶಗಳನ್ನೇ ಮರೆತು, ಕ್ಷಣಿಕ ಸುಖದ ಬೆನ್ಹತ್ತಿ, ತಮ್ಮ ಪವಿತ್ರವಾದ ಜೀವನವನ್ನು ವ್ಯರ್ಥಮಾಡಿಕೊಂಡು ಪಶ್ಚಾತ್ತಾಪಪಡುತ್ತಿ¨ªಾರೆ. ಇದು ಆರೋಗ್ಯಕರ ಸಮಾಜದ ಒಳ್ಳೆಯ ಬೆಳವಣಿಗೆಯಲ್ಲ. ಅವರು ಉದಾತ್ತ ಧ್ಯೇಯವನ್ನು ಹೊಂದು, ಚಿಂತನೆಗಳನ್ನು ಮೈಗೂಡಿಸಿಕೊಂಡು ಶ್ರಮಿಸಿದರೆ, ಗೌರವದಿಂದ ಕೂಡಿದ ನೆಮ್ಮದಿಯ ಬದುಕು ನಡೆಸಿ ಸಮಾಜಕ್ಕೆ ದಾರಿ ತೋರಿಸಬಲ್ಲರೆಂಬುದು ನನ್ನ ನಂಬುಗೆ. ಅದೇ ಈ ಪುಸ್ತಕದ ಆಶಯ. 
      ಮನುಷ್ಯನ ಏಳಿಗೆಗೆ ಹೆಚ್ಚಿನ ವಿದ್ಯೆ ಮತ್ತು ಐಶ್ವರ್ಯ ಅನಿವಾರ್ಯವಲ್ಲವೆಂಬುದು ನನ್ನ ಬದುಕಿನಲ್ಲಿ ನಾನು ಕಂಡುಕೊಂಡ ನಿತ್ಯಸತ್ಯವನ್ನು ಈ ಹೊತ್ತಿಗೆಯಲ್ಲಿ ನೈಜ ಸ್ಥಿತಿಯಲ್ಲಿ ನಿರೂಪಿಸಲಾಗಿದೆ. ಯುವಕರು-ವಿದ್ಯಾರ್ಥಿಗಳು, ರೈತಾಪಿ ಬಂಧುಗಳು, ಕೃಷಿ ಸ್ನೇಹಿ ಮನಸುಗಳು ಈ ಪುಸ್ತಕವನ್ನು ಓದಿ, ಚಿಂತಿಸಿ, ಪ್ರಯತ್ನಿಸಿ ಸಫ‌ಲರಾದರೆ ಈ ಇಬ್ಬರು ಯುವ ಬರಹಗಾರರ ಶ್ರಮವನ್ನು ಗೌರವಿಸಿದಂತೆಯೇ ಸರಿ. ಯುವಕರಲ್ಲಿ, ಹೆಚ್ಚಿನ ಮಟ್ಟಿಗೆ ಗ್ರಾಮೀಣರಲ್ಲಿ, ನಮ್ಮಿಂದ ಏಳಿಗೆ ಸಾಧ್ಯವಿಲ್ಲ ಎಂಬ ಹಿಂಜರಿಯುವಿಕೆನ್ನು ತೊಡೆದು ನಾನು ಸಾಧಿಸಿ ತೋರಿಸಬÇÉೆ ಎಂಬ ಛಲ ಮೂಡಿಸುವಲ್ಲಿ ಈ ಹೊತ್ತಗೆಯು ಸಹಾಯವಾಗಬಲ್ಲದು ಎಂಬುದರಲ್ಲಿ ನನಗೆ ವಿಶ್ವಾಸವಿದೆ, ಎನ್ನುತ್ತಾರೆ ಸಾಧಕ ನಾರಾಯಣ ರೆಡ್ಡಿಯವರು. 
      ಸಾವಯವ ಯೋಗಿ ಎಂದು ಹೆಸರು ಪಡೆಯಲು ಮತ್ತು ಅವರಿಗೆ ದೇಶವಿದೇಶಗಳ ಕೃಷಿ ತಜ್ಞರಿಂದ, ಸರಕಾರಗಳಿಂದ ಸಂದಿರುವ ಪ್ರಶಸ್ತಿಗಳೂ ಅಷ್ಟೇನು ಸುಲಭವಾಗಿ ದೊರೆತಿಲ್ಲ. ಅವರು ರಾತ್ರಿ ಹಗಲು ಹೆಂಡತಿ ಮಕ್ಕಳೊಂದಿಗೆ ಅನ್ನ ನೀರು ಕಡೆಗಣಿಸಿ ದುಡಿದಿ¨ªಾರೆ. ಶಿಸ್ತು, ಶ್ರದ್ಧೆ, ಸಂಕಲ್ಪಗಳಿಂದ, ಧರ್ಮಜೀವನದಲ್ಲಿಯೇ ನಡೆದುಬಂದಿ¨ªಾರೆ; ಅಸಂಖ್ಯ ಕಷ್ಟಗಳನ್ನು ಅನುಭವಿಸಿ¨ªಾರೆ. ಈ ದಾರಿಯಲ್ಲಿ ಮಹೋನ್ನತ ಸಾಧನೆಗಳನ್ನು ಮಾಡಿ ಸಮಾಜಕ್ಕೆ ತೋರಿಸಿ¨ªಾರೆ. ದಾರಿಯುದ್ದಕ್ಕೂ ಗಾಂಧೀಜಿಯವರ ಸರಳ, ಸತ್ಯ ಮಾರ್ಗಗಳನ್ನೇ ಅನುಸರಿಸುತ್ತ ಬಂದಿರುವುದು ಕಾಣುತ್ತದೆ. ಈ ಕಥೆ ಓದಿ ಮರುಚಿಂತನೆಯನ್ನು ಮಾಡುವಾಗ, ಏಳುವ ಪ್ರಶ್ನೆಯೊಂದಿದೆ. ಈ ಹಳ್ಳಿಯ ಸಾಧಾರಣ ಯುವಕ, ತನಗೆ ತಾನೇ ಗುರುವಾಗಿ, ತ್ಯಾಗ ಮತ್ತು ಶ್ರದ್ಧೆಗಳಿಂದ, ಇಂತಹ ಮಹೋನ್ನತ ಸಾಧನೆಯನ್ನು ಮಾಡಬೇಕಾದರೆ, ಈ ಸಾರ್ಥಕ ಸಾಧನೆಯ ಮೂಲವೇನು? ಪ್ರೇರಣೆಯೇನು? 
      ಇದಕ್ಕೆ ಸರಳವಾದ ಉತ್ತರ ಸಿಗುವುದಿಲ್ಲ. ಜೀವನದಲ್ಲಿ ಯಾವುದೇ ಮಹಾತ್ಮರ ಕೃಪೆ ಅವರಿಗೆ ಒದಗಿ ಬಂದಿಲ್ಲ; ಯಾವುದೇ ಅದ್ಭುತ ಘಟನೆಯ ಪ್ರಭಾವಕ್ಕೆ ಒಳಗಾಗಿಲ್ಲ. ಉದ್ದಕ್ಕೂ ಕಷ್ಟ ನಿಷ್ಟುರಗಳನ್ನು ಎದುರಿಸುವಾಗ, ಎಲ್ಲರ ಹೃದಯದಲ್ಲೂ ಅಡಗಿರುವ ಧರ್ಮನಿಷ್ಠೆಯನ್ನು ಇವರು ಎಚ್ಚರಿಸಿಕೊಂಡಿದ್ದೇ ಈ ಸಾಧನೆಗೆ ಕಾರಣವೆಂದು ಕಾಣುತ್ತದೆ. ಅದು ತ್ಯಾಗ, ಶ್ರದ್ಧೆ ಮತ್ತು ಸಂಕಲ್ಪದ ಫ‌ಲ, ಕೇವಲ ಅವಕಾಶದ ಫ‌ಲವಲ್ಲ, ಎನ್ನುತ್ತಾರೆ ಹಿರಿಯ ಕೃಷಿ ತಜ್ಞ ಡಾ.ಆರ್‌. ದ್ವಾರಕೀನಾಥ್‌. ಈ ಮಾರ್ಗದರ್ಶಿ ಕೃತಿಯನ್ನು ನಮ್ಮ ಯುವಜನರು ಓದಲೇಬೇಕು ಎನ್ನುವುದಕ್ಕೆ ಇದಕ್ಕಿಂತ ಹೆಚ್ಚಿನ ವಿವರಣೆ ಬೇಕಿಲ್ಲ, ಅಲ್ಲವೇ? 

      ಒಂದಷ್ಟು ಸ್ಫೂರ್ತಿ ತುಂಬುವ ಕೃತಿಗಳು ನಿಮಗಾಗಿ 
      ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ! 
      ಅಚೀವರ್ ಎವೆರಿವ್ಹೇರ್‌! ಜೋ ಜೀತಾ ವಹಿ ಸಿಕಂದರ್‌! ಇದು ಗೆಲ್ಲುವವರ ಕಾಲ. ಜಿಸ್‌ ಕಾ ದಂಡ ಉಸ್‌ ಕಾ ಭೈಂಸ್‌ ಎನ್ನುವ ಸ್ಪರ್ಧೆಯ ಕಾಲ. ಗೆದ್ದೇ ಗೆಲ್ಲುವೆವು ನಾವು ಗೆದ್ದೇ ಗೆಲ್ಲುವೆವು ಎಂದು ಚಾಲೆಂಜ್‌ ಮಾಡುವ ಕಾಲ. ಸಾಧಿಸಿ ತೋರಿಸುವ ಕಾಲ. ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಸ್ವತಂತ್ರ ಉದ್ಯಮವನ್ನು ಸ್ಥಾಪಿಸುವ ಹಾದಿಯನ್ನು ಆಯ್ಕೆಮಾಡಿಕೊಂಡ ಅಹಮದಾಬಾದ್‌ನ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಮ್ಯಾನೇಜ್‌ಮೆಂಟ್‌ನ ಇಪ್ಪತ್ತೆ„ದು ಕಠಿಣ ಪರಿಶ್ರಮಿ ಪದವೀಧರರು ಗೆದ್ದು, ಬಿದ್ದು, ಎದ್ದು, ಜಗತ್ತಿಗೇ ಸಾಧನೆಯ ಸವಿ ಉಣಬಡಿಸಿದ ಸಾಹಸಗಾಥೆಗಳನ್ನು ರಶ್ಮಿ ಬನ್ಸಾಲ್‌ ಸ್ಟೇ ಹಂಗ್ರಿ, ಸ್ಟೇ ಫ‌ೂಲಿಶ್‌ ಎಂಬ ಶೀರ್ಷಿಕೆಯಲ್ಲಿ ಪ್ರಕಟಿಸಿ¨ªಾರೆ. (ಇದರ ಕನ್ನಡ ಅನುವಾದ ಸಾಧನೆಗೆ ಮಿತಿಯಿಲ್ಲ, ಸಾಧಕರಿಗೆ ಕೊನೆಯಿಲ್ಲ- ಅನುವಾದಕರು: ಯಗಟಿ ರಘು ನಾಡಿಗ್‌. ಕನೆಕ್ಟ್ ದ ಡಾಟ್ಸ್‌(ಎಂಬಿಎ ಪದವಿ ಪಡೆಯದಿದ್ದರೂ ಬೇರೆ ಬೇರೆ ಕ್ಷೇತ್ರಗಳಲ್ಲಿ ಹೆಸರು ಮಾಡಿರುವ ಸಾಧಕರ ಕಥೆ), ಐ ಹ್ಯಾವ್‌ ಅ ಡ್ರೀಮ್‌, ಫಾಲೋ ಎವೆರಿ ರೈನ್‌ಬೋ (25 ಮಹಿಳಾ ಉದ್ಯಮಿಗಳ, ಸಾಧಕಿಯರ ಯಶೋಗಾಥೆ), ಪೂರ್‌ ಲಿಟ್ಲ ರಿಚ್‌ ಸ್ಲಮ್‌ ಮುಂತಾದ ರಶ್ಮಿ ಬನ್ಸಾಲ್‌ ಪುಸ್ತಕಗಳು ಸಾಧನೆಯ ನಿಜಜೀವನದ ಕಥೆಗಳ ಮೂಲಕ ಯುವಜನರನ್ನು ಸಾಧನೆಯ ಹಾದಿಗೆ ಹಚ್ಚುತ್ತಿವೆ. 

      ಯಶಸ್ಸಿಗೆ 10000 ಸಾವಿರ ಗಂಟೆಗಳ ಪರಿಶ್ರಮದ ನಿಯಮ! 
      ದಿನವೊಂದಕ್ಕೆ ಕನಿಷ್ಟ ಎಂಟರಿಂದ ಹತ್ತು ಗಂಟೆ ಸತತ ಪರಿಶ್ರಮ ಪಟ್ಟರೂ ಸುಮಾರು ಒಂದು ಸಾವಿರ ದಿನ(ಎರಡು ಮುಕ್ಕಾಲು ವರ್ಷ) ತೆಗೆದುಕೊಳ್ಳುವ 10000 ಸಾವಿರ ಗಂಟೆಗಳ ಪರಿಶ್ರಮದ ನಿಯಮ ಯಶಸ್ಸನ್ನು ತಂದುಕೊಟ್ಟೇ ತೀರುತ್ತದೆ ಎಂದು ಪ್ರತಿಪಾದಿಸುತ್ತಾನೆ ಕೆನಡಿಯನ್‌-ಅಮೆರಿಕನ್‌ ಪತ್ರಕರ್ತ ಮಾಲ್‌ಕಮ್‌ ಗ್ಲಾಡ್‌ವೆಲ್‌ ತನ್ನ ಔಟ್‌ಲೆçಯರ್ - ದ ಸ್ಟೋರಿ ಆಫ್ ಸಕ್ಸಸ್‌ (Ouಠಿlಜಿಛಿrs ಖಜಛಿ ಖಠಿಟ್ಟy ಟf ಖuccಛಿss) ಪುಸ್ತಕದಲ್ಲಿ. ಈ ಯಶಸ್ಸಿನ ಕಥೆಯನ್ನು ರವಿಕೃಷ್ಣಾರೆಡ್ಡಿಯವರು ವಿಕ್ರಾಂತ ಕರ್ನಾಟಕ ವಾರಪತ್ರಿಕೆಯಲ್ಲಿ ಅಂಕಣವಾಗಿ ಹಿಡಿದಿಟ್ಟಿದ್ದರು. ಆ ಕಂತುಗಳೆಲ್ಲವೂ ಇದೀಗ ದೇಶ-ಕಾಲ-ಶ್ರಮ: ಸಾಧನೆಯ ಹಿಂದಿನ ಕಥೆ ಎಂಬ ಕೃತಿ ರೂಪದಲ್ಲಿ ಪ್ರಕಟವಾಗಿದೆ.(ಪುಟ: 82, ಬೆಲೆ: ರೂ.60, ಪ್ರಕಾಶಕರು: ಮೌಲ್ಯಾಗ್ರಹ ಪ್ರಕಾಶನ, ಬಿಟಿಎಂ ಲೇಔಟ್‌, ಬೆಂಗಳೂರು. ಫೋನ್‌: 9686080005) 

      ಗೆದ್ದೇ ಗೆಲ್ಲುವೆವು- ಯಶಸ್ಸಿನ ಸೂತ್ರಗಳ ವಿಶಿಷ್ಟ ಕೈಪಿಡಿ 
      ಗೆದ್ದೇ ಗೆಲ್ಲುವೆವು ಒಂದು ದಿನ.... ಎಂಬ ಆತ್ಮವಿಶ್ವಾಸದೊಂದಿಗೆ ಜೋಶ್‌ ಪುರವಣಿಯಲ್ಲಿ ಮೂಡಿಬರುತ್ತಿದ್ದ ನಾವ್‌ ರೆಡಿ ಅಂಕಣ ಬರಹಗಳ ಸಂಕಲನ ಗೆದ್ದೇ ಗೆಲ್ಲುವೆವು- ಸ್ಪರ್ಧಾತ್ಮಕ ಪರೀಕ್ಷೆಗಳು- ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೊರ್ಸ್‌ಗಳ ಮಾಹಿತಿ ಸಾಹಿತ್ಯ ಕೈಪಿಡಿ- ನವಕರ್ನಾಟಕ ಪ್ರಕಾಶನದಿಂದ ಪ್ರಕಟಗೊಂಡು ಎರಡು ಮುದ್ರಣಗಳನ್ನು ಕಂಡಿದೆ. 
      ಎಂಪ್ಲಾಯಬಿಲಿಟಿ ಸ್ಕಿಲ್ಸ್‌- ಪೂರ್ವಸಿದ್ಧತೆ, ಸ್ಪರ್ಧಾತ್ಮಕ ಪರೀಕ್ಷೆಗಳು, ಕಲಿಕೆ- ಗಳಿಕೆಯ ಕೋರ್ಸ್‌ಗಳು, ಅತ್ಯುಪಯುಕ್ತ ವೆಬ್‌ಸೈಟ್‌ ಮತ್ತು ಪುಸ್ತಕಗಳು ಹಾಗೂ ವ್ಯಕ್ತಿತ್ವ ವಿಕಾಸ ಮತ್ತು ಯಶಸ್ಸಿನ ಕಥೆಗಳು ಎಂಬ ಐದು ಭಾಗಗಳಲ್ಲಿ- 114 ಅಧ್ಯಾಯಗಳಲ್ಲಿ ಸಂಕಲಿತವಾಗಿರುವ ಗೆದ್ದೇ ಗೆಲ್ಲುವೆವು- ಸ್ಪರ್ಧಾತ್ಮಕ ಪರೀಕ್ಷೆಗಳು- ವೃತ್ತಿ ಮಾರ್ಗದರ್ಶನ, ಹೊಸ ಹೊಸ ಕೊರ್ಸ್‌ಗಳ ಮಾಹಿತಿ ಸಾಹಿತ್ಯ ಕೈಪಿಡಿ ಕನ್ನಡದಲ್ಲಿ ದೊರೆಯುವ ಸಮಗ್ರ ವೃತ್ತಿ ಮಾರ್ಗದರ್ಶಿ ಮಾಹಿತಿ ಸಾಹಿತ್ಯ ಕೃತಿಯಾಗಿದ್ದು, ಕಾಲೇಜು ವಿದ್ಯಾರ್ಥಿಗಳಿಗಷ್ಟೇ ಅಲ್ಲದೆ ಪೋಷಕರಿಗೆ, ಶಿಕ್ಷಕರಿಗೆ, ಉಪನ್ಯಾಸಕರಿಗೆ, ಡಿ.ಇಡಿ, ಬಿ.ಇಡಿ, ಎಂ.ಇಡಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಪಡೆಯುತ್ತಿರುವವರಿಗೂ ಅತ್ಯುಪಯುಕ್ತವಾಗಿದೆ. ಗಗಗ = ಗಉ ಗಐಔಔ ಗಐN, ಗೆದ್ದೇ ಗೆಲ್ಲುವೆವು! ಹೇಗೆ? ಎಂಬ ಗೆಲುವಿನ ಗುಟ್ಟನ್ನು ಹಂಚಿಕೊಳ್ಳುತ್ತದೆ. 

      ಸೋಲೇ ಗೆಲುವಿನ ಸೋಪಾನ 
      ಜೀವನದಲ್ಲಿ ಸೋತುಹೋದೆವೆಂದು ಸಾಯುವುದು ಅಂಥ ದೊಡ್ಡ ಸಾಧನೆಯಲ್ಲ. ಆದರೆ ಆ ಸೋಲಿನ ನೋವನ್ನು ನಸುನಗೆಯೊಂದಿಗೆ ಸಹಿಸುತ್ತಾ ಜೀವಿಸುವುದು ಅತಿ ದೊಡ್ಡ ಸಾಧನೆ. 
      ಗೆಲುವೆ, ಗೆಲುವೆ, ಗೆಲುವೆ, ಎಂದೆಂದಿಗೂ ಗೆಲುವೆ.... ಎಂಬ ಆತ್ಮವಿಶ್ವಾಸದ ಹಾಡು. 
      ಗೆದ್ದೇ ಗೆಲ್ಲುವೆವು, ಗೆದ್ದೇ ಗೆಲ್ಲುವೆವು, 
      ನಾವು ಗೆದ್ದೇ ಗೆಲ್ಲುವೆವು, ಒಂದು ದಿನ, 
      ಮನದಲಿ ವಿಶ್ವಾಸ, ಪೂರಾ ವಿಶ್ವಾಸ, 
      ನಾವು ಗೆದ್ದೇ ಗೆಲ್ಲುವೆವು, ಒಂದು ದಿನ.... 
      ಎಂಬ ಹಂ ಹೋಂಗೇ ಕಾಂಯಾಬ್‌.... ಗೀತೆಯ ಅನುರಣವೇ ಎÇÉಾ ಕಡೆ ಕೇಳಿಬರುವುದನ್ನು ಎಲ್ಲರೂ ಬಯಸುವುದು ಸಹಜ. ಆದರೆ ಎÇÉಾ ಸಂದರ್ಭಗಳಲ್ಲಿಯೂ ಗೆಲುವು ನಮ್ಮದೇ ಆಗಬೇಕೆಂದೇನಿಲ್ಲ. ತೀವ್ರತರ ಸ್ಪರ್ಧೆಯಲ್ಲಿ ಅತ್ಯುತ್ತಮವಾಗಿ ಹೋರಾಡಿದರೂ ಗೆಲುವು ಕೂದಲೆಳೆಯಂತರದಲ್ಲಿ ನುಣುಚಿಕೊಳ್ಳಲೂಬಹುದು. ಸೋತವರು ಹತಾಶರಾಗಿ, ಲೈಫ‌ು ಇಷ್ಟೇನೇ ಎಂದು ಹಿಂದಿರುಗಿ ಬರಲಾರದಂತಹ ನಿರ್ಣಯಗಳನ್ನು ತೆಗೆದುಕೊಳ್ಳುವ ಅತಿರೇಕಕ್ಕೂ ಹೋಗಬಹುದು. ಆದರೆ, ಬದುಕಿ, ಹೋರಾಡಿ, ಕಳೆದುಕೊಂಡÇÉೇ ಮತ್ತೆ ಹುಡುಕಿ, ಸೋಲನ್ನೇ ಗೆಲುವಿನ ಮೆಟ್ಟಿಲಾಗಿಸಿಕೊಳ್ಳಬೇಕಾದದ್ದು ಇಂದಿನ ಅಗತ್ಯ. 

      ನೂರು ವರುಷ ಬಾಳಿರಿ 
      ನೂರು ದೀಪ ಬೆಳಗಿರಿ 
      ನೂರು ಬಾಳು ಬೆಳಗಲು 
      ನೀವೇ ಜ್ಯೋತಿ ಆಗಿರಿ//ಪ// 
      ಲಕ್ಷಿ¾à ಸರಸ್ವತಿ ಚಿತ್ರದ ಈ ಗೀತೆಯ ಹಾರೈಕೆ ಪಿ. ಸುಶೀಲಾ ಅವರ ಮಧುರ ಧ್ವನಿಯಲ್ಲಿ ಅನುರಣಿಸುತ್ತಲೇ ಇರುತ್ತದೆ. 
      ದೀಪದಿಂದ ದೀಪ ಹಚ್ಚುವ ಕೆಲಸ, ಒಂದು ಒಳ್ಳೆಯ ಕೆಲಸದಿಂದ ಸಾವಿರಾರು ಜನರನ್ನು ಉತ್ತಮ ಕೆಲಸಗಳ ಕಡೆಗೆ ಕರೆದೊಯ್ಯುವ ಕೆಲಸ ನಡೆಯುತ್ತಲೇ ಇರುತ್ತದೆ. ಏನೇ ಆಗಲಿ, ಒಳ್ಳೆಯದನ್ನೇ ಮಾಡಿ, ಮಾಡುತ್ತಲೇ ಇರಿ ಎಂಬ ಕೆಂಟ್‌ ಎಂ. ಕೀತ್‌ (ಅನುವಾದ: ರವಿ ಕೃಷ್ಣಾರೆಡ್ಡಿ) ಅವರ ಕೃತಿ ಯುವಜನರನ್ನು ಯಶಸ್ಸಿನ ಹಾದಿಯ ಕಡೆಗೆ ಕರೆದೊಯ್ಯುತ್ತಲೇ ಇದೆ. 
      ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ, 
      ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.... 
      ಓದುಗರೆಲ್ಲರಿಗೂ ಯುಗಾದಿ ಹಬ್ಬದ, 1935ನೇ ಶಾಲೀವಾಹನ ಶಕ ವರ್ಷ, ವಿಜಯ ಸಂವತ್ಸರದ ಹಾರ್ದಿಕ ಶುಭಾಶಯಗಳು.

No comments: