ಯುವಜನ ಶಕ್ತಿಯು ಮಂಥನ ಗೊಳ್ಳಲಿ, ನಾಳಿನ ಭಾರತ ಉಜ್ವಲ ವಾಗಲಿ... ಎಂಬ ಕವಿವಾಣಿ ಬೀದರಿನಲ್ಲಿ ಪ್ರತಿಧ್ವನಿಸಿದೆ. ಪ್ರತಿಭೆಯೇ ನಮ್ಮ ಮೂಲ ಆಸ್ತಿ ಎಂಬ ಮಂತ್ರ ಜಪಿಸಿದೆ.
ಸ್ಟುಡೆಂಟ್ ಸಕ್ಸಸ್ ಸರ್ವೀಸ್, ಸ್ಪರ್ಧಾ ತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ, ಎಸ್.ಎಸ್.ಎಲ್.ಸಿ. ಅನು ತ್ತೀ ರ್ಣ ರಾದವರಿಗೆ ಪೂರಕ ಪರೀಕ್ಷೆ ಗಳಿಗೆ ಹಾಜರಾಗಿ ಪಾಸಾಗಲು ತರಬೇತಿ ಶಿಬಿರ, ಪಿ.ಯು.ಸಿ. ವಿದ್ಯಾರ್ಥಿಗಳಿಗೆ ಉಚಿತ ಸಿ.ಇ.ಟಿ. ಕೋಚಿಂಗ್, ಪ್ರತಿ ಭಾವಂತ ಬಡ ವಿದ್ಯಾರ್ಥಿಗಳಿಗೆ ಉಚಿತ ಶಿಷ್ಯವೇತನ, ವಸತಿ, ಪುಸ್ತಕಗಳಿಗಾಗಿ ಸುಮಾರು 13 ಲಕ್ಷಕ್ಕೂ ಹೆಚ್ಚು ಮೊತ್ತವನ್ನು ಒದಗಿಸಿದ ಬೀದರ್‌ನ ಕ್ರಿಯೇಟಿವ್ ಫೌಂಡೇಶನ್ ರಾಜ್ಯದ ಇತರೆ ಯುವಜನ ಸಂಸ್ಥೆಗಳಿಗೆ ಮಾದರಿ ಯಾಗಿದೆ.
ಬೀದರ್ ಜಿಲ್ಲೆಯಲ್ಲಿ ಕಳೆದ ನಾಲ್ಕು ವರ್ಷಗಳಿಂದ ಕ್ರಿಯೇಟಿವ್ ಫೌಂಡೇ ಶನ್ ಜಿಲ್ಲಾಡಳಿತದ ವತಿಯಿಂದ ರಚಿತವಾದ ವಿದ್ಯಾರ್ಥಿ ನಿಧಿ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಾಯ ನೀಡುವ ಯೋಜನೆಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದಾರೆ.
ವಿದ್ಯಾರ್ಥಿ ಗಳು, ಚಿಂತಕರು, ಸ್ವಯಂ ಸೇವಕರು, ಶಿಕ್ಷಕರು ಒಟ್ಟುಗೂಡಿ ಜಿಲ್ಲೆಯ ಏಳಿಗೆಗಾಗಿ ಶ್ರಮಿಸುತ್ತಿರುವುದು ಶ್ಲಾಘನೀಯ.
ಈ ಯುವಜನರ ಕಾರ್ಯಗಳಿಗೆ ಜಿಲ್ಲಾಡಳಿತವೂ ಮೆಚ್ಚುಗೆ ವ್ಯಕ್ತಪಡಿ ಸುತ್ತದೆ, ಎಂದು ಜಿಲ್ಲಾಧಿಕಾರಿ ಹರ್ಷಗುಪ್ತಾ, ಸಂತಸ ವ್ಯಕ್ತಪಡಿ ಸಿದ್ದಾರೆ.
ಎಂಜಿನಿಯರಿಂಗ್ ಅಭ್ಯಾಸ ಮಾಡುವ ವೇಳೆಗೆ ಯುವಜನ ಸಂಸ್ಥೆ ಯೊಂದನ್ನು ಕಟ್ಟುವ ಕನಸುಕಂಡ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಕನಸಿನ ಭಾರತ 2020 ಪರಿ ಕಲ್ಪನೆಯನ್ನು ಸಾಕಾರ ಗೊಳಿಸಲು ಎಸ್. ಆರ್. ಸಾಗರ್ ಗೆಳೆಯರ ಗುಂಪು ಸೇರಿಸಿದರು. ಎಂ. ಟಂಕಸಾಲೆ, ಮಂಗಲಾ ಭಾಗವತ್, ಬಾಬು ರೋಂಡೆ, ಆರ್. ಕೆ. ಚಾರಿ, ಹಮೀದ್ ಖಾನ್, ಎನ್. ಶಿವರಾಜ್, ಪ್ರವೀಣ್ ವೈರಾಗಿ ಮೊದಲಾದವರು ತಮ್ಮ ಅಧ್ಯಯನದ ವೇಳೆಯಲ್ಲಿಯೇ ಸುತ್ತ ಲಿನ ವಿದ್ಯಾರ್ಥಿಗಳ ಕ್ಷೇಮಾ ಭಿವೃದ್ಧಿಯ ಬಗ್ಗೆಯೂ ಕಾಳಜಿ ವಹಿಸುವ ನಿಟ್ಟಿನಲ್ಲಿ ಕೆಲಸ ಆರಂಭಿಸಿದರು.
ಪ್ರತಿಭೆಯೇ ನಮ್ಮ ಮೂಲ ಆಸ್ತಿ ಎಂಬ ಧ್ಯೇಯದೊಂದಿಗೆ ಪ್ರತಿಭಾ ಶೋಧನ ಯುವ ವೇದಿಕೆ ಕಟ್ಟಿ, ಅದರ ಆಶ್ರಯದಲ್ಲಿ 2006 ರವೇಳೆಗೆ ಕ್ರಿಯೇಟಿವ್ ಫೌಂಡೇಶನ್, ಪರಿಸರ ರಕ್ಷಣಾ ವೇದಿಕೆ, ಹಿರಿಯ ನಾಗರಿಕ ರಕ್ಷಣ ವೇದಿಕೆ, ಧಾರ್ಮಿಕ ವೇದಿಕೆ ಇತ್ಯಾದಿಗಳನ್ನು ಸ್ಥಾಪಿಸಿದರು.
ಪ್ರತಿಭಾ ಶೋಧನೆಯ ನಿಜವಾದ ಅರ್ಥ ದಲ್ಲಿ ಕಳೆದ ಐದು ವರ್ಷಗಳಲ್ಲಿ ಸಹಸ್ರಾರು ವಿದ್ಯಾರ್ಥಿಗಳಿಗೆ ತರಬೇತಿ, ನೆರವು ನೀಡಿದ್ದಾರೆ. ಮಾಜಿ ಮುಖ್ಯ ಮಂತ್ರಿ ಧರ್ಮಸಿಂಗ್, ಗುಲ್ಬರ್ಗಾ ವಿಶ್ವವಿದ್ಯಾಲ ಯದ ಕುಲಪತಿಗಳಾದ ಪ್ರೊ. ಬಿ.ಜಿ. ಮೂಲಿಮನಿ, ವಿವಿಧ ಸಂಘಸಂಸ್ಥೆಗಳ ಗಣ್ಯರು ಮತ್ತು ಅಧಿಕಾರಿಗಳು ಹಿಂದುಳಿದ ಜಿಲ್ಲೆ ಬೀದರ್‌ನಲ್ಲಿ ಚಟವಟಿಕೆ ಹಮ್ಮಿಕೊಂಡು ಯಶಸ್ಸುಗಳಿಸಿರುವ ಕ್ರಿಯೇಟಿವ್ ಫೌಂಡೇಶನ್ ಪದಾಧಿ ಕಾರಿಗಳಿಗೆ ಬೆನ್ನುತಟ್ಟಿ ಇನ್ನಷ್ಟು ಹೆಚ್ಚು ಕಾರ್ಯಕ್ರಮಗಳನ್ನು ನಡೆಸಲು ಪ್ರೋತ್ಸಾಹಿ ಸಿದ್ದಾರೆ.
ಮನಸ್ಸಿದ್ದಲ್ಲಿ ಮಾರ್ಗ ತಾನೇ ವಿದ್ಯಾರ್ಥಿಗಳು ಒಂದೆಡೆ ಸೇರಿದರೆ ಏನೆಲ್ಲಾ ಸಾಧನೆ ಸಾಧ್ಯ ಎನ್ನುವುದನ್ನು ಎಸ್.ಆರ್. ಸಾಗರ್ ನಾಯಕತ್ವದ ಕ್ರಿಯೇಟಿವ್ ಫೌಂಡೇಶನ್‌ನ ಯುವಕರು ತೋರಿಸಿ ಕೊಟ್ಟಿದ್ದಾರೆ. ಈ ವರ್ಷದ ಆರಂಭದಿಂದ ಇಲ್ಲಿಯವರೆಗೆ ಬೀದರ್ ಜಿಲ್ಲೆಯ ಐದು ತಾಲ್ಲೂಕುಗಳಲ್ಲಿ ಸುಮಾರು 4000 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆಯ ತರಬೇತಿ ನೀಡಿದ್ದಾರೆ. ನಿಮ್ಮ ಊರು ಗಳಲಿಯ್ಲೂ ಇಂತಹ ವೇದಿಕೆ, ಸಂಸ್ಥೆ ಗಳು ಇರಬಹುದು. ಒಗ್ಗಟ್ಟಿ ನಿಂದ ಕೆಲಸ ಮಾಡಿದರೆ ಸಮಾಜಕ್ಕೆ ಉಪಯೋಗ ವಾಗುವುದರಲ್ಲಿ ಸಂದೇಹವೇ ಇಲ್ಲ. ಮಾಹಿತಿಗೆ: 9242085544 / 8147116700 creativefoundation2020@gmail.com URL : http://creativefoundationbidar.blogspot.com |
No comments:
Post a Comment