Thursday, May 23, 2013

No Admissions to Veterinary Colleges at Hassan and Shimoga this year

ಹಾಸನ, ಶಿವಮೊಗ್ಗ ಪಶುವೈದ್ಯ ಕಾಲೇಜುಗಳಿಗೆ ದಾಖಲಾತಿ ನೀಡದಿರಲು ಶಿಫಾರಸು: ಖಂಡನೆ

ಕ.ಪ್ರ.ವಾರ್ತೆ ಹಾಸನ ಮೇ 22ಇದೇ ಪ್ರಥಮವಾಗಿ ಸಾಮಾನ್ಯ ಸಿಇಟಿ ಮೂಲಕ ಪಶುವೈದ್ಯ, ಕೃಷಿ ತೋಟಗಾರಿಕೆ ಕೋರ್ಸ್‌ಗಳಿಗೂ ದಾಖಲಾತಿ ನಡೆಸಲು ಸಿದ್ಧತೆ ನಡೆದ ಬೆನ್ನಲ್ಲೇ ಈ ವರ್ಷ ಶಿವಮೊಗ್ಗ ಮತ್ತು ಹಾಸನದ ಪಶುವೈದ್ಯ ಕಾಲೇಜುಗಳಿಗೆ ವಿದ್ಯಾರ್ಥಿಗಳಿಗೆ ದಾಖಲಾತಿ ನೀಡಬಾರದು ಎಂದು ಪಶುವೈದ್ಯ ಪರಿಷತ್ತು ಶಿಫಾರಸು ಮಾಡಿದೆ ಎಂದು ಆಕಾಶವಾಣಿ ಕಾರ್ಯಕ್ರಮ ಆಯೋಜಕ ಬೇಂದ್ರೆ ಮಂಜುನಾಥ್ ಖಂಡಿಸಿದ್ದಾರೆ.  ಕಳೆದ ಎರಡು ವರ್ಷಗಳಲ್ಲಿ ಓದಿ ಪಾಸು ಮಾಡಿರುವ ಅಭ್ಯರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರ ನೀಡಲಾಗಿಲ್ಲ.    ಮುಂದೆ ಪಾಸಾಗುವವರಿಗೂ ಸಿಗುತ್ತದೆ ಎನ್ನುವ ಖಾತ್ರಿಯೂ ಇಲ್ಲ. ತಮ್ಮದಲ್ಲದ ತಪ್ಪಿಗೆ ವಿದ್ಯಾರ್ಥಿಗಳಿಗೆ ಶಿಕ್ಷೆ.  ಜತೆಗೆ ಈ ವರ್ಷ ಆರಂಭವಾಗಬೇಕಿದ್ದ ಅಥಣಿ, ಗದಗ ಮತ್ತು ಪುತ್ತೂರಿನ ಪಶುವೈದ್ಯ ಕಾಲೇಜುಗಳನ್ನು ಆರಂಭಿಸದಂತೆ ನಿರ್ದೇಶನ ನೀಡಲಾಗಿದೆ.  ಕರ್ನಾಟಕದಲ್ಲಿ ಬೀದರ್, ಬೆಂಗಳೂರು, ಶಿವಮೊಗ್ಗ ಮತ್ತು ಹಾಸನಗಳಲ್ಲಿರುವ ನಾಲ್ಕು ಸರ್ಕಾರಿ ಪಶುವೈದ್ಯ ಕಾಲೇಜುಗಳಲ್ಲಿ ವರ್ಷಕ್ಕೆ ಲಭ್ಯವಿರುವ ಸೀಟುಗಳು ಕೇವಲ 210. ಇದೀಗ ಶಿವಮೊಗ್ಗ ಮತ್ತು ಹಾಸನದ ಕಾಲೇಜುಗಳಿಗೆ ಪ್ರವೇಶ ರದ್ದತಿ ಮಾಡಿರುವುದರಿಂದ 80 ಸೀಟುಗಳ ಅವಕಾಶ ವಂಚಿತರಾಗುತ್ತಾರೆ ಎಂದು ಮಂಜುನಾಥ್ ಹೇಳಿದ್ದಾರೆ.ಪಶುವೈದ್ಯ ಪರಿಷತ್ತಿನ ಆಣತಿಯಂತೆ ಒಂದು ಕಾಲೇಜಿನಲ್ಲಿ 96 ಬೋಧಕ ಸಿಬ್ಬಂದಿ 160 ಬೋಧಕೇತರ ಸಿಬ್ಬಂದಿ ಇರಲೇ ಬೇಕಂತೆ.  ನಾಲ್ಕು ವರ್ಷಗಳ ಒಟ್ಟು ವಿದ್ಯಾರ್ಥಿಗಳ ಸಂಖ್ಯೆಯೇ 160 ದಾಟದೇ ಇರುವಾಗ 256 ಸಿಬ್ಬಂದಿ ಬೇಕೇ. ಇದೊಂದು ವಿಶ್ವವಿದ್ಯಾಲಯದ ಒಟ್ಟು ಸಂಖ್ಯೆಯಾದರೆ ಸರಿ.  ಪ್ರತಿಯೊಂದು ಕಾಲೇಜಿಗೆ ಇಷ್ಟೊಂದು ಸಂಖ್ಯೆಯ ಪ್ರೊಫೆಸರ್, ಅಸೋಸಿಯೇಟ್ ಪ್ರೊಫೆಸರ್, ತಜ್ಞರನ್ನು ತರುವುದು ಎಲ್ಲಿಂದ  ಹಿಂದಿನ ವರ್ಷಗಳಲ್ಲಿ ಅಷ್ಟೊಂದು ಸಂಖ್ಯೆಯಲ್ಲಿ ವಿದ್ಯಾರ್ಥಿಗಳೇ ಪಾಸಾಗಲಿಲ್ಲವಲ್ಲ ಎಂದು ಅವರುತಿಳಿಸಿದ್ದಾರೆ.  ಇವು ಸರ್ಕಾರಿ ಕಾಲೇಜುಗಳಾದ್ದರಿಂದ ಮುಖ್ಯಮಂತ್ರಿ, ಪಶುಸಂಗೋಪನಾ ಇಲಾಖೆಯ ಸಚಿವ, ರಾಜ್ಯಪಾಲರು ಮಧ್ಯ ಪ್ರವೇಶಿಸಿ, ಈಗ ಆಗಿರುವ ಅನ್ಯಾಯ ಸರಿಪಡಿಸಿ, ವಿದ್ಯಾರ್ಥಿಗಳ ಹಿತ ಕಾಯಬೇಕು ಮತ್ತು ಗದಗ, ಅಥಣಿ, ಪುತ್ತೂರುಗಳಲ್ಲಿ ಪಶುವೈದ್ಯ ಕಾಲೇಜು ಆರಂಭಗೊಂಡು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಈ ಕೋರ್ಸ್‌ಗೆ ಸೇರಲು ಪ್ರೋತ್ಸಾಹಿಸಬೇಕು. ಹಾಸನ ಮತ್ತು ಶಿವಮೊಗ್ಗದ ಕಾಲೇಜುಗಳನ್ನು ಸ್ವಂತ ಕಟ್ಟಡಗಳಿಗೆ ಸ್ಥಳಾಂತರಿಸಿ ಅತಿ ಶೀಘ್ರವಾಗಿ ಮಾನ್ಯತೆ ದೊರಕಿಸಿಕೊಡುವ ಪ್ರಯತ್ನ ಆಗಬೇಕಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
No Admissions to Veterinary Colleges at Hassan and Shimoga this year

http://kannadaprabha.com/districts/hassan/%E0%B2%B9%E0%B2%BE%E0%B2%B8%E0%B2%A8-%E0%B2%B6%E0%B2%BF%E0%B2%B5%E0%B2%AE%E0%B3%8A%E0%B2%97%E0%B3%8D%E0%B2%97-%E0%B2%AA%E0%B2%B6%E0%B3%81%E0%B2%B5%E0%B3%88%E0%B2%A6%E0%B3%8D%E0%B2%AF-%E0%B2%95%E0%B2%BE%E0%B2%B2%E0%B3%87%E0%B2%9C%E0%B3%81%E0%B2%97%E0%B2%B3%E0%B2%BF%E0%B2%97%E0%B3%86-%E0%B2%A6%E0%B2%BE%E0%B2%96%E0%B2%B2%E0%B2%BE%E0%B2%A4%E0%B2%BF-%E0%B2%A8%E0%B3%80%E0%B2%A1%E0%B2%A6%E0%B2%BF%E0%B2%B0%E0%B2%B2%E0%B3%81-%E0%B2%B6%E0%B2%BF%E0%B2%AB%E0%B2%BE%E0%B2%B0%E0%B2%B8%E0%B3%81-%E0%B2%96%E0%B2%82%E0%B2%A1%E0%B2%A8%E0%B3%86/57080.html


































Report on De-Recognised Veterinary Colleges in Hassan and Shimoga - Prajavani 23 May 2013


1 comment:

Unknown said...


ADMISSION GUIDANCE BVSC(Bachelor of veterinary science) - 2015

If you are looking for Direct admission in Bachelor of Vetarinary science (BVSC) under Top Private/Govt.Colleges of AP/Telanagana Karnataka / Tamilnadu/ Maharashtra/ Delhi/NCR/MP
You are Definitely at right Place. We will help you to secure admission in best available college in your Budget constraints.



Eligibility: A. Minimum age of 17 years
Candidates having 50% Marks together in Physics, Chemistry & Biology at 10+2 level Or any equivalent Exam and must have English as a subject.

We invite students and parents to contact us,

venu Reddy - 9492066112, 8977368354,9581175511,9700732793,09962966777,
040-66443636.

mbss course

F.No.103, Prashanti Ram Towers
Near Saradhi Studio Road, Ameerpet,
Hyderabad- 500016 Telangana, India.